Jyothi Rai: ಧೈರ್ಯ ಇದ್ರೆ ಇದನ್ನು ವೈರಲ್ ಮಾಡಿ ನೋಡೋಣ: ಜ್ಯೋತಿ ರೈ
ಬೆಂಗಳೂರು, ಮೇ 11: ಇತ್ತೀಚೆಗೆ ಎಡಿಟೆಟ್ ಮಾಡಲಾಗಿದ್ದ ಖಾಸಗಿ ಫೋಟೋಗಳ ಮೂಲಕ ಸುದ್ದಿಯಾಗಿದ್ದ ಕನ್ನಡ ಸೀರಿಯಲ್ ನಟಿಯಾದ ಜ್ಯೋತಿ ರೈ (Jyothi Rai) ಅವರು ಅಕ್ಷಯ ತೃತೀಯ ದಿನ ಒಂದೊಳ್ಳೆ ಕೆಲಸ ಮಾಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಧೈರ್ಯ ಇದ್ದರೆ ಈ ಕೆಲಸವನ್ನು ವೈರಲ್ ಮಾಡಿ ಎಂದು ಹೇಳಿದ್ದಾರೆ.
ಬೇಡದ ವಿಷಯಗಳು, ವಿಡಿಯೋಗಳನ್ನು ವೈರಲ್ ಮಾಡುವವರು ಇಂತಹ ಕೆಲಸಗಳನ್ನು ವೈರಲ್ ಮಾಡಿ. ಹೆಚ್ಚು ಪ್ರಸಾರ ಮಾಡಿ ಎಂದಿದ್ದಾರೆ. ಈ ಮೂಲಕ ಇತ್ತೀಚೆಗೆ ವೈರಲ್ ಆಗಿದ್ದ ರೋಮ್ಯಾಂಟಿಕ್ ಫೋಟೋಗಳು ಇವು ಜ್ಯೋತಿ ರೈ ಅವರದ್ದೆ ಎಂದು ಪುಕಾರು ಮಾಡಿದವರಿಗೆ ನಟಿ ಚಾಟಿ ಬೀಸಿದ್ದಾರೆ.

ಅಕ್ಷಯ ತೃತಿಯ ದಿನ ಕಲಾವಿದರೊಬ್ಬರಿಗೆ ನಟಿ ಜ್ಯೋತಿ ರೈ ಅವರು ಮಾಡಿದ ಸಹಾಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸ್ವತಃ ನಟಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ಅಕ್ಷಯ ತೃತೀಯ ದಿನ ನಟಿಯ ಸಹಾಯಹಸ್ತ
ನಟನೆ ಜೊತೆಗೆ ತಮ್ಮ ಸೌಂದರ್ಯದ ಮೂಲಕ, ಹಾಟ್ ಫೋಟೊಗಳನ್ನು ಶೇರ್ ಮಾಡುವ ಸಂಚಲನ ಸೃಷ್ಟಿಸಿದ್ದ ಸಿರಿಯಲ್ ನಟಿ ಜ್ಯೋತಿ ರೈ ಅವರು ಟಾಲಿವುಡ್‌ನಲ್ಲೂ ಬಣ್ಣ ಹಚ್ಚಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಇರುವ ಇವರು ಫೋಟೋಗಳು ಹೆಚ್ಚು ಸುದ್ದು ಮಾಡುತ್ತಿವೆ.
ಇದೀಗ ಅವರು ಅಕ್ಷಯ ತೃತೀಯ ದಿನ ಚಿನ್ನಾಭರಣ ಕೊಳ್ಳದೇ, ಪದ್ಮಶ್ರೀ ಪುರಸ್ಕೃತ ಮತ್ತು 12 ಹಂತದ ಕಿನ್ನರ ಕಲಾವಿದ ದರ್ಶನಂ ಮೊಗಿಲಯ್ಯ ಅವರಿಗೆ ಆರ್ಥಿಕ ನೆರವು ನೀಡಿದ್ದಾರೆ. ನಟಿಯ ಈ ಸಹಾಯ ಗುಣಕ್ಕೆ ನೆಟ್ಟಿಗರಿಂದ ಭಾರೀ ಮೆಚ್ಚಿಗೆ ವ್ಯಕ್ತವಾಗಿದೆ.

