Vaishnavi Gowda Bargain; ಇದೇನು ತರಕಾರಿ ಅಂಗಡಿ ಅಂದುಕೊಂಡ್ಯಾ? ಪೆಟ್ರೋಲ್‌ ಬಂಕ್‌ನಲ್ಲೇ ಚೌಕಾಸಿಗಿಳಿದ ವೈಷ್ಣವಿ ಕಾಲೆಳೆದ ಪತಿ

ವೈಷ್ಣವಿ ಗೌಡ ಮದುವೆ ಆಗಿ ವರ್ಷ ಕಳೆದಿವೆ. ಇದೀಗ ಅವರನ್ನು ಅವರ ಗಂಡ ಅನುಕೂಲ್‌ ಮಿಶ್ರಾ ಕಾಲೆಳೆಯುವ ದೃಶ್ಯವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಪೆಟ್ರೋಲ್‌ ಬಂಕ್‌ನಲ್ಲಿ ನಡೆದ ಈ ಸನ್ನಿವೇಶ ಎಂತವರಿಗೂ ನಗು ಉಕ್ಕಿಸುವ ಹಾಗಿದೆ.

Vaishnavi Gowda ಕನ್ನಡದ ಕಿರುತೆರೆಯ ಖ್ಯಾತ ನಟಿ. ಕಳೆದ ವರ್ಷ ದಾಂಪತ್ಯದ ಹೊಸ ಜೀವನ ಆರಂಭಿಸಿದವರು. ಉತ್ತರ ಭಾರತದ ಅನುಕೂಲ್ ಮಿಶ್ರಾ ಅವರನ್ನ ಮದುವೆಯಾಗಿ ಮಿಶ್ರಾ ಫ್ಯಾಮಿಲಿಯ ಸೊಸೆಯಾದರು. 'ಅಗ್ನಿಸಾಕ್ಷಿ', 'ಸೀತಾ ರಾಮ' ಸೀರಿಯಲ್‌ಗಳಲ್ಲಿ ನಾಯಕಿಯಾಗಿ ನಟಿಸಿದ ವೈಷ್ಣವಿ ಗೌಡ ಕಳೆದ ವರ್ಷ ಅಂದ್ರೆ 2025ರ ಜೂನ್‌ 4 ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಇವರ ಪತಿ ಅನುಕೂಲ್‌ ಅವರದು ಛತ್ತೀಸ್‌ಘಡ ಮೂಲದ ಶ್ರೀಮಂತ ಮನೆತನ. ಉತ್ತರ ಭಾರತದ ಸಂಪ್ರದಾಯದಂತೆ ಇವರಿಬ್ಬರ ವಿವಾಹ ಮಹೋತ್ಸವ ಬಹಳ ಗ್ರ್ಯಾಂಡ್‌ ನಡೆದಿತ್ತು. ಕಳೆದ ಜೂನ್‌ನಲ್ಲಿ ಮೊದಲನೇ ವಿವಾಹ ವಾರ್ಷಿಕೋತ್ಸವವನ್ನು ವೈಷ್ಣವಿ ಗೌಡ ಅನುಕೂಲ್ ಮಿಶ್ರಾ ಆಚರಿಸಿಕೊಂಡಿದ್ದರು. ದೇವಸ್ಥಾನಕ್ಕೆ ತೆರಳಿ ಸರಳವವಾಗಿ ವಿವಾಹ ವಾರ್ಷಿಕೋತ್ಸವವನ್ನ ಆಚರಿಸಿಕೊಂಡಿದ್ದು ಸುದ್ದಿಯಾಗಿತ್ತು. ಅನಿವರ್ಸರಿ ದಿನ ಪತ್ನಿಗೆ ಸಿಂಧೂರ ಹಚ್ಚಿ ಅನುಕೂಲ್ ಮಿಶ್ರಾ ಶುಭ ಹಾರೈಸಿದ್ದರು.

