Get Updates
Get notified of breaking news, exclusive insights, and must-see stories!

ನಟ ವಿಷ್ಣುವರ್ಧನ್ ಅಭಿಮಾನಿಗಳಿಗೆ ಭರ್ಜರಿ ಗುಡ್‌ನ್ಯೂಸ್: ಸರ್ಕಾರದಿಂದ ಮಹತ್ವದ ನಿರ್ಧಾರ!

ನಟ ದಿ. ವಿಷ್ಣುವರ್ಧನ್ ಸಮಾಧಿ ಸ್ಥಳದ ವಿಚಾರ ಕೊನೆಗೂ ತಾರ್ಕಿಕ ಅಂತ್ಯ ಕಾಣುವ ಲಕ್ಷಣ ಕಾಣಿಸುತ್ತಿದೆ. ಕನ್ನಡ ಸಿನಿಮಾರಂಗದಲ್ಲಿ ಕರ್ಣ ಎಂದೇ ಖ್ಯಾತಿ ಗಳಿಸಿರುವ ಹಾಗೂ ಅಭಿಮಾನಿಗಳ ಮನಸ್ಸಿನಲ್ಲಿ ಅಗ್ರಸ್ಥಾನ ಪಡೆದಿರುವ ವಿಷ್ಣುವರ್ಧನ್ ಅವರ ಸಮಾಧಿ ಸ್ಥಳದ ವಿಚಾರವು ಕಗ್ಗಂಟಾಗಿಯೇ ಉಳಿದಿದ್ದು. ಇದೀಗ ಈ ಸಮಸ್ಯೆ ಪರಿಹಾರವಾಗುವ ಲಕ್ಷಣ ಕಾಣಿಸುತ್ತಿದೆ. ಈ ಬಗ್ಗೆ ಅಭಿಮಾನ್ ಸ್ಟುಡಿಯೋ ಜಾಗ ಹಿಂದಕ್ಕೆ ಪಡೆಯಲು ಸರ್ಕಾರ ನಿರ್ಧಾರ - ಇಡೀ ಜಮೀನು 'ಅರಣ್ಯ' ಎಂದು ಘೋಷಣೆ ಸಾಧ್ಯತೆ ಎಂದು ಹೇಳಲಾಗುತ್ತಿದೆ. ಈ ರೀತಿ ನಡೆದರೆ ನಿಜಕ್ಕೂ ನಟ ವಿಷ್ಣುವರ್ಧನ್ ಅವರ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಅಂತಲೇ ಹೇಳಬಹುದು. ಹಾಗಾದರೆ ಏನಿದು ಹೊಸ ಅಪ್ಡೇಟ್ಸ್‌ ಅಂತ ನೋಡೋಣ.

ಅಭಿಮಾನ್ ಸ್ಟುಡಿಯೋ ಜಾಗ ಹಿಂದಕ್ಕೆ ಪಡೆಯಲು ಸರ್ಕಾರ ನಿರ್ಧಾರ ಮಾಡಿದೆ. ಇಲ್ಲಿನ ಇಡೀ ಜಮೀನು ಪ್ರದೇಶವನ್ನು ಅರಣ್ಯ ಪ್ರದೇಶ ಎಂದು ಘೋಷಣೆ ಮಾಡುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಕೆಂಗೇರಿ ಹೋಬಳಿ ಸಮೀಪದಲ್ಲಿರುವ ಅಭಿಮಾನ್ ಸ್ಟುಡಿಯೋ ಭೂಮಿಯನ್ನು ಅರಣ್ಯ ಪ್ರದೇಶ ಎಂದು ಮಾಡಲು ನಿರ್ಧರಿಸಲಾಗಿದೆ. ಇದರಿಂದ ವಿಷ್ಣುವರ್ಧನ್ ಸಮಾಧಿ ವಿವಾದ ವಿಚಾರವು ತಾರ್ಕಿಕ ಅಂತ್ಯ ಕಾಣಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಇತ್ತೀಚಿನ ಬೆಳವಣಿಗೆಗಳು ನಟ ವಿಷ್ಣುವರ್ಧನ್ ಅವರ ಅಭಿಮಾನಿಗಳಲ್ಲಿ ಭಾರೀ ನಿರಾಸಿ ಹಾಗೂ ಆಕ್ರೋಶಕ್ಕೆ ಕಾರಣವಾಗಿತ್ತು.

