Vineesh advice to Darshan: ಅಪ್ಪಾ.. ಆ ದಾರಿಯಲ್ಲಿ "ವಿನಾ"ಶ ಖಂಡಿತ: ನಮ್ಮ "ಪವಿತ್ರ" ಪ್ರೀತಿಗೆ ಬೆಲೆ ಕೊಡ್ತಿಯಾ?
ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ್ ಸದ್ಯ ಜೈಲಿನಲ್ಲಿ ನರಕ ಯಾತನೆ ಅನುಭವಿಸುತ್ತಿದ್ದಾರೆ. ಹೊರ ಬರಲು ಆಗದೆ ಒಳಗಡೆ ಇರಲೂ ಆಗದೆ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಮನೆ, ಹೆಂಡತಿ, ಪುತ್ರನನ್ನು ಬಿಟ್ಟು ಇರುವುದು ದರ್ಶನ್ ಅವರಿಗೆ ಕಷ್ಟವಾಗುತ್ತಿದೆ. ಹೀಗಾಗಿ ಪುತ್ರ ವಿನೀಶ್‌ನನ್ನು ನೋಡಬೇಕು ಅನ್ನೋ ಆಸೆ ಇದ್ದರೂ ವಾರಕ್ಕೊಂದು ಬಾರಿ ಮಾತ್ರ ಅವರನ್ನು ನೋಡುವ ಅವಕಾಶ ಸಿಗುತ್ತಿದೆ. ಈ ನಡುವೆ ಜೈಲಿಗೆ ಭೇಟಿ ನೀಡಿದ ವಿನೀಶ್ ತಂದೆಗೆ ಬುದ್ಧಿಮಾತು ಹೇಳಿದ್ದಾರೆ.
ಹೌದು.. ಕಳೆದ ದಿನ ಜೈಲಿಗೆ ತೆರಳಿ ಪುತ್ರ ವಿನೀಶ್ ದರ್ಶನ್ ಅವರನ್ನು ಭೇಟಿ ಮಾಡಿದರು. ಈ ಸಮಯದಲ್ಲಿ ವಿನೀಶ್ ತಂದೆಗೆ ಕೆಲ ಬುದ್ಧಿಮಾತುಗಳನ್ನು ಹೇಳಿದ್ದಾರೆ. ಇದನ್ನ ಕೇಳಿದ ದಾಸ ಬಾವುಕರಾಗಿದ್ದಾರೆಂದು ತಿಳಿದು ಬಂದಿದೆ.

'ಅಪ್ಪ ನಿನ್ನ ಜೊತೆಗಿರೋರು ಯಾರೂ ಕೂಡ ಒಳ್ಳೆಯವರಲ್ಲ. ಅವರಿಂದಾಗಿನೇ ಇಂದು ನೀನು ಜೈಲು ಸೇರಿದಿಯಾ. ನೀನು ಜೈಲಿನಿಂದ ಹೊರ ಬಂದ ಕೂಡಲೇ ಅವರ ಸಹವಾಸ ಬಿಟ್ಟುಬಿಡು. ಡ್ರೈವರ್ ಲಕ್ಷ್ಮಣ ಮಾತ್ರ ಸಾಕು ನಮ್ಗೆ. ಜೈಲಿನಲ್ಲಿ ನಿನ್ನ ಸ್ಥಿತಿ ನನಗೆ ನೋಡಲು ಆಗುತ್ತಿಲ್ಲಾಪ್ಪ' ಎಂದು ವಿನೀಶ್ ಹೇಳಿದ ಮಾತಿಗೆ ದರ್ಶನ್ ಬಾವುಕರಾಗಿದ್ದಾರೆ.
ಜೈಲಿನಲ್ಲಿ ನಿನ್ನ ಮೀಟ್ ಮಾಡಲು ಒಂದು ವಾರ ಕಾಯಬೇಕು. ಮನೆಯಲ್ಲಿ ನಿನ್ನ ಜೊತೆ ಜಗಳ ಆಡ್ತಾಯಿದ್ದೆ. ಆಟ ಆಡ್ತಾಯಿದ್ದೆ. ನೀನ್ ಇಲ್ದೆ ನನಗೆ ಇರಲು ಹಿಂಸೆ ಆಗುತ್ತಿದೆ ಅಪ್ಪ ಎಂದು ವಿನೀಶ್ ಹೇಳಿದ್ದಾರೆ. ವಿನೀಶ್ ಹೇಳಿದ ಮಾತು ಕೇಳಿ ದರ್ಶನ್ ಕಣ್ಣೀರಾಕಿದ್ದಾರೆಂದು ತಿಳಿದು ಬಂದಿದೆ.
