Master Anand: ಪತ್ನಿ ಹಾಸಿಗೆ ಹಿಡಿಯುವ ಪರಿಸ್ಥಿತಿ ಬಂದಿದ್ದೇಗೆ? ವಿವರಣೆ ಕೊಟ್ಟ ಮಾಸ್ಟರ್‌ ಆನಂದ್‌

ಕನ್ನಡ ಮನೋರಂಜನಾ ಕ್ಷೇತ್ರದಲ್ಲಿ ನಟ, ನಿರ್ದೇಶಕ, ನಿರೂಪಕ ಮಾಸ್ಟರ್‌ ಆನಂದ್ ಅವರಷ್ಟೇ ಅವರ ಪತ್ನಿಯೂ ಕೂಡ ಫುಲ್‌ ಫೇಮಸ್‌. ಸದಾ ಆ್ಯಕ್ವಿವ್‌ ಮೂಡ್‌ನಲ್ಲಿ ಇರುತ್ತಿದ್ದ ಮಾಸ್ಟರ್‌ ಆನಂದ್ ಪತ್ನಿ ಯಶಸ್ವಿನಿ ಮಾಸ್ಟರ್‌ ಆನಂದ್, ಸದ್ಯ ರೆಸ್ಟ್‌ ಮೂಡ್‌ನಲ್ಲಿದ್ದಾರೆ. ಎಷ್ಟರ ಮಟ್ಟಿಗೆ ಅಂದರೆ ನಡೆದಾಡಲು ಆಗದ ಸ್ಥಿತಿಯಲ್ಲಿದ್ದಾರೆ. ಯಶಸ್ವಿನಿ ಮಾಸ್ಟರ್‌ ಆನಂದ್ ಮನೆಯಲ್ಲಿ ಬಿಸಿನೀರಿನಲ್ಲಿ ಸ್ಟೀಮ್‌ ತೆಗೆದುಕೊಳ್ಳುವಾಗ ಆದ ಯಡವಟ್ಟಿನಿಂದ ಹಾಸಿಗೆ ಹಿಡಿಯುವಂತಾಗಿದೆ. ಅಷ್ಟಕ್ಕೂ ಯಶಸ್ವಿನಿ ಅವರಿಗೆ ಅಂತಹದ್ದೇನಾಯ್ತು? ಇಲ್ಲಿದೆ ಮುಂದಿನ ವಿವರ.

ಕಳೆದ ಹತ್ತು ದಿನಗಳ ಹಿಂದೆ ಅಂದರೆ ಮಾರ್ಚ್ 2ನೇ ತಾರೀಕು ಶನಿವಾರ ಎಲ್ಲರಿಗೂ ಸಾಮಾನ್ಯ ದಿನವಾಗಿದ್ದರೆ ಯಶಸ್ವಿನಿ ಮಾಸ್ಟರ್‌ ಆನಂದ್ ಅವರ ಪಾಲಿಗೆ ಬ್ಯಾಡ್ ಡೇ ಆಗಿತ್ತು. ಆ ದಿನ ಮಾಸ್ಟರ್‌ ಆನಂದ್‌ ಕೂಡ ಹಂಪಿ ಉತ್ಸವಕ್ಕೆ ಹೋಗಿದ್ದರಂತೆ. ಮನೆಯಲ್ಲೇ ಇದ್ದ ಯಶಸ್ವಿನಿ, ಬಿಸಿ ನೀರಿನಲ್ಲಿ ಸ್ಟೀಮ್ ತೆಗೆದುಕೊಳ್ಳುತ್ತಾ ಇದ್ದರು. ಈ ವೇಳೆ ಅದೆನಾಯ್ತೋ ಗೊತ್ತಿಲ್ಲ ಕೈಯಿಂದ ತಪ್ಪಿ ಬಿಸಿ ನೀರು ಕಾಲಿನ ಮೇಲೆ ಬಿತ್ತು.