Vishnuvardhan Fans Get Good News Government Makes Big Announcement

ಇದೀಗ ಅಭಿಮಾನ್ ಸ್ಟುಡಿಯೋ ಜಾಗ ಹಿಂದಕ್ಕೆ ಪಡೆಯುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಸ್ಟುಡಿಯೋದ ಇನ್ನುಳಿದ ಜಮೀನನ್ನು ಮರಳಿ ತನ್ನ ಸುಪರ್ದಿಗೆ ತೆಗೆದುಕೊಳ್ಳಲಾಗುವುದು. 20 ಎಕರೆ ಭೂಮಿಯಲ್ಲಿ 12 ಎಕರೆಯನ್ನು ನಟ ಬಾಲಕೃಷ್ಣ ಅವರ ಮಕ್ಕಳು ಮಾರಾಟ ಮಾಡಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ, ಈ ನಿರ್ದಿಷ್ಟ ಪ್ರದೇಶವನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಸರ್ಕಾರ ಮುಂದಾಗಿದೆ ಎಂದು ವರದಿಯಾಗಿದೆ.

ಕೆಂಗೇರಿ ಹೋಬಳಿ ಪ್ರದೇಶದಲ್ಲಿ ಇರುವಂತಹ ಹಿರಿಯ ನಟ ಬಾಲಕೃಷ್ಣ ಅವರ ಅಭಿಮಾನ್ ಸ್ಟುಡಿಯೋದ ಭೂಮಿಯನ್ನು ಅರಣ್ಯ ಪ್ರದೇಶವೆಂದು ಘೋಷಿಸಲು ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತಿದೆ. ಆಗಸ್ಟ್‌ 28ರಂದು ಈ ಘೋಷಣೆ ಮಾಡಲಾಗಿದೆ. ಅಲ್ಲದೇ ಇದರ ಆದೇಶ ಪ್ರತಿಯನ್ನು ಅರಣ್ಯ ಇಲಾಖೆಯು ಬೆಂಗಳೂರು ಜಿಲ್ಲಾಧಿಕಾರಿಗೆ ಕಳುಹಿಸಿಕೊಟ್ಟಿದೆ. ಇದು ಮಹತ್ವದ ಬೆಳವಣಿಗೆ ಎಂದೇ ಪರಿಗಣಿಸಲಾಗುತ್ತಿದೆ. ಇನ್ನು ಇಲ್ಲಿನ ಒಟ್ಟಾರೆ ಪ್ರದೇಶವನ್ನು ಅರಣ್ಯ ಪ್ರದೇಶ ಎಂದು ಘೋಷಣೆ ಮಾಡಿರುವುದರಿಂದಾಗಿ ಅಭಿಮಾನ್ ಸ್ಟುಡಿಯೋದ ಜಮೀನನ್ನು ಸರ್ಕಾರ ಮತ್ತೆ ವಾಪಸ್ಸು ಪಡೆಯಲಿದೆ. ಸರ್ಕಾರವೇ ಈ ಜಾಗವನ್ನು ವಾಪಸ್ ಪಡೆದುಕೊಂಡರೆ ನಟ ದಿ. ವಿಷ್ಣುವರ್ಧನ್ ಸಮಾಧಿ ಸ್ಥಳದಲ್ಲಿನ ಗೊಂದಲ ತಾರ್ಕಿಕ ಅಂತ್ಯ ಕಾಣಲಿದೆ ಎಂದು ಅಭಿಮಾನಿಗಳು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.

1960ರ ದಶಕದಲ್ಲಿ ಹಾಸ್ಯ ನಟ ಬಾಲಕೃಷ್ಣ ಅವರಿಗೆ ಸರ್ಕಾರದಿಂದ 20 ಎಕರೆ ಭೂಮಿಯನ್ನು ಕೊಡಲಾಗಿತ್ತು. ಸರ್ಕಾರದ ನಿಯಮಾನುಸಾರ, 20 ವರ್ಷಗಳವರೆಗೆ ಆ ಭೂಮಿಯನ್ನು ಯಾರಿಗೂ ಪರಭಾರೆ ಮಾಡುವುದಕ್ಕೆ ಅವಕಾಶ ಇರಲಿಲ್ಲ. ಆದರೆ, ಅದರಲ್ಲಿ 12 ಎಕರೆಯಷ್ಟು ಜಾಗವನ್ನು ಬಾಲಕೃಷ್ಣ ಅವರ ಮಕ್ಕಳು ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಅವರು ಕೊಟ್ಟಿರುವ ಕಾರಣ, ಅಭಿಮಾನ್ ಸ್ಟುಡಿಯೋ ಕಟ್ಟಲು ಹಣದ ಅವಶ್ಯಕತೆ ಇತ್ತು. ಹೀಗಾಗಿ ಮಾರಾಟ ಮಾಡಿದ್ದಾಗಿ ಹೇಳಿದ್ದಾರೆ ಎಂದು ಹೇಳಲಾಗಿದೆ.

ಇದೀಗ ಇನ್ನುಳಿದ ಉಳಿದ ಎಂಟು ಎಕರೆ ಜಾಗವನ್ನು ಜಮೀನು ನೀಡುವಾಗ ವಿಧಿಸಲಾಗಿದ್ದ ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ ದಂಡದ ರೂಪವಾಗಿ ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+