Kamal Haasan: ಭಾಷೆ ಹೇರಿಕೆಯಿಂದ ಯಾರು ಕಲಿಯಲ್ಲ.... ಈ ವಿಚಾರದಲ್ಲಿ ನಾನು ಕನ್ನಡಪರ ಎಂದ ಕಮಲ್ ಹಾಸನ್!
Kamal Haasan: ಒಂದು ಭಾಷೆಯನ್ನು ಹೇರಿಕೆ ಮಾಡಿದರೆ ಯಾರು ಕಲಿಯುತ್ತಾರೆ ಅಂತ ನಟ ಕಮಲ್ ಹಾಸನ್ ಅವರು ಪ್ರಶ್ನೆ ಮಾಡಿದ್ದಾರೆ. ಅವರು ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ಭಾಷಾ ವಿಚಾರವಾಗಿ ಮಾತನಾಡಿರುವ ಶೇ 90 ವಿಷಯಗಳು ಭಾಷಾ ವಿವಾದ ಸ್ವರೂಪವನ್ನೇ ಪಡೆದುಕೊಂಡಿವೆ. ತಮಿಳು ಭಾಷೆಯಿಂದಲೇ ಕನ್ನಡ ಉದಯಿಸಿದೆ. ಕನ್ನಡದ ತಾಯಿ ತಮಿಳು ಅಂತ ನಟ ಕಮಲ್ ಹಾಸನ್ ಹೇಳಿರುವ ವಿವಾದ ಇನ್ನೂ ತಣ್ಣಗಾಗಿಲ್ಲ. ಈ ರೀತಿ ಇರುವಾಗಲೇ ಮತ್ತೊಂದು ಹೇಳಿಕೆಯನ್ನು ನೀಡುವ ಮೂಲಕ ಮತ್ತೆ ಚರ್ಚೆಯಲ್ಲಿದ್ದಾರೆ. ಕರ್ನಾಟಕದಲ್ಲಿ ಹಿಂದಿ ಹೇರಿಕೆಯ ವಿರುದ್ಧ ಅಭಿಯಾನ ಜೋರಾಗಿದೆ. ಕರ್ನಾಟಕಕ್ಕೆ ಬರುವವರು ಹಿಂದಿ ಕಲಿಯಬೇಕು ಎಂದು ಒತ್ತಾಯಿಸಲಾಗುತ್ತಿದೆ. ಈ ರೀತಿ ಇರುವಾಗಲೇ ನಾನು ಹಿಂದಿ ಏಕೆ ಕಲಿತೆ ಹಾಗೂ ಹೇರಿಕೆಯಿಂದ ಯಾರೂ ಯಾವುದೇ ಭಾಷೆ ಕಲಿಯಲ್ಲ ಎನ್ನುವ ವಿಚಾರಗಳ ಬಗ್ಗೆ ಅವರು ಮಾತನಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಭಾಷೆಯ ವಿಚಾರಕ್ಕೆ ಸಂಬಂಧಿಸಿದಂತೆ ನಟ ಕಮಲ್ ಹಾಸನ್ ಅವರು ಒಂದಿಲ್ಲೊಂದು ಹೇಳಿಕೆಗಳನ್ನು ಕೊಡುತ್ತಲ್ಲೇ ಇದ್ದಾರೆ. ಮೊದಲನೆಯದಾಗಿ ನಿಮ್ಮ ಸುತ್ತಮುತ್ತಲಿನ ರಾಜ್ಯಗಳ ಭಾಷೆ ಕಲಿಯಿರಿ ಆ ಮೇಲೆ ಹಿಂದಿ ಕಲಿಯುವಿರಂತೆ ಅಂತ ಹೇಳಿದ್ದರು. ಇದಾದ ಮೇಲೆ ತಮಿಳಿನಿಂದ ಕನ್ನಡ ಬಂದಿದೆ ಎಂದಿದ್ದರು. ಇದೀಗ ನಾನ್ಯಾಕೆ ಹಿಂದಿ ಕಲಿತೆ ಹಾಗೂ ಭಾಷೆ ಹೇರಿಕೆಯ ವಿಚಾರವಾಗಿ ಅವರು ಮಾತನಾಡಿದ್ದಾರೆ. ಈ ಮೂಲಕ ಒಂದೂವರೆ ತಿಂಗಳ ಅವಧಿಯಲ್ಲಿ ಅವರು ಭಾಷಾ ವಿಚಾರಕ್ಕೆ ಸಂಬಂಧಿಸಿದಂತೆ ಸರಣಿ ಹೇಳಿಕೆಗಳನ್ನು ಕೊಟ್ಟಂತೆ ಆಗಿದೆ.

