25ನೇ ವಿವಾಹ ವಾರ್ಷಿಕೋತ್ಸವಕ್ಕೆ ಪತ್ನಿಗೆ ವಿಶಿಷ್ಟ ಉಡುಗೊರೆ ನೀಡಿದ ವಿನೋದ್ ರಾಜ್

ವರನಟಿ ಲೀಲಾವತಿ ಅವರು ಇಹಲೋಕ ತ್ಯಜಿಸಿ ಒಂದು ವರ್ಷ ಕಳೆಯುತ್ತಿದ್ದು, ವರ್ಷ ಕಳೆಯುದರವೊಳಗೆ ಪುತ್ರ ವಿನೋದ್ ರಾಜ್ ತಾಯಿಯ ಸ್ಮಾರಕವನ್ನು ನಿರ್ಮಾಣ ಮಾಡಿ‌ದ್ದಾರೆ. ತಾಯಿಗಾಗಿ ವಿನೋದ್ ರಾಜ್ ದೇವಾಲಯದಂತಹ ಅದ್ಭುತವಾದ ಮಂದಿರ ಕಟ್ಟಿಸಿದ್ದಾರೆ. ನಿನ್ನೆ (ಡಿಸೆಂಬರ್‌ 05) ಈ ಸ್ಮಾರಕದ ಉದ್ಘಾಟನೆಯಾಗಿದ್ದು, ವಿಶೇಷವೆಂದರೆ ಈ ದಿನವೇ ವಿನೋದ್ ರಾಜ್ ಹಾಗೂ ಅವರ ಪತ್ನಿ ಅನು ಅವರ ಇಪ್ಪತೈದನೇ ವರ್ಷದ ಮದುವೆ ವಾರ್ಷಿಕೋತ್ಸವ.

ಈ ಬಗ್ಗೆ ವಿನೋದ್‌ ರಾಜ್‌ ಪತ್ನಿ ಅನು ಮಾತನಾಡಿದ್ದು, ನನ್ನ ಮದುವೆ ದಿನ ಇಂತಹವೊಂದು ಉಡುಗೊರೆ ಸಿಗುತ್ತೆ ಅಂತಾ ನನಗೆ ಗೊತ್ತಿರಲಿಲ್ಲ. ಇದು ನನಗೊಂದು ಸಪ್ರೈಸ್‌. ಇವತ್ತು ನಮ್ಮದು ಇಪ್ಪತೈದನೇ ವರ್ಷದ ಮದುವೆ ವಾರ್ಷಿಕೋತ್ಸವ. ಖಂಡಿತಾ ಇವರಿಗೆ ಅದರೆಲ್ಲಾ ಆಸಕ್ತಿ ಇಲ್ಲ. ಹೀಗಾಗಿ ನಮ್ಮ ಅತ್ತೆನೇ ಇದನ್ನು ಮಾಡಿಸಿದ್ದಾರೆ ಅನಿಸುತ್ತದೆ. ನಮ್ಮ ಮದುವೆ ದಿನವೇ ಈ ದೇವಸ್ಥಾನ ಉದ್ಘಾಟನೆಯನ್ನು ಅಮ್ಮನೇ ಮಾಡಿಸಿದ್ದು. ಇವರಿಗೆ ನಮ್ಮ ಮದುವೆ ದಿನ ಯಾವತ್ತು ಎನ್ನುವುದು ಗೊತ್ತಿಲ್ಲ. ಇದು ಖಂಡಿತವಾಗಿಯೂ ಅಮ್ಮನಿಂದಲೇ ಆಗಿರುವುದು ಎಂದು ಹೇಳಿದ್ದಾರೆ.

