UI Movie: ಪ್ರಪಂಚದ ಸಿನಿಮಾ ಇಂಡಸ್ಟ್ರಿಯಲ್ಲೇ ಹೊಸ ಇತಿಹಾಸ ನಿರ್ಮಿಸಿದ ಕನ್ನಡಿಗ ಉಪೇಂದ್ರ....
ಉಪೇಂದ್ರ ಅಂದ್ರೆನೇ ಡಿಫರೆಂಟ್, ಹಾಗೇ ಡಿಫರೆಂಟ್ ಅನ್ನೋ ಪದಕ್ಕೆ ಮತ್ತೊಂದು ಹೆಸರೇ ಉಪ್ಪಿ ಅಲಿಯಾಸ್ ರಿಯಲ್ ಸ್ಟಾರ್ ಉಪೇಂದ್ರ ಅಂತಾರೆ ಅವರ ಅಭಿಮಾನಿಗಳು. ಯಾಕೆ ಅಂದ್ರೆ ಅಷ್ಟು ಸ್ಪೆಷಲ್ ಆಗಿ ಸಿನಿಮಾಗಳನ್ನ ಅಭಿಮಾನಿಗಳ ಎದುರು ಇಡುತ್ತಾರೆ ಸೂಪರ್ ಸ್ಟಾರ್ & ರಿಯಲ್ ಸ್ಟಾರ್ ಉಪ್ಪಿ ಅವರು. ಇಂತಿಪ್ಪ ಉಪ್ಪಿ ಅವರ 'UI' ಸಿನಿಮಾ ಇದೀಗ ಅದ್ಧೂರಿಯಾಗಿ ರಿಲೀಸ್ ಆಗ್ತಿದ್ದು, ಸಿನಿಮಾ ಬಗ್ಗೆ ಸ್ಫೋಟಕ ಮಾಹಿತಿ ಹೊರ ಬಿದ್ದಿದೆ!
ಹೌದು, ಉಪೇಂದ್ರ ಅವರು ಮತ್ತೊಮ್ಮೆ ಸಂಚಲನ ಸೃಷ್ಟಿ ಮಾಡಿದ್ಧಾರೆ. 'ಯುಐ' ಸಿನಿಮಾದ ಹಾಡು & ಟ್ರೇಲರ್ ಅದ್ಭುತವಾಗಿ ಹಾಗೂ ಡಿಫರೆಂಟ್ ಆಗಿ ರಿಲೀಸ್ ಆಗಿ ಸೌಂಡ್ ಮಾಡಿದ್ದವು. ಹೀಗಿದ್ದಾಗ 'UI' ಸಿನಿಮಾ ಕೂಡ ತುಂಬಾ ಡಿಫರೆಂಟ್ ಆಗಿ ಇರಲಿದೆ ಅನ್ನೋ ಮಾತುಗಳು ಕೇಳಿ ಬಂದಿದ್ದವು. ಇದೀಗ ಆ ಮಾತು ನಿಜವಾಗಿದ್ದು, ಪ್ರಪಂಚದ ಸಿನಿಮಾ ಇಂಡಸ್ಟ್ರಿಯಲ್ಲೇ ಹೊಸ ಇತಿಹಾಸ ನಿರ್ಮಿಸಿದ ಕನ್ನಡಿಗ ಉಪೇಂದ್ರ....

ಇತಿಹಾಸ ನಿರ್ಮಿಸಿದ ಕನ್ನಡಿಗ ಉಪೇಂದ್ರ....
ಉಪೇಂದ್ರ ಅವರು 'ಯುಐ' ಸಿನಿಮಾ ಮಾಡಲು ಹಲವು ವರ್ಷಗಳನ್ನೇ ತಗೊಂಡಿದ್ದಾರೆ. ಈ ಮೂಲಕ ಅಭಿಮಾನಿಗಳ ಕುತೂಹಲ ಮೀರಿಸುವ ಸಿನಿಮಾ ರಿಯಲ್ ಸ್ಟಾರ್ ಉಪ್ಪಿ ಅವರು ನೀಡಿದ್ದಾರೆ ಎಂಬ ಮಾತುಗಳು ಇದೀಗ ಸಿನಿಮಾ ವಿಮರ್ಶಕರ ಬಾಯಿಂದ ಕೇಳಿ ಬರುತ್ತಿದೆ. ಹೀಗಿದ್ದಾಗಲೇ, ಇಡೀ ಪ್ರಪಂಚದ ಸಿನಿಮಾ ಇಂಡಸ್ಟ್ರಿಯಲ್ಲೇ ಹೊಸ ಇತಿಹಾಸ ನಿರ್ಮಿಸಿದ ಕನ್ನಡಿಗ ಉಪೇಂದ್ರ....
ತೆಲುಗು, ತಮಿಳು, ಮಲಯಾಳಂ....
