ರಶ್ಮಿಕಾ ಮಂದಣ್ಣಾ ಜತೆ ನಟಿಸಲು ಇಷ್ಟ! ನಟಿಯ ಬ್ಯೂಟಿ, ಕೆಮಿಸ್ಟ್ರಿ ಬಗ್ಗೆ ವಿಜಯ್ ದೇವರಕೊಂಡ ಇಂಟ್ರಸ್ಟಿಂಗ್ ಹೇಳಿಕೆ
Rashmika Mandanna: ಅರ್ಜುನ್ ರೆಡ್ಡಿ ಸಿನಿಮಾ ಖ್ಯಾತಿಯ ನಟ ವಿಜಯ್ ದೇವರಕೊಂಡ ಅವರು ತಮ್ಮ ನಟನೆ, ಸಮರ್ಪಣಾ ಭಾವ, ಹೊಸ ಹೊಸ ಕಥೆ ಆಯ್ಕೆಗಳಲ್ಲಿ ಭಿನ್ನವಾಗಿ ನಿಲ್ಲುತ್ತಾರೆ. ನಟಿ ರಶ್ಮಿಕಾ ಮಂದಣ್ಣ ಅವರೊಂದಿಗೆ ನಟಿಸಿರುವ ಸಿನಿಮಾಗಳು ಹೆಸರು ಮಾಡಿವೆ. ವಿಜಯ್ ಸದ್ಯ ಒಂದು ಹಿಟ್ ಸಿನಿಮಾಗಾಗಿ ಕಾಯುತ್ತಿದ್ದಾರೆ. ಅವರ ನಟನೆಯೇ 'ಕಿಂಗ್‌ಡಮ್' ಇದೇ ಮೇ 30ರಂದು ತೆರೆಗೆ ಬರಲಿದೆ. ಈ ಸಿನಿಮಾ ಪ್ರಚಾರ ವೇಳೆ ಇತ್ತೀಚೆಗೆ 'ಫಿಲ್ಮ್‌ಫೇರ್' ಜೊತೆಗೆ ಸಂದರ್ಶನದಲ್ಲಿ ಮಾತನಾಡಿದ್ದಾರೆ. ನಟಿ ರಶ್ಮಿಕಾ ಜೊತೆಗಿನ ಸಂಬಂಧ, ಅವರೊಂದಿಗೆ ಮತ್ತೆ ಸಿನಿಮಾ ಮಾಡುವ ಕುರಿತು ಮೌನ ಮುರಿದಿದ್ದಾರೆ.
ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಅವರು ಮತ್ತೆ ನಟ ವಿಜಯ್ ದೇವರಕೊಂಡ ಜೊತೆಗೆ ಪರದೇ ಹಂಚಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಈ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಮಾತು ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ ಕೇಳಿ ಬರುತ್ತಿದೆ. ಚಿತ್ರರಂಗದಿಂದ ದೂರು ಉಳಿದಾಗ ಈ ಜೋಡಿ ಹೊರ ದೇಶಗಳಿಗೆ ಸುತ್ತುತ್ತಾರೆ, ಹೋಟೆಲ್‌ಗಳಲ್ಲಿ ಭೇಟಿ ಆಗುತ್ತಾರೆ ಎಂಬುದನ್ನು ಅಭಿಮಾನಿಗಳು ವೈರಲ್ ಮಾಡುತ್ತಲೇ ಇರುತ್ತಾರೆ. ಫೋಟೋ ಶೇರ್ ಮಾಡಿಕೊಳ್ಳುತ್ತಾರೆ.