ನಿಮ್ಮಷ್ಟ ಮನಸ್ಸು ಸುಂದರ : ಮೊಗಿಲಯ್ಯ
ಜ್ಯೋತಿ ರೈ ಅವರು 50 ಸಾವಿರ ರೂಪಾಯಿ ಹಣವನ್ನು 12 ಹಂತದ ಕಿನ್ನರ ಕಲಾವಿದ ದರ್ಶನಂ ಮೊಗಿಲಯ್ಯ ನೀಡಿದ್ದಾರೆ. ಈ ಕುರಿತ ವಿಡಿಯೋ ವೈರಲ್ ಆಗಿದೆ. ಹಣ ನೀಡಿ ಏನು ಮಾತನಾಡದೇ ಸುಮ್ಮನೆ ಮುಗುಳ್ನಕ್ಕಿರುವ ಜ್ಯೋತಿ ರೈ ಅವರನ್ನು ನೀವು ನೋಡಬಹುದು. ಸಹಾಯ ಪಡೆದವರು ನಟಿಗೆ ಕೃತಜ್ಞತೆ ಅರ್ಪಿಸಿದ್ದಾರೆ. ನಿಮ್ಮಷ್ಟೇ ನಿಮ್ಮ ಮನಸ್ಸು ಸುಂದರವಾಗಿದೆ ಎಂದು ಮೊಗಿಲಯ್ಯ ಹೇಳಿದ್ದಾರೆ.
ಇಂತಹ ವಿಷಯಗಳಿಗೆ ಆದ್ಯತೆ ಕೊಡಿ
ಸಾಮಾಜಿಕ ಜಾಲತಾಣದಲ್ಲಿ ಇಲ್ಲಸಲ್ಲದ, ಬೇಡವಾದ ವಿಚಾರ, ವಿಷಯಗಳನ್ನು ಹೆಚ್ಚು ಪ್ರಸಾರ ಮಾಡುವವರು ಇದೀಗ ಇದನ್ನು ಪ್ರಸಾರ ಮಾಡಿ. ಸದ್ಯಕ್ಕೆ ಇಷ್ಟು ಸಹಾಯ ಮಾಡಿದ್ದೇನೆ. ಮುಂದೆನೂ ಇತರರಿಗೆ, ಅಗತ್ಯವಿರುವವರಿಗೆ ಇನ್ನು ಸಹಾಯ ಮಾಡಬೇಕೆಂದುಕೊಂಡಿದ್ದೇನೆ. ನೀವ್ಯಾರಾದರೂ ಸಹಾಯ ಮಾಡುವವರಿದ್ದರೆ ಮುಂದೆ ಬನ್ನಿ. ಒಂದು ಒಳ್ಳೆಯ ಕೆಲಸದ ವಿಡಿಯೋ ವೈರಲ್ ಮಾಡುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇಂತಹ ವಿಷಯಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡಿ ಎಂದು ತಿಳಿ ಹೇಳಿದ್ದಾರೆ.
ಇತ್ತೀಚೆಗೆ ಕಿಸ್ಸಿಂಗ್ ಮತ್ತು ಬೆಡ್ ಮೇಲೆ ಮಲಗಿರುವ ಒಂದೆರಡು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇವು ಜ್ಯೋತಿ ರೈ ಅವರದ್ದೆ ಎಂದು ಬಿಂಬಿಸಲಾಗಿತ್ತು. ಈ ಕುರಿತು ಸ್ಪಷ್ಟನೆ ನೀಡಿದ್ದ ನಟಿ ಜ್ಯೋತಿ ರೈ ಅವರು, ಇದು ಬೇಕು ಅಂತಲೆ ಮಾಡಿರುವ ಎಡಿಟೆಡ್ ಫೋಟೋಗಳು. ಇವು ತಮ್ಮವಲ್ಲ ಎಂದು ಹೇಳಿದ್ದರು. ಆದ ಬೆಳವಣಿಗೆ ವಿರುದ್ಧ ಅವರು ಬೇಸರ ವ್ಯಕ್ತಪಡಿಸಿದ್ದರು.
