ನಟ ದರ್ಶನ್ ಜೊತೆ ಕಾಣಿಸಿಕೊಂಡಿರುವ ಪಾತಕಿ ವಿಲ್ಸನ್ ಗಾರ್ಡನ್ ನಾಗ ಯಾರು? ಹಿನ್ನೆಲೆ ಏನು?
Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣ ಇದೀಗ ಮುಕ್ತಾಯದ ಹಂತಲ್ಲಿದ್ದು, ಈಗಾಗಲೇ ಪೊಲೀಸರು ಮಹತ್ವದ ಸಾಕ್ಷ್ಯಗಳನ್ನು ಕಲೆಹಾಕಿ ಚಾರ್ಜ್ ಶೀಟ್ ಸಲ್ಲಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ. ಈ ನಡುವೆಯೇ ನಟ ದರ್ಶನ್ ಜೊತೆ ಪಾತಕಿ ವಿಲ್ಸನ್ ಗಾರ್ಡನ್ ಕಾಣಿಸಿಕೊಂಡಿದ್ದು, ಫೋಟೋ ಭಾರೀ ವೈರಲ್ ಆಗುತ್ತಿದೆ. ಹಾಗಾದರೆ ಈ ನಾಗ ಯಾರು ಹಿನ್ನೆಲೆ ಏನೆಂದು ತಿಳಿಯಿರಿ.
ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ ಈಗಾಗಲೇ 2 ತಿಗಳು ಕಳೆದಿವೆ. ಆದರೂ ಇನ್ನೂ ಬುದ್ಧಿ ಕಲಿಯದ ದರ್ಶನ್ ಮತ್ತೆ ಇದೀಗ ವಿಲ್ಸನ್ ಗಾರ್ಡ್ ನಾಗನ ಜೊತೆ ಕುಳಿತು ಜೈಲಿನಲ್ಲಿ ಸಿಗರೇಟ್ ಸೇದುತ್ತಿದ್ದು, ಈ ಫೋಟೋ ಇದೀಗ ಭಾರೀ ವೈರಲ್ ಆಗುತ್ತಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಪತಿ ದರ್ಶನ್‌ನನ್ನು ಹೊರತರಲು ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಮತ್ತೊಂದೆಡೆ ಪೊಲೀಸರ ತನಿಖೆ ಈಗಾಗಲೇ ಮುಕ್ತಾಯದ ಹಂತದಲ್ಲಿದ್ದು, ಚಾರ್ಜ್ ಶೀಟ್ ಸಲ್ಲಿಕೆಯವರೆಗೂ ಬಂದುನಿಂತಿದೆ. ಇದರ ನಡುವೆಯೇ ಯಾವತ್ತಿದ್ದರೂ ನಾಯಿ ಬಾಲ ಡೊಂಕೇ ಅನ್ನುವ ರೀತಿಯಲ್ಲಿ ರೌಡಿ ಶೀಟರ್ ಜೊತೆ ಜೈಲಿನಲ್ಲಿ ಆರಮಾಗಿ ಸಿಗರೇಟ್ ಸೇದುತ್ತಾ ಕುಳಿತಿರುವ ದರ್ಶನ್ ಫೋಟೋ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
ಇನ್ನೂ ಈಗಾಗಲೇ ಪರಪ್ಪನ ಅಗ್ರಹಾರ ಜೈಲಿಗೆ ಸಿಗರೇಟ್, ಸೇರಿದಂತೆ ಇನ್ನಿತರ ಮಾದಕ ವಸ್ತುಗಳು ಸಪ್ಲೈ ಆಗುತ್ತಿವೆ ಎನ್ನುವ ಆರೋಪಗಳು ಬಂದಿದ್ದವು. ಇದೀಗ ಇದಕ್ಕೆ ನಿದರ್ಶನ ಜೈಲಿನಲ್ಲಿಯೇ ಅದರಲ್ಲೂ ನಟ ದರ್ಶನ್ ರೌಡಿ ನಾಗನ ಜೊತೆ ಸೇರಿ ಕೈಯಲ್ಲಿ ಸಿಗರೇಟ್ ಹಿಡಿದಿರುವುದು.
ವಿಲ್ಸನ್ ಗಾರ್ಡ್ ನಾಗ ಯಾರು?: ಈಗಾಗಲೇ ವಿಲ್ಸನ್ ಗಾರ್ಡನ್ ನಾಗರಾಜು ವಿರುದ್ಧ ದರೋಡೆ, ಕೊಲೆ ಸೇರಿದಂತೆ ಅಪರಾಧ ಪ್ರಕರಣಗಳ ದೊಡ್ಡ ಪಟ್ಟಿಯೇ ಇದೆ ಎನ್ನುವ ಸ್ಫೋಟಕ ಮಾಹಿತಿಯೊಂದು ಲಭ್ಯವಾಗಿದೆ. ಹಾಗಾದರೆ ಈತನ ವಿರುದ್ಧ ಯಾವ್ಯಾವಾಗ ಯಾವ ಕೇಸ್‌ಗಳು ದಾಖಲಾಗಿವೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ರೌಡಿ ಮಹೇಶ್ ಕೊಲೆ ನಡೆದಿದ್ದು, ಪ್ರಮುಖ ಆರೋಪಿಗಳು ನ್ಯಾಯಾಲಯಕ್ಕೆ ಶರಣಾಗಿದ್ದರು. "ಸಿದ್ದಾಪುರ ಠಾಣೆಯ ರೌಡಿ ಪಟ್ಟಿಯಲ್ಲಿ ಹೆಸರಿದ್ದ ಮಹೇಶ್‌ನನ್ನು ಆಗಸ್ಟ್ 4ರಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದ್ದು, ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ರೌಡಿ ವಿಲ್ಸನ್ ಗಾರ್ಡನ್ ನಾಗ ಹಾಗೂ ಮೋಹನ್ ಅಲಿಯಾಸ್ ಡಬಲ್ ಮೀಟರ್ ತಲೆಮರೆಸಿಕೊಂಡಿದ್ದರು. ಬಳಿಕ ಇಬ್ಬರೂ ನ್ಯಾಯಾಲಯಕ್ಕೆ ಶರಣಾಗಿದ್ದರು ಎಂದು ಪೊಲೀಸ್ ಮುಲಗಳು ತಿಳಿಸಿದ್ದವು ಎಂದು ವರದಿಯಾಗಿದೆ.
2005ರಲ್ಲಿ ಆರ್‌ಆರ್ ನಗರ, ಆಡುಗೋಡಿ, ಬನಶಂಕರಿ ಪೊಲೀಸರು ಸರಣಿ ವಾಹನ ಕಳವಿಗೆ ಸಂಬಂಧಿದಂತೆ ಪ್ರಕರಣ ದಾಖಲು ಮಾಡಿಕೊಂಡಿದ್ದರು. 2009ರಲ್ಲಿ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲು ಕೊಲೆ ಪ್ರಕರಣ ದಾಖಲಾಗಿದೆ. 2012ರಲ್ಲಿ ರೌಡಿಶೀಟರ್ ಗುಪ್ಪಾ ಕೊಲೆ ಪ್ರಕರಣ ಸೇರಿ ಈ ನಾಗರ ವಿರುದ್ಧ ಇದುವರೆಗೂ 22 ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ. ಅಲ್ಲದೆ 7 ಕೊಲೆ ಪ್ರಕರಣಗಳಲ್ಲಿ ಎ1 ಆರೋಪಿ ಆಗಿದ್ದಾನೆ ಎಂದು ತಿಳಿದುಬಂದಿದೆ.












Click it and Unblock the Notifications