ಸೋನಾಲ್ ಪ್ರೀತಿಯಿಂದ ತರುಣ್‌ನ ಹೇಗೆ ಕರೆಯುತ್ತಾರೆ? ಭಾವಿ ಪತಿಯನ್ನು ಹಿಂಗೂ ಕರೆಯಬಹುದಾ?
ಬೆಂಗಳೂರು, ಆಗಸ್ಟ್ 03: ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ತಾರಾ ಜೋಡಿ ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗಿದೆ. ಡೈರೆಕ್ಟರ್ ಜೊತೆಗೆ ನಟಿ ದಾಂಪತ್ಯ ಜೀವನ ಆರಂಭಿಸಲು ಸಜ್ಜಾಗಿದ್ದಾರೆ. ಅವರು ಮತ್ಯಾರೂ ಅಲ್ಲ. ತರುಣ್ ಸುಧೀರ್ ಹಾಗೂ ಸೋನಲ್ ಮೊಂಥೆರೋ. ಇತ್ತೀಚಿಗಷ್ಟೇ ತಮ್ಮ ಪ್ರೀತಿ-ಮದುವೆ ಬಗ್ಗೆ ಬಹಿರಂಹ ಪಡಿಸಿದ್ದ ಈ ಜೋಡಿ ಬೆಂಗಳೂರಿನ ಮೈಸೂರು ರೋಡ್‌ನಲ್ಲಿರುವ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಇದೇ ಆಗಸ್ಟ್ 11 ರಂದು ಅದ್ಧೂರಿಯಾಗಿ ಮದುವೆಯಾಗಲಿದ್ದಾರೆ.
ಈ ಬಗ್ಗೆ ಇತ್ತೀಚಿಗಷ್ಟೇ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮೊಂಥೆರೋ ಸುದ್ದಿಗೋಷ್ಠಿ ನಡೆಸಿದ್ದರು. ನಿಮ್ಮ ಮತ್ತು ತರುಣ್ ಗಾಸಿಪ್ ಬಗ್ಗೆ ಬೇರೆಯವರು ಬಂದ ಹೇಳಿದಾಗ ನೀವು ಹೇಗೆ ತೆಗೆದುಕೊಳ್ತಿದ್ರಿ ಎನ್ನುವ ಪ್ರಶ್ನೆಗೆ ಸೋನಾಲ್ ಉತ್ತರಿಸಿದ್ದು, ನನಗೆ ಮೊದಲಿಂದಲೂ ಒಂದು ಭಯ ಇತ್ತು. ಇದೆನಾದರೂ ದೊಡ್ಡ ವಿಚಾರ ಆಗುತ್ತದೆ ಅಂತಾ.

