ಅನುಶ್ರೀ ಮದುವೆಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಬರದೆ ಇರುವುದಕ್ಕೆ ಇದೇ ಕಾರಣನಾ?
ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರು ಕುಶಾಲನಗರ ಮೂಲದ ರೋಷನ್ ಅವರ ಜೊತೆಗೆ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ಆಗಸ್ಟ್ 28ರ ಗುರುವಾರ ಬೆಳಗ್ಗೆ ಇವರ ಮದುವೆಯು ಕನಕಪುರ ರಸ್ತೆಯಲ್ಲಿರುವ ಖಾಸಗಿ ರೆಸಾರ್ಟ್‌ವೊಂದರಲ್ಲಿ ನಡೆದಿದೆ. ನಟಿ ಹಾಗೂ ನಿರೂಪಕಿ ಅನುಶ್ರೀ ಹಾಗೂ ರೋಷನ್ ಅವರ ವಿವಾಹಕ್ಕೆ ಚಿತ್ರರಂಗದ ಅನೇಕ ಗಣ್ಯರು ಆಗಮಿಸಿ ಶುಭ ಹಾರೈಸಿದರು. ಜೀ ಕನ್ನಡ ವಾಹಿನಿಯ ಮನೆಮಾತಿನ ನಿರೂಪಕಿ ಆಗಿರುವ ಅನುಶ್ರೀ ಅವರ ಮದುವೆ-ರಿಸಪ್ಷನ್‌ಗೆ ಕಿರುತೆರೆ-ಹಿರಿತೆರೆ ಕಲಾವಿದರು ಆಗಮಿಸಿದ್ದರು. ನಟ ಶಿವರಾಜ್‌ಕುಮಾರ್ ಮತ್ತು ಅವರ ಪತ್ನಿ ಗೀತಾ ಶಿವರಾಜ್‌ಕುಮಾರ್ ಸೇರಿದಂತೆ ಕನ್ನಡ ಚಿತ್ರರಂಗದ ಹಿರಿಯ ನಾಯಕ ನಟರು ಹಾಗೂ ನಟಿಯವರು ಆಗಮಿಸಿ ಶುಭಕೋರಿದರು.
ಅನುಶ್ರೀ ಹಾಗೂ ರೋಷನ್ ಅವರ ಸ್ನೇಹ, ಪ್ರೇಮವಾಗಿದ್ದು ಹೇಗೆ ಎಂಬ ಬಗ್ಗೆ ಅನುಶ್ರೀ ಮಾತನಾಡಿದ್ದರು. ನಾವಿಬ್ಬರು ಫ್ರೆಂಡ್ಸ್ ಆಗಿದ್ವಿ, ಒಟ್ಟಿಗೆ ಕಾಫಿ ಕುಡಿದ್ವಿ. ಅವರಿಗೆ ನಾನಿಷ್ಟ ಆದೆ. ನನಗೆ ಅವರಿಷ್ಟ ಆದರು. ಲವ್ ಆಯ್ತು, ಮದುವೆ ಆದೆವು. ಪುನೀತ್ ಸರ್‌ಗೆ ರೋಷನ್ ಅಭಿಮಾನಿ. ನಾವಿಬ್ಬರು ಪುನೀತ್ ಸರ್ ಕಾರ್ಯಕ್ರಮದ ಮೂಲಕ ಕ್ಲೋಸ್ ಆದೆವು. ನಾವು ಪ್ರೇಮಿಗಳು, ಗಂಡ-ಹೆಂಡತಿ ಎಂಬುದಕ್ಕಿಂತ ಹೆಚ್ಚಾಗಿ, ನಾವು ಜೀವನವನ್ನು ತುಂಬಾ ಸಿಂಪಲ್ ಆಗಿ ನೋಡುವಂತಹವರು. ಚಿಕ್ಕ ಚಿಕ್ಕ ವಿಚಾರಗಳನ್ನು ಸೆಲೆಬ್ರೇಟ್ ಮಾಡುತ್ತೇವೆ. ಅವರಲ್ಲಿ ಸಹಾಯ ಮನೋಭಾವ ಜಾಸ್ತಿ. ನನಗೆ ಅದು ತುಂಬಾ ಇಷ್ಟ ಎಂದು ಅನುಶ್ರೀ ಅವರು ಹೇಳಿದ್ದರು.

