Actor Darshan Thoogudeepa: ನಟ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ದಾಂಪತ್ಯದಲ್ಲಿ ಬಿರುಕು..
Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದಾಗ ಅವರನ್ನು ಹೊರತರಲು ಪತ್ನಿ ವಿಜಯಲಕ್ಷ್ಮಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ರಾಜ್ಯದ ಎಲ್ಲಾ ಪ್ರಮುಖ ದೇವಸ್ಥಾನಗಳಲ್ಲಿ ವ್ರತ ಹಾಗೂ ವಿಶೇಷ ಪೂಜೆಗಳನ್ನು ಮಾಡಿಸಿದ್ದರು. ಕೊನೆಗೂ ಅವರ ಶ್ರಮಕ್ಕೆ ಪ್ರತಿಫಲವೆಂಬಂತೆ ದರ್ಶನ್ ಜಾಮೀನಿನ ಮೇಲೆ ಹೊರಗಡೆ ಬಂದರು. ಆದ್ರೆ ಇದೀಗ ವಿಜಯಲಕ್ಷ್ಮಿ ದರ್ಶನ್ ನಡೆ ಅಚ್ಚರಿ ಮೂಡಿಸಿದೆ.
ಕೊಲೆ ಪ್ರಕಣದಲ್ಲಿ ಪತಿ ದರ್ಶನ್ ಬಿಡುಗಡೆ ಆದಾಗಿನಿಂದಲೂ ಪತ್ನಿ ವಿಜಯಲಕ್ಷ್ಮಿ ಇನ್ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ದು, ಹೊಸ ಹೊಸ ಪೋಸ್ಟರ್‌ಗಳನ್ನು ಹಂಚಿಕೊಳ್ಳುವ ಮೂಲಕ ಗಮನ ಸೆಳೆಯುತ್ತಲೇ ಇದ್ದಾರೆ. ಆದ್ರೆ ಇದೀಗ ಅವರ ನಟ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿದೆ. ಹಾಗಾದ್ರೆ ಅವರು ಏನು ಮಾಡಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಲಾಗಿದೆ ತಿಳಿಯಿರಿ.

ವಿಜಯಲಕ್ಷ್ಮಿ ದರ್ಶನ್ ಅವರು ಇನ್ಸ್ಟಾಗ್ರಾಂ ಖಾತೆಯಲ್ಲಿ ಸಕ್ರಿಯರಾಗಿದ್ದು, ಹೊಸ ಹೊರ ಪೋಸ್ಟರ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ ಇದೀಗ ಇನ್ಸ್ಟಾ ಖಾತೆಯಲ್ಲಿ ಮಗ ವಿನೀಶ್, ಪತಿ ದರ್ಶನ್ ಅವರನ್ನು ಅನ್‌ಫಾಲೋ ಮಾಡಿ ಅಚ್ಚರಿ ಮೂಡಿಸಿದ್ಧಾರೆ. ಅದರಲ್ಲೂ ಅಭಿಮಾನಿಗಳಂತೂ ಯಾವುದಾದರೂ ಪೋಸ್ಟ್ಗೆ ಒಂದು ಲೈಕ್ ಕೊಟ್ಟರೂ ಅದು ನೆಟ್ಟಿಗರಿಗೆ ಗೊತ್ತಾಗುತ್ತೆ. ತಮ್ಮ ನೆಚ್ಚಿನ ನಟ-ನಟಿಯರನ್ನು, ಅವರ ಕುಟುಂಬವನ್ನು ಫಾಲೋ ಮಾಡುವ ಅಭಿಮಾನಿಗಳಿದ್ದಾರೆ.
ಸದ್ಯ ವಿಜಯಲಕ್ಷ್ಮಿ ದರ್ಶನ್ ಅವರ ಇನ್ಸ್ಟಾಗ್ರಾಂ ಪರೀಶಿಲನೆ ಮಾಡಿದರೆ ಅವರು ಫಾಲೋಯಿಂಗ್ ಲಿಸ್ಟ್ನಲ್ಲಿ 0 ಎಂದು ತೋರಿಸುವುದನ್ನು ಕಾಣಬಹುದು. ವಿಜಯಲಕ್ಷ್ಮಿ ದರ್ಶನ್ ಅವರಿಗೆ 295 ಸಾವಿರ ಫಾಲೋವರ್ಸ್ ಇದ್ದಾರೆ. ಅವರು ಈವರೆಗೂ 85 ಪೋಸ್ಟ್‌ಗಳನ್ನು ಅಪ್ಲೋಡ್ ಮಾಡಿದ್ದಾರೆ. ಅದರಲ್ಲೀ ವಿಜಯಲಕ್ಷ್ಮಿ ಅವರು ಹಬ್ಬಗಳ ಸಂದರ್ಭಗಳಲ್ಲಿ ವಿಶ್ ಮಾಡುವುದು, ತಮ್ಮ ಟ್ರಾವೆಲ್ ಫೋಟೋಸ್ ಶೇರ್ ಮಾಡುವುದನ್ನು ಮಾಡುತ್ತಿರುತ್ತಾರೆ. ಅಲ್ಲದೆ, ಅವರು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿಯೂ ಸಹ ತಮ್ಮ ಮೈಸೂರಿನ ಫಾರ್ಮ್ ಹೌಸ್, ಅಲ್ಲಿನ ಪ್ರಾಣಿ, ಪಕ್ಷಿಗಳ ದೃಶ್ಯಗಳನ್ನು ಫಾಲೋವರ್ಸ್‌ಗೆ ತಿಳಿಸುತ್ತಲೇ ಇರುತ್ತಾರೆ.
