Darshan Thoogudeepa: ದರ್ಶನ್‌ಗೆ ಕೇರಳದಲ್ಲೂ "ಸಖತ್‌" ಫ್ಯಾನ್ಸ್‌ ಶುರು

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ ಈಗ ಕೇರಳದಲ್ಲೂ ಹೊಸ ಫ್ಯಾನ್‌ಬೇಸ್‌ ಸೃಷ್ಟಿಯಾಗಿದೆ. ಅಲ್ಲದೇ ಓಣಂನಲ್ಲೂ ದರ್ಶನ್‌ "ಸಖತ್‌ ಟ್ರೆಂಡ್ " ಆಗಿದ್ದಾರೆ. ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದು ಜಾಮೀನಿಗಾಗಿ ಪ್ರಯತ್ನಿಸುತ್ತಲ್ಲೇ ಇದ್ದಾರೆ. ಆದರೆ, ಜಾಮೀನು ಮುಂದೂಡಿಕೆಯಾಗುತ್ತಲ್ಲೇ ಇದೆ. ಇದೀಗ ಡಿ ಬಾಸ್‌ ದರ್ಶನ್‌ ನೆರೆಯ ಕೇರಳದಲ್ಲೂ ಫೇಮಸ್‌ ಆಗ್ತಿದ್ದಾರೆ. ಅಲ್ಲದೇ ಮಲೇಷ್ಯಾದಲ್ಲೂ ಫ್ಯಾನ್ಸ್‌ ಇವರ ಈ ಹಾಡಿಗೆ ಫಿದಾ ಆಗಿದ್ದಾರೆ.

ನಟ ದರ್ಶನ್‌ ಜೈಲು ಸೇರಿದ ಮೇಲೆ ಅವರ ಬಗ್ಗೆ ಬರೀ ನೆಗೆಟಿವ್‌ ವಿಷಯಗಳೇ ಹೆಚ್ಚು ಚರ್ಚೆಯಾಗುತ್ತಿವೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್‌ ಯಾವಾಗ ಜೈಲಿನಿಂದ ಬಿಡುಗಡೆಯಾಗುತ್ತಾರೋ ಎಂದು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದೀಗ ದರ್ಶನ್‌ಗೆ ಕೇರಳದಲ್ಲೂ ಹೊಸ ಫ್ಯಾನ್‌ ಬೇಸ್‌ ಪ್ರಾರಂಭವಾಗಿದೆ. ದರ್ಶನ್ ನಟಿಸಿರುವ ಪೊರ್ಕಿ ಸಿನಿಮಾದ ಸಖತ್ತಾಗವ್ಳೆ ಸುಮ್ನೆ ನಗ್ತಾಳೆ... ಹಾಡು ಕೇರಳದಲ್ಲಿ ಭಾರೀ ವೈರಲ್‌ ಆಗಿದೆ. ಕೇರಳದ ಯುವಕರು, ಯುವತಿಯರು ಈ ಸಾಂಗ್‌ಗೆ ಫುಲ್‌ ಫಿದಾ ಆಗಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ, ಮಲಯಾಳಿಗರ (ಕೇರಳಿಗರ) ವಿಶೇಷ ಆಚರಣೆಗಳಲ್ಲಿ ಒಂದಾಗಿರುವ ಓಣಂನಲ್ಲೂ ಜನ ಈ ಹಾಡಿಗೆ ಕುಣಿಸು ಕುಪ್ಪಳಿಸಿದ್ದಾರೆ. ಕೇರಳದ ಶಾಲಾ - ಕಾಲೇಜು, ವಾರ್ಷಿಕೋತ್ಸವ ಹಾಗೂ ಟ್ರಿಪ್‌ಗಳಲ್ಲೂ ಈ ಸಾಂಗ್‌ ಸಖತ್‌ ಫೇಮಸ್‌ ಆಗಿದೆ.

Why actor Darshan has more fans in Kerala too Check here

ಕೇರಳದ ಫೇಮಸ್‌ ಯೂಟ್ಯೂಬರ್ ಬಳ್ಸತಿದ್ದಾರೆ: ಕೇರಳದಲ್ಲಿ ಸಾವಿರಾರು ಜನ ಈ ಸಾಂಗ್‌ ಬಳಸಿ ರೀಲ್ಸ್‌ ಮಾಡುತ್ತಿದ್ದಾರೆ. ಅಲ್ಲಿನ ಸೋಷಿಯಲ್‌ ಮೀಡಿಯಾದಲ್ಲಿ ಇದು ಸಿಕ್ಕಾಪಟ್ಟೆ ಫೇಮಸ್‌ ಆಗಿದೆ. ಕೇರಳದ ಯುಟ್ಯೂನ್, ಫೇಸ್‌ಬುಕ್‌ ಹಾಗೂ ಇನ್ಸ್‌ಟಾಗ್ರಾಮ್‌ನಲ್ಲಿ ಸಖತ್ತಾಗವ್ಳೆ ಆ ಸುಮ್ನೆ ನಗ್ತಾಳೆ ಎನ್ನುವುದೇ ಟ್ರೆಂಡ್‌ ಆಗಿದೆ. ಕೇರಳದ ಫೇಮಸ್‌ ಯೂಟ್ಯೂಬರ್‌ಗಳು ಈ ಹಾಡನ್ನು ಬಳಸಿ ರೀಲ್ಸ್‌ ವಿಡಿಯೋ ಮಾಡಿದ್ದು, ವೀವ್ಸ್‌ ಕಿತ್ಕೊಂಡು ಹೋಗಿದೆ. ಅಲ್ಲಿನ ಜನರಿಗೆ ಕನ್ನಡದ ರಿಲಿಕ್ಸ್‌ ಗೊತ್ತಾಗದೆ ಇದ್ದರೂ ಯಾವುದ್ಯಾವುದೋ ಕೀವರ್ಡ್‌ ಹಾಕಿ ಸಖತ್ತಾಗವ್ಳೆ ಸಾಂಗ್‌ ಸರ್ಚ್‌ ಮಾಡ್ತಿದ್ದಾರೆ. ಈ ಸಾಂಗ್‌ನಲ್ಲಿ ಬರುವ ಲವ್ವು.. ಲವ್ವು.. ಎನ್ನುವ ಪದವೂ ಫೇಮಸ್‌ ಆಗಿದೆ.

