ದಿಢೀರ್ 2ನೇ ಮದುವೆ ಚರ್ಚೆ ನಡುವೆ ಮೇಘನಾ ರಾಜ್ ಬಗ್ಗೆ ವಿಜಯ್ ರಾಘವೇಂದ್ರ... Meghana Raj
ಮೇಘನಾ ರಾಜ್ ಮತ್ತು ವಿಜಯ್ ರಾಘವೇಂದ್ರ ಅವರ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಲೇ ಇರುತ್ತೆ, ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ಪದೇ ಪದೇ ಮೇಘನಾ ರಾಜ್ ಮತ್ತು ವಿಜಯ್ ರಾಘವೇಂದ್ರ ಅವರ 2ನೇ ಮದುವೆ ಚರ್ಚೆ ಸಂಚಲನ ಸೃಷ್ಟಿ ಮಾಡುತ್ತಿದೆ. ಒಂದು ಕಡೆ ನಟಿ ಮೇಘನಾ ರಾಜ್ ಅವರು ಚಿರಂಜೀವಿ ಸರ್ಜಾ ಅವರನ್ನ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದರೆ, ಇನ್ನೊಂದು ಕಡೆ ನಟ ವಿಜಯ್ ರಾಘವೇಂದ್ರ ಅವರು ತಮ್ಮ ಹೆಂಡತಿ ಅಗಲಿಕೆ ನಂತರ ನೋವಿನಲ್ಲಿ ಇದ್ದಾರೆ. ಹೀಗಿದ್ದಾಗಲೇ, ದಿಢೀರ್ 2ನೇ ಮದುವೆ ಚರ್ಚೆ ನಡುವೆ ಮೇಘನಾ ರಾಜ್ ಬಗ್ಗೆ ವಿಜಯ್ ರಾಘವೇಂದ್ರ...
ನಟಿ ಮೇಘನಾ ರಾಜ್ 2ನೇ ಮದುವೆ ಆಗುತ್ತಾರಾ... ಮೇಘನಾ ರಾಜ್ 2ನೇ ಮದುವೆ ಯಾವಾಗ... ಮೇಘನಾ ರಾಜ್ 2ನೇ ಮದುವೆ ಬಗ್ಗೆ ನಿರ್ಧಾರ ಏನು.. ಹೀಗೆಲ್ಲಾ ನಟಿ ಮೇಘನಾ ರಾಜ್ ಅವರ ಮದುವೆ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ. ಅದರಲ್ಲಿ ಕೆಲವರು ಬೇಕು ಬೇಕು ಅಂತಲೇ ಸುಳ್ಳು ಸುದ್ದಿ ಹಬ್ಬಿಸಿ ಸೋಷಿಯಲ್ ಮೀಡಿಯಾಗಳಲ್ಲಿ ಕಿಚ್ಚು ಹೊತ್ತಿಸಿದ್ದರು. ಅಲ್ಲದೆ ಇದೇ ವಿಚಾರವಾಗಿ ಭಾರಿ ದೊಡ್ಡ ಚರ್ಚೆ ನಡೆಯುವ ಸಮಯದಲ್ಲೇ, ದಿಢೀರ್ 2ನೇ ಮದುವೆ ಚರ್ಚೆ ನಡುವೆ ಮೇಘನಾ ರಾಜ್ ಬಗ್ಗೆ ವಿಜಯ್ ರಾಘವೇಂದ್ರ...

2ನೇ ಮದುವೆ ಚರ್ಚೆ ನಡುವೆ ಮೇಘನಾ ರಾಜ್...
ಕನ್ನಡ ಸಿನಿಮಾ ರಂಗದಲ್ಲಿ ಸಾಲು ಸಾಲು ದುರಂತಗಳು ನಡೆದು ಹೋಗುತ್ತಿವೆ. ಒಂದು ಕಡೆ ಕೆಲವು ನಟ & ನಟಿಯರು ತಮ್ಮ ಸಂಗಾತಿ ಕಳೆದುಕೊಂಡು ಕಣ್ಣೀರು ಹಾಕುವ ಸ್ಥಿತಿ ಇದೆ. ಇದರ ಜೊತೆಯಲ್ಲೇ ಹಲವು ದುರಂತಗಳು ಎದುರಾಗುತ್ತಿದ್ದು, ಕನ್ನಡ ಸಿನಿಮಾ ರಂಗದಲ್ಲಿ ಸಂಚಲನ ಸೃಷ್ಟಿ ಮಾಡುತ್ತಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸಂಚಲನ ಕೂಡ ಸೃಷ್ಟಿಯಾಗಿತ್ತು. ಹೀಗಿದ್ದಾಗಲೇ, 2ನೇ ಮದುವೆ ಚರ್ಚೆ ನಡುವೆ ನಟಿ ಮೇಘನಾ ರಾಜ್ ಬಗ್ಗೆ ನಟ ವಿಜಯ್ ರಾಘವೇಂದ್ರ ಹೇಳಿದ್ದೇನು ಗೊತ್ತಾ? ಮುಂದೆ ಓದಿ...
