Darshan Thoogudeepa: ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್ ರಾಜಾತಿಥ್ಯದ ಬಗ್ಗೆ ಎಡಿಜಿಪಿ ಹಿಂಗದ್ಬಿಟ್ರು.!
Actor Darshan: ತುಂಬಾ ದಿನಗಳಿಂದಲೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಗರೇಟ್, ಮೊಬೈಲ್ ಫೋನ್‌ಗಳು ಸಫ್ಲೈ ಆಗುತ್ತಿದೆ ಎನ್ನುವ ಆರೋಪಗಳು ಕೇಳಿಬಂದಿದ್ದವು. ಇದೀಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ರಾಜಾತಿಥ್ಯ ನೀಡಲಾಗಿದ್ದು, ಇದಕ್ಕೆ ಫೋಟೋ, ವಿಡಿಯೋ ಕಾಲ್‌ಗಳ ದೃಶ್ಯಗಳೇ ಸಾಕ್ಷಿಯಾಗಿವೆ. ಇನ್ನೂ ಈ ಬಗ್ಗೆ ಬಂಧಿಖಾನೆ ಎಡಿಜಿಪಿ ಏನು ಹೇಳಿದ್ದಾರೆಂದು ಇಲ್ಲಿ ತಿಳಿಯಿರಿ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ 60 ದಿನಗಳು ಕಳೆದಿವೆ. ಇದೀಗ ಜೈಲಿನಲ್ಲೇ ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನ, ಪ್ರಕರಣ ಆರೋಪಿ ನಾಗರಾಜನ ಜೊತೆ ಕುಳಿತು ನಟ ದರ್ಶನ್ ಒಂದು ಕೈಯಲ್ಲಿ ಸಿಗರೇಟ್, ಮತ್ತೊಂದು ಕೈಯಲ್ಲಿ ಕಾಫಿ ಮಗ್ ಹಿಡಿದು ಹರಡೆ ಹೊಡೆಯುತ್ತಿಯುವ ಫೋಟೋಗಳು ಭಾರೀ ವೈರಲ್ ಆಗಿದ್ದವು. ಬಳಿಕ ವಿಐಪಿ ಸೆಲ್‌ನಿಂದಲೇ ವಿಡಿಯೋ ಕಾಲ್ ಮಾಡಿರುವ ವಿಡಿಯೋ ಕೂಡ ಭಾರೀ ಚರ್ಚೆಗೆ ಕಾರಣವಾಗಿದೆ.

ಇನ್ನು ನಟ ದರ್ಶನ್ ಹಿಡಿದುಕೊಂಡಿರುವ ಮಗ್‌ನಲ್ಲಿ ಕಾಫಿ ಇತ್ತೋ ಅಥವಾ ಎಣ್ಣೆ ಇತ್ತೋ ಅನುಮಾನಗಳು ವ್ಯಕ್ತವಾಗುತ್ತಿವೆ. ಮಯತ್ತೊಂದೆಡೆ ನಟ ದರ್ಶನ್ ಜೈಲಿನ ವಿಐಪಿ ಸೆಲ್‌ನಿಂದಲೇ ವಿಡಿಯೋ ಕಾಲ್ ಮಾಡಿ ರೌಡಿ ಶೀಟರ್ ಜೊತೆ ಮಾತನಾಡಿರುವ ವಿಡಿಯೋಗಳು ಕೂಡ ಇದೀಗ ಎಲ್ಲೆಡೆ ಹರಿದಾಡುತ್ತಿವೆ. ಇನ್ನೂ ಈ ಬಗ್ಗೆ ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿಯವರು ಏನು ಹೇಳಿದ್ದಾರೆ ಎಂದು ಇಲ್ಲಿ ಗಮನಿಸಿ.