Vaishnavi Gowda

ಪೆಟ್ರೋಲ್‌ ಬಂಕ್‌ನಲ್ಲಿ ಹೈ ಡ್ರಾಮಾ

ಇದೀಗ ವೈಷ್ಣವಿ ಗೌಡ ಅವರ ತಮಾಷೆಯ ವೀಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗ್ತಿದೆ. ಪೆಟ್ರೋಲ್‌ ಬಂಕ್‌ನಲ್ಲಿ ಅವರ ಪತಿ ಬಿಲ್‌ ಪೇ ಮಾಡಲು ಹೇಳಿದಾಗ ವೈಷ್ಣವಿ ಬಿಲ್‌ ನೋಡಿ ಕಕ್ಕಾಬಿಕ್ಕಿಯಾಗಿದ್ದಾರೆ. ಪೆಟ್ರೋಲ್‌ ಬಂಕ್‌ನವರ ಜೊತೆಗೇ ಮುಗ್ಧವಾಗಿ ಚೌಕಾಸಿಗಿಳಿದಿದ್ದಾರೆ. ಇದು ಪಕ್ಕದಲ್ಲಿದ್ದ ಅವರ ಪತಿಯೂ ಬಿದ್ದೂ ಬಿದ್ದೂ ನಗುವಂತೆ ಮಾಡಿದೆ.

ಪತ್ನಿಯ ರೇಗಿಸಿದ ಪತಿ

ವೈಷ್ಣವಿ ಅವರು ಅನುಕೂಲ್‌ ಜೊತೆಗೆ ಕಾರ್‌ನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಪೆಟ್ರೋಲ್‌ ಮುಗಿಯುತ್ತ ಬಂದೆ. ಸಮೀಪದ ಪೆಟ್ರೋಲ್‌ ಬಂಕ್‌ಗೆ ಬಂದಿದ್ದಾರೆ. ಆಗ ಅನುಕೂಲ್‌ ವೈಷ್ಣವಿಗೆ ಹೇಳಿದ್ದಾರೆ, ಈಗ ಕಾರಲ್ಲಿ ಪೆಟ್ರೋಲ್‌ ಮುಗಿಯುತ್ತ ಬಂದಿದೆ, ಇವತ್ತು ನೀನೇ ಪೆಟ್ರೋಲ್‌ ಹಾಕಿಸಬೇಕು, ವೀಡಿಯೋ ಮಾಡ್ತಿದ್ದೀನಿ, ಮೋಸ ಮಾಡಂಗಿಲ್ಲ ಅಂತ. ಕೊಂಚ ಅನುಮಾನಿಸಿದರೂ ವೈಷ್ಣವಿ ಓಕೆ ಅಂದಿದ್ದಾರೆ. ಫುಲ್‌ ಟ್ಯಾಂಕ್‌ ಪವರ್‌ ಪೆಟ್ರೋಲ್‌ ಹಾಕಲು ಹೇಳಿದ್ದಾರೆ. ಬಂಕ್‌ನವರು ಫುಲ್‌ ಟ್ಯಾಂಕ್‌ ಪೆಟ್ರೋಲ್‌ ಹಾಕಿದ್ದಾರೆ.

ಬೆಚ್ಚಿಬೀಳಿಸಿದ ಬಿಲ್‌

ಪೆಟ್ರೋಲ್‌ ಪೂರ್ತಿ ಹಾಕುವತನಕ ಸುಮ್ಮನಿದ್ದ ವೈಷ್ಣವಿ ಬಿಲ್‌ ನೋಡಿ ಬೆಚ್ಚಿಬಿದ್ದಿದ್ದಾರೆ. 5600 ರೂಪಾಯಿ ಬಿಲ್‌ ಆಗಿದ್ದು ಅವರನ್ನು ತಬ್ಬಿಬ್ಬಾಗಿಸಿದೆ. ಅಷ್ಟೊಂದಾ, ನಾನು ಮೂರು ಸಾವಿರ ಹಾಕ್ತೀನಿ ಅಂತ ಪೆಟ್ರೋಲ್‌ ಬಂಕ್‌ನಲ್ಲೇ ವೈಷ್ಣವಿ ಚೌಕಾಸಿಗಿಳಿದಿದ್ದಾರೆ. ʼನಾವೇನು ಟೊಮ್ಯಾಟೋ ತಗೊಳ್ಳಲಿಕ್ಕೆ ತರಕಾರಿ ಅಂಗಡಿಗೆ ಬಂದಿದ್ದೀವಾ!ʼ ಅಂತ ಅನುಕೂಲ್‌ ಕಾಲೆಳೆದಿದ್ದಾರೆ.

