Varturu Santhosh: ಹಳ್ಳಿಕಾರ್ ಒಡೆಯನ ಮನೆಗೆ ಬಂದ ತುಕಾಲಿ ಸಂತೋಷ್‌ಗೆ ಭರ್ಜರಿ ಗಿಫ್ಟ್: ಇದರ ವಿಶೇಷತೆ ಏನು ಗೊತ್ತಾ?
ಬೆಂಗಳೂರು, ಫೆ.05: ಇತ್ತೀಚೆಗೆ ಕೊನೆಗೊಂಡ ಬಿಗ್ಬಾಸ್ ಕನ್ನಡ ಸೀಸನ್ 10 ಈವರೆಗಿನ ಅತ್ಯಂತ ಜನಪ್ರಿಯ ಸೀಸನ್. ಸಾಮಾಜಿಕ ಮಾಧ್ಯಮಗಳ ಮೂಲಕ ಸಕತ್ ಖ್ಯಾತಿ ಮತ್ತು ವೋಟಿಂಗ್‌ನಲ್ಲಿ ಹೆಚ್ಚು ಜನರು ಪಾಲ್ಗೊಂಡ ಶೋ ಇದಾಗಿದೆ. ಈ ಸೀಸನ್‌ನಲ್ಲಿ ಹಲವು ಮಂದಿ ಜನರ ಫೇವರಿಟ್ ಆಗಿದ್ದಾರೆ. ಅದರಲ್ಲಿ ಸಂತು- ಪಂತು ಎಂದೇ ಫೇಮಸ್ ಆದವರು, ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್.
ಪ್ರತಿ ಬಾರಿ ಲವ್ ಸ್ಟೋರಿಗಳಿಂದ ಫೇಮಸ್ ಆಗುತ್ತಿದ್ದ ಬಿಗ್ ಬಾಸ್ ಈ ಬಾರಿ ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಸ್ನೇಹದಿಂದ ಹೆಚ್ಚು ಜನರನ್ನು ಆಕರ್ಷಿಸಿದೆ. ಇಬ್ಬರ ನಡುವಿನ ಸ್ನೇಹಕ್ಕೆ ಜನ ಮನಸೋತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಮಾತ್ರವಲ್ಲ... ಹೊರಗೆ ಹೋದ ಮೇಲೂ ಸ್ನೇಹ ಮುಂದುವರೆಸಿಕೊಂಡು ಹೋಗುವುದಾಗಿ ಹೇಳಿದ್ದ ಇವರು ಅದನ್ನೇ ಮಾಡುತ್ತಿದ್ದಾರೆ. ಅದಕ್ಕೆ ಮತ್ತೊಂದು ಘಟನೆ ಸಾಕ್ಷಿಯಾಗಿದೆ.

ಸಂತು- ಪಂತು ಸ್ನೇಹಕ್ಕೆ ಸಾಕ್ಷಿಯಾಯ್ತು ಈ ಘಟನೆ!
ಹಳ್ಳಿಕಾರ್ ಒಡೆಯ ಎಂದು ಖ್ಯಾತರಾಗಿರುವ ವರ್ತೂರು ಸಂತೋಷ್ ಮನೆಯಿಂದ ಹೊರಬಂದ ಮೇಲೆ ಸಕತ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು. ಇತ್ತ, ತುಕಾಲಿ ಸಂತೋಷ್ ಕೂಡ ತಮ್ಮ ಕೆಲಸದಲ್ಲಿ, ಸಂದರ್ಶನಗಳಲ್ಲಿ ಬ್ಯುಸಿಯಾಗಿದ್ದರು. ಇಬ್ಬರು ಬೇಗ ಮೀಟ್ ಆಗಬೇಕು ಎಂದು ಅಭಿಮಾನಿಗಳು ಆಶಿಸುತ್ತಲೇ ಇದ್ದರು. ಆ ಸಂದರ್ಭ ಈಗ ಕೂಡಿಬಂದಿದೆ.
ವರ್ತೂರ್ ಸಂತೋಷ್ ಮನೆಯಲ್ಲಿ ಕಾರ್ಯಕ್ರಮವೊಂದು ನಡೆದಿದೆ. ಈ ಕಾರ್ಯಕ್ರಮಕ್ಕೆ ಬಿಗ್ ಬಾಸ್ ಸ್ಪರ್ಧಿಗಳೆಲ್ಲರೂ ಭಾಗಿಯಾಗಿದ್ದರು. ತನಿಷಾ, ರಕ್ಷಕ್, ಕಾರ್ತಿಕ್, ಸಂಗಿತಾ, ಇಶಾನಿ, ಮೈಕಲ್ ಅಜಯ್ ಸೇರಿದಂತೆ ಹಲವು ಮಂದಿ ವರ್ತೂರ್ ಮನೆಗೆ ಬಂದಿದ್ದರು. ಅವರಿಗೆಲ್ಲರಿಗೂ ವರ್ತೂರ್ ಸಂತೋಷ್ ಭರ್ಜರಿ ಸ್ವಾಗತ ನೀಡಿದ್ದರು. ಇದರ ಜೊತೆಗೆ ತನ್ನ ಪ್ರಾಣ ಸ್ನೇಹಿತ ತುಕಾಲಿ ಸಂತೋಷ್‌ಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ.
ತುಕಾಲಿ ಸಂತೋಷ್‌ಗೆ ಮೈಸೂರು ಪೇಟ ತೋಡಿಸಿ, ಹಾರ ಹಾಕಿ ಸನ್ಮಾನ ಮಾಡಿ ಸ್ವಾಗತಿಸಿದ ವತ್ರೂರು ಸಂತೋಷ್, ಅವರಿಗೆ ಚಿನ್ನದ ಉಡುಗೊರೆ ನೀಡಿದ್ದಾರೆ. ಚಿನ್ನದಲ್ಲಿ ಮಾಡಿಸಿ ಲಾಕೆಟ್ ಒಂದನ್ನು ವೆಲ್‌ಕಂ ಗಿಫ್ಟ್ ನೀಡಿದ್ದಾರೆ. ಗಿಫ್ಟ್ ಕಂಡು ತುಕಾಲಿ ಸಂತೋಷ್ ಭಾವುಕರಾಗಿದ್ದಾರೆ.