ಮೇಘನಾ ರಾಜ್ ಅವರು 2ನೇ ಮದುವೆ ಆಗುತ್ತಾರಾ? ಅನ್ನೋ ವಿಚಾರ ಪದೇ ಪದೇ ಚರ್ಚೆಗೆ ಬರ್ತಾನೆ ಇದೆ. ಮೇಘನಾ ರಾಜ್ ಅವರು ಚಿರಂಜೀವಿ ಸರ್ಜಾ ಅವರನ್ನ 2018ರಲ್ಲಿ ಮದುವೆ ಆಗಿದ್ದರು, ಆದರೆ ವಿಧಿ ಅವರ ಜೀವನದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಚಿರಂಜೀವಿ ಸರ್ಜ ಅವರು 2020 ಜೂನ್ 7 ಭಾನುವಾರ ತಮ್ಮ 39ನೇ ವಯಸ್ಸಲ್ಲಿ ಜೀವ ಬಿಟ್ಟಿದ್ದರು. ಆ ನಂತರವೇ, ನಟಿ ಮೇಘನಾ ರಾಜ್ ಅವರು 2ನೇ ಮದುವೆ ಆಗುತ್ತಾರಾ? ಅನ್ನೋ ಚರ್ಚೆ ಜೋರಾಗಿತ್ತು. ಇಷ್ಟೆಲ್ಲದರ ನಡುವೆ ನಟಿ ಮೇಘನಾ ರಾಜ್ ಅವರು ಖಡಕ್ ಆಗಿ ಮಾತನಾಡಿ ಪ್ರತಿಕ್ರಿಯೆ ನೀಡಿ, ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹಬ್ಬಿಸುವವರು ಬಾಯಿ ಮುಚ್ಚಿಕೊಳ್ಳುವಂತೆ ಮಾಡಿದ್ದರು. ಇಷ್ಟೆಲ್ಲದರ ನಡುವೆ ದಿಢೀರ್ ವಿಜಯ್ ರಾಘವೇಂದ್ರ...
ದಿಢೀರ್ ವಿಜಯ್ ರಾಘವೇಂದ್ರ...
ಹೌದು, ನಟ ವಿಜಯ್ ರಾಘವೇಂದ್ರ ಅವರು ತಮ್ಮ ಹೊಸ ಸಿನಿಮಾ 'ರಿಪ್ಪನ್ ಸ್ವಾಮಿ' ಪ್ರಮೋಷನ್ ಶುರು ಮಾಡಿದ್ದಾರೆ. ಇದೇ ಸಮಯದಲ್ಲಿ ಸಂದರ್ಶನ ಕೂಡ ನೀಡುತ್ತಿದ್ದು, ಇದೇ ವೇಳೆ ನಟಿ ಮೇಘನಾ ರಾಜ್ ಅವರೊಂದಿಗೆ 2ನೇ ಮದುವೆ ಬಗ್ಗೆ ಹಬ್ಬಿರುವ ಸುದ್ದಿಗಳ ಕುರಿತು ಕೂಡ ಪ್ರಶ್ನೆಗಳು ಎದುರಾಗಿವೆ. ಅದಕ್ಕೆ ಪ್ರತಿಕ್ರಿಯೆ ಕೂಡ ನೀಡಿರುವ ನಟ ವಿಜಯ್ ರಾಘವೇಂದ್ರ ಅವರು, ಈ ವಿಚಾರದ ಬಗ್ಗೆ ನಾನು ಎಂದಿಗೂ ರಿಯಾಕ್ಷನ್ ಕೊಟ್ಟಿಲ್ಲ. ನಾನು ಯಾರನ್ನೂ ಧೂಷಿಸುವುದು ಅಥವಾ ಯಾರನ್ನೋ ಬೈಯ್ಯುವ ನಿರ್ಧಾರ ಮಾಡುವುದಿಲ್ಲ. ನಾನು ಕೇಳಿಕೊಳ್ಳುವುದು ಇಷ್ಟೇ ನಿಮ್ಮ ಕಾಳಜಿಗೆ ಚಿರಋಣಿ & ನಿಮ್ಮ ಪ್ರೀತಿಗೆ ನಾನಾಗಲಿ ಅಥವಾ ನನ್ನ ಮಗ ಆಗಲಿ ಚಿರಋಣಿ....
