ಯುವ ರಾಜ್‌ಕುಮಾರ್‌ಗೆ ಸಪ್ತಮಿ ಗೌಡ ಜೊತೆ ಯಾವ ಸಂಬಂಧವಿಲ್ಲ; ವಕೀಲರ ಸ್ಪಷ್ಟನೆ
ಯುವ ಸಿನಿಮಾದಲ್ಲಿ ಯುವ ರಾಜ್‌ಕುಮಾರ್ ಜೊತೆ ತೆರೆ ಮೇಲೆ ನಾಯಕಿಯಾಗಿ ಮಿಂಚಿದ್ದ ಸಪ್ತಮಿ ಗೌಡ ಈಗ ತಮ್ಮದಲ್ಲದ ತಪ್ಪಿಗೆ ಸುದ್ದಿಯಾಗಿದ್ದಾರೆ. ಸಪ್ತಮಿ ಗೌಡ ಜೊತೆ ಯುವ ಸಂಬಂಧ ಹೊಂದಿದ್ದಾರೆ ಎಂದು ಯುವ ಪತ್ನಿ ಶ್ರೀದೇವಿ ಬೈರಪ್ಪ ಆರೋಪಿಸಿದ್ದಾರೆ.
ಯುವ-ಶ್ರೀದೇವಿ ವಿಚ್ಛೇದನ ಈಗ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿದ್ದು, ಯುವ ರಾಜ್‌ಕುಮಾರ್ ಮೇಲೆ ಶ್ರೀದೇವಿ ಬೈರಪ್ಪ ಹಲವು ಆರೋಪ ಮಾಡಿದ್ದಾರೆ. ನನಗೆ ಮಾನಸಿಕ ಹಿಂಸೆ ನೀಡಿದ್ದಾರೆ, ಮನೆಗೆ ಸಹನಟಿಯನ್ನು ಕರೆತರುತ್ತಿದ್ದರು, ನಟಿಯ ಜೊತೆ ಸಂಬಂಧಹೊಂದಿದ್ದಾರೆ ಎಂದು ಆರೋಪ ಮಾಡಿದ್ದರು.

ಶ್ರೀದೇವಿ ಬೈರಪ್ಪ ಆರೋಪಗಳಿಗೆ ಯುವ ಪರ ವಕೀಲ ಸಿರಿಲ್ ಪ್ರಸಾದ್ ಉತ್ತರ ಕೊಟ್ಟಿದ್ದಾರೆ. ಸಪ್ತಮಿ ಗೌಡ ಜೊತೆ ಯುವ ರಾಜ್‌ಕುಮಾರ್ ಗೆ ಯಾವ ಸಂಬಂಧವೂ ಇಲ್ಲ. ಯುವ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ತೆಗೆಯಲಾದ ಫೋಟೊ ಬಳಸಿಕೊಂಡು ಶ್ರೀದೇವಿ ನನ್ನ ಕಕ್ಷಿದಾರರ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಯುವ ರಾಜ್‌ಕುಮಾರ್ ಅವರಿಗೆ ಲೈಂಗಿಕತೆಯಲ್ಲಿ ಸಮಸ್ಯೆ ಇದೆ ಎಂದು ಶ್ರೀದೇವಿ ಲೀಗಲ್‌ಗೆ ನೋಟಿಸ್‌ಗೆ ಉತ್ತರ ಕೊಡುವ ಸಂದರ್ಭದಲ್ಲಿ ಆರೋಪ ಮಾಡಿದ್ದಾರೆ. ಆದರೆ, ಈಗ ಅವರೇ ಬೇರೆ ನಟಿಯ ಜೊತೆ ಸಂಬಂಧ ಇದೆ ಎಂದು ಆರೋಪ ಮಾಡುತ್ತಿದ್ದಾರೆ. ಲೈಂಗಿಕತೆಯಲ್ಲಿ ಸಮಸ್ಯೆ ಇರುವವರು ಬೇರೆ ಸಂಬಂಧ ಹೊಂದಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ.
ಶ್ರೀದೇವಿ ಬೈರಪ್ಪಗೆ ಅಕ್ರಮ ಸಂಬಂಧ
ಯುವ ರಾಜ್‌ಕುಮಾರ್ ಪತ್ನಿ ಶ್ರೀದೇವಿ ಬೈರಪ್ಪಗೆ ರಾಧಯ್ಯ ಎನ್ನುವವರ ಜೊತೆ ಅನೈತಿಕ ಸಂಬಂಧ ಇದೆ ಎಂದು ಸಿರಿಲ್ ಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ.












Click it and Unblock the Notifications