ಡೇಟಿಂಗ್ ಬಗ್ಗೆ ಒಪ್ಪಿಕೊಂಡ್ರಾ ವಿಜಯ್
ನಟಿ ರಶ್ಮಿಕಾ ಮಂದಣ್ಣ ಅವರನ್ನು ಹೊಗಳಿದ ವಿಜಯ್ ಅವರೊಂದಿಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲು ಬಯಸಿದ್ದಾರೆ. ಈ ಜೋಡಿ ಈ ಹಿಂದೆ 'ಗೀತಾ ಗೋವಿಂದಂ' ಮತ್ತು 'ಡಿಯರ್ ಕಾಮ್ರೇಡ್' ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. ಇದನ್ನು ಪ್ರಸ್ತಾಪಿಸಿದ ಅವರು, ನಟಿಯ ಜೊತೆಗಿನ ತಮ್ಮ ಬಾಂಧವ್ಯ, ಹೌದು ತಾವು ಡೇಟಿಂಗ್ ಮಾಡುತ್ತಿದ್ದೇವೆ ಎಂದು ಒಪ್ಪಿಕೊಳ್ಳಲಿಲ್ಲ. ಗೌಪ್ಯವಾಗಿ ಇರಿಸಿದರು.
ನಟಿ ರಶ್ಮಿಕಾ ಹೆಚ್ಚು ಶ್ರಮಿಜೀವಿ, ದೃಢ ನಿಶ್ಚಯದಿಂದ ಮೇಲೆ ಬಂದವರು. ಸತತ ಪ್ರಯತ್ನ, ಅರ್ಪಣೆ ಮನೋಭಾವದಿಂದ ಈವರೆಗೆ ಬಂದಿದ್ದಾರೆ. ಇತರರ ಬಗ್ಗೆ ಕಾಳಜಿ ಹೊಂದಿರುವ ಜೊತೆಗೆ ಅವರ ಖುಷಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ರಶ್ಮಿಕಾ ಕರುಣಾಮಯಿ, ತಮ್ಮ ಕೋಸ್ಟಾರ್, ಸ್ನೇಹಿತೆ ಎಂದು 'ಛಾವಾ' ನಟಿಯ ಗುಣಗಳನ್ನು ಹೊಗಳಿದರು. ಅವರ ಈ ಗುಣಗಳು ಹೀಗೆ ಮುಂದುವರಿಯಬೇಕು.

ನಾನು ರಶ್ಮಿಕಾ ಜೊತೆ ಎರಡೇ ಸಿನಿಮಾ ಮಾಡಿದ್ದು, ಸಾಕಷ್ಟು ಸಿನಿಮಾಗಳನ್ನು ಮಾಡಿಲ್ಲ. ಅವರೊಂದಿಗೆ ಇನ್ನಷ್ಟು ಸಿನಿಮಾ ಮಾಡುವ ಮನಸ್ಸಿದೆ. ಅವರೊಬ್ಬ ಉತ್ತಮ ನಟಿ, ಸುಂದರ ಮಹಿಳೆಯೂ ಹೌದು. ಇಬ್ಬರ ಕೆಮೆಸ್ಟ್ರಿ ಸಮಸ್ಯೆಯಾಗಬಾರದು ಎಂದು ಅವರು ಹೇಳಿದ್ದಾರೆ.
ಫ್ಯಾನ್ಸ್ ಹೇಳೋದೇನು?
ವಿಜಯ್ ದೇವರಕೊಂಡ ಅವರ ಸಹೋದರ 'ಆನಂದ ದೇವಕೊಂಡ ಹಾಗೂ ನಟಿ ವೈಷ್ಣವಿ ಚೈತನ್ಯ' ಅವರೊಂದಿಗೆ 'ಬೇಬಿ' ಸಿನಿಮಾಲದಲ್ಲಿ ನಟಿಸಿದ್ದರು. ಅವರ ನಟನೆಯ ಮತ್ತೊಂದು ಸಿನಿಮಾ ತೆರೆಗೆ ಬರುತ್ತಿದ್ದು, ನಟಿ ರಶ್ಮಿಕಾ ಶುಭಕೋರಿದ್ದಾರೆ. ಸಿನಿಮಾಗೆ ಕ್ಲಾಪ್ ಮಾಡಿದ್ದಾರೆ. ಹಬ್ಬದ ಹರಿದಿನಗಳಲ್ಲಿ ನಟ ದೇವರಕೊಂಡ ಅವರ ಮನೆಯಲ್ಲಿ ನಟಿ ರಶ್ಮಿಕಾ ಇರುತ್ತಾರೆ. ಹಬ್ಬ ಆಚರಿಸುತ್ತಾರೆ. ಡೇಟಿಂಗ್ ಮಾಡುತ್ತಿರುವ ಪಕ್ಕ ಎನ್ನುತ್ತಿದ್ದಾರೆ. ಅಭಿಮಾನಿಗಳು.












Click it and Unblock the Notifications