Yash Dharmasthala Visit: ಮಾಡೋದೆಲ್ಲ ಮಾಡ್ಬಿಟ್ಟು ಮಂಜುನಾಥನತ್ರ ಓಡೋಗಿದ್ದೀಯ ಕಂದ : ಮತ್ತೆ ಯಶ್ ಕೆಣಕಿದ ರಿಷಿಕಾ ಸಿಂಗ್
Yash Dharmasthala Visit: ಒಂದು ಕಡೆ ಯಶ್ ನಟನೆಯ ʼಟಾಕ್ಸಿಕ್ʼ ಸಿನಿಮಾಕ್ಕೆ ನೆಗೆಟಿವ್ ಕಾಮೆಂಟ್‌ಗಳ ಪ್ರವಾಹವೇ ಹರಿದುಬರುತ್ತಿದೆ. ಇನ್ನೊಂದೆಡೆ ರಿಷಿಕಾ ಸಿಂಗ್ ಮತ್ತೆ ಭುಸುಗುಟ್ಟಿದ್ದಾರೆ. ಹಿಂದೆ ಟಾಕ್ಸಿಕ್' ಟ್ರೇಲರ್ ಬಗ್ಗೆ ನಟಿ ರಿಶಿಕಾ ಸಿಂಗ್ ಬೋಲ್ಡ್ ಸ್ಟೇಟ್‌ಮೆಂಟ್ ಕೊಟ್ಟದ್ದರು. 'ಟಾಕ್ಸಿಕ್' ಟ್ರೇಲರ್‌ನಲ್ಲಿ ಯಶ್ ನಗ್ನವಾಗಿ ಕಾಣಿಸಿಕೊಂಡಿದ್ದು, ಈ ಬಗ್ಗೆ ʼಇದೇನು ಪ್ಯಾಂಟ್ ಬಿಚ್ಕೊಂಡು ಆಗಿಬಿಟ್ಟಿದ್ದೀಯ ಮಂಗ.. ಜಾಗ ಖಾಲಿ ಮಾಡಿಸಿಬಿಡ್ತೀವಿ ಕರ್ನಾಟಕದಿಂದ' ಎಂದು ವಿಡಿಯೋದಲ್ಲಿ ಹೇಳಿದ್ದರು ರಿಶಿಕಾ ಸಿಂಗ್. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ರಿಶಿಕಾ ಸಿಂಗ್ ಅವರನ್ನ ಯಶ್ ಫ್ಯಾನ್ಸ್ ಟ್ರೋಲ್ ಮಾಡಿದ್ದರು. ಇದೀಗ ಟಾಕ್ಸಿಕ್ ರಿಲೀಸ್ ಆಗಿ ತಾರಾಮಾರ ನೆಗೆಟಿವ್ ಕಾಮೆಂಟ್‌ಗಳು ಹರಿದುಬರುತ್ತಿವೆ. ಯಶ್ ಧರ್ಮಸ್ಥಳಕ್ಕೆ ಒಂಟಿಯಾಗಿ ಹೋಗಿ ದರ್ಶನ ಮಾಡಿದ್ದಕ್ಕೆ ರಿಷಿಕಾ ಮಾಡಿರೋ ರೀಲ್ಸ್ ವೈರಲ್ ಆಗ್ತಿದೆ.

ಹೆಂಡ್ತಿ ಇಲ್ಲದೇನೇ ಟೆಂಪಲ್ ರನ್ ಯಾಕೆ ಎಂದ ರಿಷಿಕಾ
ʼಎಕ್ಸಾಂ ಬರ್ದಾಗಾಯ್ತು. ಈಗ ಮಾರ್ಕ್ಸ್ ಕೊಡ್ತಾರೆ ನೋಡಾಣ ಎಷ್ಟಂತ, ಆದ್ರೂ ಹೆಂಡ್ತಿ ಇಲ್ದೇ ಟೆಂಪಲ್ ರನ್ ಯಾಕೇ ಅಂತʼ ಎಂದೆಲ್ಲ ರಿಷಿಕಾ ರೀಲ್ಸ್‌ನಲ್ಲಿ ಮಾತು ಹರಿಯಬಿಟ್ಟಿದ್ದರು. ಅಂದಹಾಗೆ ಯಶ್ ಅವರ ʼಟಾಕ್ಸಿಕ್ʼ ರಿಲೀಸ್‌ಗೂ ಹಿಂದಿನ ದಿನ ತರಾತುರಿಯಲ್ಲಿ ಧರ್ಮಸ್ಥಳಕ್ಕೆ ತೆರಳಿ ಮಂಜುನಾಥನ ದರ್ಶನ ಮಾಡಿ ಪಕ್ಕದಲ್ಲೇ ಇದ್ದ ಸುರ್ಯ ಸದಾಶಿವ ರುದ್ರ ದೇವಸ್ಥಾನಕ್ಕೂ ವಿಸಿಟ್ ಮಾಡಿ ಬಂದಿದ್ದರು. ಈ ವೇಳೆ ರಿಷಿಕಾ ಮಾಡಿರೋ ರೀಲ್ಸ್ ಇದು. ಇದೀಗ ಯಶ್ ಅವರ ಟಾಕ್ಸಿಕ್ ಸಿನಿಮಾದ ಬಗ್ಗೆ ಜನ ರೊಚ್ಚಿಗೆದ್ದಿರುವಾಗ ರಿಷಿಕಾ ಅವರ ಮಾತು ಬೇರೆಯೇ ರೀತಿ ಸೋಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸುತ್ತಿದೆ.
