ವಿಜಯ್ ದೇವರಕೊಂಡ – ರಶ್ಮಿಕಾ ಮಂದಣ್ಣ ಮದುವೆ ಬಳಿಕ ಪೋಸ್ಟ್ ವೈರಲ್; ಅತ್ತಿಗೆಯ ಬಗ್ಗೆ ಆನಂದ್ ದೇವರಕೊಂಡ ಭಾವುಕ ಸಂದೇಶ

Rashmika Mandanna: ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರ ವಿವಾಹ ಅದ್ಧೂರಿಯಾಗಿ ನೆರವೇರಿದೆ. ಸೋಷಿಯಲ್ ಮೀಡಿಯಾದಲ್ಲಿ ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರ ಫೋಟೋಗಳು ವೈರಲ್ ಆಗುತ್ತಿವೆ. ಇದೀಗ ವಿಜಯ್ ದೇವರಕೊಂಡ ಅವರ ಸಹೋದರ ಆನಂದ್ ದೇವರಕೊಂಡ ಅವರು ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ವಿಶೇಷ ಬರಹವೊಂದನ್ನು ಹಂಚಿಕೊಂಡಿದ್ದು, ಈ ಬರಹವು ವೈರಲ್ ಆಗುತ್ತಿದೆ. ಇನ್‌ಸ್ಟಾಗ್ರಾಮ್‌ನ ಈ ಬರಹ ಸಹ ಇದೀಗ ವೈರಲ್ ಆಗುತ್ತಿದೆ. ಅತ್ತಿಗೆಯ ಬಗ್ಗೆ ಆನಂದ್ ದೇವರಕೊಂಡ ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ.

ನಾನು ಎಲ್ಲಿಗೇ ಹೋದರೂ ಒಂದು ಪ್ರಶ್ನೆಯನ್ನು ಅಭಿಮಾನಿಗಳು ಯಾವಾಗಲೂ ಕೇಳುತ್ತಿದ್ದರು. ಅದೇ ಅತ್ತಿಗೆ ಹೇಗೆ ಇದ್ದಾರೆ ಎನ್ನುವುದು. ಆಗ ನನಗೆ ಏನು ಹೇಳಬೇಕು ಯಾವ ರೀತಿ ಉತ್ತರಿಸಬೇಕು ಎಂದು ತಿಳಿಯುತ್ತಿರಲಿಲ್ಲ. ಆದರೆ, ಇದೀಗ ನನ್ನ ಅಣ್ಣನ ಮದುವೆ ಆಗಿದೆ. ಒಳ್ಳೆ ವ್ಯಕ್ತಿಯನ್ನೇ ನನ್ನ ಅಣ್ಣ ವಿವಾಹ ಆಗಿದ್ದಾರೆ ಎಂದು ವಿಜಯ್ ದೇವರಕೊಂಡ ಅವರ ಸಹೋದರ ಆನಂದ್ ದೇವರಕೊಂಡ ಅವರು ಬರೆದುಕೊಂಡಿದ್ದಾರೆ. ಮನೆಗೆ ಅತ್ತಿಗೆ ಬಂದಿರುವ ಖುಷಿಯನ್ನು ಹಂಚಿಕೊಂಡಿರುವ ಆನಂದ್ ದೇವರಕೊಂಡ ಅವರು, ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರಿಗೆ ಶುಭಕೋರಿದ್ದಾರೆ.

Rashmika Mandanna

ಅತ್ತಿಗೆ ಬಗ್ಗೆ ಫ್ಯಾನ್ಸ್‌ ಯಾವಾಗಲೂ ಕೇಳುತ್ತಿದ್ದರು

ಇನ್ನು ನಾನು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಫ್ಯಾನ್ಸ್‌ ಅದೊಂದು ವಿಷಯವನ್ನು ತಪ್ಪದೆ ಕೇಳುತ್ತಿದ್ದರು. ಅಲ್ಲೊಂದು ಕೂಗು ಯಾವಾಗಲೂ ಇರ್ತಿತ್ತು. ಅತ್ತಿಗೆ ಹೇಗಿದ್ದಾರೆ ಅಂತ ಕೇಳುವುದನ್ನು ಫ್ಯಾನ್ಸ್‌ ಮರೆಯುತ್ತಿರಲಿಲ್ಲ. ಆಗೆಲ್ಲ ಏನು ಹೇಳುವುದು ಎಂದೇ ತಿಳಿಯುತ್ತಿರಲಿಲ್ಲ. ಈಗ ಅಣ್ಣನ ಮದುವೆ ಆಗಿದೆ. ಒಳ್ಳೆ ವ್ಯಕ್ತಿಯನ್ನೇ ಅವರು ವಿವಾಹವಾಗಿದ್ದಾರೆ. ಇವರಿಬ್ಬರು ಜೀವನ ಪರ್ಯಂತ ನಗುತ್ತಿರಲಿ, ಜೀವನವಿಡಿ ಜೊತೆಯಾಗಿಯೇ ಇದೇ ರೀತಿ ಸಂತೋಷವಾಗಿ ಇರಲಿ ಎಂದು ಆನಂದ್ ದೇವರಕೊಂಡ ಅವರು ಶುಭ ಹಾರೈಸಿದ್ದಾರೆ.

ನೆಟ್ಟಿಗರು ಹೇಳಿದ್ದೇನು

ಇನ್ನು ಈ ಪೋಸ್ಟ್‌ಗೆ ನೆಟ್ಟಿಗರು ಸಹ ಶುಭಕೋರಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ಪೋಸ್ಟ್‌ ಬರೋಬ್ಬರಿ 3.5 ಮಿಲಿಯನ್ ಲೈಕ್ ಗಿಟ್ಟಿಸಿಕೊಂಡಿದೆ. ಯಾವುದೇ ವಿಚಾರವಾದರೂ ಶಾಶ್ವತವಾಗುವವರೆಗೂ ಖಾಸಗಿಯಾಗಿ ಇರಿಸುವುದು ಒಳ್ಳೆಯದು ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಗೀತ ಗೋವಿಂದಂ ಒಂದು ಯಶಸ್ವಿ ಪ್ರೇಮಕಥೆಯಾಗಿತ್ತು ಎಂದೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಇದು ಮದುವೆ ಅಲ್ಲ ಅಭಿಮಾನಿಗಳೆ ಹಬ್ಬವೇ ಆಗಿದೆ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರೊಂದಿಗೆ ಇರುವ ಫೋಟೋವನ್ನು ವಿಜಯ್ ದೇವರಕೊಂಡ ಅವರ ಸಹೋದರ ಆನಂದ ದೇವರಕೊಂಡ ಅವರು ಹಂಚಿಕೊಂಡಿದ್ದು, ಈ ಫೋಟೋಗಳಿಗೆ ಕಾಮೆಂಟ್‌ಗಳ ಸುರಿಮಳೆ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+