Vijayalakshmi Darshan: ದರ್ಶನ್ ಅರೆಸ್ಟ್, ಒಡೆದ ಹೃದಯದ ಎಮೋಜಿ ಹಾಕಿ ಪತ್ನಿ ವಿಜಯಲಕ್ಷ್ಮಿ ಭಾವುಕ ಪೋಸ್ಟ್!

ಬೆಂಗಳೂರು, ಆಗಸ್ಟ್‌ 16: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ ನಲ್ಲಿ ನಟ ದರ್ಶನ್ ಜೈಲು ಪಾಲಾದ ದಿನದಿಂದಲೂ ಪತಿ ಪರವಾಗಿ ನಿಂತವರು ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮಿ. ಈ ಹಿಂದೆ ನಟ ದರ್ಶನ್‌ ಆರು ತಿಂಗಳು ಕಾಲ ಜೈಲಿನಲ್ಲಿದ್ದಾಗ ಪತಿಯನ್ನ ಜೈಲಿನಿಂದ ಹೊರಗೆ ತರಲೇಬೇಕು ಎಂದು ಪಣ ತೊಟ್ಟ ವಿಜಯಲಕ್ಷ್ಮಿ ಕಾನೂನು ಹೋರಾಟ ನಡೆಸಿದ್ರು. ಗಂಡನಿಗಾಗಿ ದೇವರ ಮೊರೆ ಹೋಗಿದ್ರು. ಕೊನೆಗೆ ಜಾಮೀನಿನ ಮೂಲಕ ನಟ ದರ್ಶನ್‌ ಅವರು ಜೈಲಿನಿಂದ ಬಿಡುಗಡೆಯಾಗಿದ್ದರು.

ವಿಜಯಲಕ್ಷ್ಮಿ ಅವರು ದರ್ಶನ್‌ ಅವರನ್ನ ಜೈಲಿನಿಂದ ಬಿಡಿಸಿಕೊಂಡು ಬರಲು ಸಾಕಷ್ಟು ಕಷ್ಟಪಟ್ಟಿದ್ದರು. ಇದೀಗ ಸುಪ್ರೀಂ ಕೋರ್ಟ್‌ ಜಾಮೀನು ರದ್ದುಗೊಳಿಸಿ ಬಿಗ್‌ ಶಾಕ್‌ ಕೊಟ್ಟಿದ್ದು, ಇದೀಗ ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊಲೆ ಆರೋಪಿ ನಟ ದರ್ಶನ್ ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್‌ ನಲ್ಲಿ ಎರಡನೇ ಆರೋಪಿಯಾಗಿರುವ ದರ್ಶನ್‌ ಜೊತೆಗೆ ಪ್ರಮುಖ ಆರೋಪಿ ಪವಿತ್ರಗೌಡ, ಪ್ರದೋಷ ಸೇರಿದಂತೆ ಎಲ್ಲಾ 7 ಆರೋಪಿಗಳು ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

Wife Vijayalakshmi shares emotional post with broken heart emoji

ಇನ್ನೂ ನಟ ದರ್ಶನ್ ಅರೆಸ್ಟ್ ಆದ ಎರಡು ದಿನ ಬಳಿಕ ಪತ್ನಿ ವಿಜಯಲಕ್ಷ್ಮಿ ಭಾವುಕ ಪೋಸ್ಟ್ ಹಾಕಿದ್ದಾರೆ. ಈ ಹಿಂದೆ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ ಅವರು ಸಾಮಾಜಿಕ ಜಾಲತಾಣ ಸಿಕ್ಕಪಟ್ಟೆ ಆಕ್ಟಿವ್‌ ಆಗಿದ್ದರು. ಇದೀಗ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪತಿ ದರ್ಶನ್ ಜೈಲಿನಲ್ಲಿದ್ದಾರೆ. ದರ್ಶನ್ ಅರೆಸ್ಟ್ ಆಗಿ ಎರಡು ದಿನದ ಬಳಿಕ ನಟಿ ವಿಜಯಲಕ್ಷ್ಮಿ ಪೋಸ್ಟ್ ಹಾಕಿದ್ದಾರೆ ಒಡೆದ ಹೃದಯದ ಪೋಸ್ಟ್ ಹಾಕಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ತಮ್ಮನೋವು ತೋಡಿಕೊಂಡಿದ್ದಾರೆ. ದರ್ಶನ್‌ ಅವರ ಫೋಟೋ ಹಾಕಿ ಸಾಮಾಜಿಕ ಜಾಲತಾಣದಲ್ಲಿ ವಿಜಯಲಕ್ಷ್ಮಿ ಈ ರೀತಿ ಭಾವುಕರಗಿ ಪೋಸ್ಟ್ ಹಾಕಿದ್ದಾರೆ.