ಸಿನಿಮಾ ಹಿನ್ನೆಲೆಗೆ ಇದೂ ಕಾರಣವಾ..
ಮದುವೆ ಆಗಿದ್ದು, ಗೃಹಸ್ಥನಾಗಿದ್ದು ವಿಶೇಷ ಸಂದರ್ಭಗಳಲ್ಲಿ ದೇವರ ದರ್ಶನ ಪಡೆಯುವಾಗ ಪತ್ನಿ ಜೊತೆಗಿದ್ದರೆ ಪೂರ್ಣ ಫಲ ಎಂಬ ಮಾತಿದೆ. ಇದನ್ನೇ ರಿಷಿಕಾ ಆಡಿಕೊಂಡಿದ್ದಾರೆ. ʼಹೆಂಡತಿ ಇಲ್ದೇನೆ ಟೆಂಪಲ್ ರನ್ ಯಾಕೆ ಅಂತʼ ಎಂದು ಕೇಳಿರುವ ರಿಷಿಕಾ, ʼಗೃಹಸ್ಥನಿಗ್ಯಾಕೆ ಸನ್ಯಾಸಿ ವರ್ತನೆ.. ಇದು ಆಗಬಹುದೇನೋ ಅಡಚಣೆʼ ಎಂಬ ಮಾತನ್ನು ರಿಷಿಕಾ ಹೇಳಿದ್ದಾರೆ. ಟಾಕ್ಸಿಕ್‌ಗೆ ನಿರೀಕ್ಷಿತ ಜನ ಬೆಂಬಲ ಸಿಗದಿರುವ ಹಿನ್ನೆಲೆಯಲ್ಲಿ ರಿಷಿಕಾ ಆಡಿರುವ ಈ ಮಾತು ಹೈಪ್ ಪಡೆದುಕೊಂಡಿದೆ.
Yash Dharmasthala Visit: ಹೆಂಡತಿ ಜೊತೆ ಹೋಗದಿದ್ರೆ ಫಲ ಇಲ್ವಾ?
ವಿವಾಹಿತನಾದ ವ್ಯಕ್ತಿ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್‌ಗಾಗಿ ಪ್ರಾರ್ಥಿಸಿ ದೇವಾಲಯಕ್ಕೆ ಹೋದರೆ ಪತ್ನಿ ಜೊತೆಗಿರಬೇಕು ಎಂಬ ಮಾತಿದೆ. ರಿಷಿಕಾ ಇದನ್ನೇ ತೆಗೆದುಕೊಂದು ಮಾತಿನ ದಾಳಿಯನ್ನು ಈ ವೀಡಿಯೋ ಮೂಲಕ ಮುಂದುವರಿಸಿದ್ದಾರೆ. ʼಪ್ರದಕ್ಷಿಣೆ ಮೇಲೆ ಪ್ರದಕ್ಷಿಣೆ .. ಹೆಂಡ್ತಿ ಇಲ್ಲದೇನೇ ದರ್ಶನ ಮಾಡಿದ್ರೆ ಫಲ ಸಿಗೋದು ಕಷ್ಟನೇ ಅಂತ ಹೇಳಿದ್ದಾರೆ. ಅವರ ಮಾತು ಸದ್ಯ ಸೆನ್ಸೇಶನ್ ಸೃಷ್ಟಿಸಿದೆ. ಅಂದುಕೊಂಡ ಫಲವನ್ನು ಟಾಕ್ಸಿಕ್ ಸಿನಿಮಾ ನೀಡದಿರುವ ಬೆನ್ನಲ್ಲಿ ಈ ಮಾತು ವೈರಲ್ ಆಗುತ್ತಿದೆ. ಆದರೆ ಯಶ್ ಫ್ಯಾನ್ಸ್ ರಿಷಿಕಾ ವಿರುದ್ಧ ಕಿಡಿ ಕಾರುವುದನ್ನು ಮುಂದುವರಿಸಿದ್ದಾರೆ.