ಸ್ಪಂದನಾ ನನ್ನ ಜೊತೆಯೇ ಇದ್ದಾರೆ, ನನ್ನ ಜೀವನದಲ್ಲಿ ಹೀಗೆ ಆಗುತ್ತೆ ಅನ್ನೋದು ನನಗೆ ಗೊತ್ತಿರಲಿಲ್ಲ. ಮುಂದೆ ಏನಾಗುತ್ತೆ ಅನ್ನೋದು ನನಗೆ ಗೊತ್ತಿಲ್ಲ. ಆದರೆ, ಈಗಿನ ಸ್ಥಿತಿಯಲ್ಲಿ ಜೀವನಕ್ಕಾಗಲಿ ಅಥವಾ ಮನಸ್ಸಿಗಾಗಲಿ ಯಾರೂ ಬರೋದಿಲ್ಲ ಎಂದಿದ್ದಾರೆ ನಟ ವಿಜಯ್ ರಾಘವೇಂದ್ರ ಅವರು. ಈ ಮೂಲಕ, ದಿಢೀರ್ 2ನೇ ಮದುವೆ ಚರ್ಚೆ ನಡುವೆ ಮೇಘನಾ ರಾಜ್ ಬಗ್ಗೆ ವಿಜಯ್ ರಾಘವೇಂದ್ರ ಸ್ಪಷ್ಟನೆ ನೀಡಿದ್ದು, ಅಲ್ಲದೆ ಸುಳ್ಳು ಸುದ್ದಿ ಹಬ್ಬಿಸುವವರ ಬಾಯಿ ಸೈಲೆಂಟ್ ಮಾಡಿದ್ದಾರೆ. ಮತ್ತೊಂದು ಕಡೆ ಮೇಘನಾ ರಾಜ್ ಅವರು ತಮ್ಮ ಗುಡ್ ಫ್ರೆಂಡ್ ಅನ್ನೋದನ್ನೂ ಜಗತ್ತಿಗೆ ಮನವರಿಕೆ ಮಾಡಿದ್ದಾರೆ. ಹೀಗಾಗಿ ಈ ವಿಚಾರ ಇಲ್ಲಿಗೆ ಬಿಟ್ಟುಬಿಡಿ... ಅಂತಾ ಕೂಡ ಅವರು ಪರೋಕ್ಷವಾಗಿ ಸಂದೇಶ ನೀಡಿದ್ದಾರೆ...
2ನೇ ಮದುವೆ ವಿಚಾರ ಪ್ರಸ್ತಾಪದ ಬಗ್ಗೆ...
ನಟಿ ಮೇಘನಾ ರಾಜ್ ಅವರು ಕೂಡ ಕೆಲವು ದಿನಗಳ ಹಿಂದೆ ತಮ್ಮ 2ನೇ ಮದುವೆ ಬಗ್ಗೆ ಮಹತ್ವದ ಹೇಳಿಕೆಯನ್ನ ನೀಡಿದ್ದರು. '2ನೇ ಮದುವೆ ಬಗ್ಗೆ ಜನ ಏನು ಆಲೋಚಿಸುತ್ತಾರೆ ಎಂದು ನಾನು ಯೋಚನೆ ಮಾಡಲ್ಲ. 'ಯಾವುದಾದರೂ ವ್ಯಕ್ತಿ ನನ್ನ ಜೀವನದಲ್ಲಿ ಬರುತ್ತಾರೋ ಗೊತ್ತಿಲ್ಲ. ಚಿರುಗೆ ಆ ವ್ಯಕ್ತಿ ಸರಿ ಅಂತಾ ಅನಿಸಿದರೆ ಆಗ ಚಿರು ಅದನ್ನ ಮಾಡಿಸುತ್ತಾರೆ. ಯಾವ ವ್ಯಕ್ತಿಯೂ ಸರಿ ಇಲ್ಲ ಅಂತಾ ಅನಿಸಿದರೆ ಚಿರು ಕಳಿಸೋದೆ ಇಲ್ಲ. ಆಗ ನಾನು ಹೀಗೇ ಇದ್ದು ಬಿಡುತ್ತೇನೆ' ಎನ್ನುವ ಮೂಲಕ ನಟಿ ಮೇಘನಾ ರಾಜ್ ತಮ್ಮ 2ನೇ ಮದುವೆ ಬಗ್ಗೆ ಮಾತನಾಡಿದ್ದು ಅಲ್ಲದೆ ಚಿರು ಅಂದ್ರೆ ಚಿರಂಜೀವಿ ಸರ್ಜಾ ಅವರನ್ನ ಈಗಲೂ ಎಷ್ಟು ಪ್ರೀತಿ ಮಾಡುತ್ತಾರೆ ಎಂಬುದನ್ನ ತಿಳಿಸಿದ್ದರು. ಈ ಮೂಲಕ ನಟಿ ಮೇಘನಾ ರಾಜ್ ಅವರು ತಮ್ಮ 2ನೇ ಮದುವೆ ಚರ್ಚೆಗು ಮುಕ್ತಿ ಹಾಡಿದ್ದರು. ಇಷ್ಟೆಲ್ಲಾ ಇದ್ದರೂ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಕೆಲವರು ಸುಳ್ಳು, ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಆರೋಪ ಕೇಳಿಬರುತ್ತಲೇ ಇದೆ...












Click it and Unblock the Notifications