ರಚಿತಾ ರಾಮ್‌ನ ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಅಂತಿದ್ದಾರೆ: ಹೀಗಂದಿದ್ಯಾರು?
ಸ್ಯಾಂಡಲ್‌ವುಡ್ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಅವರ ಮೇಲೆ ಸಾಲು ಸಾಲು ಗಂಭೀರ ಆರೋಪಗಳು ಕೇಳಿಬಂದಿವೆ. ತಮ್ಮದೆ ಸಿನಿಮಾ ಪ್ರಮೋಷನ್‌ಗೆ ರಚಿತಾ ಬರಲಿಲ್ಲ, ಇವರ ಮೇಲೆ ಕ್ರಮ ಕೈಗೊಳ್ಳಿ ಎಂದು ನಿರ್ದೇಶಕ ನಾಗಶೇಖರ್ ಫಿಲ್ಮ್ ಚೇಂಬರ್‌ಗೆ ದೂರು ನೀಡಿದ್ದರು. ಇಂತವರನ್ನು ಚಿತ್ರರಂಗದಲ್ಲಿ ಬೆಳೆಯಲು ಅವಕಾಶ ಕೊಡಬಾರದು ಎಂದಿದ್ದರು. ಇದರ ಬೆನ್ನಲ್ಲೇ ಸಿನಿಮಾದಲ್ಲಿ ನಟಿಸುವುದಾಗಿ ಹಣ ಪಡೆದು ವಾಪಸ್ ಕೊಡಲಿಲ್ಲ ಎಂದು ನಿರ್ಮಾಪಕಿಯೊಬ್ಬರು ರಚಿತಾ ರಾಮ್ ವಿರುದ್ಧ ದೂರಿದ್ದಾರೆ. ಇದೀಗ ರಚಿತಾ ರಾಮ್ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂಬ ಕೂಗು ಕೇಳಿಬಂದಿದೆ. ಈ ಬಗ್ಗೆ ನಿರ್ದೇಶಕ ನಾಗಶೇಖರ್ ಅವರೇ ಶಾಕಿಂಗ್ ವಿಚಾರವೊಂದನ್ನು ತಿಳಿಸಿದ್ದಾರೆ.
́́'ರಚಿತಾ ರಾಮ್ ಆಗಲಿ, ಅವರ ಕಡೆಯವರಾಗಲಿ ಒಂದೂ ಫೋನ್ ಮಾಡಿಲ್ಲ. ನೊಂದ ಅಭಿಮಾನಿಗಳು, ಪತ್ರಕರ್ತರು ಮಾತ್ರವೇ ನನಗೆ ಫೋನ್ ಮಾಡಿ ಈ ಬಗ್ಗೆ ಕೇಳುತ್ತಿದ್ದಾರೆ. ತುಂಬಾ ಜನ ರಚಿತಾ ರಾಮ್ ಅವರನ್ನ ಚಿತ್ರರಂಗದಿಂದ ಬ್ಯಾನ್ ಮಾಡಿಸಬೇಕು ಎಂದು ನನಗೆ ಹೇಳುತ್ತಿದ್ದಾರೆ. ಆದರೆ ಆ ರೀತಿಯ ಬ್ಯಾನ್ ಅನ್ನೋ ಪದಗಳನ್ನೆಲ್ಲ ಬಳಸಬೇಡಿ ಎಂದು ನಾನೇ ಅವರಿಗೆ ಬುದ್ಧಿ ಹೇಳುತ್ತಿದ್ದೀನಿ. ಬ್ಯಾನ್ ಅನ್ನೋ ಪದ ಯಾರ ಬಾಯಿಂದಲೂ ಬರಬಾರದು. ಬ್ಯಾನ್ ಅನ್ನೋ ಪದ ಬಳಸುವ ಯೋಗ್ಯತೆ ಅಥವಾ ಹಕ್ಕು ಯಾರ ಬಳಿಯೂ ಇಲ್ಲ. ಬ್ಯಾನ್ ಅನ್ನೋದನ್ನ ಒಂದು ಸಂಸ್ಥೆ ಮಾಡಬಹುದು, ಒಂದು ವ್ಯಕ್ತಿ ಬಾಯಲ್ಲಿ ಬರಬಾರದು' ಎಂದು ಬುದ್ದಿ ಹೇಳಿದ್ದೇನೆ ಎಂದಿದ್ದಾರೆ.