ಇನ್ನೂಅನುಶ್ರೀ ಹಾಗೂ ರೋಷನ್ ಅವರು ಪುನೀತ್ ರಾಜ್‌ಕುಮಾರ್ ಅವರ ಬಹುದೊಡ್ಡ ಅಭಿಮಾನಿ. ಅವರಿಗೆ ರೋಷನ್ ಜೊತೆ ಸ್ನೇಹ ಬೆಳೆದಿದ್ದೂ ಕೂಡ ಪುನೀತ ಪರ್ವ ಎಂಬ ಕಾರ್ಯಕ್ರಮದಲ್ಲಿ. ಅದೆಷ್ಟೋ ಸಮಾರಂಭಗಳಲ್ಲಿ ಅನುಶ್ರೀ ಮತ್ತು ಅಶ್ವಿನಿ ಪುನೀತ್ ವೇದಿಕೆ ಹಂಚಿಕೊಂಡಿದ್ದಾರೆ. ಆದರೆ ಅನುಶ್ರೀ ಹಾಗೂ ರೋಷನ್ ವಿವಾಹ ಸಮಾರಂಭದಲ್ಲಿ ಅಶ್ವನಿ ಪುನೀತ್ ರಾಜ್ ಕುಮಾರ್ ಅವರು ಬಂದೇ ಬರುತ್ತಾರೆ ಎಂದು ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಅನುಶ್ರೀ ಅವರ ಮದುವೆಯಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಕಾಣಿಸಿಕೊಂಡಿಲ್ಲ.
ಅನುಶ್ರೀ ಅವರ ಮದುವೆ ಹಾಗೂ ರಿಸಪ್ಷನ್‌ಗೆ ಹಲವು ಸಿನಿಮಾ ರಂಗದ ನಾಯಕ ನಟ ಹಾಗೂ ನಟಿಯರು ಕಾಣಿಸಿಕೊಂಡಿದ್ದಾರೆ. ಆದರೆ, ಯಾವೊಂದು ಫೋಟೋ-ವಿಡಿಯೊದಲ್ಲಿಯೂ ಅಶ್ವಿನಿ ಪುನೀತ್ ರಾಜ್‌ಕುಮಾರ್ ಇಲ್ಲದೆ ಇರುವುದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅಲ್ಲದೇ ಅಭಿಮಾನಿಗಳು ಬೇಸರವಾಗಿದೆ. ಅನುಶ್ರೀ ಅವರು ಅಶ್ವಿನಿ ಪುನೀತ್ ಜೊತೆ ಕೂಡ ಒಳ್ಳೆಯ ಸ್ನೇಹ ಹೊಂದಿದ್ದಾರೆ. ಆದರೆ ಯಾಕೆ ಅಶ್ವಿನಿ ಅವರುಮದುವೆಗೆ ಬಂದಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿದೆ.
ಇನ್ನು ರೋಷನ್ ಅವರ ಬಾಲ್ಯದ ಗೆಳತಿ ಶ್ರೀದೇವಿ ಭೈರಪ್ಪ. ಅನುಶ್ರೀ ಮತ್ತು ರೋಷನ್ ಮದುವೆಯಲ್ಲಿ ಯುವರಾಜ್‌ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ ಅವರು ಮನೆಮಗಳಂತೆ ಓಡಾಡಿಕೊಂಡಿದ್ದರು. ನ್ನು ರೋಷನ್‌ಗೆ ಅನುಶ್ರೀ ಪರಿಚಯ ಆಗಿದ್ದೇ ಶ್ರೀದೇವಿ ಅವರಿಂದ ಎಂದೂ ಈ ಹಿಂದೆ ರೋಷನ್ ಹೇಳಿಕೊಂಡಿದ್ದಾರೆ. ಶ್ರೀದೇವಿ ಭೈರಪ್ಪ ಈಗಾಗಲೇ ಪತಿ ಯುವ ಮತ್ತು ದೊಡ್ಮನೆಯಿಂದ ದೂರವಾಗಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ನಟ ಶಿವರಾಜ್ ಕುಮಾರ್ ಅವರ ಪೋಸ್ಟ್ ಕುರಿತು ಶ್ರೀ ದೇವಿ ಅವರು ಟಾಂಗ್ ಕೊಟ್ಟಿದ್ದರು. ಇನ್ನೂ ಶ್ರೀದೇವಿ ಅವರು ವಿದೇಶದಲ್ಲಿ ನೆಲೆಸಿದ್ದಾರೆ. ಶ್ರೀದೇವಿ ಅವರು ಈ ಮದುವೆಗೆ ಬಂದಿದ್ದಾರೆ ಅನ್ನೋ ಕಾರಣಕ್ಕೇ ಅಶ್ವಿನಿ ಅವರು ಬಂದಿಲ್ಲ ಎಂದೂ ಕೆಲವರು ಹೇಳುತ್ತಿದ್ದಾರೆ. ಇನ್ನೂ ಕೆಲವರ ಪ್ರಕಾರ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಬೇರೆ ಯಾವುದೋ ಕಾರಣಕ್ಕೋಸ್ಕರ ಬಂದಿಲ್ಲ ಎಂದು ಹೇಳಲಾಗಿದೆ.












Click it and Unblock the Notifications