ಯೋಯೋ ಹನಿ ಸಿಂಗ್ ಪಾರ್ಟಿ ಹೆಸರಲ್ಲಿ, ಅಪರಿಚಿತ ಹುಡುಗಿ ಜೊತೆ ಮಾಡಿದ್ದೇನು
ಬಾಲಿವುಡ್‌ನ ಫೇಮಸ್ ಸಿಂಗರ್ ಹನಿ ಸಿಂಗ್ ಫನ್ನಿ ವಿಚಾರವೊಂದಕ್ಕೆ ಟ್ರೆಂಡಿಂಗ್‌ನಲ್ಲಿ ಇದ್ದಾರೆ. ಹನಿಸಿಂಗ್ ಎಂದರೆ ಬೇಗ ನೆನಪಾಗದೆ ಇರಬಹುದು. ಆದರೆ, ಯೋಯೋ ಹನಿಸಿಂಗ್ ಎಂದರೆ ಥಟ್ ಅಂತ ನೆನಪಾಗುತ್ತೆ. ಯೋಯೋ ಹಾಡು ಹನಿಸಿಂಗ್‌ಗೆ ಹೊಸ ಫೇಮ್ ತಂದು ಕೊಟ್ಟಿತ್ತು. ಬಾಲಿವುಡ್‌ನಲ್ಲಿ ಹನಿಸಿಂಗ್ ಹಾಡುಗಳು ಭಾರೀ ಹವಾ ಸೃಷ್ಟಿವೆ. ಆದರೆ, ಅವರ ಜೀವನ ಮಾತ್ರ.
ಹನಿಸಿಂಗ್ ಬಾಲಿವುಡ್‌ನಲ್ಲಿ ಇಂದಿಗೂ ಬಹುಬೇಡಿಕೆಯ ಗಾಯಕ ಸಣ್ಣ ವಯಸ್ಸಿನಲ್ಲಿಯೇ ಮೇರು ಸಾಧನೆ ಮಾಡಿ. ಯುವ ಸಮೂಹವನ್ನು ತನ್ನ ಹಾಡುಗಳಿಂದಲೇ ಕಟ್ಟಿ ಹಾಕಿದ ಗಾಯಕ. ಆದರೆ, ಇವರ ಜೀವನ ಮಾತ್ರ ಶೋಕಗೀತೆ. ಹನಿಸಿಂಗ್ ತನ್ನ ಹಾಡುಗಳ ಮೂಲಕ ಲಕ್ಷಾಂತರ ಅಭಿಮಾನಿಗಳ ಮನಸ್ಸು ಗೆದಿದ್ದಾರೆ. ಆದರೆ, ಸ್ವಂತ ಜೀವನದಲ್ಲಿ ಅವರು ಯಡವಟ್ಟು ಮಾಡಿಕೊಂಡಿದ್ದೇ ಹೆಚ್ಚು. ಇದೇ ಕಾರಣಕ್ಕಾಗಿ ಅವರು ಕೆಲವು ದಿನಗಳ ಕಾಲ ಇಂಡಸ್ಟ್ರಿಯಿಂದ ದೂರ ಉಳಿದಿದ್ದರು. ಕೂಡ ಇವರ ಹಾಡುಗಳೇ ಪಾರ್ಟಿಗಳಿಗೆ ಮಸ್ತ್ ಸೂಟ್ ಆಗುತ್ತವೆ. ಅವರೂ ಯಾವಾಗಲೂ ಪಾರ್ಟಿ ಮೂಡ್‌ನಲ್ಲೇ ಇರ್ತಾರೆ ಎನ್ನುವ ಮಾತಿದೆ.

ಪಾರ್ಟಿ ಹೆಸರಲ್ಲಿ ಹನಿಸಿಂಗ್‌ಗೆ ಲಾಸ್: ಹನಿಸಿಂಗ್ ಪಾರ್ಟಿಯಿಂದಲೇ ಫೇಮಸ್. ತಮ್ಮದೇ ಪಾರ್ಟಿಯಲ್ಲಿ ನಡೆದಿರುವ ಸ್ವಾರಸ್ಯಕರ ಘಟನೆಯೊಂದನ್ನು ಅವರು ಹಂಚಿಕೊಂಡಿದ್ದಾರೆ. ಹನಿಸಿಂಗ್‌ಗೆ ಪಾರ್ಟಿಯೆಂದರೆ ಎಲ್ಲಿಲ್ಲದ ಕ್ರೇಜ್ ಇದೆ. ಇದೇ ಕಾರಣಕ್ಕೆ ಅವರ ವೈಯಕ್ತಿಕ ಜೀವನ ಹಾಳಾಗಿರುವುದು ಸಹ ಇದೆ. ಈಚೆಗೆ ಪಾರ್ಟಿಯೊಂದರಲ್ಲಿ ಈ ಹಿಂದೆ ನಡೆದಿರುವ ವಿಚಾರವನ್ನು ಅವರು ಹಂಚಿಕೊಂಡಿದ್ದಾರೆ.