ವರ್ತೂರ್ ನೀಡಿದ ಗಿಫ್ಟ್ ವಿಶೇಷತೆ ಏನು?
ಮನೆಯ ಕಾರ್ಯಕ್ರಮಕ್ಕೆ ಬಂದ ಗೆಳೆಯ ತುಕಾಲಿ ಸಂತೋಷ್‌ಗೆ ವರ್ತೂರು ಸಂತೋಷ್ ಬಿಗ್ ಗಿಫ್ಟ್ ನೀಡಿದ್ದಾರೆ. ಅವಸರದಲ್ಲಿ ಮಾಡಿಸಿದ್ದೇನೆ ಎನ್ನುತ್ತಲೆ, ಚಿನ್ನದ ಲಾಕೆಟ್ ನೀಡಿದ್ದಾರೆ. ಈ ಉಡುಗೊರೆಯ ವಿಶೇಷತೆ ಎಂದರೆ, ಬಿಗ್ ಬಾಸ್ ಮನೆಯಲ್ಲಿ ಯಾವ ಹೆಸರಿನಿಂದ ಫೇಮಸ್ ಆಗಿದ್ದರೋ ಅದೇ ಹೆಸರಿನ ಡಾಲರ್ ಮಾಡಿಸಿದ್ದಾರೆ. ಸಂತು- ಪಂತು ಎಂದು ಬರೆದಿರುವ ಡಾಲರ್ ಅನ್ನು ತುಕಾಲಿ ಸಂತೋಷ್‌ಗೆ ಗಿಫ್ಟ್ ನೀಡಿದ್ದಾರೆ.
ಇದನ್ನು ಕಂಡು ತುಕಾಲಿ ಭಾವುಕರಾಗಿದ್ದಾರೆ. ಇದಲ್ಲದೇ ಯಾವಾಗ ಅಣ್ಣನನ್ನು ನೊಡುತ್ತೇನೋ ಎಂದು ಕಾಯುತ್ತಿದ್ದೆ ಎಂದು ಹೇಳಿದ್ದಾರೆ. 'ಎಲ್ಲರೂ ಕೂಡ ಎಲ್ಲಿ ನಿಮ್ ಅಣ್ಣ ಎಂದೇ ಕೇಳ್ತಾರೆ. ಈ ಸ್ನೇಹ ಕೊನೆವರೆಗೂ ಉಳಿಕೊಂಡು ಹೋಗ್ತಿನಿ. ನಿನ್ನೆ ಕಾರ್ಯಕ್ರಮಕ್ಕೆ ಹೋಗಿದ್ದೆ ಎಲ್ಲೆಲ್ಲಾ ಜೈ ಹಳ್ಳಿಕಾರ್ ಎಂದೇ ಕರಿತಿದ್ರು. ನಂಗೆ ಸಕತ್ ಖುಷಿ ಆಯಿತು" ಎಂದು ಮಾತನಾಡಿದ್ದಾರೆ.
ಇನ್ನು, ಬಿಗ್ ಬಾಸ್ ಮನೆಯಲ್ಲೇ ಈ ಸ್ನೆಹ ಉಳಿಸಿಕೊಂಡಿದ್ದಿವಿ.. ಇನ್ನು ಇಲ್ಲಿ ಉಳಿಸಿಕೊಳ್ಳಲ್ವಾ..? ನಮಗೆ ಎಷ್ಟೇ ಅಡ್ಡಿ ಬಂದರೂ ಕೊನೆವರೆಗೂ ಹೀಗೆ ಇರ್ತಿವಿ ಎಂದು ವರ್ತೂರ್ ಸಂತೋಷ್ ಕೂಡ ಹೇಳಿದ್ದಾರೆ. ಬಿಗ್ ಬಾಸ್ ಮನೆಯಿಂದ ವರ್ತೂರ್ ಸಂತೋಷ್ ಎಲಿಮಿನೇಟ್ ಆದಾಗ ಅವರಿಗಿಂತ ಹೆಚ್ಚಾಗಿ ಕಣ್ಣೀರು ಹಾಕಿದ್ದು ತುಕಾಲಿ ಸಂತೋಷ್.












Click it and Unblock the Notifications