₹150 ಕೋಟಿ ಸಂಭಾವನೆ ಪಡೆಯೋ ನಟ ರಜನಿಕಾಂತ್‌ಗೆ ₹2 ಕೊಟ್ಟು ಹೀಯಾಳಿಸಿದ್ದು ಯಾರು?
ಕನ್ನಡಿಗ ರಜನಿಕಾಂತ್ ಅವರು ತಮಿಳು ಸಿನಿಮಾಗಳಲ್ಲಿ ಮಿಂಚುತ್ತಾ ಸೂಪರ್ ಸ್ಟಾರ್ ಆಗಿ ಬೆಳೆದವರು. ಅವರಿಗೆ 74 ವರ್ಷ ವಯಸ್ಸಾಗಿದ್ದರೂ ಈಗಿನ ಹೀರೋಗಳನ್ನ ಸೈಡಿಗಿಟ್ಟು ಹಿಟ್ ಸಿನಿಮಾಗಳನ್ನ ಕೊಡುತ್ತಿದ್ದಾರೆ. ಇನ್ನು ಸಂಭಾವನೆಯಲ್ಲೂ ರಜನಿಕಾಂತ್ ಅವರ ಲೆವೆಲ್ ಬೇರೆಯೇ ಇದೆ. ಈಗ ರಿಲೀಸ್ ಆಗಲಿರುವ "ಕೂಲಿ" ಸಿನಿಮಾಗೆ ಬರೋಬ್ಬರಿ ₹150 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಒಂದು ಸಿನಿಮಾಗೆ ನೂರಾರು ಕೋಟಿ ಸಂಭಾವನೆ ಪಡೆಯುವ ಅವರು ಕೋಟಿಗಳ ಒಡೆಯ. ಇಂತಹ ರಜನಿಕಾಂತ್‌ಗೆ ಸ್ನೇಹಿತನೊಬ್ಬ ಎರಡು ರೂಪಾಯಿ ಕೈಯಲ್ಲಿಟ್ಟು ಅವಮಾನಿಸಿದ್ದ ಘಟನೆಯನ್ನು ಇತ್ತೀಚೆಗೆ ಹೇಳಿಕೊಂಡಿದ್ದಾರೆ.
ಸದ್ಯ ಸ್ಟಾರ್ ಡೈರೆಕ್ಟರ್ ಲೋಕೇಶ್ ಕನಗರಾಜ್ ನಿರ್ದೇಶನದ ಬಹುತಾರಾಗಣದ ಕೂಲಿ ಸಿನಿಮಾ ರಿಲೀಸ್ ಆಗುತ್ತಿದೆ. ಇದರಲ್ಲಿ ನಟ ರಜನಿಕಾಂತ್, ಉಪೇಂದ್ರ, ರಚಿತಾ ರಾಮ್, ನಾಗಾರ್ಜುನ್, ಅಮೀರ್ ಖಾನ್ ಸೇರಿ ಹಲವು ಸ್ಟಾರ್ ನಟರೂ ಇದ್ದಾರೆ. ಇನ್ನು ರಜನಿಕಾಂತ್ ಅವರು ಈ ವಯಸ್ಸಿನಲ್ಲೂ ತಮ್ಮ ಸಿನಿಮಾಗಳ ಮೂಲಕ ಬಾಕ್ಸಾಫೀಸ್ ಶೇಕ್ ಮಾಡುತ್ತಿದ್ದಾರೆ. ಕೋಟಿ ಕೋಟಿ ಸಂಭಾವನೆ ಪಡೆಯುವ ನಟನಿಗೆ ತನ್ನ ಸ್ನೇಹಿತನೇ ಎರಡಯ ರೂಪಾಯಿ ಕೈಗಿಟ್ಟು ಹೀಯಾಳಿಸಿದ್ದನ್ನು ಕೂಲಿ ಸಿನಿಮಾ ಕಾರ್ಯಕ್ರಮದ ವೇಳೆ ರಜಿನಿ ಬಹಿರಂಗಪಡಿಸಿದ್ದಾರೆ.

