Actor Yuva Rajkumar Divorce: ಅನೈತಿಕ ಸಂಬಂಧ ಆರೋಪಕ್ಕೆ ತಿರುಗೇಟು ಕೊಟ್ಟ ಯುವ ಪತ್ನಿ ಶ್ರೀ ದೇವಿ
ಬೆಂಗಳೂರು, ಜೂನ್ 11: ಯುವ ರಾಜ್‌ಕುಮಾರ್ ಮತ್ತು ಶ್ರೀದೇವಿ ಭೈರಪ್ಪ ಅವರ ಡಿವೋರ್ಸ್ ವಿಚಾರ ಸಾಕಷ್ಟು ಸದ್ದು ಮಾಡುತ್ತಿದ್ದು. ಶ್ರೀದೇವಿ ಅವರು ಯುವಗೆ ಟಾರ್ಚರ್ ಮಾಡಿದ್ದಾರೆ. ರಾಜ್‌ಕುಮಾರ್ ಅಕಾಡೆಮಿಯಿಂದ ಪರ್ಸನಲ್ ಅಕೌಂಟ್ಗೆ 3 ಕೋಟಿ ರೂಪಾಯಿ ಟ್ರಾನ್ಸಫರ್ ಮಾಡಿಕೊಂಡಿದ್ದಾರೆ ಎಂದು ಯುವ ಪರ ವಕೀಲರು ಆರೋಪಕ್ಕೆ ಯುವ ಪತ್ನಿ ಶ್ರೀದೇವಿ ತಿರುಗೇಟು ನೀಡಿದ್ದಾರೆ.
ಡಾ. ರಾಜ್ ಕುಮಾರ್ ಅವರು ಮೊಮ್ಮಗ ಹಾಗೂ ನಟ ಯುವ ರಾಜ್ ಕುಮಾರ್ ಹಾಗೂ ಶ್ರೀದೇವಿ ಸಂಸಾರ ವಿಚ್ಛೇದನದವರೆಗೆ ಬಂದು ನಿಂತಿದೆ. ಪತ್ನಿಯಿಂದ ಕಿರುಕುಳ ಮತ್ತಿತ್ಯಾದಿ ಆರೋಪಗಳನ್ನು ಮಾಡಿದ್ದಾರೆ. ಈ ಮಧ್ಯೆ ಯುವ ಪರ ವಕೀಲರು ಸುದ್ದಿಗೋಷ್ಠಿ ನಡೆಸಿ ಶ್ರೀದೇವಿ ವಿರುದ್ಧ ಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ. ಶ್ರೀದೇವಿಗೆ ಅನೈತಿಕ ಸಂಬಂಧವಿದೆ, ರಾಜ್‌ಕುಮಾರ್ ಅಕಾಡೆಮಿಯಲ್ಲಿ ಅವ್ಯವಹಾರ ಮಾಡಿದ್ದಾರೆ ಎಂಬಿತ್ಯಾದಿ ಆರೋಪ ಹೊರಿಸಿದ್ದಾರೆ. ಈ ಕುರಿತು ಶ್ರೀ ದೇವಿ ಮೌನ ಮುರಿದಿದ್ದಾರೆ.

'ವೃತ್ತಿಪರ ಸೌಹಾರ್ದತೆಯನ್ನು ಕಾಯ್ದುಕೊಳ್ಳಬೇಕಾದ ವ್ಯಕ್ತಿಯೇ ಸಾರ್ವಜನಿಕವಾಗಿ ಒಂದು ಹೆಣ್ಣಿನ ಚಾರಿತ್ಯದ ಬಗ್ಗೆ ಕೀಳು ಮಟ್ಟದ ಸುಳ್ಳು ಆರೋಪಗಳನ್ನು ಮಾಡುತ್ತಿರುವುದು ಅತ್ಯಂತ ದುರದೃಷ್ಟಕರ ಹಾಗೂ ಬಹಳ ನೋವುಂಟು ಮಾಡಿದೆ' ಎಂದು ಫೇಸ್ಬುಕ್ ಪೋಸ್ಟ್ ಆರಂಭಿಸಿದ್ದಾರೆ.
ಕಳೆದ ಕೆಲವು ತಿಂಗಳಿಂದ ಆದ ಅನೇಕ ನೋವುಗಳ ಹೊರತಾಗಿಯೂ ನಾನು ಕುಟುಂಬದ ಗೌರವ ಕಾಪಾಡಿಕೊಳ್ಳಲು ಮೌನವಾಗಿದ್ದೆ. ಆದರೆ, ನನ್ನ ಸಭ್ಯತೆ ಹಾಗೂ ಮಾನವೀಯತೆಗಳನ್ನು ಗೌರವಿಸದೆ ಕೀಳು ಮಟ್ಟದ ಆರೋಪಗಳನ್ನು ಮಾಡುತ್ತಿರುವುದು ದುರದೃಷ್ಟಕರ. ಸತ್ಯ ಮತ್ತು ನ್ಯಾಯವು ಖಂಡಿತ ಮೇಲುಗೈ ಸಾಧಿಸುತ್ತದೆ ಎಂದು ನಾನು ನಂಬಿದ್ದೇನೆ ಎಂದು ನಟ ಯುವ ರಾಜ್ ಕುಮಾರ್ ಪತ್ನಿ ಶ್ರೀದೇವಿ ಹೇಳಿದ್ದಾರೆ.
ಯುವ ಪರ ವಕೀಲರು ಹೇಳಿದ್ದೇನು?
ಶ್ರೀದೇವಿ ಅವರು ಯುವಗೆ ಟಾರ್ಚರ್ ಮಾಡಿದ್ದಾರೆ. ರಾಜ್‌ಕುಮಾರ್ ಅಕಾಡೆಮಿಯಿಂದ ಪರ್ಸನಲ್ ಅಕೌಂಟ್ಗೆ 3 ಕೋಟಿ ರೂಪಾಯಿ ಟ್ರಾನ್ಸಫರ್ ಮಾಡಿಕೊಂಡಿದ್ದಾರೆ. ನಿನ್ನನ್ನು ಬೀದಿಗೆ ತರುತ್ತೇನೆ ಎಂದು ಪತಿಗೆ ಬೆದರಿಸಿದ್ದಾರೆ. ಯುವನ ಬಳಿಕ ಅಮೆರಿಕಕ್ಕೆ ಬರುವಂತೆ ಒತ್ತಾಯ ಮಾಡಿದ್ದರು. ಬಾಯ್ಫ್ರೆಂಡ್ ಮೂಲಕ ಮಗು ಪಡೆಯೋ ಆಲೋಚನೆಯಲ್ಲಿ ಅವರಿದ್ದರು. ರಾಧಯ್ಯ ಅನ್ನೋದು ಶ್ರೀದೇವಿ ಬಾಯ್ಫ್ರೆಂಡ್ ಹೆಸರು ಎಂದು ಶ್ರೀದೇವಿ ಭೈರಪ್ಪ ಅವರ ವಿರುದ್ಧ ಆರೋಪಿಸಿದ್ದಾರೆ.












Click it and Unblock the Notifications