Yashasvini s Steam Accident Explained by Master Anand With Video

ಬಳಿಕ ಆಸ್ಪತ್ರೆಯಲ್ಲಿ ಸುಟ್ಟು ಗುಳ್ಳೆಗಳು ಬಂದ ಕಾರಣ ಅವುಗಳ ಒಳಗಿರುವ ನೀರು ತೆಗೆದು ಸ್ಕಿನ್‌ ಔಟ್‌ ಮಾಡಿ ಬ್ಯಾಂಡೇಜ್‌ ಮಾಡಿದ್ದರು. ಈ ವಿಡಿಯೋವನ್ನು ಯಶಸ್ವಿನಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಯಾರ ಕಣ್ಣು ಬಿತ್ತೋ..ಆದರೆ ಆಗುವುದೆಲ್ಲಾ ಒಳ್ಳೆಯದಕ್ಕೆ ಎಂದು ಬರೆದುಕೊಂಡಿದ್ದರು. ಯಶಸ್ವಿನಿ ಕಾಲಿನ ವಿಡಿಯೋ ನೋಡಿದ ಎಂಥವರಿಗಾದರೂ ಕರಳು ಚುರುಕ್‌ ಎನ್ನುತ್ತದೆ. ಅಷ್ಟರ ಮಟ್ಟಿಗೆ ಅವರ ಕಾಲುಗಳು ಗಾಯಗೊಂಡಿದ್ದವು.

ಯಶಸ್ವಿನಿ ಅವರ ವಿಡಿಯೋ ನೋಡಿದ ಪ್ರತಿಯೊಬ್ಬರು ಕೂಡ ಬೇಗ ಚೇತರಿಸಿಕೊಳ್ಳಿ ಎಂದು ಹಾರೈಸಿದ್ದರು. ಈ ವೇಳೆ ಕೆಲವರಿಗೆ ಪ್ರಶ್ನೆಯೊಂದು ಬಂದಿದ್ದು, ಸ್ಟೀಮ್‌ ತೆಗೆದುಕೊಳ್ಳುವ ನೀರು ಎರಡು ಕಾಲುಗಳ ಮೇಲೆ ಹೇಗೆ ಬಿತ್ತು ಎಂದು ಪ್ರಶ್ನಿಸಿದ್ದಾರೆ. ಜನರ ಈ ಪ್ರಶ್ನೆಗೆ ಸ್ವತಃ ಮಾಸ್ಟರ್‌ ಆನಂದ್ ವಿಡಿಯೋ ಮೂಲಕ ಸವಿವರ ವಿವರಣೆ ನೀಡಿದ್ದಾರೆ.

Yashasvini s Steam Accident Explained by Master Anand With Video

ಈ ವಿಡಿಯೋದಲ್ಲಿ ಯಶಸ್ವಿನಿ ಹಾಗೂ ಮಾಸ್ಟರ್‌ ಆನಂದ್ ಜೊತೆಗೆ ಪುತ್ರ ಕೃಷ್ಣ ಚೈತನ್ಯ ಹಾಗೂ ಎಲ್ಲರ ಫೇವರೇಟ್ ವಂಶಿಕಾ ಕೂಡ ಇದ್ದು, ವಿಡಿಯೋ ಆರಂಭದಲ್ಲಿಯೇ ವಂಶಿಕಾ ಬನ್ನಿ..ಬನ್ನಿ..ಜನರೇ..ಬನ್ನಿ..ಬನ್ನಿ.. ಎಂದು ತಮಾಷೆ ಮಾಡಿದ್ದಾಳೆ. ಬಳಿಕ ಯಶಸ್ವಿನಿ ಕಾಲಿನ ಮೇಲೆ ಬೀಳಿಸಿಕೊಂಡ ಸ್ಟೀಮರ್‌ ಹಿಡಿದುಕೊಂಡ ಮಾಸ್ಟರ್‌ ಆನಂದ್ ವಿವರಣೆ ನೀಡುತ್ತಾರೆ.