ಈ ಹಿಂದೆ ದರ್ಶನ್‌ ಅವರನ್ನ ಜೈಲಿನಿಂದ ಬಿಡಿಸಿಕೊಂಡು ಬರಲು ಪತಿಯ ಜಾಮೀನಿಗಾಗಿ ಸಾಕಷ್ಟು ಕಷ್ಟಪಟ್ಟಿದ್ದರು. ದೇವಸ್ಥಾನಗಳಿಗೆ ಹೋಗಿ, ಪೂಜೆ ಮಾಡಿಸಿ, ಅತ್ತ ಗಂಡನನ್ನೂ ವಾರದಲ್ಲೊಮ್ಮೆ ಭೇಟಿ ಮಾಡಿ, ವಕೀಲರು, ಜಾಮೀನು ಅಂತ ಸಿಕ್ಕಾಪಟ್ಟೆ ಓಡಾಡಿದ್ದರು. ಅಲ್ಲದೇ ಈ ಕೇಸ್‌ ನಿಂದಾಗಿ ಮಾನಸಿಕವಾಗಿ ಹಲವು ನೋವುಗಳನ್ನ ಹಾಗೂ ಸವಾಲುಗಳನ್ನ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ ಅವರು ಎದುರಿಸಿದ್ದರು. ದರ್ಶನ್‌ ಬಿಡುಗಡೆಯಾದ ಬಳಿಕ ಹಲವು ದೇವಸ್ಥಾನಗಳಿಗೆ ಭೇಟಿ ಕೊಟ್ಟು ವಿಶೇಷ ಪೂಜೆ ಮಾಡಿಸಿದ್ದರು. ಇದೀಗ ಮತ್ತೆ ದರ್ಶನ್‌ ಜೈಲು ಸೇರಿದ್ದು, ಒಡೆದ ಹೃದಯದ ಪೋಸ್ಟ್ ಹಾಕಿ ಭಾವುಕರಗಿದ್ದಾರೆ.

ಜೈಲಿನ ಎರಡೇ ದಿನಕ್ಕೆ ಸುಸ್ತಾದ ದರ್ಶನ್

ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಕೇಸ್​​ನಲ್ಲಿ ದರ್ಶನ್ ಕಳೆದ ವರ್ಷ ಜೂನ್​ನಲ್ಲಿ ಅರೆಸ್ಟ್ ಆಗಿದ್ದರು. ಆರು ತಿಂಗಳ ಕಾಲ ಜೈಲಿನಲ್ಲಿದ್ದ ದರ್ಶನ್‌ ಆಂಡ್‌ ಗ್ಯಾಂಗ್‌ ಕರ್ನಾಟಕ ಹೈಕೋರ್ಟ್​ನಿಂದ ಜಾಮೀನು ಪಡೆದು ಅವರು ಹಾಯಾಗಿ ಸುತ್ತಾಡಿಕೊಂಡಿದ್ದರು. ಇದೀಗ ಸುಪ್ರೀ ಕೋರ್ಟ್‌ ಬಿಗ್‌ ಶಾಕ್‌ ಕೊಡುವ ಮೂಲಕ ಜಾಮೀನನ್ನು ರದ್ದು ಮಾಡಿದೆ. ಅಲ್ಲದೆ, ದರ್ಶನ್​ಗೆ ಯಾವುದೇ ಐಷಾರಾಮಿ ಸವಲತ್ತು ಸಿಗದಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದೆ. ಈ ಕಾರಣದಿಂದಲೇ ದರ್ಶನ್ ಜೈಲಿನಲ್ಲಿ ಸಾಕಷ್ಟು ತೊಂದರೆ ಎದುರಿಸಬೇಕಾದ ಪರಿಸ್ಥಿತಿ ಬಂದಿದೆ.

ರೇಣುಕಾಸ್ವಾಮಿ ಕೊಲೆ ಕೇಸ್‌ ನಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇಡಲಾಗಿದೆ. ದರ್ಶನ್​ ಆರಂಭದಲ್ಲಿ ಇಲ್ಲೇ ಇದ್ದರು. ಅವರಿಗೆ ಐಷಾರಾಮಿ ಸವಲತ್ತು ಒದಗಿಸಲಾಯಿತು. ಇದರ ಫೋಟೋಗಳು ಕೂಡ ವೈರಲ್ ಆದವು. ಈ ಪ್ರಕರಣದಲ್ಲಿ ಕೇಸ್ ಕೂಡ ದಾಖಲಾಗಿದೆ. ಈ ವಿಚಾರಗಳನ್ನು ಗಮನಿಸಿದ್ದ ಸುಪ್ರೀಂಕೋರ್ಟ್ ದರ್ಶನ್​ಗೆ ಯಾವುದೇ ಸವಲತ್ತು ಸಿಗದಂತೆ ನೋಡಿಕೊಳ್ಳಿ ಎಂದು ಹೇಳಿದೆ. ಹೀಗಾಗಿ ಯಾವುದೇ ಸವಲತ್ತುಗಳಿಲ್ಲದೆ ಎರಡೇ ದಿನಕ್ಕೆ ದರ್ಶನ್‌ ಸುಸ್ತಾಗಿ ಹೋಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+