14 ವರ್ಷಗಳ ನಂತರ ಟ್ರೆಂಡ್: ನಟ ದರ್ಶನ್ ತೂಗುದೀಪ ಅಭಿನಯದ ಪೊರ್ಕಿ ಸಿನಿಮಾದ ಸಖತ್ತಾಗವ್ಳೆ ಸುಮ್ನೆ ನಗ್ತಾಳೆ ಹಾಡು ಭಾರೀ ವೈರಲ್‌ ಆಗಿದೆ. 2010ರಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು. ಅದಾಗಿ ಬರೋಬ್ಬರಿ 14 ವರ್ಷಗಳ ನಂತರ ಪೊರ್ಕಿ ಸಿನಿಮಾದ ಈ ಹಾಡು ಸಖತ್ತಾಗೇ ವೈರಲ್‌ ಆಗಿದೆ. ಸೋಷಿಯಲ್‌ ಮೀಡಿಯಾ, ಇನ್ಸ್‌ಟಾಗ್ರಾಮ್‌ ಹಾಗೂ ಫೇಸ್‌ಬುಕ್‌ ರೀಲ್ಸ್‌ ಹಾಗೂ ವಿಡಿಯೋಗಳಲ್ಲಿ ಈ ಸಾಂಗ್‌ ಬೇಜಾನ್‌ ಟ್ರೆಂಡ್‌ ಆಗ್ತಿದೆ. ಈ ಹಾಡನ್ನು ವಿ. ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಹರಿಕೃಷ್ಣ ಅವರು ಹಾಡಿದ್ದರು. ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲೂ ವೈರಲ್‌ ಆಗಿತ್ತು.

ವೈಬಿಂಗ್ 100%: ಸಖತ್ತಾಗವ್ಳೆ ಸುಮ್ನೆ ನಗ್ತಾಳೆ ಸಾಂಗ್‌ ಕೇರಳದಲ್ಲಿ ಭಾರೀ ವೈರಲ್‌ ಆಗಿದೆ. ಈ ಸಾಂಗ್‌ನ ಅರ್ಥ ನಂಗೆ ಗೊತ್ತಿಲ್ಲ ಆದರೆ, ವೈಬಿಂಗ್‌ 100% ಸಿಗ್ತಿದೆ ಎಂದು ಕೇರಳಿಗರೂ ಹೇಳ್ತಿದ್ದಾರೆ. ಅಲ್ಲಿನ ಸೋಷಿಯಲ್‌ ಮೀಡಿಯಾದಲ್ಲೂ ಸಾವಿರಾರು ಜನ ಕಾಮೆಂಟ್‌ಗಳ ಮೂಲಕ ಈ ಸಾಂಗ್‌ನ ಬಗ್ಗೆ ಕಾಮೆಂಟ್‌ ಮಾಡ್ತಿದ್ದಾರೆ. ಈ ಸಾಂಗ್ ಟ್ರೆಂಡ್‌ ಆದ ಮೇಲೆ ಮೂಲ (ಒರಿಜಿನಲ್‌ ಸಾಂಗ್) ಅನ್ನು ಜನ ಹುಡುಕುತ್ತಿದ್ದಾರೆ.

ಮಲೇಷ್ಯಾಯಾದಲ್ಲೂ ಟ್ರೆಂಡಿಗ್‌: ಸಖತ್ತಾಗವ್ಳೆ ಸಾಂಗ್‌ ಬರೀ ದೇಶದಲ್ಲಿ ಮಾತ್ರವಲ್ಲ. ದೇಶ - ವಿದೇಶದಲ್ಲೂ ಫೇಮಸ್‌ ಆಗಿದ್ದು, ಮಲೇಷ್ಯಾ ದಂಪತಿ ಈ ಸಾಂಗ್‌ಗೆ ಡ್ಯಾನ್ಸ್‌ ಮಾಡಿರುವ ವಿಡಿಯೋ ವೈರಲ್‌ ಆಗಿದೆ. ಡಿ ಬಾಸ್‌, ದರ್ಶನ್‌, ಕನ್ನಡ ಸಾಂಗ್ ಅಂತ ಅವರ ಅಭಿಮಾನಿಗಳು ಈ ಟ್ರೆಂಡ್‌ ವಿಡಿಯೋಗಳಿಗೆ ಕಾಮೆಂಟ್‌ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+