ಓ ನಲ್ಲ ನೀನಲ್ಲ... ಕರಿಮಣಿ ಮಾಲೀಕ ನೀನಲ್ಲ... ಉಪೇಂದ್ರ ಸಿನಿಮಾ ಹಾಡು ಫುಲ್ ವೈರಲ್!
ಅದು 1999, ಕನ್ನಡ ಸಿನಿಮಾ ರಂಗದಲ್ಲಿ ಯಾರೂ ಊಹೆ ಮಾಡದ ಸಿನಿಮಾ ಒಂದು ಆ ವರ್ಷದ ಕೊನೆಗೆ ರಿಲೀಸ್ ಆಗಿತ್ತು. ನೋಡ ನೋಡುತ್ತಿದ್ದಂತೆ ಉಪೇಂದ್ರ ಅನ್ನೋ ರಿಯಲ್ ಸ್ಟಾರ್, ಅದ್ಭುತ ಒಂದನ್ನು ಸೃಷ್ಟಿ ಮಾಡಿಬಿಟ್ಟರು. ಹೀಗೆ 1999ರ ಅಕ್ಟೋಬರ್ 22ಕ್ಕೆ ಈ ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಿತ್ತು. ಆದರೆ ಈಗ ಈ ಸಿನಿಮಾದ ಅಂದ್ರೆ 'ಉಪೇಂದ್ರ' ಸಿನಿಮಾದ 'ಏನಿಲ್ಲ.. ಏನಿಲ್ಲ..' ಹಾಡು ಹಲ್‌ಚಲ್ ಎಬ್ಬಿಸಿದೆ. ಯಾಕೆ ಗೊತ್ತಾ?
ಇದು ಸೋಷಿಯಲ್ ಮೀಡಿಯಾ ಜಮಾನ, ಇಲ್ಲಿ ಏನೇ ಆದ್ರೂ ಜನರು ಮೊದಲು ತಮ್ಮ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಅಲ್ಲಿ ಅಪ್‌ಡೇಟ್ ಮಾಡ್ತಾರೆ. ಅದ್ರಲ್ಲೂ ಈ ಭಗ್ನಪ್ರೇಮಿ ಅಂದ್ರೆ ಲವ್ ಫೇಲ್ಯೂರ್ ಆಗಿರೋ ಹುಡುಗರು, ತಮ್ಮ ನೋವು ತೋಡಿಕೊಂಡು ಕಷ್ಟ ಹೇಳಿಕೊಳ್ಳಲು ಇರುವ ಏಕೈಕ ತಾಣ ಸೋಷಿಯಲ್ ಮೀಡಿಯಾ. ಹೀಗೆ ಹುಡುಗನೊಬ್ಬ ಕೈಕೊಟ್ಟ ಹುಡುಗಿ ಬಗ್ಗೆ ಹೊಡೆದ ಡೈಲಾಗ್ ಈಗ 'ಉಪೇಂದ್ರ' ಸಿನಿಮಾ ಹಾಡನ್ನ ಫುಲ್ ವೈರಲ್ ಆಗುವಂತೆ ಮಾಡಿದೆ!

ಓ ನಲ್ಲ ನೀನಲ್ಲ...
ಉತ್ತರ ಕರ್ನಾಟಕ ಮೂಲದ ಯುವಕನೊಬ್ಬ, 'ಉಪೇಂದ್ರ' ಸಿನಿಮಾದ ಏನಿಲ್ಲ ಏನಿಲ್ಲ ಹಾಡಿನ ಸಾಲು ಬಳಸಿ ಡೈಲಾಗ್ ಹೊಡೆದು ರೀಲ್ಸ್ ಹಾಕಿದ್ದರು. ಈ ಮೂಲಕ ಕೈಕೊಟ್ಟಿದ್ದ ಹುಡುಗಿ ಬಗ್ಗೆ ಮಾತನಾಡಿದ್ದರು. ಇದೀಗ ಆ ಯುವಕನ ಈ ಒರಿಜಿನಲ್ ಡೈಲಾಗ್ ಮತ್ತು ಏನಿಲ್ಲ ಏನಿಲ್ಲ ಸಾಂಗ್ ಎಲ್ಲೆಲ್ಲೂ ವೈರಲ್ ಆಗುತ್ತಿದೆ. ಹಾಗೆಯೆ ಅಭಿಮಾನಿಗಳ ಬಾಯಲ್ಲಿ ಮತ್ತೊಮ್ಮೆ ಹಳೇ ಹಾಡು ಗುನುಗುವಂತೆ ಮಾಡಿದೆ. ಈ ಮೂಲಕ ಅಭಿಮಾನಿಗಳು ಏನಿಲ್ಲ ಏನಿಲ್ಲ ಹಾಡನ್ನು ಮತ್ತೊಮ್ಮೆ ಎಂಜಾಯ್ ಮಾಡ್ತಿದ್ದಾರೆ.