ಕಮಲ್ ಹಾಸನ್ ಅವರು ನಟರಷ್ಟೇ ಅಲ್ಲ ಅವರು ತಮಿಳುನಾಡಿನ ಉದಯೋನ್ಮುಖ ಪಕ್ಷದ ರಾಜಕಾರಣಿಯೂ ಹೌದು ಹೀಗಾಗಿ ಅವರು ನೀಡುವ ಹೇಳಿಕೆಗಳನ್ನು ರಾಜಕಾರಣಿಯೊಬ್ಬರ ಮಾತುಗಳಂತೆಯೂ ಗಮಿಸಲಾಗುತ್ತದೆ. ಇವರು ಇದೀಗ ಅಲ್ಲಿನ ಆಡಳಿತರೂಢ ದ್ರಾವಿಡ ಮುನ್ನೇತ್ರ ಕಳಗಂ ಪಾರ್ಟಿಯೊಂದಿಗೆ ಮೈತ್ರಿ ಮಾಡಿಕೊಂಡು ರಾಜ್ಯಸಭೆ ಪ್ರವೇಶ ಮಾಡುವ ತರಾತುರಿಯಲ್ಲಿ ಇದ್ದಾರೆ. ಹೀಗಾಗಿ ಅವರು ಭಾಷೆಯ ಬಗ್ಗೆ ಕೊಡುತ್ತಿರುವ ಹೇಳಿಕೆಗಳು ಭಾರೀ ಚರ್ಚೆಗೆ ಕಾರಣವಾಗಿದೆ.
ಯಾವುದೇ ಭಾಷೆಯನ್ನು ಹೇರಿಕೆ ಮಾಡಿದರೆ ಯಾರೂ ಕಲಿಯುವುದಿಲ್ಲ. ಅನಿವಾರ್ಯತೆ ಸೃಷ್ಟಿಯಾದರೆ ಮಾತ್ರ ಕಲಿಯುತ್ತಾರೆ ಎಂದಿದ್ದಾರೆ. ಪಿಟಿಐ ಸುದ್ದಿ ಸಂಸ್ಥೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದ್ದಾರೆ. 1981ರ ಹಿಟ್ ಹಿಂದಿ ಚಿತ್ರ ಏಕ್ ದುಜೇ ಕೆ ಲಿಯೆ ಬಗ್ಗೆ ಚರ್ಚೆ ನಡೆದಿದ್ದು ಆ ವೇಳೆ ಭಾಷೆ ಹಾಗೂ ಭಾಷೆ ಹೇರಿಕೆಯ ಬಗ್ಗೆಯೂ ಮಾತನಾಡಿದ್ದಾರೆ. ದಕ್ಷಿಣ ಭಾರತದಲ್ಲಿ ಹಿಂದಿ ಹೇರಿಕೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು ಎನ್ನುವ ಪ್ರಶ್ನೆಗೆ ನಾನು ಈ ವಿಚಾರದಲ್ಲಿ ಪಂಜಾಬ್‌ನ ಪರವಾಗಿ ನಿಲ್ಲುತ್ತೇನೆ. ಅಲ್ಲದೇ ಕರ್ನಾಟಕದ ಪರವಾಗಿ & ಆಂಧ್ರ ಪರವಾಗಿ ನಿಲ್ಲುತ್ತೇನೆ ಎಂದೂ ಸೇರಿಸಿದ್ದಾರೆ.
ಭಾಷೆಯನ್ನು ನಾವು ಯಾವುದೇ ಹೇರಿಕೆ ಇಲ್ಲದೆ ಇದ್ದಾಗ ಮಾತ್ರ ಕಲಿಯುತ್ತೇವೆ. ಅಂತಿಮವಾಗಿ ಶಿಕ್ಷಣದ ಬಗ್ಗೆ ಮಾತನಾಡಬೇಕು. ಆ ದಾರಿಯಲ್ಲಿ ಅಡೆತಡೆಗಳು ಇರಬಾರದು ಎಂದಿದ್ದಾರೆ.












Click it and Unblock the Notifications