'ಡ್ರೈವರ್ ಲಕ್ಷ್ಮಣ್ ಸಾಕು ಯಾರೂ ಬೇಡ'
ಹಲವಾರು ವರ್ಷಗಳಿಂದ ಲಕ್ಷ್ಮಣ್ ಅವರು ದರ್ಶನ್ ಅವರ ಕಾರು ಚಾಲಕರಾಗಿದ್ದಾರೆ. ಅವರನ್ನು ಬಿಟ್ಟರೆ ಬೇರೆ ಯಾರು ಬೇಡ. ನಿನ್ನ ಸ್ನೇಹಿತರು ಯಾರೂ ಕೂಡ ಸರಿಯಾಗಿಲ್ಲ. ಅವರ ಸಹವಾಸವನ್ನೂ ನೀನು ಮಾಡಬೇಡ ಎಂದು ವಿನೀಶ್ ದರ್ಶನ್‌ಗೆ ಬುದ್ಧಿಮಾತು ಹೇಳಿದ್ದಾರೆ. ಇದರಿಂದಾಗಿ ದಾಸ ಕಣ್ಣೀರು ಹಾಕಿದ್ದಾರೆಂದು ತಿಳಿದು ಬಂದಿದೆ.

ತಂದೆಯನ್ನು ಮಿಸ್ ಮಾಡಿಕೊಳ್ಳುತ್ತಿರುವ ವಿನೀಶ್
ದರ್ಶನ್ ಜೈಲಿಗೆ ಹೋದಾಗಿನಿಂದ ಪುತ್ರ ವಿನೀಶ್ ಒಂಬೊಂಟಿಯಾಗಿದ್ದಾರೆ. ಮನೆಯಲ್ಲಿ ತಂದೆ ಜೊತೆಗೆ ಜಗಳ ಆಡ್ತಾ, ಆಟ ಆಡುತ್ತಾ, ಸಮಯ ಕಳೆಯುತ್ತಿದ್ದ ವಿನೀಶ್‌ಗೆ ಈಗ ಮನೆಯಲ್ಲಿ ಸಮಯ ಕಳೆಯುವುದು ಕಷ್ಟವಾಗಿದೆ. ಹೀಗಾಗಿ 'ನೀನ್ ಇಲ್ದೆ ಜೀವನ ಮಾಡಲು ಕಷ್ಟ ಆಗ್ತಾಯಿದೆ' ಎಂದು ತಂದೆ ಬಳಿ ಪುತ್ರ ವಿನೀಶ್ ಹೇಳಿಕೊಂಡಿದ್ದಾರೆ.
ನಿನ್ನ ಈ ಸ್ಥಿತಿಗೆ ನಿನ್ನ ಸ್ನೇಹಿತರೇ ಕಾರಣ-
ದರ್ಶನ್‌ಗೆ ಪುತ್ರ ವಿನೀಶ್ ಜೈಲಿನಲ್ಲಿ ಬುದ್ಧಿ ಹೇಳಿದ್ದಾರೆ. 'ನಿನ್ನ ಈ ಸ್ಥಿತಿಗೆ ನಿನ್ನ ಸ್ನೇಹಿತರೇ ಕಾರಣ. ಅವರಿಂದಾಗಿ ನೀನು ಜೈಲು ಸೇರುವಂತಾಗಿದೆ. ಅವರು ಯಾರೂ ಸರಿಯಾಗಿಲ್ಲ. ನೀನು ಹೊರಬಂದ ಮೇಲೆ ಅವರ ಸಹವಾಸ ಮಾಡಬೇಡ' ಎಂದು ವಿನೀಶ್ ದರ್ಶನ್‌ಗೆ ಬುದ್ಧಿಮಾತು ಹೇಳಿದ್ದಾರೆ. 'ನಿನಗಿಲ್ಲದೆ ಹೇರ್‌ಸ್ಟೈಲ್ ನನಗೂ ಬೇಡಪ್ಪ' ಎಂದು ಮಗ ಕೂಡ ಹೇರ್ ಕಟ್ ಮಾಡಿಸಿದ್ದಾರೆಂದು ತಿಳಿದು ಬಂದಿದೆ.