ಹನಿಸಿಂಗ್‌ಗೆ ಬಾಲಿವುಡ್ ಇಂಡಸ್ಟ್ರಿಗೆ ಬಂದ ಕೆಲವೇ ದಿನಗಳಲ್ಲಿ ಫೇಮ್ ಸಿಕ್ಕಿತ್ತು. ಅವರ ಪಾರ್ಟಿ ಹಾಡುಗಳು ಭಾರೀ ಫೇಮಸ್ ಆಗಿವೆ. ಆದರೆ, ಅವರೇ ಪಾರ್ಟಿಯಲ್ಲಿ ಮಾಡಿಕೊಂಡ ಯಡವಟ್ಟಿನ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಅದನ್ನು ಅವರೇ ಈಗ ಹೇಳಿಕೊಂಡಿದ್ದಾರೆ. ಪಾರ್ಟಿಯೊಂದರ ರಾತ್ರಿ ಮೋಜು - ಮಸ್ತಿಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವ ವಿಚಾರವನ್ನು ಅವರೇ ಹಂಚಿಕೊಂಡಿದ್ದಾರೆ. ಒಂದೇ ದಿನ ರಾತ್ರಿ ಅಪರಿಚಿತ ಹುಡುಗಿ ಜೊತೆ 38 ಲಕ್ಷ ರೂಪಾಯಿ ಖರ್ಚು ಮಾಡಿರುವ ವಿಷಯವನ್ನು ಹಂಚಿಕೊಂಡಿದ್ದಾರೆ.
ದುಬೈನಲ್ಲಿ ನಾವು ಎಂಟು ಜನ ಪಾರ್ಟಿ ಮಾಡ್ತಿದ್ವಿ. ಪಾರ್ಟಿಗೆಂದೇ ಲಕ್ಷಾಂತರ ರೂಪಾಯಿ ಖರ್ಚಾಗಿ ಬಿಡ್ತಿತ್ತು. ನಾವು ಎಂಟು ಜನ ಅಲ್ಲಿ ಪಾರ್ಟಿ ಮಾಡ್ತಿದ್ವಿ. ಯಾರೋ ಅಪರಿಚಿತ ಹುಡುಗಿಯರು ನಮ್ಮ ಪಾರ್ಟಿಗೆ ಜಾಯ್ನ ಆಗಿದ್ರು. ಒಂದೇ ರಾತ್ರಿ 38 ಲಕ್ಷ ರೂಪಾಯಿ ಬಿಲ್ ಆಗಿತ್ತು. ಮೂರು ಕಾರ್ಡ್‌ನಲ್ಲಿ ಹಣ ಸ್ವೈಪ್ ಮಾಡ್ಬೇಕಾಗಿತ್ತು ಅಂತ ಹನಿಸಿಂಗ್ ಅವರೇ ಹೇಳಿದ್ದಾರೆ.
ಡ್ರಗ್ಸ್ ದಾಸನಾಗಿದ್ದ ಹನಿ ಸಿಂಗ್: ಬಾಲಿವುಡ್ ಸಂಗೀತ ಕ್ಷೇತ್ರದಲ್ಲಿ ಮೇರು ಸಾಧನೆ ಮಾಡಿದ್ದಾರೆ. ಆದರೆ, ಅವರ ವೈಯಕ್ತಿಕ ಜೀವನ ಅಷ್ಟೊಂದು ಹೇಳಿಕೊಳ್ಳುವಂತಿಲ್ಲ. ಸಣ್ಣ ವಯಸ್ಸಿನಲ್ಲೇ ಅವರು ಯಶಸ್ಸು ಗಳಿಸಿದ್ದರು. ಆದರೆ, ಕುಟುಂಬದವರನ್ನು ಕೇರ್ ಮಾಡಲಿಲ್ಲ. ಇದೇ ಕಾರಣಕ್ಕೆ ಅವರ ಪತ್ನಿ ಸಹ ಅವರಿಂದ ದೂರವಾಗಿದ್ರಂತೆ. ಪತ್ನಿ ತೊರೆದ ನೋವಿನಿಂದ ಹನಿಸಿಂಗ್ ಮಾದಕ ವಸ್ತುಗಳ ದಾಸನಾಗಿದ್ದೂ ಇದೆ. ಇದರಿಂದ ಅವರ ಸಿನಿ ಹಾಗೂ ಪರ್ಸನಲ್ ಲೈಫ್ ಡ್ಯಾಮೇಜ್ ಆಗಿತ್ತು.












Click it and Unblock the Notifications