'ಏನಿಲ್ಲ ಏನಿಲ್ಲ' ಹವಾ ಜೋರು
ಇನ್ನು ಹೀಗೆ 'ಏನಿಲ್ಲ ಏನಿಲ್ಲ' ಹಾಡು ವೈರಲ್ ಆಗಿದ್ದೇ ತಡ, ಸೋಷಿಯಲ್ ಮೀಡಿಯಾ ತುಂಬಾ ಇದೇ ಹಾಡು ಧೂಳೆಬ್ಬಿಸಿದೆ. ಹಾಗೇ ರೀಲ್ಸ್ ಸ್ಟಾರ್‌ಗಳು ಕೂಡ ಈ ಹಾಡಿಗೆ ಈಗ ತುಟಿ ಪೋಣಿಸಿ, ರೀಲ್ಸ್ ಮಾಡುತ್ತಾ 'ಏನಿಲ್ಲ ಏನಿಲ್ಲ' ಹಾಡಿನ ಸಂಭ್ರಮದಲ್ಲಿ ಕೈಜೋಡಿಸಿ ಸಂಭ್ರಮಿಸಿದ್ದಾರೆ. ಈ ಮೂಲಕ ಬರೋಬ್ಬರಿ 25 ವರ್ಷಗಳ ನಂತರ ಮತ್ತೊಮ್ಮೆ ಇದೀಗ, ಉಪೇಂದ್ರ ಅವರ ಸಿನಿಮಾ ಹಾಡು ಫುಲ್ ವೈರಲ್ ಆಗುತ್ತಿದೆ.
'ಏನಿಲ್ಲ ಏನಿಲ್ಲ' ಹಾಡಿನ ಲಿರಿಕ್ಸ್ ಇಲ್ಲಿದೆ
ಏನಿಲ್ಲ ಏನಿಲ್ಲ
ನಿನ್ನ ನನ್ನ ನಡುವೆ ಏನಿಲ್ಲ
ಏನೇನಿಲ್ಲ
ಏನಿಲ್ಲ ಏನಿಲ್ಲ
ನಿನ್ನ ನನ್ನ ನಡುವೆ ಏನಿಲ್ಲ
ನಿಜದಂತಿರುವ ಸುಳ್ಳಲ್ಲ
ಸುಳ್ಳುಗಳೆಲ್ಲ ನಿಜವಲ್ಲ
ಸುಳ್ಳಿನ ನಿಜವೂ ಸುಳ್ಳಲ್ಲ
ಏನಿಲ್ಲ ಏನಿಲ್ಲ
ಏನೇನಿಲ್ಲ
ಕಳೆದ ದಿನಗಳಲೇನೂ ಇಲ್ಲ
ನೆನಪುಗಳಲಿ ಏನೇನಿಲ್ಲ
ಉತ್ತರ.. ದಕ್ಷಿಣ.. ಸೇರಿಸೋ ದಿಂಬಲಿ ನೀನಿಲ್ಲ
ಪ್ರಶ್ನೆಗೆ ಉತ್ತರ ಹುಡುಕಿದರೆ ಏನೇನಿಲ್ಲ
ಕೆದಕಿದರೆ ಏನೇನಿಲ್ಲ
ಏನಿಲ್ಲ ಏನಿಲ್ಲ
ನಿನ್ನ ನನ್ನ ನಡುವೆ ಏನಿಲ್ಲ
ಏನೇನಿಲ್ಲ
ಮನಸಿನೊಳಗೆ ಖಾಲಿ ಖಾಲಿ
ನೀ ಮನದೊಳಗೆ ಇದ್ದರೂ
ಮಲ್ಲಿಗೆ ಸಂಪಿಗೆ ತರದೇ ಹೋದರೂ ನೀ ನನಗೆ

ಓ ನಲ್ಲ, ನೀನಲ್ಲ
ಕರಿಮಣಿ ಮಾಲೀಕ ನೀನಲ್ಲ
ಕರಿಮಣಿ ಮಾಲೀಕ ನೀ.. ನಲ್ಲ
ಏನಿಲ್ಲ ಏನಿಲ್ಲ
ನಿನ್ನ ನನ್ನ ನಡುವೆ ಏನಿಲ್ಲ
ನಿಜದಂತಿರುವ ಸುಳ್ಳಲ್ಲ
ಸುಳ್ಳುಗಳೆಲ್ಲ ನಿಜವಲ್ಲ
ಏನಿಲ್ಲ ಏನಿಲ್ಲ
ನಿನ್ನ ನನ್ನ ನಡುವೆ ಏನಿಲ್ಲ
ಏನೇನಿಲ್ಲ
ಒಟ್ನಲ್ಲಿ ಕನ್ನಡ ಸಿನಿಮಾಗಳು ಜಗತ್ತಿನಾದ್ಯಂತ ರಾರಾಜಿಸುವ ಸಮಯಕ್ಕೆ ಕನ್ನಡಿಗರ ಹಳೇ ಹಾಡು ಕೂಡ ವೈರಲ್ ಆಗುತ್ತಿದೆ. ಹೊಸ ತಲೆಮಾರು ಕೂಡ ಕನ್ನಡದ ಹಳೆಯ ಹಾಡನ್ನ ಸಂಭ್ರಮಿಸುತ್ತಾ, ಬಾಯಲ್ಲಿ ಗುನುಗುತ್ತಿದೆ. ಈ ಮೂಲಕ ಮತ್ತೆ ಸೋಷಿಯಲ್ ಮೀಡಿಯಾ ಕನ್ನಡಿಗರ ಓಲ್ಡ್ ಸಾಂಗ್‌ಗೆ ದೊಡ್ಡ ವೇದಿಕೆ ಒದಗಿಸಿದೆ. ಉಪೇಂದ್ರ ಅವರ ಯುಐ ಸಿನಿಮಾ ಟೀಸರ್ ಕೂಡ ಅದ್ಧೂರಿಯಾಗಿ ರಿಲೀಸ್ ಆಗಿದ್ದು, ಎಲ್ಲೆಲ್ಲೂ ಹವಾ ಎಬ್ಬಿಸಿದೆ. ಈ ವೇಳೆ ಉಪೇಂದ್ರ ನಿರ್ದೇಶನದ ಹಳೆಯ ಸಿನಿಮಾ ಕೂಡ ಭರ್ಜರಿ ಸದ್ದು ಮಾಡ್ತಿದೆ.
'ಉಪೇಂದ್ರ' ಸಿನಿಮಾ ಆಗಿನ ಕಾಲಕ್ಕೆ ದೊಡ್ಡ ಹೆಸರನ್ನು ಮಾಡಿತ್ತು. ಹಾಗೇ ಗಲ್ಲಾಪೆಟ್ಟಿಗೆ ತುಂಬಾ ಕಾಸು ಮಾಡಿ, ಕನ್ನಡ ಸಿನಿಮಾ ರಂಗದ ಕೀರ್ತಿಯನ್ನ ಹಬ್ಬಿಸಿತ್ತು. ಇದೀಗ ಮತ್ತೆ ಕನ್ನಡಿಗರ ಸಿನಿಮಾ ಹಳೇ ಹಾಡು ವೈರಲ್ ಆಗುತ್ತಿದ್ದು. ಪರಭಾಷಿಕರು ಕೂಡ ಈ ಹಾಡು ಮತ್ತು ಮ್ಯೂಸಿಕ್‌ಗೆ ಮತ್ತೆ ಮತ್ತೆ ಫಿದಾ ಆಗ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಮತ್ತೆ 'ಉಪೇಂದ್ರ' ಸಿನಿಮಾ ಟ್ರೆಂಡ್ ಕ್ರಿಯೇಟ್ ಮಾಡಿದೆ.
'ಎ' ನಂತರ 'ಉಪೇಂದ್ರ' ಅಬ್ಬರ
ಇನ್ನು ನಟ ಉಪೇಂದ್ರ ಅವರು 'ಎ' ಸಿನಿಮಾ ನಂತರ, 'ಉಪೇಂದ್ರ' ಸಿನಿಮಾ ಹೀಗೆ ಅದ್ಧೂರಿಯಾಗಿ ರಿಲೀಸ್ ಆಗಿತ್ತು. ಹೀಗಾಗಿ 2000ನೇ ಕಾಲಘಟ್ಟಕ್ಕೆ ಎಂಟ್ರಿ ಕೊಡೋಕೆ ಮೊದಲು ಕನ್ನಡ ಸಿನಿಮಾ ರಂಗ, ಇಡೀ ದೇಶದಲ್ಲಿ ಸಂಚಲನ ಸೃಷ್ಟಿ ಮಾಡಿತ್ತು. ಈ ಮೂಲಕ ರಿಯಲ್ ಸ್ಟಾರ್ & ಸೂಪರ್ ಸ್ಟಾರ್ ಉಪೇಂದ್ರ ಅವರು ಸಿನಿಮಾ ರಂಗದಲ್ಲಿ ಹಲ್‌ಚಲ್ ಎಬ್ಬಿಸಿದ್ದರು. ಅಲ್ಲದೆ ಮತ್ತೊಂದು ಸೂಪರ್ ಹಿಟ್ ಸಿನಿಮಾವನ್ನ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಹಾಗೂ ಪ್ರೇಕ್ಷಕರಿಗೆ ನೀಡಿದ್ದರು ನಟ ಉಪೇಂದ್ರ.
ಎಲ್ಲಾ ಹಾಡುಗಳು ಸೂಪರ್ ಹಿಟ್!
2000ರ ಕಾಲಘಟ್ಟದಲ್ಲಿ ರಿಲೀಸ್ ಆಗಿದ್ದ 'ಉಪೇಂದ್ರ' ಸಿನಿಮಾದ ಎಲ್ಲಾ ಹಾಡುಗಳೂ ಸೂಪರ್ ಹಿಟ್ ಆಗಿದ್ದವು. ಗುರು ಕಿರಣ್ ಸಂಗೀತ ನಿರ್ದೇಶನದಲ್ಲಿ, 'ಉಪೇಂದ್ರ' ಸಿನಿಮಾ ಹೊಸ ಹೊಸ ಪ್ರಯೋಗಕ್ಕೆ ಕೈ ಹಾಕಿತ್ತು. ಈ ಸಿನಿಮಾದಲ್ಲಿ ಒಟ್ಟು 6 ಹಾಡುಗಳು ಇದ್ದು, ಈ ಸಿನಿಮಾ ಮ್ಯೂಸಿಕಲಿ ಕೂಡ ಸೂಪರ್ ಹಿಟ್ ಅನಿಸಿಕೊಂಡಿತ್ತು.
ಉಪ್ಪಿಗಿಂತ ರುಚಿ ಬೇರೆ ಇಲ್ಲ, ಎಂಟಿವಿ ಸುಬ್ಬುಲಕ್ಷ್ಮಿಗೆ, 2000 ಎಡಿ ಲೇಡಿಯೇ, ಏನಿಲ್ಲ ಏನಿಲ್ಲ, ಮಸ್ತು ಮಸ್ತು ಹುಡುಗಿ ಬಂದ್ಳು ಸೇರಿದಂತೆ ಒಟ್ಟು 6 ಹಾಡುಗಳಿದ್ದ 'ಉಪೇಂದ್ರ' ಸಿನಿಮಾ ಆಗಿನ ಕಾಲಕ್ಕೆ ದೊಡ್ಡ ಹವಾ ಎಬ್ಬಿಸಿತ್ತು. ಅದರಲ್ಲೂ ಫ್ಯಾನ್ಸ್, ಪ್ರತಿಯೊಂದು ಹಾಡನ್ನ ಎಂಜಾಯ್ ಮಾಡಿದ್ರು. ಇಂದಿಗೂ 'ಉಪೇಂದ್ರ' ಸಿನಿಮಾದ ಹಾಡುಗಳು ಟ್ರೆಂಡ್ ಕ್ರಿಯೇಟ್ ಮಾಡುತ್ತಿವೆ ಅನ್ನೋದೆ ಖುಷಿ ವಿಚಾರ.
ರಿಯಲ್ ಸ್ಟಾರ್ ಹೊಸ ಸಿನಿಮಾ
ಉಪೇಂದ್ರ ಅವರ ಹೊಸ ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದೆ. ಮೂಲ ಕನ್ನಡದಲ್ಲಿ ಈಗ 'UI' ಸಿನಿಮಾ ಸಿದ್ಧವಾಗಿದೆ. ಜೊತೆ ತೆಲುಗು ಮತ್ತು ತಮಿಳು, ಮಲಯಾಳಂ, ಹಿಂದಿಯಲ್ಲೂ ರಿಲೀಸ್ ಆಗುತ್ತಿದೆ. ಇವು ಭಾರತೀಯ ಭಾಷೆಗಳಾಗಿದ್ದರೆ ಇದರ ಜೊತೆ ವಿದೇಶಿ ಭಾಷೆಗಳಿಗೆ 'UI' ಸಿನಿಮಾ ಡಬ್ ಆಗಲಿದ್ದು. ಫ್ರೆಂಚ್, ಸ್ಪ್ಯಾನಿಷ್, ಡಚ್ ಮತ್ತು ಇಟಾಲಿಯನ್ ಭಾಷೆಗಳಿಗೂ ಉಪೇಂದ್ರ ಅವರ ಬಹು ನಿರೀಕ್ಷಿತ 'ಯುಐ' ಸಿನಿಮಾ ಡಬ್ ಆಗಿ ರಿಲೀಸ್ ಆಗಲಿದೆಯಂತೆ. ಈ ಮೂಲಕ ಕನ್ನಡಿಗರ ಸಿನಿಮಾ ಈಗ ಹೊಸ ಇತಿಹಾಸ ನಿರ್ಮಿಸಲು ಸಜ್ಜಾಗಿದೆ.












Click it and Unblock the Notifications