ಬದಲಾಗ್ತಾರಾ ದರ್ಶನ್?
ಜೈಲಿನಿಂದ ಹೊರಬಂದ ಬಳಿಕ ದರ್ಶನ್ ಬದಲಾಗ್ತಾರಾ ಎನ್ನುವ ಪ್ರಶ್ನೆ ಎಲ್ಲರಲ್ಲೂ ಇದೆ. ಯಾಕೆಂದರೆ ತಮ್ಮದಲ್ಲದ ವಿಚಾರಕ್ಕೆ ಅವರು ಜೈಲು ಸೇರುವಂತಾಯಿತು. ಅದಕ್ಕಾಗಿ ಅವರ ಕುಟುಂಬಸ್ಥರು ನೋವು ಅನುಭವಿಸುವಂತಾಯಿತು. ಇವತ್ತು ಅವರ ಕುಟುಂಬಸ್ಥರು ನಾನಾ ಮಾತುಗಳನ್ನು ಕೇಳಿಸಿಕೊಳ್ಳುವಂತಾಗಿದೆ. ಬೇರೆಯವರ ವಿಚಾರದಲ್ಲಿ ತಲೆ ಕೆಡಸಿಕೊಳ್ಳುವ ಬದಲು ಕುಟುಂಬದ ಬಗ್ಗೆ ಕೊಂಚ ಯೋಚನೆ ಮಾಡಿದ್ದರೆ ದರ್ಶನ್‌ಗೆ ಈ ಸ್ಥಿತಿ ಬರುತ್ತಿರಲಿಲ್ಲ. ದರ್ಶನ್ ಅವರಿಗೆ ತಮ್ಮ ತಪ್ಪಿನ ಅರಿವಾಗಿದೆ. ಆದರೆ ದಾಸ ಜೈಲಿನಿಂದ ಹೊರ ಬಂದ ಮೇಲೆ ಬದಲಾಗುತ್ತಾರಾ ಕಾದು ನೋಡಬೇಕಿದೆ.
ದರ್ಶನ್‌ಗೆ ಜೈಲೂಟ ಫಿಕ್ಸ್
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಜೈಲು ಸೇರಿ 27 ದಿನಗಳೇ ಕಳೆದು ಹೋಗಿವೆ. ಹೊರಗೆ ಐಷಾರಾಮಿ ಜೀವನ ಕಂಡಿದ್ದ ದರ್ಶನ್‌ಗೆ ಜೈಲುವಾಸ ನರಕ ತಂದಿದೆ. ಜೈಲೂಟ ತಿನ್ನಲು ಆಗದೆ ದರ್ಶನ್ ತೂಗ ಕೂಡ ಇಳಿಕೆಯಾಗಿದೆ. ಚಾಪೆ ಮೇಲೆ ಮಲಗಲು ಆಗುತ್ತಿಲ್ಲ. ರಾತ್ರಿ ನಿದ್ದೆ ಇಲ್ಲದೆ ದರ್ಶನ್ ಸಂಕಷ್ಟ ಅನುಭವಿಸುತ್ತಿದ್ದಾರೆ.
ಹೀಗಾಗಿ ಹೈಕೋರ್ಟ್‌ಗೆ ಮನೆ ಊಟ ನೀಡುವಂತೆ ವಕೀಲರ ಮೂಲಕ ದರ್ಶನ್ ಅರ್ಜಿ ಸಲ್ಲಿಸಿದ್ದರು. ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ನಟ ದರ್ಶನ್ ತೂಗುದೀಪ್ ಊಟ, ಹಾಸಿಗೆ, ಪುಸ್ತಕ ಕೋರಿ ಹೈಕೋರ್ಟ್್ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ಜಡ್ಜ್ ಮ್ಯಾಜಿಸ್ಟ್ರೇಟ್ ಮುಂದೆ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಅಲ್ಲಿವರೆಗೂ ಜೈಲು ಊಟ ನೀಡಬೇಕು ಎಂದು ಆದೇಶಿಸಿದ್ದಾರೆ.












Click it and Unblock the Notifications