Get Updates
Get notified of breaking news, exclusive insights, and must-see stories!

BBK 12 Winner: ಬಿಗ್‌ಬಾಸ್ ಟ್ರೋಫಿ ಗೆದ್ದ ಹಳ್ಳಿಯ ರೈತನ ಮಗ ಗಿಲ್ಲಿ ನಟನ ಬಗ್ಗೆ ಎಚ್‌.ಡಿ.ಕೆ ಅಚ್ಚರಿ ಹೇಳಿಕೆ

Bigg Boss Kannada 12 Winner: ಬಿಗ್ ಬಾಸ್ ಕನ್ನಡ ಸೀಸನ್ 12ಗೆ ಬಂದ ಬಳಿಕ ಗಿಲ್ಲಿ ನಟ ಭಾರೀ ಜನಪ್ರಿಯತೆ ಗಳಿಸಿದ್ದಾರೆ. ತಮ್ಮ ಸರಳ ವ್ಯಕ್ತಿತ್ವ, ಸ್ಪಷ್ಟ ಮಾತು ಮತ್ತು ಆಟದ ಶೈಲಿಯಿಂದ ಪ್ರೇಕ್ಷಕರ ಮನ ಗೆದ್ದ ಅವರು ವಿನ್ನರ್ ಆಗಿ ಟ್ರೋಫಿ ಮುಡಿಗೇರಿಸಿಕೊಂಡಿದ್ದಾರೆ. ಇದೀಗ ಗಿಲ್ಲಿ ಬಿಗ್‌ಬಾಸ್‌ ಟ್ರೋಫಿ ಗೆದ್ದ ಬಗ್ಗೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಟ್ವಟರ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಹಾಗಾದ್ರೆ, ಅವರು ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಕೂಡ ಒಂದಾಗಿದೆ. ಇದೀಗ 12ನೇ ಸೀಸನ್‌ ಯಶಸ್ವಿಯಾಗಿ ಮುಕ್ತಾಯ ಆಗಿದ್ದು, ಮಂಡ್ಯ ಜಿಲ್ಲೆ, ಮಳವಳ್ಳಿಯ ತಾಲ್ಲೂಕಿನ ದಡದಪುರ ಎಂಬ ಗ್ರಾಮೀಣ ಪ್ರತಿಭೆ ಗಿಲ್ಲಿ ನಟ ಬಿಗ್‌ಬಾಸ್‌ ವಿನ್ನರ್ ಆಗಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿ ತನ್ನ ಮಾತಿನಲ್ಲಿ ಯಾವುದೇ ಬದಲಾವಣೆ ಇಲ್ಲದೆ, ಹಳ್ಳಿ ಸೊಗಡನ್ನು ಉಳಿಸಿಕೊಂಡು, ನಿಷ್ಕಲ್ಮಶ ಮನಸ್ಸಿನಿಂದ ಕನ್ನಡಿಗರ ಮನ ಗೆದ್ದ ಗಿಲ್ಲಿ ಅವರಿಗೆ ಇದೀಗ ಮೆಚ್ಚುಗೆಗಳ ಸುರಿಮಳೆಯೇ ಹರಿದುಬರುತ್ತಿದೆ. ಎಚ್‌.ಡಿ.ಕುಮಾರಸ್ವಾಮಿ ಅವರು ಕೂಡ ಅಭಿನಂದನೆ ಸಲ್ಲಿಸಿದ್ದಾರೆ.