'ಮೇಡಂ ಅವರ ಕಾಲಿಗೆ ಹೇಗೆ ಬಿಸಿ ನೀರು ಬಿತ್ತು ಎಂದು ಸುಮಾರು ಜನರು ಕೇಳುತ್ತಿದ್ದಾರೆ. ಹೆಂಗೆ ಮೇಡಂ ಕಾಲಿನ ಅಷ್ಟೊಂದು ಭಾಗ ಮಾತ್ರ ಸುಟ್ಟಿಕೊಂಡರಲ್ಲಾ ಹೇಗೇ ಹೇಗೆ ಎಂದು ಸುಮಾರು ಜನ ಕೇಳಿದ್ದಾರೆ. ನಮ್ಮ ಮನೆಯಲ್ಲಿ ಒಂದು ಸೋಫಾ ಇದೆ. ಟಿವಿ ಮುಂದೆ ಒಂದು ಸೋಫಾ ಇದೆ ಅದರ ಪಕ್ಕದಲ್ಲಿ ಸ್ವಿಚ್‌ ಇದೆ. ಮೇಡಂ ಟಿವಿ ನೋಡಿಕೊಂಡು ಸೋಫಾ ಮೇಲೆ ಕೂತು ಸ್ಟೀಮ್‌ ತೆಗೆದುಕೊಂಡಿದ್ದಾರೆ.

ಸೋಫಾ ಮೇಲೆ ಕೂತು ಯಾರಾದರೂ ಹೀಗೆಲ್ಲಾ ಮಾಡುತ್ತಾರಾ. ಮೇಡಂ ಅವರು ಸೋಫಾ ಮೇಲೆ ಈ ರೀತಿ ಕುಳಿತುಕೊಂಡು ಕಾಲುಗಳನ್ನು ಈ ರೀತಿಯಲ್ಲಿ ಇಟ್ಟುಕೊಂಡು ಸ್ಟೀಮ್ ತೆಗೆದುಕೊಂಡಿದ್ದಾರೆ. ನೀರು ಕೊತ ಕೊತ ಅಂತಾ ಕುದಿಯುತ್ತಿದ್ದು, ಏನೋ ಮಾಡುತ್ತಿದ್ದರಂತೆ. ಅದು ಏನಾಗಿದೆ..ಏನು ಕಥೆನೋ ಗೊತ್ತಿಲ್ಲ. ವೈಯರ್ ಕಿತ್ತುಕೊಂಡು ಕಾಲಿನ ಮೇಲೆ ನೀರು ಬಿದ್ದಿದೆ. ಯಾರಾದರೂ ಈ ರೀತಿ ಇಟ್ಟುಕೊಂಡು ಸ್ಟೀಮ್ ತೆಗೆದುಕೊಳ್ಳುತ್ತಾರಾ? ಈಗ ಕೊನೆಯಲ್ಲಿ ಟಿವಿ ಮುಂದೆ ಸೋಫಾ ಇರುವುದೇ ಅಪರಾಧ ಎನ್ನುವಂತಾಗಿದೆ' ಎಂದು ಆನಂದ್ ವಿವರಿಸಿದ್ದಾರೆ.

ಸದ್ಯ ಯಶಸ್ವಿನಿ ಕಾಲಿಗೆ ಬ್ಯಾಂಡೇಜ್‌ ಹಾಕಿರುವುದರಿಂದ ಅವರು ನಡೆದಾಡುವ ಪರಿಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಅವರ ಊಟದಿಂದ ಹಿಡಿದು ಪ್ರತಿಯೊಂದನ್ನು ಕೂಡ ಮಾಸ್ಟರ್‌ ಆನಂದ್‌ ಅವರೇ ಖುದ್ದು ನೋಡಿಕೊಳ್ಳುತ್ತಿದ್ದಾರೆ. ಅಲ್ಲದೇ ಮಕ್ಕಳು ಸಹ ಈ ಸಮಯದಲ್ಲಿ ಯಶಸ್ವಿನಿ ಅವರಿಗೆ ಸಹಾಯ ಮಾಡುತ್ತಿದ್ದು, ತಾಯಿಗೆ ತೊಂದರೆ ಕೊಡದೇ ತಮ್ಮ ತಮ್ಮ ಕೆಲಸಗಳನ್ನು ತಾವೇ ಸ್ವತಃ ಮಾಡಿಕೊಳ್ಳುತ್ತಿದ್ದಾರೆ. ಕೃಷ್ಣ ಚೈತನ್ಯ ಹಾಗೂ ವಂಶಿಕಾ ತಮ್ಮ ಕೆಲಸದಲ್ಲಿ ತೊಡಗಿರುವ ವಿಡಿಯೋವನ್ನು ಯಶಸ್ವಿನಿ ಶೇರ್‌ ಮಾಡಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+