Rishab Shetty: ನ್ಯಾಷನಲ್ ಅವಾರ್ಡ್ ಸಿಕ್ಕ ಬಗ್ಗೆ ರಿಷಬ್ ಶೆಟ್ಟಿ ಹೇಳಿದ್ದೇನು?
Rishab Shetty: ಇಂದು (ಆಗಸ್ಟ್ 16) ನವದೆಹಲಿಯಲ್ಲಿ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಈ ವೇಳೆ ಸ್ಯಾಂಡಲ್‌ವುಡ್‌ನ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಗೆ ಕಾಂತಾರ ಸಿನಿಮಾದಲ್ಲಿನ ನಟನೆಗಾಗಿ ಬೆಸ್ಟ್ ಆ್ಯಕ್ಟರ್ ಎಂಬ ನ್ಯಾಷನಲ್ ಅವಾರ್ಡ್ ಒಲಿದುಬಂದಿದೆ. ಇನ್ನು ಈ ಬಗ್ಗೆ ಸ್ವತಃ ರಿಷಬ್ ಶೆಟ್ಟಿ ಅವರು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ನವದೆಹಲಿಯಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಘೋಷ ಮಾಡಿದ್ದು, ಸೂಪರ್ ಹಿಟ್ ಆಗಿದ್ದ ಕಾಂತಾರ ಚಿತ್ರದಲ್ಲಿನ ನಟನೆಗಾಗಿ ರಿಷಬ್ ಶೆಟ್ಟಿ ಅವರು ಅತ್ಯುತ್ತಮ ನಟ ಎಂಬ ನ್ಯಾಷನಲ್ ಅವಾರ್ಡ್ ಅನ್ನು ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೆ, ಈ ಬಗ್ಗೆ ಬೆಂಗಳೂರಿನಲ್ಲಿ ಸ್ವತಃ ರಿಷಬ್ ಶೆಟ್ಟಿ ಅವರೇ ಮಾತನಾಡಿದ್ದಾರೆ.

"ಕಾಂತಾರ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಸಿಕ್ಕಿರುವುದು ತುಂಬಾ ಖುಷಿಯಾಗುತ್ತಿದೆ. ಈ ಪ್ರಶಸ್ತಿಯನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಇನ್ನು ಇದೀಗ ರಾಷ್ಟ್ರ ಪ್ರಶಸ್ತಿ ಲಭಿಸಿದ್ದು, ಇದನ್ನು ಇಡೀ ಚಿತ್ರ ತಂಡಕ್ಕೆ ಅರ್ಪಿಸುತ್ತೇನೆ. ಅಲ್ಲದೆ, ಈ ಸಂದರ್ಭದಲ್ಲಿ ನನ್ನ ಪತ್ನಿಗೂ ಧನ್ಯವಾದ ಹೇಳುತ್ತೇನೆ," ಎಂದು ಹೇಳಿದರು.
"ಸಿನಿಮಾವನ್ನು ಜನ ನೋಡಿ ಮೆಚ್ಚುವುದು ಮುಖ್ಯವಾಗಿದೆ. ಈಗಾಗಲೇ ತುಂಬಾ ಜನ ಕರೆ ಮಾಡಿ, ನನಗೆ ಶುಭಾಷಯ ತಿಳಿಸಿದ್ದಾರೆ," ಎಂದು ಹೇಳಿದರು. ಇನ್ನು ಒಂದು ಸಿನಿಮಾ ಚೆನ್ನಾಗಿ ಮೂಡಿಬರಬೇಕೆಂದರೆ, ಒಬ್ಬ ಉತ್ತಮ ಬರಹಗಾರ, ಪ್ರೊಡಕ್ಷನ್ ಹೌಸ್ ಬೇಕಾಗುತ್ತದೆ. ಒಬ್ಬರಿಂದ ಏನು ಮಾಡುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ಇಡೀ ಟೀಂಗೆ ಧನ್ಯವಾದ ಹೇಳುತ್ತೇನೆ.
ಅವಾರ್ಡ್ ಬಂದ ತಕ್ಷಣ ಮೊದಲು ಶುಭಾಷಯ ತಿಳಿಸಿದ್ದೇ ನನ್ನ ಪತ್ನಿ. ಅವರಿಗೆ ತುಂಬಾ ಧನ್ಯವಾದಗಳು. ಇದರಿಂದ ಅವರಿಗೆ ತುಂಬಾ ಖುಷಿಯಾಗಿದೆ. ಅಲ್ಲದೆ, ನಟ ಯಶ್ ಅವರು ಕೂಡ ವಿಷ್ ಮಾಡಿದರು. ಅಲ್ಲದೆ, ಬಹುತೇಕ ಜನರು, ಅಭಿಮಾನಿಗಳು, ನಟ ನಟಿಯರು ಕೂಡ ಶುಭಾಷಯ ತಿಳಿಸಿದ್ದಾರೆ ಎಂದರು.
ಅದರಲ್ಲೂ ಈ ಪ್ರಶಸ್ತಿಯನ್ನು ಅಪ್ಪು ಸರ್, ಅವರ ಕುಟುಂಬಕ್ಕೆ ಹಾಗೂ ದೈವಕ್ಕೆ ಅರ್ಪಿಸಲು ಇಷ್ಟ ಪಡುತ್ತೇನೆ. ಹಾಗೆಯೇ ಇಲ್ಲಿಯವರೆಗೂ ನಾನು ಬೆಳೆಯಲು ಕನ್ನಡ ಜನತೆ ಕೂಡ ಕಾರಣರಾಗಿದ್ದು, ಅವರಿಗೂ ಧನ್ಯವಾದ ಹೇಳಲು ಬಯಸುತ್ತೇನೆ ಎಂದರು. ಹೊಂಬಾಳೆಗೆ ಒಟ್ಟು ನಾಲ್ಕು ಪ್ರಶಸ್ತಿಗಳು ಸಿಕ್ಕಂತಾಗಿದ್ದು, ಅವರಿಗೂ ಸಹ ಶುಭಾಷಯ ಕೋರುತ್ತೇನೆ ಎಂದು ಹೇಳಿದರು.












Click it and Unblock the Notifications