Union Minister H D Kumaraswamy Congratulates Gilli Nata on Winning Bigg Boss Kannada Season 12

ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದೇನು?: ಬಿಗ್‌ಬಾಸ್‌ ಟ್ರೋಫಿ ಗೆದ್ದ ಗಿಲ್ಲಿ ನಟನಿಗೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಅಭಿನಂದನೆ ತಿಳಿಸಿದ್ದಾರೆ. ಈ ಕುರಿತು ತಮ್ಮ ಟ್ವಿಟರ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡ ಅವರು, " ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 12ನೇ ಆವೃತ್ತಿಯಲ್ಲಿ ಅಭೂತಪೂರ್ವ ವಿಜಯ ಸಾಧಿಸಿರುವ ಮಂಡ್ಯ ಲೋಕಸಭೆ ಕ್ಷೇತ್ರದ ಮಳವಳ್ಳಿಯ ಅಪ್ಪಟ ಗ್ರಾಮೀಣ ಪ್ರತಿಭೆ ಗಿಲ್ಲಿ ನಟನಿಗೆ (ಶ್ರೀ ನಟರಾಜ್) ಹೃದಯಪೂರ್ವಕ ಅಭಿನಂದನೆಗಳು," ಎಂದು ಬರೆದುಕೊಂಡಿದ್ದಾರೆ.

ರಕ್ಷಿತಾ ಶೆಟ್ಟಿಗೂ ಅಭಿನಂದನೆ ತಿಳಿಸಿದ ಎಚ್‌.ಡಿ.ಕೆ: "ಹಳ್ಳಿಯ ರೈತನ ಮಗನಾಗಿ ಹುಟ್ಟಿ ಕನ್ನಡಿಗರೆಲ್ಲರ ಮನಗೆದ್ದಿರುವ ಅವರಿಗೆ ಇನ್ನೂ ಹೆಚ್ಚಿನ ಕೀರ್ತಿ, ಹೆಸರು ಬರಲಿ ಎಂದು ಶುಭ ಹಾರೈಸುತ್ತೇನೆ. ಹಾಗೆಯೇ, ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ ಕುಮಾರಿ ರಕ್ಷಿತಾ ಶೆಟ್ಟಿ ಅವರಿಗೂ ಅಭಿನಂದನೆಗಳು," ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇನ್ನೂ ಬಿಗ್ ಬಾಸ್ ಫಿನಾಲೆಯಲ್ಲಿ ಗಿಲ್ಲಿ ಅವರಿಗೆ ಪ್ರಬಲ ಪೈಪೋಟಿ ನೀಡಿದ ರಕ್ಷಿತಾ ಶೆಟ್ಟಿ ಅವರು ಮೊದಲ ರನ್ನರ್ ಅಪ್‌ ಆದರು. ಇವರಿಗೂ ಕೂಡ ಎಚ್‌.ಡಿ.ಕುಮಾರಸ್ವಾಮಿ ಅವರು, ಅಭಿನಂದನೆಗಳನ್ನು ತಿಳಿಸಿದ್ದಾರೆ. ಈ ಇಬ್ಬರೂ ಪ್ರತಿಭೆಗಳು ಬಿಗ್‌ಬಾಸ್‌ನಲ್ಲಿ ತಮ್ಮ ಶ್ರಮದ ಮೂಲಕ ಜನರ ಪ್ರೀತಿಯನ್ನು ಗಿಟ್ಟಿಸಿಕೊಂಡಿದ್ದಾರೆ. ಇವರಿಗೆ ಒಳ್ಳೆಯದಾಗಲಿ ಎಂದು ಶುಭಹಾರೈಸಿದ್ದಾರೆ.