'ರಚಿತಾ ರಾಮ್ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಈಗಾಗಲೇ ನಾನು ಫಿಲ್ಮ್ ಚೇಂಬರ್‌ಗೆ ದೂರು ಕೊಟ್ಟಾಗಿದೆ. ಆ ವಿಷಯವನ್ನು ಚೇಂಬರ್ ನೋಡಿಕೊಳ್ಳುತ್ತೆ. ನೀವೇಕೆ ಅದರ ಬಗ್ಗೆ ಮಾತನಾಡ್ತೀರಿ ಎಂದು ಬ್ಯಾನ್ ಮಾಡಿ ಎಂದವರಿಗೆ ಬುದ್ದಿ ಹೇಳಿದ್ದೇನೆ. ಈ ವಿಚಾರದಲ್ಲಿ ನೀವು ಕಾಮೆಂಟ್ ಮಾಡಬೇಡಿ, ತಪ್ಪು ಅವರ ಕಡೆ ಇದ್ದರೆ ಅವರೇ ಇತ್ಯರ್ಥ ಮಾಡಿಕೊಳ್ತಾರೆ. ನನ್ನ ತಪ್ಪಿದ್ರೆ ನಾನೂ ತಲೆಬಾಗ್ತೀನಿ. ಒಂದು ಹುಡುಗಿ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ' ಎಂದು ನಾಗಶೇಖರ್ ಹೇಳಿದ್ದಾರೆ.
'ನಾನು ಕೂಡ ರಚಿತಾ ರಾಮ್ ಬಗ್ಗೆ ಯಾವುದೇ ಕೆಟ್ಟದಾಗಿ ಮಾತನಾಡುತ್ತಿಲ್ಲ. ನನಗೆ ರಚಿತಾ ಮೇಲೆ ಗೌರವ ಇದೆ, ನೀವು ಪ್ರಮೋಷನ್‌ಗೆ ಬರಲಿಲ್ಲ ಅಂದ್ರೆ ಮುಂದೊಂದು ದಿನ ನಿಮ್ಮ ಬಗ್ಗೆ ದೂರು ಕೊಡುವ ದಿನ ಬರಬಹುದು ಎಂದು ರಚಿತಾ ಅವರ ಮ್ಯಾನೇಜರ್‌ಗೆ ಮೆಸೇಜ್ ಕೂಡ ಹಾಕಿದ್ದೆ. ಎರಡು ತಿಂಗಳ ಹಿಂದೆ ನಡೆದಿದ್ದು. ಆದರೂ ಅವರು ಪ್ರಮೋಷನ್‌ಗೆ ಬರಲಿಲ್ಲ' ಎಂದಿದ್ದಾರೆ.
'ತಮ್ಮ ಸಿನಿಮಾ ಉಳಿಸಿಕೊಳ್ಳಬೇಕು ಎಂಬ ಜವಾಬ್ದಾರಿ ರಚಿತಾ ಅವರಿಗೆ ಇಲ್ಲವಾ ಎನ್ನುವುದನ್ನ ಅವರೇ ಸ್ಪಷ್ಪಪಡಿಸಲಿ ಎಂದೇ ನಾನು ಫಿಲ್ಮ್ ಚೇಂಬರ್‌ಗೆ ದೂರು ಕೊಟ್ಟಿರೋದು. ನೀವು ಯಾಕೆ ನಿಮ್ಮದೇ ಸಿನಿಮಾ ಪ್ರಮೋಷನ್‌ಗೆ ಬರ್ತಿಲ್ಲ ಅಂತಲೇ ಕೇಳುತ್ತಿರುವುದು, ನಿಮಗೆ ಆಗಿರುವ ತೊಂದರೆ ಏನು? ನಿಮಗೆ ನಿಮ್ಮ ಸಿನಿಮಾ ಮೇಲೆ ಆಸೆ ಇಲ್ವಾ? ಇದ್ರೂ ತೊಂದರೆ ಏನಾಗಿದೆ? ಇದನ್ನೆಲ್ಲ ಬಂದು ಸ್ಪಷ್ಟನೆ ಕೊಡಿ ಎಂತಲೇ ನಾವು ಕೇಳ್ತಿರೋದು ಎಂದಿದ್ದಾರೆ. ಈಗ ಜನ ಈ ವಿಚಾರವಾಗಿ ನನ್ನ ಬಗ್ಗೆ ಕೆಟ್ಟದಾಗಿ ನೋಡುತ್ತಿದ್ದಾರೆ. ನಮ್ಮಿಬ್ಬರ ನಡುವೆ ಯಾವುದೇ ಮನಸ್ತಾಪಗಳು ಆಗಿಲ್ಲ' ಎಂದು ನಾಗಶೇಖರ್ ಹೇಳಿದ್ದಾರೆ.












Click it and Unblock the Notifications