ಕನ್ನಡ ಸಿನಿಮಾದಲ್ಲಿ ನಟಿಸಿದ್ದರ ಬಗ್ಗೆ ಶಿಲ್ಪಾಶೆಟ್ಟಿ ಹೇಳಿದ್ದೇನು ?
ಕನ್ನಡತಿ ಹಾಗೂ ಬಹುಭಾಷಾ ನಟಿ ಶಿಲ್ಪಾಶೆಟ್ಟಿ ಅವರು ಕನ್ನಡ ಸಿನಿಮಾದಲ್ಲಿ ಯಾಕೆ ನಟಿಸಿದ್ದೆ ಅಂತ ಹೇಳಿರುವ ವಿಷಯ ಅವರ ಜನ್ಮದಿನಾಚರಣೆಯ ಸಂದರ್ಭದಲ್ಲಿ ಭಾರೀ ವೈರಲ್ ಆಗುತ್ತಿದೆ. ಕರ್ನಾಟಕದಿಂದ ಐಶ್ವರ್ಯ ರೈ, ದೀಪಿಕಾ ಪಡುಕೋಣೆ & ಶಿಲ್ಪಾ ಶೆಟ್ಟಿ ಸೇರಿದಂತೆ ಹಲವು ಹೀರೋಹಿನ್‌ಗಳು ಬಾಲಿವುಡ್‌ನಲ್ಲಿ ಮಿಂಚಿದ್ದಾರೆ. ಶಿಲ್ಪಾಶೆಟ್ಟಿ ಅವರು ಈಗ ಸದ್ಯಕ್ಕೆ ಸಿನಿಮಾಗಳಿಂದ ಸಣ್ಣ ಬ್ರೇಕ್ ತೆಗೆದುಕೊಂಡಿದ್ದಾರೆ. ಆದರೆ, ಕನ್ನಡ ಹಾಗೂ ಕರ್ನಾಟಕದ ವಿಚಾರವಾಗಿ ಅವರು ಮಾತನಾಡುವ ವಿಡಿಯೋಗಳು ಆಗಾಗ ವೈರಲ್ ಆಗುವುದಿದೆ. ಶೋಗಳಲ್ಲಿ ಶೆಟ್ಟಿನಾ ಅಂತ ಕೇಳಿ ಕಿರುಚಿಕೊಂಡ ವಿಡಿಯೋವೊಂದು ವೈರಲ್ ಆಗಿತ್ತು.
ನಟಿ ಶಿಲ್ಪಾ ಶೆಟ್ಟಿ ಅವರು ಜನ್ಮದಿನಾಚರಣೆಯ ಸಂಭ್ರಮದಲ್ಲಿದ್ದು. ಈಗ ಕನ್ನಡ ಸಿನಿಮಾದಲ್ಲಿ ಅವರು ನಟಿಸಿದ್ದಕ್ಕೆ ಕಾರಣ ಏನು ಹಾಗೂ ಕನ್ನಡ ಸಿನಿಮಾದಲ್ಲಿ ಅವರು ನಟಿಸುವುದಕ್ಕೆ ಯಾರು ಕಾರಣ ಎನ್ನುವ ಬಗ್ಗೆ ಮಾತನಾಡಿದ್ದಾರೆ. ಕನ್ನಡದಲ್ಲಿ ಒಂದು ಸಿನಿಮಾ ಮಾಡಿರುವ ಅವರು ಹಿಂದಿಯಲ್ಲಿ ಮುಂಚಿದ್ದೇ ಹೆಚ್ಚು. ಹಿಂದಿ ಸಿನಿಮಾರಂಗಕ್ಕೆ ಹೋಗಿ, ಹಿಂದಿ ಸಿನಿಮಾದ ಹೀರೋಯಿನ್‌ಗಳನ್ನೇ ಹಿಂದಿಕ್ಕಿದ್ದು ಇದೆ. ಇದೀಗ ದೀಪಿಕಾ ಅವರು ಸಹ ಆ ಸಾಲಿನಲ್ಲಿ ಇದ್ದಾರೆ. ಐಶ್ವರ್ಯ ಎವರ್ ಗ್ರೀನ್ ನಟಿ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಶಿಲ್ಪಾ ಶೆಟ್ಟಿ ಅವರು ಕನ್ನಡ ಸಿನಿಮಾದಲ್ಲಿ ನಟಿಸೋಕೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರೇ ಕಾರಣ ಅದು ಹೇಗೆ ಎನ್ನುವ ಇಂಟ್ರಸ್ಟಿಂಗ್ ಸ್ಟೋರಿ ಇಲ್ಲಿದೆ.

ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕನ್ನಡ ಸಿನಿಮಾಗೆ ಹಲವು ಘಟಾನುಘಟಿ ನಾಯಕಿಯರನ್ನು ಪರಿಚಯಿಸಿದ್ದರು. ಒಂದು ಕಾಲದಲ್ಲಿ ಶ್ರೀದೇವಿ ಅವರನ್ನೂ ಕನ್ನಡ ಸಿನಿಮಾರಂಗಕ್ಕೆ ಕರೆದುಕೊಂಡು ಬರಬೇಕು ಎಂದು ನಟ ರವಿಚಂದ್ರನ್ ಅವರು ಪ್ರಯತ್ನಿಸಿದ್ದರು. ಆದರೆ ಅದು ಯಶಸ್ಸು ಕಂಡಿರಲಿಲ್ಲ ಅಂತ ಹೇಳಲಾಗುತ್ತದೆ. ಆದರೆ, ಶಿಲ್ಪಾ ಶೆಟ್ಟಿ ಅವರು ತುಂಬಾ ಸಂತೋಷದಿಂದಲೇ ಕನ್ನಡ ಸಿನಿಮಾದಲ್ಲಿ ನಟಿಸಿದ್ದರು. ಅವರು ಕನ್ನಡ ಸಿನಿಮಾದಲ್ಲಿ ನಟಿಸಬೇಕು ಅಂತ ಕಾತುರದಿಂದ ಕಾಯುತ್ತಿರುವಾಗಲೇ ಅವರಿಗೆ ಅದ್ಭುತವಾದ ಅವಕಾಶವೊಂದು ಸಿಕ್ಕಿತ್ತು. ಅದೇ ಪ್ರೀತ್ಸೋದ್ ತಪ್ಪಾ ಸಿನಿಮಾ.. ಇದು ಅವರ ಕನ್ನಡದ ಮೊದಲ ಸಿನಿಮಾ.
ಶಿಲ್ಪಾ ಶೆಟ್ಟಿ ಅವರು ಕರ್ನಾಟಕದ ಮಂಗಳೂರಿನ ಭಾಗದವರು. ತುಳು ಕುಟುಂಬದಿಂದ ಬಂದ ಅವರಿಗೆ ಕನ್ನಡ ಸಿನಿಮಾದಲ್ಲಿ ನಟಿಸಬೇಕು ಎನ್ನುವ ಆಸೆ ಇತ್ತು ಅದನ್ನು ನನಸಾಗಿಸಿದವರು ಮತ್ಯಾರೂ ಅಲ್ಲ ಅದು ರವಿಚಂದ್ರನ್. ಹೌದ ರವಿಚಂದ್ರನ್ ಅವರು ನಿರ್ದೇಶನ ಮಾಡಿದ್ದ ಹಾಗೂ ಸೂಪರ್ ಹಿಟ್ ಮೂವಿ ಪ್ರೀತ್ಸೋದ್ ತಪ್ಪಾ ಎನ್ನುವ ಸಿನಿಮಾದಲ್ಲಿ ಅವರು ನಾಯಕಿಯಾಗಿದ್ದರು.
ಕನ್ನಡ ಅಂದ್ರೆ ಇಷ್ಟ: ಕನ್ನಡ ಸಿನಿಮಾಗಳಲ್ಲಿ ನಟಿಸಬೇಕು ಎನ್ನುವ ಆಸೆ ಇತ್ತು. ನಾನು ಕರ್ನಾಟಕದವಳು. ನಾನು ಹುಟ್ಟಿದ್ದು ಕರ್ನಾಟಕದಲ್ಲಿ ಬೆಳೆದಿದ್ದು ಮುಂಬೈನಲ್ಲಿ ಆದರೆ, ಕರ್ನಾಟಕದೊಂದಿಗೆ ನನಗೆ ಅವಿನಾಭಾವ ಸಂಬಂಧವಿದೆ ಅಂತ ಅವರು ಹೇಳಿಕೊಂಡಿದ್ದಾರೆ.












Click it and Unblock the Notifications