BBK12: ಮೇಘನಾ ರಾಜ್‌ ಬಿಗ್‌ಬಾಸ್‌ನಲ್ಲಿ ಕಾಣಿಸಿಕೊಳ್ತಾರಾ? ನಟಿ ಹೇಳಿದ್ದೇನು?

Bigg Boss Kannada Season 12: ಕನ್ನಡ ಬಿಗ್‌ಬಾಸ್‌ ಸೀಸನ್‌-12 ಸೆಪ್ಟೆಂಬರ್‌ 28ರಿಂದ ಶುರುವಾಗಲಿದೆ. ಈ ಬಾರಿಯ ಸ್ಪರ್ಧಿಗಳು ಯಾರೆಂದು ಇನ್ನೂ ಅಧಿಕೃತವಾಗಿ ವಾಹಿನಿ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದರೆ ಸೋಷಿಯಲ್‌ ಮೀಡಿಯಾದಲ್ಲಿ ಹಲವರ ಹೆಸರಂತೂ ಚರ್ಚೆಯಾಗುತ್ತಿದೆ. ಈ ಸೆಲೆಬ್ರಿಟಿಗಳು ಬಿಗ್‌ಬಾಸ್‌ಗೆ ಹೋಗೋದು ಫಿಕ್ಸ್‌ ಎಂದು ಮಾತನಾಡುತ್ತಿದ್ದಾರೆ. ಈ ಪೈಕಿ ನಟಿ ಮೇಘನಾ ರಾಜ್‌ ಅವರ ಹೆಸರು ಕೂಡ ಸಖತ್‌ ಸೌಂಡ್‌ ಮಾಡುತ್ತಿದೆ. ಯಾವ ಸ್ಪರ್ಧಿಗಳು ಕೂಡ ಅಧಿಕೃತವಾಗಿ ಬಿಗ್‌ಬಾಸ್‌ ಮನೆಗೆ ಹೋಗುವವರೆಗೆ ಸೀಕ್ರೇಟ್‌ ರಿವೀಲ್‌ ಮಾಡೋದಿಲ್ಲ. ಇನ್ನು ಬಿಗ್‌ಬಾಸ್‌ಗೆ ಹೋಗುವ ವಿಚಾರವಾಗಿ ಮೇಘನಾ ರಾಜ್‌ ಕ್ಲಾರಿಟಿ ಕೊಟ್ಟೇಬಿಟ್ಟಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಮೇಘನಾ ರಾಜ್‌ ಅವರ ಫೋಟೋ ಹರಿದಾಡುತ್ತಿದೆ. ಈ ಬಾರಿಯ ಬಿಗ್‌ಬಾಸ್‌ ಕಂಟೆಸ್ಟೆಂಟ್‌ ಮೇಘನಾ ರಾಜ್‌ ಎಂದು ಅದರಲ್ಲಿದೆ. ಇದನ್ನು ನೋಡಿ ಬಹುತೇಕರು ಮೇಘನಾ ರಾಜ್‌ ಬಿಗ್‌ಬಾಸ್‌ ಮನೆಯಲ್ಲಿ ಕಾಣಿಸಿಕೊಳ್ಳುವುದು ಫಿಕ್ಸ್‌ ಎಂದು ನಂಬಿದ್ದಾರೆ. ಈ ವಿಚಾರವಾಗಿ ಮೇಘನಾ ರಾಜ್‌ ಅವರೇ ಕೊನೆಗೂ ಉತ್ತರ ನೀಡಿದ್ದಾರೆ. ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡು, ಮಹತ್ವದ ವಿಚಾರವೊಂದನ್ನು ಮೇಘನಾ ಹೇಳಿದ್ದಾರೆ.

what-actress-meghana-raj-said-about-joining-bigg-boss-kannada-season-12

ಸಾಮಾನ್ಯವಾಗಿ ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಗಳನ್ನು ಸರ್‌ಪ್ರೈಸ್‌ ಆಗಿ ಕರೆತರಲಾಗುತ್ತೆ. ಹೀಗಾಗಿ ಯಾರೆಲ್ಲ ದೊಡ್ಮನೆಗೆ ಬರ್ತಾರೆ ಅನ್ನೋ ಕುತೂಹಲ ಇದ್ದೇ ಇರುತ್ತೆ. ಕಳೆದ ಸೀಸನ್‌ಗಳ ವೇಳೆಯೂ ಮೇಘನಾ ರಾಜ್‌ ಅವರ ಹೆಸರು ಬಿಗ್‌ಬಾಸ್‌ ಜೊತೆಗೆ ತಳುಕು ಹಾಕಿಕೊಳ್ಳುತ್ತಿತ್ತು. ಆದರೆ ಮೇಘನಾ ಯಾವ ಸೀಸನ್‌ನಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಈ ಬಾರಿ ಸೋಷಿಯಲ್‌ ಮೀಡಿಯಾದಲ್ಲಿ ಮೇಘನಾ ಅವರ ಹೆಸರು ಹರಿದಾಡುತ್ತಿರುವ ಕಾರಣ ಅವರೇ ಕ್ಲಾರಿಟಿ ಕೊಟ್ಟಿದ್ದಾರೆ.