ಕೊನೆಗೂ ಬಿಲ್‌ ಪೇ ಮಾಡಿದ ಸೀತಮ್ಮ

ಗಂಡ ಇದನ್ನು ವೀಡಿಯೋ ರೆಕಾರ್ಡಿಂಗ್‌ ಮಾಡುತ್ತಿದ್ದದ್ದನ್ನು ಗಮನಿಸಿದ ವೈಷ್ಣವಿ ಕೊನೆಗೂ ಬಿಲ್‌ ಪೇ ಮಾಡಿದ್ದಾರೆ. ʼಅಷ್ಟೂ ಹಣವನ್ನೂ ಹಾಕಿದ್ದೀನಿʼ ಅಂತ ಸ್ಕ್ರೀನ್‌ ತೋರಿಸಿದ್ದಾರೆ. ಆಮೇಲೆ ಸಿಟ್ಟು ಮಾಡಿಕೊಂಡು ಮುಖ ಊದಿಸಿಕೊಂಡು ಕೂತಿದ್ದಾರೆ. ಗಂಡ ಅಲ್ಲೂ ಕಾಲೆಳೆಯಲು ಶುರು ಮಾಡಿದ್ದಾರೆ. ಈಗ ಯಾಕೆ ಮುಖ ಊದಿಸಿಕೊಂಡು ಕೂತಿದ್ದೀಯ, ಮೊದಲ ಸಲ ಪೆಟ್ರೋಲ್‌ ಹಾಕಿಸಿದ್ದೀಯ ಅಂತ ವೀಡಿಯೋ ಮಾಡಿದ್ದೀನಿʼ ಅಂತೆಲ್ಲ ಹೇಳಿ ಹುಸಿ ಮುನಿಸು ತೋರಿದ ಮಡದಿಯನ್ನು ನಗಿಸಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌

ವೈಷ್ಣವಿ ಅವರ ಈ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಓಡ್ತಿದೆ. ನೋಡಿದವರೆಲ್ಲ ಈ ಜೋಡಿ ತಮಾಷೆ ಕಂಡು ಮನಸಾರೆ ನಕ್ಕಿದ್ದಾರೆ. ದಂಪತಿಗೆ ಶುಭವನ್ನೂ ಹಾರೈಸಿದ್ದಾರೆ. ಅನೇಕರು ಈ ವೀಡಿಯೋವನ್ನು ಆಪ್ತರ ಜೊತೆ ಶೇರ್‌ ಮಾಡಿಕೊಂಡಿದ್ದಾರೆ. ಹೀಗಾಗಿ ಈ ರೀಲ್ಸ್‌ ಅನೇಕ ಕಡೆ ಶೇರ್‌ ಕೂಡ ಆಗಿದೆ. ವೈಷ್ಣವಿ ಅವರು ಆಗಾಗ ಅನುಕೂಲ್‌ ಜೊತೆಗೆ ರೀಲ್ಸ್‌ ಮಾಡಿ ಅದನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡುತ್ತಿರುತ್ತಾರೆ. ಮದುವೆಯಾದಂದಿನಿಂದ ಸೋಷಿಯಲ್‌ ಮೀಡಿಯಾದಲ್ಲಿ ಪತಿಯನ್ನೂ ಸೇರಿಸಿಕೊಂಡು ಹೆಚ್ಚೆಚ್ಚು ಆಕ್ಟಿವ್‌ ಆಗಿದ್ದಾರೆ. ಇವರಿಬ್ಬರೂ ಸಾಕಷ್ಟು ಟ್ರಿಪ್‌ಗಳನ್ನೂ ಮಾಡುತ್ತಿರುತ್ತಾರೆ.

ಗೆಳತಿ ಗಾಯತ್ರಿಯಾಗಿ ಮಿಂಚುತ್ತಿರುವ ನಟಿ

ಈ ಹಿಂದೆ ʼಸೀತಾರಾಮʼ ಸೀರಿಯಲ್‌ ಮೂಲಕ ಎಲ್ಲರ ಪಾಲಿಗೆ ಸೀತಮ್ಮನಾಗಿದ್ದ ವೈಷ್ಣವಿ ಇದೀಗ ಉದಯ ಟಿವಿಯಲ್ಲಿ ʼಗೆಳತಿ ಜಾನಕಿʼ ಎಂಬ ಸೀರಿಯಲ್‌ನಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇಬ್ಬರು ಗೆಳತಿಯರ ನಡುವಿನ ಕಥೆ ಇದಾಗಿದ್ದು ಉತ್ತಮ ರೆಸ್ಪಾನ್ಸ್‌ ಪಡೆಯುವ ನಿರೀಕ್ಷೆಯಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+