Vinod Raj Celebrates 25th Wedding Anniversary By Unveiling Memorial Temple For Late Mother

ಗ್ಯಾರಂಟಿ ನ್ಯೂಸ್‌ ಜೊತೆ ಮಾತನಾಡಿದ ಅವರು, ನಮ್ಮ ಅಮ್ಮ ನಮ್ಮ ಜೊತೆಗೆ ಇದ್ದಾರೆ. ಅವರು ಇಲ್ಲಾ ಅಂತಾ ನಮಗೆ ಯಾವತ್ತೂ ಅನಿಸಿಲ್ಲ. ದೇವರನ್ನು ನಾವು ನೋಡಲು ಆಗುವುದಿಲ್ಲ. ಅದೇ ರೀತಿ ಅಮ್ಮ ನಮಗೆ ಈಗ ಕಾಣಲ್ಲ. ಆದರೆ ನಮ್ಮ ಜೊತೆಯಲ್ಲೇ ಇದ್ದಾರೆ. ಅಮ್ಮ ನಮಗೆ ದೇವರಿಗಿಂತ ದೇವರಾಗಿದ್ದಾರೆ. ಅಮ್ಮನೇ ದೇವರು ಅಂತಾ ಹೇಳುತ್ತಾರೆ. ಆದರೆ ಈಗಿನ ಕಾಲದಲ್ಲಿ ಅಮ್ಮನಿಗೋಸ್ಕರ ದೇವಸ್ಥಾನ ಕಟ್ಟುವುದೆಂದರೆ ಅದು ದೊಡ್ಡ ವಿಷಯವೇ. ಈ ಅಮ್ಮನ ದೇವಸ್ಥಾನ ಇಷ್ಟೊಂದು ಚೆನ್ನಾಗಿ ಬಂದಿದೆ ಅಂದರೆ ನಮಗೆ ತುಂಬಾ ಹೆಮ್ಮೆ ಆಗುತ್ತದೆ. ನಮ್ಮ ಪಾಲಿಗೆ ಅವರೇ ದೇವರು. ಅವರು ದೇವರು ಎನ್ನುವುದು ನನ್ನ ಮನಸ್ಸಿನಲ್ಲಿ ಇತ್ತು ಎಂದರು.

ನನ್ನ ಮಗನ ಪದವಿ ಸ್ವೀಕಾರ ದಿನ ತುಂಬಾ ಖುಷಿ ಇದ್ದರೂ ಬೇಸರ ಇತ್ತು. ಯಾಕೆಂದರೆ ನನ್ನ ಮಗ ತುಂಬಾ ಓದಬೇಕು ಎನ್ನುವುದು ಅಮ್ಮನ ಕನಸಾಗಿತ್ತು. ಅವರಿಂದಲೇ ಅವನು ಅಷ್ಟು ಓದಿದ್ದು. ಆದರೆ ಆ ದಿನ ಅವರಿಲ್ಲ ಎನ್ನುವ ನೋವು ಕಾಡುತ್ತಿತ್ತು. ಅವರಿದ್ದಿದ್ದರೆ ನಮಗಿಂತ ಜಾಸ್ತಿ ಅವರೇ ಹೆಚ್ಚು ಖುಷಿಪಡುತ್ತಿದ್ದರೇನೋ ಎಂದು ಹೇಳಿದರು.

Vinod Raj Celebrates 25th Wedding Anniversary By Unveiling Memorial Temple For Late Mother

ಇನ್ನು ನನ್ನ ಮಗ ಹತ್ತನೇ ತರಗತಿ ಓದುವ ತನಕ ಡಾಕ್ಟರ್‌ ಆಗಬೇಕು ಎಂದು ಲೀಲಾವತಿ ಅಮ್ಮ ಸೇರಿದಂತೆ ಎಲ್ಲರೂ ಆಸೆ ಇತ್ತು. ಆದರೆ ಕೊನೆಯಲ್ಲಿ ಡಾಕ್ಟರ್‌ಗಳ ಕಷ್ಟ ನೋಡಿದ ಅಮ್ಮ, ನನ್ನ ಮಗ ಆ ರೀತಿ ಕಷ್ಟಪಡುವುದು ಬೇಡ. ಬೇಗ ಅವನು ಜೀವನದಲ್ಲಿ ಸೆಟೆಲ್‌ ಆಗಲಿ. ಜೊತೆಯಲ್ಲಿ ಜನ ಸೇವೆ ಮಾಡಬೇಕು ಎಂದು ಅವನನ್ನು ಎಂಜಿನಿಯರ್‌ ಮಾಡಿದೆವು ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+