ಗಿಲ್ಲಿ ನಟ ತಮ್ಮ ಮುಗ್ಧತೆಯಿಂದಲೇ ಕೋಟಿ.. ಕೋಟಿ ಕನ್ನಡಿಗರ ಮನಸನ್ನು ಗೆದ್ದಿದ್ದಾರೆ. ಬಿಗ್‌ಬಾಸ್‌ ಇತಿಹಾಸದಲ್ಲೇ ಇದೇ ಮೊಟ್ಟ ಮೊದಲ ಬಾರಿಗೆ ಅತೀ ಹೆಚ್ಚು ವೋಟ್‌ ಪಡೆದ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಅಷ್ಟರ ಮಟ್ಟಿಗೆ ಜನರ ಮನಸನ್ನು ಗೆದ್ದಿದ್ದಾರೆ ಗಿಲ್ಲಿ ನಟ. ಚಿಕ್ಕ ಮಕ್ಕಳಿಂದ ಹಿಡಿದು ಅಜ್ಜಿ-ಅಜ್ಜಂದಿರವರೆಗೂ ಗಿಲ್ಲಿಯದ್ದೇ ಹೆಸರು ಕೇಳಿಬರುತ್ತಿದೆ. ಇದೀಗ ಅವರು ಬಿಗ್‌ಬಾಸ್‌ ಟ್ರೋಫಿ ಗೆದ್ದ ಹಿನ್ನೆಲೆ ಮಂಡ್ಯ ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ಮುಳುಗಿಹೋಗಿದ್ದಾರೆ.

ಗಿಲ್ಲಿ ನಟ ನಟಿಸಿದ ಸಿನಿಮಾಗಳು: "ಲಂಗೋಟಿ ಮ್ಯಾನ್" ಒಂದು 2024ರ ಕನ್ನಡ ಸಿನಿಮಾ ಆಗಿದ್ದು, ಇದರಲ್ಲಿ ಗಿಲ್ಲಿ ನಟ 'ರಿಂಗೇಶ್' ಪಾತ್ರದಲ್ಲಿ ನಟಿಸಿದ್ದಾರೆ. ಇದು ಆಧುನಿಕ ಸಂಪ್ರದಾಯವನ್ನು ಒಳಗೊಂಡ ಹಾಸ್ಯ ಚಿತ್ರವಾಗಿದೆ. ಇದನ್ನು ಸಂಜೋತಾ ಭಂಡಾರಿ ಅವರು ನಿರ್ದೇಶಿಸಿದ್ದಾರೆ.

ಗಿಲ್ಲಿ ನಟ (ನಟರಾಜ್) ಮಂಡ್ಯ ಜಿಲ್ಲೆಯ ಸರಳ ಗ್ರಾಮೀಣ ಹಿನ್ನೆಲೆಯಿಂದ ಬಂದ ನಟ ಹಾಗೂ ಹಾಸ್ಯ ಕಲಾವಿದ. ಸಾಮಾಜಿಕ ಜಾಲತಾಣ ಮತ್ತು ಟಿವಿ ಕಾಮಿಡಿ ಶೋಗಳ ಮೂಲಕ ಜನರಿಗೆ ಪರಿಚಿತರಾದ ಅವರು ತಮ್ಮ ಸಹಜ ಗ್ರಾಮೀಣ ಹಾಸ್ಯ, ಸರಳ ಮಾತು ಮತ್ತು ನೈಜ ವ್ಯಕ್ತಿತ್ವದಿಂದ ಜನಮನ ಗೆದ್ದರು. ನಂತರ ಅವರು ಚಿತ್ರರಂಗಕ್ಕೂ ಕಾಲಿಟ್ಟು "Langoti Man", "1st Day 1st Show" ಸೇರಿದಂತೆ ಕೆಲವು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೆ, ಅವರು ಇತ್ತೀಚೆಗಷ್ಟೇ ಬಿಡುಗಡೆಯಾದ ದರ್ಶನ್ ಅಭಿನಯದ ಡೆವಿಲ್‌ ಸಿನಿಮಾದಲ್ಲೂ ಕೂಡ ಕಾಣಿಸಿಕೊಂಡಿದ್ದಾರೆ. ಇನ್ನೂ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟ ಬಳಿಕ ಸಿನಿಮಾಗಳಲ್ಲಿ ನಟನೆ ಮಾಡಲು ಭಾರೀ ಆಫರ್‌ಗಳು ಸಹ ಬಂದಿವೆ ಎನ್ನುವ ಮಾಹಿತಿಯಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+