ಜೈಲ್‌ನಲ್ಲಿ ರೌಡಿ ಶೀಟರ್‌ಗಳ ಜೊತೆ ನಟ ರೆಸಾರ್ಟ್‌ನಲ್ಲಿ ಕುಳಿತಿರುವಂತೆ ಟೇಬಲ್ ಹಾಕಿಕೊಂಡು ಕುಳಿತುಕೊಂಡು ಒಂದು ಕೈಯಲ್ಲಿ ಮಗ್, ಮತ್ತೊಂದು ಕೈಯಲ್ಲಿ ಸಿಗರೇಟ್ ಹಿಡಿದು ಹರಟೆ ಹೊಡೆಯುತ್ತಿರುವ ಫೋಟೊ, ಮತ್ತೊಂದೆಡೆ ವಿಐಪಿ ಸೆಲ್‌ನಿಂದಲೇ ವಿಡಿಯೋ ಕಾಲ್ ಮಾಡಿದ ಆರೋಪದ ಮೇಲೆ ನಟ ದರ್ಶನ್ ಮೇಲೆ ಮತ್ತೊಂದು ಎಫ್‌ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ಜೈಲಿನಲ್ಲಿರುವ ದರ್ಶನ್ ಫೋಟೋ ವೈರಲ್ ಆದ ನಂತರ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, ಅಧಿಕಾರಿಗಳನ್ನು ಅಮಾನತು ಮಾಡುವುದರ ಜೊತೆಗೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಗೃಹಸಚಿವ ಡಾ.ಜಿ ಪರಮೇಶ್ವರ್ ಅವರು ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಬಂಧಿಖಾನೆ ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರು ಮಾತನಾಡಿದ್ದು, "ದರ್ಶನ್ ಫೋಟೋಗೆ ಸಂಬಂಧಪಟ್ಟಂತೆ 3 ಎಫ್‌ಐಆರ್ ದಾಖಲಾಗಿದೆ. ಎಫ್‌ಐಆರ್‌ನಲ್ಲಿ ದರ್ಶನ್ ಹೆಸರು ಸಹ ಇದೆ. ಈ ಘಟನೆ ಆಗಸ್ಟ್ 22ರ ಸಾಯಂಕಾಲ ಆಗಿದೆ," ಎಂಬ ಮಾಹಿತಿಯನ್ನು ಎಡಿಜಿಪಿ ನೀಡಿದ್ದಾರೆ.
ಜೈಲು ಸೂಪರಿಂಟೆಂಡೆಂಟ್ ದೂರಿನ ಮೇಲೆ 3 ಎಫ್‌ಐಆರ್
* ಸಿಗರೇಟ್ ಕೊಟ್ಟಿರುವುದು.
* ಜೈಲಿನಲ್ಲಿ ವಿಡಿಯೋ ಮಾಡಿಕೊಂಡು ವೈರಲ್ ಮಾಡಿರುವುದು.
* ಸಿಸಿಬಿ ಪೊಲೀಸರ ದಾಳಿ ವೇಳೆ ಕೆಲವು ಬಾಕ್ಸ್‌ಗಳನ್ನು ತಗೊಂಡು ಹೋಗಿರುವುದು.
ಇನ್ನು ನಟ ದರ್ಶನ್, ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನ ಹಾಗೂ ನಾಗರಾಜ್ ಮೇಲೂ ಪ್ರಕರಣ ದಾಖಲಾಗಿದೆ. ಜೈಲು ಸೂಪರಿಡೆಂಟೆಂಟ್ ದೂರಿನ ಮೇಲೆ ಈ ಎಫ್ಐಆರ್‌ಗಳು ದಾಖಲಾಗಿವೆ. ಜೈಲಿನಲ್ಲಿ ಕುಳಿತಿರುವುದರ ಜೊತೆಗೆ ಕುರ್ಚಿಗಳನ್ನು ಯಾರು ಕೊಟ್ಟರು ಎಂಬ ಬಗ್ಗೆ ಪ್ರಕರಣ ದಾಖಲಾಗಿದೆ. ಕೈದಿಗಳನ್ನು ಬೇರೆ ಜೈಲಿಗೆ ಶಿಫ್ಟ್ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಅಧಿಕಾರಿಗಳ ವೈಫಲ್ಯದಿಂದ ಹೀಗೆ ಆಗಿದೆ ಎಂದು ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿ ತಿಳಿಸಿದ್ದಾರೆ.











Click it and Unblock the Notifications