ಹೌದು, ಉಪೇಂದ್ರ 'ಯುಐ' ಸಿನಿಮಾದಲ್ಲಿ ನೂರಾರು ದಾಖಲೆ ಬರೆದಿದ್ದಾರೆ. ಅದೇ ರೀತಿ, ಇಡೀ ಜಗತ್ತಿನಲ್ಲೇ ಇದುವರೆಗೂ ಯಾರೂ ಮಾಡಲಾಗದ ಸಾಧನೆ ಒಂದನ್ನ ಕೂಡ ಅವರು ಮಾಡಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಈ ಸುದ್ದಿ ಹಬ್ಬುತ್ತಿದ್ದಂತೆ ಕನ್ನಡ ಸಿನಿಮಾ ಬಗ್ಗೆ ಈ ಸಮಯದಲ್ಲಿ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಹಿಂದಿ ಪ್ರೇಕ್ಷಕರು ಹಾಗೂ ಎಲ್ಲಾ ಭಾಷೆಯ ಆಡಿಯನ್ಸ್ ಗಮನ ಇಟ್ಟು ಕೂತಿದ್ದಾರೆ.
ಈಗ ಹಬ್ಬಿರುವ ಸುದ್ದಿ ಏನಂದ್ರೆ, ಒಂದೇ ಸಿನಿಮಾದಲ್ಲಿ 2 ರೀತಿಯ ಕ್ಲೈಮ್ಯಾಕ್ಸ್ ಇಡುವುದು! ಹೌದು ಈ ರೀತಿ ರಿಯಲ್ ಸ್ಟಾರ್ ಉಪೇಂದ್ರ 'ಯುಐ' ಸಿನಿಮಾದಲ್ಲಿ ಒಂದೊಂದು ಥಿಯೇಟರ್ ಒಳಗೆ ಒಂದೊಂದು ಕ್ಲೈಮ್ಯಾಕ್ಸ್ ತೋರಿಸಲಿದ್ದಾರೆ ಎಂಬ ಸುದ್ದಿ ಬಲು ಜೋರಾಗಿ ಹಬ್ಬಿದೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟಿಗೆ ಚರ್ಚೆ ಕೂಡ ನಡೆಯುತ್ತಿದ್ದು, ಅಭಿಮಾನಿಗಳು ಕೂಡ ಥ್ರಿಲ್ ಆಗಿದ್ದಾರೆ. ಅಲ್ಲದೆ, ಪ್ರಪಂಚದ ಸಿನಿಮಾ ಇಂಡಸ್ಟ್ರಿಯಲ್ಲೇ ಹೊಸ ಇತಿಹಾಸ ನಿರ್ಮಿಸಿದ ಕನ್ನಡಿಗ ಉಪೇಂದ್ರ.... ಅಂತಾ ಹೊಗಳುತ್ತಿದ್ದಾರೆ. ಆದರೆ ಈ ಬಗ್ಗೆ ಸ್ಪಷ್ಟನೆ ಕೂಡ ರಿಯಲ್ ಸ್ಟಾರ್ ನೀಡಿದ್ದಾರೆ!
2 ರೀತಿಯ ಕ್ಲೈಮ್ಯಾಕ್ಸ್ ಬಗ್ಗೆ....
ಅಂದಹಾಗೆ, ಈ ರೀತಿಯಾಗಿ ಒಂದೊಂದು ಥಿಯೇಟರ್ ಒಳಗೆ ಒಂದೊಂದು ಕ್ಲೈಮ್ಯಾಕ್ಸ್‌ನ ಇಡೋದು ಅಸಾಧ್ಯ ಎಂಬ ಸ್ಪಷ್ಟನೆ ಸಿಕ್ಕಿದೆ. ಈ ಬಗ್ಗೆ ರಿಯಲ್ ಸ್ಟಾರ್ ಕೂಡ ಸ್ಪಷ್ಟನೆಯ ನೀಡಿದ್ದಾರೆ. 2 ರೀತಿಯ ಕ್ಲೈಮ್ಯಾಕ್ಸ್ ಇಡುವ ವಿಚಾರದಲ್ಲಿ ಸತ್ಯ ಇಲ್ಲ, ಇದು ಬರೀ ಗಾಳಿ ಸುದ್ದಿ ಆಗಿದೆ ಅಂತಾ ಹೇಳಿದ್ದಾರೆ. ಅಲ್ಲದೆ 'ಯುಐ' ಸಿನಿಮಾಗೆ ಒಂದೇ ಕ್ಲೈಮ್ಯಾಕ್ಸ್ ಇದ್ದು, ಹೀಗೆ ಸಿನಿಮಾದಲ್ಲಿ ಇರುವ ಕಂಟೆಂಟ್ ಸಖತ್ ಆಗಿದೆ ಅಂತಾ ಕೂಡ ಸ್ಪಷ್ಟನೆ ನೀಡಿದ್ದಾರೆ. ಹಾಗೇ ಅಭಿಮಾನಿಗಳು 'ಯುಐ' ಸಿನಿಮಾ 2 ಬಾರಿ ನೋಡಬೇಕು ಅಂತಲೂ ಹೇಳಿದ್ದಾರೆ!












Click it and Unblock the Notifications