ಸೈಬರ್ ಪೊಲೀಸರಿಗೆ ದೂರು
ಸದ್ಯ ಈ ಜನಪ್ರಿಯ ನಟಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುತ್ತಾರೆ. ಆಗಾಗ ತಮ್ಮ ಚೆಂದದ ಮತ್ತು ಹಾಟ್ ಫೋಟೋಗಳನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಹುಬ್ಬೇರಿಸುವಂತೆ ಮಾಡುತ್ತಾರೆ. ಕನ್ನಡ ಸೇರಿದಂತೆ ಬೇರೆ ಭಾಷೆಯ ಧಾರವಾಹಿಗಳಲ್ಲೂ ಬಹುಬೇಡಿಕೆ ಇರುವ ನಟಿಯಾಗಿದ್ದಾರೆ. ಕೆಲವು ಸಿನಿಮಾಗಳಲ್ಲೂ ಇವರು ಬಣ್ಣ ಹಚ್ಚಿಸಿದ್ದಾರೆ.
ಅಶ್ಲೀಲ ವಿಡಿಯೋ/ಫೋಟೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಜ್ಯೋತಿ ರೈ ಅವರು ಅಸಮಾಧಾನ ಹೊರ ಹಾಕಿದ್ದಲ್ಲದೇ ಅವರು, ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. ಮಾನ ಹಾನಿಗೆ ಯತ್ನಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ನೆಟ್ಟಿಗರ ಮೇಲೆ ಸವಾಲೆಸೆದ ನಟಿ ಜ್ಯೋತಿ ರೇ ಅವರು, ಭಾನುವಾರ ದೇವರ ದರ್ಶನ ಪಡೆದಿದ್ದಾರೆ. ತಿರುಪತಿ ಹಾಗೂ ಶ್ರೀಕಾಳಹಸ್ತಿ ದೇಗುಲಕ್ಕೆ ಭೇಟಿ ಕೊಟ್ಟಿರುವ ಅವರು ವಿಶೇಷ ಪೂಜೆಗಳನ್ನು ಸಲ್ಲಿಸಿ ಪ್ರಾರ್ಥಿಸಿದ್ದಾರೆ. ಪತಿ ಜೊತೆ ಕಾರಿನಲ್ಲಿ ತೆರಳಿದ್ದ ಅವರು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ದೇವಸ್ಥಾನದಲ್ಲಿ ಜ್ಯೋತಿ ರೈ ಅವರನ್ನು ನೋಡಿದ ಅಭಿಮಾನಿಗಳು ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಜೊತೆಗೆ ನಟಿ ಸ್ವತಃ ಒಂದಷ್ಟು ಪ್ರಕೃತಿ ಸೌಂದರ್ಯದ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ. ಇತ್ತೀಚೆಗೆ ಆಂಧ್ರ ಪ್ರದೇಶದ ಚುನಾವಣೆ ಸಂಬಂಧ ಎಲ್ಲರೂ ಮತ ಚಲಾಯಿಸುವಂತೆ ನಟಿ ಜ್ಯೋತಿ ರೈ ಮತದಾನ ಜಾಗೃತಿ ಮೂಡಿ ಸ್ಟೋರಿ ಶೇರ್ ಮಾಡಿಕೊಂಡಿದ್ದರು.












Click it and Unblock the Notifications