ಯಾಕೆಂದರೆ ಆ ಸಮಯದಲ್ಲಿ ನಾವು ಕಾಂಟ್ಯಾಕ್ಟ್ ಅಲ್ಲಿ ಕೂಡ ಇರಲಿಲ್ಲ. ಬರ್ತ್ ಡೇ ವಿಶಸ್ ಬಿಟ್ಟರೇ ನಮ್ಮ ಚಾಟ್‌ನಲ್ಲಿ ಏನೂ ಇರುತ್ತಿರಲಿಲ್ಲ. ಹೀಗಾಗಿ ಇಂತಹ ಗಾಸಿಪ್‌ಗಳನ್ನು ನಾನು ಎಲ್ಲಿಯಾದರೂ ಹರಡುತ್ತಿದ್ದೇನೆ ಅಂತಾ ಅವರ ತಲೆಯಲ್ಲಿ ಬಂದರೆ ಅಪಾರ್ಥ ಆಗುವುದು ಬೇಡ ಅಂತಾ ನಾನೇ ಒಮ್ಮೆ ಅವರ ಬಳಿ ಹೇಳಿದ್ದೆ ಎಂದರು.
ಈ ಗಾಸಿಪ್‌ಗಳಿಂದ ನಾವು ಕನೆಕ್ಟ್ ಆಗಲಿಲ್ಲ. ನಾವು ಈ ಬಗ್ಗೆ ಯೋಚನೆ ಕೂಡ ಮಾಡಿರಲಿಲ್ಲ. ರಾಬರ್ಟ್ ಸಮಯದಲ್ಲಿ ದರ್ಶನ್ ಸರ್ ರೇಗಿಸುತ್ತಿದ್ದರು ಅಷ್ಟೇ. ಆ ಸಮಯದಲ್ಲಿ ನಾವು ಇದರ ಬಗ್ಗೆ ಎಲ್ಲಾ ಯೋಚಿಸಿರಲಿಲ್ಲ. ಕಳೆದ ಕೆಲವು ಸಮಯದ ಹಿಂದಿನಿಂದ ಮಾತನಾಡಲು ಶುರು ಮಾಡಿದೆವು. ಅದು ಎಲ್ಲರೂ ಹೇಳುತ್ತಿದ್ದಾರಲ್ಲ ಅಂತಾ ಮದುವೆ ಬಗ್ಗೆ ಯೋಚನೆ ಮಾಡಿದೆವು.

ಒಬ್ಬರು ಇಬ್ಬರು ಆದರೂ ಬೇರೆ.. ಆದರೆ ಎಲ್ಲರೂ ನಮ್ಮ ಬಗ್ಗೆ ಹೇಳುತ್ತಿದ್ದರು. ಇವರ ಬಗ್ಗೆ ನಮಗೆ ಹೇಳುತ್ತಿದ್ದರು. ಆಮೇಲೆ ನಾವು ಈ ಬಗ್ಗೆ ಯೋಚನೆ ಮಾಡೋಣ ಅಂದುಕೊಂಡೆವು. ನಮ್ಮ ನಡುವೆ ಹಲವು ಸಾಮ್ಯತೆ ಇದೆ. ನಮ್ಮ ಆಲೋಚನೆ, ನಮ್ಮ ಯೋಚನೆಯಲ್ಲಿ ತುಂಬಾ ಹೊಂದಾಣಿಕೆ ಇದೆ. ಹೀಗಾಗಿ ಜೀವನದಲ್ಲಿ ಮುಂದುವರಿಯೋಣ ಎಂದು ನಿರ್ಧರಿಸಿದೆವು ಎಂದು ಸೋನಾಲ್ ಹೇಳಿದರು.
ತರುಣ್ ಸುಧೀರ್ ಅವರನ್ನು ಪ್ರೀತಿಯಿಂದ ಏನಂತಾ ಕರೆಯುತ್ತೀರಿ ಎನ್ನುವ ಪ್ರಶ್ನೆಗೆ ಸೋನಾಲ್ ಬದಲು ತರುಣ್ ಉತ್ತರಿಸಿದ್ದಾರೆ. ಅವರು ನನ್ನ ಏನು ಬೇಕಾದರೂ ಕರೆಯಲಿ, ನನಗೆ- ಅವರಿಗೆ ಬಿಟ್ಟಿದ್ದು, ನಿಮಗ್ಯಾಕೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಅವರ ಬಳಿ ನನ್ನನ್ನು ಕರೆಯಲು ಬಹಳಷ್ಟು ಪದಗಳಿವೆ. ಆ ಸಂದರ್ಭಕ್ಕೆ ತಕ್ಕಂತೆ ಕರೆಯುತ್ತಿರುತ್ತಾರೆ. ಅವರ ತುಂಬಾ ಫೇವರೇಟ್ ಒಂದು ಪದ ಇದೆ. ಅವರು ಹಲೋ..ಹಲೋ...ಅಂತಾ ನನ್ನನ್ನು ಕರೆಯುತ್ತಾರೆ ಎಂದರು.












Click it and Unblock the Notifications