ವೀರನಾರಿಯಂತೆ ಪೋಸ್ಟ್
ಇದೀಗ ಟಾಕ್ಸಿಕ್ ರಿಲೀಸ್ ಆಗಿ ಒಂದಿಷ್ಟು ನೆಗೆಟಿವ್ ಕಾಮೆಂಟ್‌ಗಳು ಕೇಳಿಬರುತ್ತಿರುವುದನ್ನು ನೋಡಿ ರಿಷಿಕಾ ʼನಿಜ ಹೇಳುವುದು ನಮ್ಮ ಧರ್ಮ ಅದನ್ನು ಅರ್ಥ ಮಾಡಿಕೊಳ್ಳುವುದು ಬಿಡುವುದು ನಿಮ್ಮ ಖರ್ಮ. ಕರ್ಮ ಕಾಣಲ್ಲ. ಕಾಡದೆ ಬಿಡಲ್ಲ. ಸತ್ಯಕ್ಕೆ ಸೋಲಿಲ್ಲʼ ಎಂದೆಲ್ಲ ಸ್ಟೇಟಸ್ ಹಾಕಿಕೊಂಡಿದ್ದಾರೆ. ವಾರಿಯರ್ ಪೋಸ್‌ನಲ್ಲಿ ಅವರ ವಾರಿಯರ್ ಲುಕ್‌ನ ಫೋಟೋವೂ ಇದರ ಜೊತೆಇದೆ. ಜೊತೆಗೆ ಜಿ.ಪಿ ರಾಜರತ್ನಂ ಅವರ ʼ ನರಕಕ್ ಇಳ್ಸಿ, ನಾಲ್ಗೆ ಸೀಳ್ಸಿ, ಬಾಯ್ ಒಲಿಸಾಕಿದ್ರೂನೆ, ಮೂಗ್ನಲ್ ಕನ್ನಡ ಪದವಾಡ್ತೀನಿ! ಹೆಂಡ ಓಗ್ಲಿ ಹೆಂಡ್ತಿ ಓಗ್ಲಿ, ಎಲ್ಲ ಕೊಚ್ಕೊಂಡು ಓಗ್ಲಿ ಪರ್ಪಂಚ್ ಇರೋ ತನಕ ಮುಂದೆ ಕನ್ನಡ್ ಪದಗೊಳ್ ನುಗ್ಗಿ!ʼ ಎಂಬ ಸ್ಟೇಟಸ್ ಅನ್ನೂ ಪೋಸ್ಟ್ ಮಾಡಿದ್ದಾರೆ.
ಖ್ಯಾತ ನಿರ್ದೇಶಕರ ಪುತ್ರಿ
ʼಮುತ್ತಿನ ಹಾರʼ, ʼಬಂಧನʼದಂಥಾ ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಮಗಳೇ ರಿಷಿಕಾ ಸಿಂಗ್. ಈ ಹಿಂದೆ 'ಕಂಠೀರವ', 'ಕಳ್ಳ ಮಳ್ಳ ಸುಳ್ಳ', 'ಬೆಂಕಿ ಬಿರುಗಾಳಿ' ಮುಂತಾದ ಸಿನಿಮಾಗಳಲ್ಲಿ ರಿಶಿಕಾ ಸಿಂಗ್ ಅಭಿನಯಿಸಿದ್ದರು. ನಟ ಆದಿತ್ಯ ಇವರ ಸಹೋದರ. ಮಗಳ ರೀಲ್ಸ್ ಬಗ್ಗೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಪ್ರತಿಕ್ರಿಯೆ ನೀಡಿ, ʼಅದು ರಿಷಿಕಾ ವೈಯಕ್ತಿಕ ಅನಿಸಿದೆ. ನನಗೆ ಯಶ್ ಸಿನಿಮಾದ ಬಗ್ಗೆ ಅಪಾರ ಅಭಿಮಾನವಿದೆ. ಕನ್ನಡ ಇಂಡಸ್ಟ್ರಿಯ ಎತ್ತರವನ್ನು ಹಾಲಿವುಡ್ ಲೆವೆಲ್‌ಗೆ ಏರಿಸಿದ ಯಶ್ ಅವರ ಸಾಧನೆ ಕನ್ನಡಿಗರು ಹೆಮ್ಮೆ ಪಡುವಂಥಾದ್ದುʼ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ.


Click it and Unblock the Notifications
