Actress Ramya: ರಾಜಕೀಯ ಅಥವಾ ಸಿನಿಮಾ ಮೋಹಕ ತಾರೆ ರಮ್ಯಾ ಮುಂದಿನ ಆಯ್ಕೆ ಏನು?

ಸ್ಯಾಂಡಲ್​ವುಡ್​ ಕ್ವೀನ್, ಮೋಹಕ ತಾರೆ ರಮ್ಯಾ ನಿನ್ನೆ ಜನವರಿ 7ರಂದು ಬೆಂಗಳೂರಿನ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಚಿತ್ರತಂಡವೊಂದರ ವಿರುದ್ಧ 2023ರಲ್ಲಿ ರಮ್ಯಾ ದೂರು ನೀಡಿದ್ದರು. ಈ ಪ್ರಕರಣದ ಸಂಬಂಧ ಮಂಗಳವಾರ ರಮ್ಯಾ ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ನ್ಯಾಯಾಲಯದ ಕೆಲಸ ಮುಗಿಯುತ್ತಿದ್ದಂತೆ ಮಾಧ್ಯಮಗಳ ಜೊತೆ ಮಾತನಾಡಿದ ರಮ್ಯಾ ರಾಜಕೀಯ ಅಥವಾ ಸಿನಿಮಾ ತಮ್ಮ ಮುಂದಿನ ಆಯ್ಕೆ ಬಗ್ಗೆ ಮಾತನಾಡಿದ್ದಾರೆ.

ಮತ್ತೆ ಯಾವಾಗ ಚಿತ್ರರಂಗಕ್ಕೆ ಬರುತ್ತೀರಿ ಎನ್ನುವ ಪ್ರಶ್ನೆಗೆ ಉತ್ತರಿಸಿದ ನಟಿ ರಮ್ಯಾ, 'ಮತ್ತೆ ಚಿತ್ರರಂಗಕ್ಕೆ ಬರುವ ಆಸಕ್ತಿ ಇದೆ. ಒಂದೊಳ್ಳೆ ಸಿನಿಮಾ ಸಿಕ್ಕರೆ ಖಂಡಿತಾ ಮಾಡುತ್ತೇನೆ. ಆದರೆ ಇಲ್ಲಿಯವರೆಗೆ ನನಗೆ ಒಳ್ಳೆಯ ಸ್ಟ್ರಿಪ್ಟ್‌ ಸಿಕ್ಕಿಲ್ಲ ಹೀಗಾಗಿ ಸದ್ಯ ಯಾವುದೇ ಸಿನಿಮಾ ಮಾಡುತ್ತಿಲ್ಲ' ಎಂದು ಹೇಳಿದ್ದಾರೆ.

What is Actress Ramya s Next Choice For Politics Or Cinema

ಇನ್ನು ರಾಜಕೀಯದ ಬಗ್ಗೆ ಕೂಡ ಮಾತನಾಡಿದ ರಮ್ಯಾ, 'ರಾಜಕೀಯ ಸದ್ಯಕ್ಕಿಲ್ಲ' ಎನ್ನುವ ಮೂಲಕ ತಮ್ಮ ಮುಂದಿನ ಆಯ್ಕೆ ಸಿನಿಮಾ, ರಾಜಕೀಯ ಸದ್ಯ ತಮ್ಮ ಜೀವನದ ಆಯ್ಕೆ ಅಲ್ಲ ಎಂದು ಹೇಳಿದ್ದಾರೆ.

ಇನ್ನು ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಿದ ರಮ್ಯಾ, 'ಕನ್ನಡ ಚಿತ್ರರಂಗದ ಬಗ್ಗೆ ನನಗೆ ಖುಷಿ ಇದೆ. ಉಪೇಂದ್ರ ಅವರ ಯುಐ ಮತ್ತು ಕಿಚ್ಚ ಸುದೀಪ್‌ ಅವರ ಮಾಕ್ಸ್‌ ಚಿತ್ರ ಚೆನ್ನಾಗಿ ಓಡುತ್ತಿದೆ ಎನ್ನುವ ಖುಷಿ ಇದೆ' ಎಂದರು.

What is Actress Ramya s Next Choice For Politics Or Cinema

ಇನ್ನು ತಾವೇ ನಟಿಸಿದ್ದ ಸಂಜು ವೆಡ್ಸ್‌ ಗೀತಾ ಸಿನಿಮಾದ ಮುಂದಿನ ಭಾಗ ಸಂಜು ವೆಡ್ಸ್‌ ಗೀತಾ 2 ಸಿನಿಮಾ ಬಗ್ಗೆ ಮಾತನಾಡಿದ ಅವರು, ಸಂಜು ವೆಡ್ಸ್‌ ಗೀತಾ 2 ಸಿನಿಮಾ ಮತ್ತೆ ಬರುತ್ತಿರುವುದು, ಬಿಡುಗಡೆಯಾಗುತ್ತಿರುವುದು ನನಗೆ ಗೊತ್ತೇ ಇರಲಿಲ್ಲ. ಕೇಳಿ ಖುಷಿಯಾಗಿದೆ. ಸಂಜು ವೆಡ್ಸ್‌ ಗೀತಾ 2 ಸಿನಿಮಾ ತಂಡಕ್ಕೆ ಅಭಿನಂದನೆ ಹೇಳಲು ಇಷ್ಟಪಡುತ್ತೇನೆ ಎಂದು ನಟಿ ರಮ್ಯಾ ಹೇಳಿದ್ದಾರೆ.

ವಿದೇಶ ಪ್ರವಾಸ, ತಾವು, ತಮ್ಮ ಮನೆಯಂತಿದ್ದ ರಮ್ಯಾ ಏಕಾಏಕಿ ಕೋರ್ಟ್‌ ಬಳಿ ಕಾಣಿಸಿಕೊಂಡಿದ್ದೇಕೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, 'ಒಂದು ವಿಚಾರವಾಗಿ ಕೋರ್ಟ್‌ನಿಂದ ಕರೆ ಬಂದಿತ್ತು. ನ್ಯಾಯಾಧೀಶರು ಕರೆದಿದ್ದರು ನಾನು ಬಂದೆ. ಕೆಲವು ದಾಖಲೆಗಳನ್ನು ಕೋರ್ಟ್‌ಗೆ ನೀಡಬೇಕಾಗಿತ್ತು. ಯಾವ ಪ್ರಕರಣ ಏನು? ಎತ್ತಾ? ಎನ್ನುವುದರ ಬಗ್ಗೆ ನಾನು ಹೇಳುವಂತಿಲ್ಲ. ನಾನು ಕಾನೂನು ವ್ಯವಸ್ಥೆಗೆ ಗೌರವ ಕೊಡುತ್ತೇನೆ. ಹೀಗಾಗಿ ಆ ಬಗ್ಗೆ ಏನು ಹೇಳಲ್ಲ' ಎಂದ ರಮ್ಯಾ ತಮ್ಮ ಮದುವೆ ಬಗ್ಗೆ ಕೇಳುತ್ತಿದ್ದಂತೆ ನಕ್ಕು ಉತ್ತರ ಕೊಡದೇ ತೆರಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+