Rithanya Vijay: ದುನಿಯಾ ವಿಜಯ್ ಪುತ್ರಿ ಹೆಸರು ಬದಲಿಸಿದ್ದೇಕೆ? ಎಲ್ಲರಿಗೂ ಇರುವ ಆ ಗೊಂದಲವೇನು?
ಕನ್ನಡ ಚಿತ್ರರಂಗದ ಖ್ಯಾತ ನಟ-ನಟಿಯರ ಮಕ್ಕಳು ಇದೀಗ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೇ ನಟ ಪ್ರೇಮ್ ಪುತ್ರಿ ಹಾಗೂ ನಟಿ ಮಾಲಾಶ್ರೀ ಪುತ್ರಿ ಸಿನಿಮಾ ರಂಗಕ್ಕೆ ಕಾಲಿಟ್ಟು ಮೊದಲ ಚಿತ್ರದಲ್ಲೇ ಯಶಸ್ಸುಗಳಿಸಿದ್ದಾರೆ. ಇದೀಗ ಮತ್ತೋರ್ವ ನಟನ ಮಗಳು ಬೆಳ್ಳಿ ತೆರೆಗೆ ಎಂಟ್ರಿ ಕೊಡುತ್ತಿದ್ದು, ವಿಶೇಷವೆಂದರೆ ಹೆಸರು ಬದಲಿಸಿಕೊಂಡೇ ನಟಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.
ನಟ ದುನಿಯಾ ವಿಜಯ್ ಮಗಳು ಮೋನಿಕಾ ಸ್ಯಾಂಡಲ್‌ವುಡ್‌ಗೆ ಪ್ರವೇಶಿಸಲು ಸಜ್ಜಾಗಿದ್ದಾರೆ. ತಂದೆಯ ಚಿತ್ರದ ಮೂಲಕವೇ ಮೋನಿಕಾ ಚಿತ್ರರಂಗ ಪ್ರವೇಶಿಸುತ್ತಿದ್ದು, ಚಿತ್ರರಂಗಕ್ಕೆ ಪ್ರವೇಶಿಸುವ ಮುನ್ನ ಮೋನಿಕಾ ತಮ್ಮ ಹೆಸರು ಬದಲಿಸಿಕೊಂಡಿದ್ದಾರೆ. ದುನಿಯಾ ವಿಜಯ್ ಪುತ್ರಿ ಮೋನಿಕಾ ಇದೀಗ ರಿತನ್ಯ ವಿಜಯ್ ಎಂದು ಹೆಸರು ಬದಲಿಸಿಕೊಂಡಿದ್ದಾರೆ.

ಚಿತ್ರರಂಗಕ್ಕೆ ಬರುವಾಗ ಹೆಸರು ಬದಲಿಸಿಕೊಳ್ಳುವುದು ಕನ್ನಡ ಚಿತ್ರರಂಗದಲ್ಲಿ ಹೆಳೆಯ ಸಂಪ್ರದಾಯ. ಅನೇಕ ನಟ ದಿಗ್ಗಜರು ಸಹ ಹೆಸರು ಬದಲಿಸಿಕೊಂಡಿದ್ದರು. ನಟಿಯರೂ ಕೂಡ ಹೆಸರು ಬದಲಿಸಿಕೊಂಡು ಚಿತ್ರರಂಗದಲ್ಲಿ ಯಶಸ್ಸು ಕಂಡಿದ್ದರು. ಅಷ್ಟೇ ಯಾಕೆ ಇತ್ತೀಚಿಗೆ ಕಾಟೇರ ಚಿತ್ರದ ಮೂಲಕ ಸಿನಿಮಾ ರಂಗ ಪ್ರವೇಶಿಸಿದ ನಟಿ ಮಾಲಾಶ್ರೀ ರಾಮ್ ಪುತ್ರಿ ಆರಾಧನಾ ಕೂಡ ಹಳೆಯ ಹೆಸರು ಬದಲಿಸಿಕೊಂಡಿದ್ದರು. ಅದೇ ರೀತಿ ಈಗ ದುನಿಯಾ ವಿಜಯ್ ಪುತ್ರಿ ಮೋನಿಕಾ ಕೂಡ ಹೆಸರು ಬದಲಿಸಿಕೊಂಡಿದ್ದಾರೆ.
ಮೋನಿಕಾ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳಲು ಒಂದು ಇಂಟ್ರಸ್ಟಿಂಗ್ ವಿಚಾರವಿದೆ. ಇದಕ್ಕೆ ತಂಗಿ ಹಾಗೂ ಅವರ ಹೆಸರುಗಳ ನಡುವೆ ಇದ್ದ ಗೊಂದಲವೇ ಕಾರಣವಾಗಿದೆ. ಈ ಬಗ್ಗೆ ಸ್ವತಃ ರಿತನ್ಯ ಮಾತನಾಡಿದ್ದು, ಹೆಸರು ಬದಲಿಸಿದ್ಯಾಕೆ ಎನ್ನುವುರ ಬಗ್ಗೆ ವಿವರಣೆ ನೀಡಿದ್ದಾರೆ.

'ವಿ.ಕೆ 29' ಚಿತ್ರದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ರಿತನ್ಯ, ನಾನು ಮೋನಿಕಾ..ತಂಗಿ ಮೋನಿಷಾ, ಈ ಹೆಸರುಗಳ ಬಗ್ಗೆ ಎಲ್ಲರಿಗೂ ಒಂದು ಗೊಂದಲ. ನನಗೆ ಮೋನಿಷಾ ಅಂತಾ ಕರೆಯುತ್ತಾರೆ, ಅವಳಿಗೆ ಮೋನಿಕಾ ಅಂತಾ ಕರೆಯುತ್ತಾರೆ. ನನ್ನ ಕೆಲವೊಂದಿಷ್ಟು ವಿಡಿಯೋಗಳಿಗೆ ಅವಳ ಹೆಸರನ್ನು ಹಾಕಲಾಗಿತ್ತು. ಹೀಗಾಗಿ ಆ ಗೊಂದಲ ಬೇಡ, ಒಂದು ಕ್ಯಾರಿಟಿ ಇರಲಿ ಎನ್ನುವ ಕಾರಣಕ್ಕೆ ನಾವು ಈ ಹೆಸರನ್ನು ಆಯ್ಕೆ ಮಾಡಿಕೊಂಡಿದ್ದೇವೆ' ಎಂದು ಹೆಸರಿನ ಹಿಂದಿನ ಗೊಂದಲ ಹಾಗೂ ಹೆಸರು ಬದಲಿಸಿಕೊಂಡ ಕಾರಣವನ್ನು ವಿವರಿಸಿದ್ದಾರೆ.
ಇನ್ನು 'ಕಾಟೇರ' ಚಿತ್ರದ ಬರಹಗಾರ ಜಡೇಶ ಕೆ ಹಂಪಿ ನಿರ್ದೇಶನದ ಹಾಗೂ ದುನಿಯಾ ವಿಜಯ್ ನಾಯಕರಾಗಿ ನಟಿಸುತ್ತಿರುವ 'ವಿ.ಕೆ 29' ಚಿತ್ರದ ಮುಹೂರ್ತ ಇತ್ತೀಚಿಗೆ ಮಹಾಲಕ್ಷ್ಮೀಪುರದ ಶ್ರೀವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ನಡೆಯಿತು. ರಚಿತಾ ರಾಮ್ ಈ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದು, ದುನಿಯಾ ವಿಜಯ್ ಪುತ್ರಿ ರಿತನ್ಯ ಈ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.












Click it and Unblock the Notifications