Puspa 2: ರಶ್ಮಿಕಾ-ಅಲ್ಲು ಅರ್ಜುನ್‌ರ 'ಪುಷ್ಪ-2' ಕ್ಲೈಮ್ಯಾಕ್ಸ್ ಸೀನ್ ಲೀಕ್, ವಿಡಿಯೋ ವೈರಲ್

ಬೆಂಗಳೂರು, ಜುಲೈ 31: ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಹಾಗೂ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ 'ಪುಷ್ಪ- 2 ದಿ ರೂಲ್' ಸಿನಿಮಾವು ಆಗಸ್ಟ್‌ಗೆ ಬದಲಾಗಿ ಡಿಸೆಂಬರ್ 06ರಂದು ಬಿಡುಗಡೆ ಆಗಲಿದೆ. ಕಾರಣವೇನೆಂದರೆ ಚಿತ್ರೀಕರಣ ಬಾಕಿ ಇರುವುದು. ಸದ್ಯ ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ಚಿತ್ರತಂಡ ಬ್ಯೂಸಿ ಇದ್ದರೆ, ಇತ್ತ ಆ ಚಿತ್ರೀಕರಣದ ವಿಡಿಯೋಗಳು ಲೀಕ್ ಆಗಿವೆ.

ಹೌದು, ನೀವು ನೋಡಿರದ ಪುಷ್ಪ 2 ಸಿನಿಮಾದ ಒಂದಷ್ಟು ಸೀನ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ಕಾರಣ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದೆ. ನಟಿ ರಶ್ಮಿಕಾ ಮಂದಣ್ಣಾ ಶ್ರೀವಲ್ಲಿ ಪಾತ್ರ ಹಾಗೂ ಅಲ್ಲು ಅರ್ಜುನ್ ಅವರ ಪುಷ್ಪ ಪಾತ್ರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Video viral of Pushpa 2 Climax Fight Scene Leaked Rashmika Mandanna-Allu Arjun acted in That

ಸಿನಿಮಾ ಟೀಂ ಪುಷ್ಪಾ ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆಸಿತ್ತು. ಇಲ್ಲಿ ಅಲ್ಲು ಅರ್ಜುನ್ ಅವರ ಫೈಟಿಂಗ್ ದೃಶ್ಯಗಳಿವೆ. ಇದಕ್ಕೆ ಕ್ರೇನ್, ಇನ್ನಿತರ ಸಲಕರಣೆ ಬಳಿಸಿ ಶೂಟ್ ಮಾಡಲಾಗುತ್ತಿದೆ. ಇದಕ್ಕಾಗಿ ಬೃಹತ್ ಸೆಟ್ ನಿರ್ಮಿಸಲಾಗಿದೆ. ಇದೀಗ ಇಲ್ಲಿನ ಶೂಟಿಂಗ್ ಸೀನ್ ಗಳು ಲೀಕ್ ಆಗಿವೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತ ವಿಡಿಯೋ ವೈರಲ್ ಆಗುತ್ತಿದೆ.

ಸುಕುಮಾರ್ ನಿರ್ದೇಶನದ ಪುಷ್ಪ 2 ಸೀಕ್ವೆಲ್ ಆಗಸ್ಟ್ 15 ರಂದು ಬಿಡುಗಡೆ ಮಾಡಲು ಯೋಜಿಸಲಾಗಿತ್ತು, ಹೆಚ್ಚುವರಿ ಪೋಸ್ಟ್-ಪ್ರೊಡಕ್ಷನ್ ಕೆಲಸಗಳ ಸಂಬಂಧ ಬಿಡುಗಡೆಯನ್ನು ಡಿಸೆಂಬರ್‌ಗೆ ಮುಂದೂಡಲಾಯಿತು. ಈ ಸಿನಿಮಾ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅವರಿಗೆ ನೀರ್ಣಾಯಕ ಸಿನಿಮಾ ಎನ್ನಲಾಗುತ್ತದೆ.

Video viral of Pushpa 2 Climax Fight Scene Leaked Rashmika Mandanna-Allu Arjun acted in That

ವಿಡಿಯೋ ಲೀಕ್: ಡಿಲೀಟ್‌ಗೆ ಒತ್ತಾಯ

ಈ ಕ್ಲೈಮ್ಯಾಕ್ಸ್ ಫೈಟಿಂಗ್ ವಿಡಿಯೋ ಲೀಕ್ ಆಗಿದ್ದು, ಈ ಸೋರಿಕೆಯಾದ ವೀಡಿಯೊ ವಿವಾದ ಹುಟ್ಟುಹಾಕಿದೆ. ಅಲ್ಲು ಅರ್ಜುನ್ ಅಭಿಮಾನಿಗಳು ಸೇರಿದಂತೆ ನೆಟ್ಟಿಗರು ಈ ವಿಡಿಯೋ ಡಿಲೀಟ್ ಮಾಡುವಂತೆ ಒತ್ತಾಯಿಸಿದ್ದಾರೆ. ಈ ಚಿತ್ರವು ಆನ್‌ಲೈನ್‌ನಲ್ಲಿ ಚಿತ್ರದ ಕ್ಲೈಮ್ಯಾಕ್ಸ್‌ನ ವಿಡಿಯೋ ಕಾಣಿಸಿಕೊಂಡ ನಂತರ ಮತ್ತೊಮ್ಮೆ ಸುದ್ದಿ ಮಾಡುತ್ತಿದೆ.

ವಿಡಿಯೋದಲ್ಲಿ ನಟನ ಮುಖವು ಗೋಚರಿಸಿಲ್ಲ. ಇಲ್ಲಿ ಅಲ್ಲು ಅರ್ಜುನ್ ಆಗಲಿ, ರಶ್ಮಿಕಾ ಆಗಲಿ ಕಾಣಿಸಿಕೊಂಡಿಲ್ಲ. ಇದು ಪುಷ್ಪ 2 ಕ್ಲೈಮ್ಯಾಕ್ಸ ಶಿರ್ಷಿಕೆಯಡಿ ವಿಡಿಯೋ ಕ್ಲಿಪ್ ಹಂಚಿಕೊಳ್ಳಲಾಗಿದೆ. ಸದ್ಯ ವಿಡಿಯೋ ಶೇರ್ ಮಾಡಿದವರ ವಿರುದ್ಧ ಅಭಿಮಾನಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+