ಅಲ್ಲದೆ, ವಿಜಯಲಕ್ಷ್ಮಿ ಅವರು ಆಗಾಗ ವಿಡಿಯೋಗಳನ್ನು ಸಹ ಅಪ್ಲೋಡ್ ಮಾಡುತ್ತಿರುತ್ತಾರೆ. ಇದೀಗ ಅವರು ಎಲ್ಲರನ್ನೂ ಅನ್‌ಫಾಲೋ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಅತ್ತ ನಟ ದರ್ಶನ್ ಅವರು ಸಹ ಎಲ್ಲರನ್ನೂ ಅನ್‌ಫಾಲೋ ಮಾಡಿದ್ದಾರೆ. ಇದು ಪತಿ ಪತ್ನಿ ಜೊತೆಯಾಗಿ ಚರ್ಚಿಸಿ ತೆಗೆದುಕೊಂಡ ನಿರ್ಧಾರವಾಗಿದೆ ಎನ್ನಲಾಗುತ್ತಿದೆ. ಕಾಕಂದ್ರೆ ಇತ್ತ ನಟ ದರ್ಶನ್ ಅವರು ಕೂಡ ಡೆವಿಲ್ ಶೂಟ್ ಬೆನ್ನಲ್ಲೇ ತನ್ನ ಕುಟುಂಬಸ್ಥರನ್ನ ಇನ್ಸ್ಟಾದಲ್ಲಿ ಅನ್‌ಫಾಲೋ ಮಾಡಿದ್ದಾರೆ.
ವಿಜಯಲಕ್ಷ್ಮಿ ದರ್ಶನ್ ಅವರು ಎಲ್ಲರನ್ನೂ ಅನ್‌ಫಾಲೋ ಮಾಡಿದ ಹಿನ್ನೆಲೆ ಇನ್ನೂ ರಿವೀಲ್ ಆಗಿಲ್ಲ. ಆದರೆ, ಎಲ್ಲವೂ ಸರಿಯಾಗುವ ಹೊತ್ತಲೇ ಯಾಕೆ ಹೀಗೆ ಮಾಡಿದರು ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಅಲ್ಲದೆ, ದರ್ಶನ್ ಅವರ ಜಾಮೀನು, ಆರೋಗ್ಯ ಸಮಸ್ಯೆ ಹೀಗೆ ಎಲ್ಲ ಸವಾಲುಗಳಲ್ಲಿಯೂ ಅವರ ಜೊತೆಯೇ ನಿಂತಿದ್ದು, ಆದರೆ ಈಗ ದಿಢೀರ್ ಅನ್‌ಫಾಲೋ ಮಾಡಿರುವುದೇಕೆ ಎಂದು ನೆಟ್ಟಿಗರ ಪ್ರಶ್ನೆಯಾಗಿದೆ ಎನ್ನುತ್ತಿದ್ದಾರೆ ನೆಟ್ಟಿಗರು. ಅಷ್ಟೇ ಅಲ್ಲದೆ, ಮತ್ತೊಂದೆಡೆ ತಮ್ಮ ಮಗ ವಿನೀಶ್‌ನನ್ನು ಕೂಡ ಅನ್‌ಫಾಲೋ ಮಾಡಿದ್ದು, ಇದು ಇದೀಗ ಅಭಿಮಾನಿಗಳನ್ನು ಗೊಂದಲಕ್ಕೆ ಒಳಗಾಗುವಂತೆ ಮಾಡಿದೆ. ಆದರೆ ಇದಕ್ಕೆ ಕಾರಣ ಏನೆಂದು ತಿಳಿದುಬರಬೇಕಿದೆ.
ವಿಜಯಲಕ್ಷ್ಮಿ ದರ್ಶನ್ ಅವರು, ರೇಣುಕಾಸ್ವಾಮಿ ಪ್ರಕರಣದಲ್ಲು ದರ್ಶನ್ ಜೈಲು ಸೇರಿದಾಗ ಕೂಡಲೇ ಪತಿಯನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಲ್ಫಾಲೋ ಮಾಡಿದ್ದರು. ಬಳಿಕ ಮತ್ತೆ ಫಾಲೋ ಮಾಡಿದ್ದರು. ಆದ್ರೆ ಇದೀಗ ಅನ್‌ಫಲ್ ಮಾಡಿದ್ದು, ಇದೀಗ ಈ ವಿಚಾರ ಗೊಂದಲ ಹುಟ್ಟುಹಾಕಿದೆ ಅಂತಿದ್ದಾರೆ ನೆಟ್ಟಿಗರು.












Click it and Unblock the Notifications