'ಮೊದಲು ನನ್ನ ಸಂಪರ್ಕಿಸಿ'

'ನಾನು ಬಿಗ್‌ಬಾಸ್‌ ಸ್ಪರ್ಧಿಯಾಗಿ ಹೋಗುತ್ತಿದ್ದೇನೆ ಎಂಬ ಸುದ್ದಿ ಸಂಪೂರ್ಣವಾಗಿ ಸುಳ್ಳು. ಈ ರೀತಿಯ ಸುಳ್ಳು ಸುದ್ದಿಗಳು ನನ್ನ ಅಭಿಮಾನಿಗಳು ಹಾಗೂ ಫಾಲೋವರ್ಸ್‌ಗಳನ್ನು ದಾರಿತಪ್ಪಿಸುತ್ತವೆ. ನಾನು ಸದ್ಯ ಯಾವುದೇ ಶೋಗೆ ಹೋಗುತ್ತಿಲ್ಲ. ಈ ರೀತಿಯ ಸುದ್ದಿಗಳನ್ನು ಪ್ರಕಟಿಸುವ ಮುನ್ನ ದಯವಿಟ್ಟು ನನ್ನನ್ನೇ ಒಮ್ಮೆ ಸಂಪರ್ಕಿಸಿ ಖಚಿತಪಡಿಸಿಕೊಳ್ಳಿ ಎಂದು ಎಲ್ಲ ಗೌರವಯುತವಾದ ಚಾನಲ್‌ಗಳಿಗೆ ಮನವಿ ಮಾಡುತ್ತೇನೆ' ಎಂದು ಮೇಘನಾ ಪೋಸ್ಟ್‌ ಮಾಡಿದ್ದಾರೆ.

ಮೇಘನಾ ರಾಜ್‌ ಮಾತ್ರವಲ್ಲದೆ ಇನ್ನೂ ಹಲವು ನಟ, ನಟಿಯರ ಹೆಸರುಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅನೇಕರು ಈ ವದಂತಿಗಳನ್ನು ತಳ್ಳಿಹಾಕಿದ್ದಾರೆ. ಆದರೆ ಕೆಲವರು ಯಾವುದೇ ಪ್ರತಿಕ್ರಿಯೆ ನೀಡದ ಕಾರಣ, ಆ ಗಾಸಿಪ್‌ಗೆ ಪುಷ್ಟಿ ನೀಡಿದಂತಿದೆ. ಅವರೆಲ್ಲರೂ ಬಿಗ್‌ಬಾಸ್‌ ಮನೆಗೆ ಹೋಗೋದು ಪಕ್ಕಾ ಆಗಿದೆ. ಅದೇ ಕಾರಣಕ್ಕೆ ಸುಮ್ಮನಿದ್ದಾರೆ ಎಂದೂ ಹೇಳಲಾಗುತ್ತಿದೆ. ಬಿಗ್‌ಬಾಸ್‌ ಇಲ್ಲಿವರೆಗೆ ಮೊದಲೇ ಯಾವ ಸ್ಪರ್ಧಿಯ ಹೆಸರನ್ನೂ ಬಹಿರಂಗಪಡಿಸಿಲ್ಲ. ಬಿಗ್‌ಬಾಸ್‌ ಗ್ರ್ಯಾಂಡ್‌ ಓಪನಿಂಗ್‌ ಕಾರ್ಯಕ್ರಮದ ದಿನವೇ ಕಿಚ್ಚ ಸುದೀಪ್‌ ಎಂದಿನಂತೆ ಸ್ಪರ್ಧಿಗಳನ್ನು ಸರ್‌ಪ್ರೈಸ್‌ ಆಗಿ ಪ್ರೇಕ್ಷಕರಿಗೆ ಪರಿಚಯಿಸಲಿದ್ದಾರೆ. ಕಾರ್ಯಕ್ರಮ ಶುರುವಾಗುವವರೆಗೆ ಸ್ಪರ್ಧಿಗಳ ಬಗ್ಗೆ ಗಾಸಿಪ್‌ ಅಂತೂ ಇದ್ದೇ ಇರುತ್ತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+