ಚೆನ್ನೈನಲ್ಲಿ ನಡೆದ ಕೂಲಿ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ರಜನಿಕಾಂತ್ ಅವರು ಈ ಘಟನೆಯನ್ನು ನೆನೆದಿದ್ದಾರೆ. ಅಲ್ಲದೆ ಆರಂಭದಲ್ಲಿ ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿದ್ದ ರಜಿನಿಕಾಂತ್ ಅವರು ಕೂಲಿ ಕೆಲಸ ಮಾಡಿದ್ದ ದಿನಗಳನ್ನು ಮೆಲುಕು ಹಾಕಿದ್ದಾರೆ. ಈ ವೇಳೆ ತಮಗೆ ಆಗ ನೋವಿನ ಅನುಭವವನ್ನು ಹೇಳಿಕೊಂಡಿದ್ದಾರೆ. 'ಕೂಲಿ ಕೆಲಸ ಮಾಡುವಾಗ ಸ್ನೇಹಿತನಿಂದ ಅವಮಾನಕ್ಕೆ ಒಳಗಾದೆ' ಎಂದು ಹೇಳಿದ್ದಾರೆ.
ಜೀವನದಲ್ಲಿ ಮೊದಲ ಸಲ ಕಣ್ಣೀರು ಹಾಕಿದೆ
́'ನಾನು ಕೂಲಿಯಾಗಿದ್ದಾಗ ನನ್ನನ್ನು ಹಲವು ಬಾರಿ ಅಪಹಾಸ್ಯ, ಅವಮಾನ ಮಾಡಿದ್ದರು. ಒಂದು ದಿನ, ಒಬ್ಬ ವ್ಯಕ್ತಿ ತನ್ನ ಟೆಂಪೋದಲ್ಲಿ ವಸ್ತುಗಳನ್ನು ಹೊತ್ತುಕೊಂಡು ಹೋಗಲು ನನ್ನನ್ನು ಕೇಳಿದ. ಅದಕ್ಕಾಗಿ ನನಗೆ ಆತ 2 ರೂಪಾಯಿಗಳನ್ನು ಕೊಟ್ಟ. ಮೊದಲಿಗೆ ಆ ವ್ಯಕ್ತಿ ಯಾರೆಂದು ನನಗೆ ತಿಳಿಯಲಿಲ್ಲ. ಆದರೆ ಅವನ ಧ್ವನಿ ನನಗೆ ಪರಿಚಿತವಾಗಿತ್ತು. ಆ ಮೇಲೆ ಆತ ನನ್ನ ಕಾಲೇಜು ಸ್ನೇಹಿತ ಎಂದು ತಿಳಿಯಿತು. ಆಗ ಅವನು ನನ್ನನ್ನು ಅಪಹಾಸ್ಯ ಮಾಡಿದ. ಕಾಲೇಜಿನಲ್ಲಿರುವಾಗ ನೀನು ಎಷ್ಟು ದುರಹಂಕಾರಿಯಾಗಿದ್ದೆ? ಈಗ ಕೂಲಿ ಕೆಲಸ ಮಾಡುತ್ತಿದ್ದೀಯ ಎಂದು ನನ್ನ ಕೆಲಸವನ್ನು ಅಣಕಿಸಿದ. ಆಗ ತುಂಬಾ ನೋವಾಗಿ ನನ್ನ ಜೀವನದಲ್ಲಿ ನಾನು ಮೊದಲ ಬಾರಿಗೆ ಕಣ್ಣೀರಿಟ್ಟಿದ್ದೆ' ಎಂದು ನಟ ರಜನಿಕಾಂತ್ ನೆನೆದಿದ್ದಾರೆ.

ಈಗ ರಜನಿಕಾಂತ್ ಅವರ ಸಿನಿಮಾ ಟೈಟಲ್ ಕೂಡ "ಕೂಲಿ" ಆಗಿರುವುದರಿಂದ ತಮ್ಮ ಜೀವನದಲ್ಲಿ ಕೂಲಿ ಕೆಲಸ ಮಾಡಿದ್ದ ದಿನಗಳನ್ನು ಅವರು ನೆನೆದಿದ್ದಾರೆ. ಕೂಲಿ ಚಿತ್ರದ ನಿಜವಾದ ನಾಯಕ ಬೇರೆ ಯಾರೂ ಅಲ್ಲ, ನಿರ್ದೇಶಕ ಲೋಕೇಶ್ ಕನಕರಾಜ್ ಎಂದು ಕರೆದಿದ್ದಾರೆ. ಅತ್ಯಂತ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರು ನನ್ನೊಂದಿಗೆ ಕೈಜೋಡಿಸಿದ್ದಾರೆ. ಅದ್ಭುತ ತಾರಾಗಣವನ್ನು ಒಗ್ಗೂಡಿಸಿ ಸಿನಿಮಾರಂಗದಲ್ಲಿ ಬಿರುಗಾಳಿಯನ್ನೇ ಸೃಷ್ಟಿಸಿದ್ದಾರೆ ಎಂದು ರಜನಿ ಕೊಂಡಾಡಿದ್ದಾರೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications