Upendra: ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ; ಟ್ವೀಟ್ ಡಿಲೀಟ್ ಮಾಡಿದ್ದೇಕೆ ಉಪ್ಪಿ?
ಯುಐ ಸಿನಿಮಾ ಮೂಲಕ ಹೊಸ ಅವತಾರದಲ್ಲಿ ಕನ್ನಡಿಗರ ಮುಂದೆ ಬರಲು ಸಜ್ಜಾಗಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ, ಈ ಸಿನಿಮಾ ಬಗ್ಗೆ ಕನ್ನಡಿಗರು ಮಾತ್ರ ವಿವಿಧ ಭಾಷೆಯ ಉಪೇಂದ್ರ ಅಭಿಮಾನಿಗಳು ಕೂಡ ಕಾತುರದಿಂದ ಕಾಯುತ್ತಿದ್ದಾರೆ. ತಮ್ಮ ವಿಭಿನ್ನವಾದ ಮೇಕಿಂಗ್‌ನಿಂದಲೇ ಹೆಸರು ಮಾಡಿರುವ ಉಪೇಂದ್ರ ಈಗ ಯಾವ ವಿಚಾರದ ಬಗ್ಗೆ ಕಥೆ ಹೆಣೆದಿದ್ದಾರೆ ಎನ್ನುವ ಕುತೂಹಲ ಇದ್ದೇ ಇದೆ. ಯುಐ ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ಮತ್ತೊಂದು ದೊಡ್ಡ ಸಿನಿಮಾದಲ್ಲಿ ನಟಿಸಲು ಉಪೇಂದ್ರ ಸಜ್ಜಾಗಿದ್ದಾರೆ ಅದು ಕೂಡ ಸೂಪರ್ ಸ್ಟಾರ್ ರಜನಿಕಾಂತ್ ಜೊತೆಗೆ.
ರಜನಿಕಾಂತ್ ಇದೀಗ ಲೋಕೇಶ್ ಕನಕರಾಜ್ ಅವರ ಜೊತೆ ಕೂಲಿ ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ಖೈದಿ, ವಿಕ್ರಮ್, ಲಿಯೋ ಸೇರಿದಂತೆ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಲೋಕೇಶ್ ಕನಕರಾಜ್ ಇದೀಗ ರಜನಿಕಾಂತ್ ಜೊತೆ ಸಿನಿಮಾ ಮಾಡುತ್ತಿರುವುದು ಇಡೀ ಭಾರತೀಯ ಚಿತ್ರೋದ್ಯಮದ ಗಮನ ಸೆಳೆದಿದೆ. ಈ ಸಿನಿಮಾದಲ್ಲಿ ಇದೀಗ ರಿಯಲ್ ಸ್ಟಾರ್ ಉಪೇಂದ್ರ ನಟಿಸುವುದು ಪಕ್ಕಾ ಆಗಿದೆ.

ನಟ ಉಪೇಂದ್ರ ಅವರೇ ಈ ಬಗ್ಗೆ ಮಾಹಿತಿ ನೀಡಿದ್ದು, ರಜನಿಕಾಂತ್ ಜೊತೆ ನಟಿಸುತ್ತಿರುವುದು ಖುಷಿ ವಿಚಾರ ಎಂದಿದ್ದಾರೆ. ಕುತೂಹಲಕಾರಿ ಎನ್ನುವಂತೆ ಟ್ವೀಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಅದನ್ನು ಡಿಲೀಟ್ ಮಾಡಿದ್ದಾರೆ. ಆದರೆ ಯಾವ ಕಾರಣಕ್ಕಾಗಿ ತಮ್ಮ ಟ್ವೀಟ್ ಡಿಲೀಟ್ ಮಾಡಿದ್ದಾರೆ ಎನ್ನುವ ಕುತೂಹಲ ಇದೆ.
ಮುಖ್ಯ ಪಾತ್ರದಲ್ಲಿ ಉಪ್ಪಿ?
ಕೂಲಿ ಸಿನಿಮಾದಲ್ಲಿ ಯಾವ ಪಾತ್ರದಲ್ಲಿ ಉಪೇಂದ್ರ ನಟಿಸುತ್ತಾರೆ ಎನ್ನುವುದು ಇನ್ನೂ ಖಚಿತವಾಗಿಲ್ಲ. ಅವರು ಅತಿಥಿ ಪಾತ್ರದಲ್ಲಿ ಮಾಡುತ್ತಾರಾ ಅಥವಾ ಸಿನಿಮಾದ ಪ್ರಮುಖ ಪಾತ್ರವೊಂದನ್ನು ನಿಭಾಯಿಸುತ್ತಾರಾ ಎನ್ನುವ ಕುತೂಹಲ ಇದೆ. ಸಿನಿಮಾದ ಹಾಡಿನಲ್ಲಿ ರಜನಿಕಾಂತ್ ಜೊತೆ ಹೆಜ್ಜೆ ಹಾಕುತ್ತಾರೆ ಎನ್ನುವ ಸುದ್ದಿ ಕೂಡ ಇದೆ.
ಉಪೇಂದ್ರ ಅವರಿಗೆ ತಮಿಳು ಸಿನಿಮಾರಂಗ ಏನು ಹೊಸದಲ್ಲ ಅವರು ಈ ಹಿಂದೆ ವಿಶಾಲ್ ಜೊತೆ ಸತ್ಯಂ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಸಿನಿಮಾಗಳು ತಮಿಳು ಭಾಷೆಗೆ ಡಬ್ ಆಗಿ ಕೂಡ ಬಿಡುಗಡೆಯಾಗಿವೆ.
ಯುಐ ಸಿನಿಮಾಗೆ ಕಾಯುತ್ತಿರುವ ಫ್ಯಾನ್ಸ್
ಕನ್ನಡ ಚಿತ್ರರಂಗದಲ್ಲಿ ಹೊಸ ಬಗೆಯ ಸಿನಿಮಾ ಮಾಡುವ ಮೂಲಕ ನಿರ್ದೇಶಕರಾಗಿ ಹೆಚ್ಚು ಹೆಸರು ಮಾಡಿದವರು ಉಪೇಂದ್ರ. ಮಾಡಿರುವುದು ಬೆರಳೆಣಿಕೆಯ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು ಎಲ್ಲ ಸಿನಿಮಾಗಳು ಕೂಡ ಸೂಪರ್ ಹಿಟ್ ಆಗಿವೆ. ಶ್, ತರ್ಲೆ ನನ್‌ಮಗ, ಓಂ, ಎ, ಉಪೇಂದ್ರ, ಸೂಪರ್ ಸಿನಿಮಾ ಬಳಿಕ ಯುಐ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.












Click it and Unblock the Notifications