'ದರ್ಶನ್ ಬೇಗ ಬಿಡುಗಡೆ ಆಗದಿದ್ದರೆ ಸರ್ಕಾರಕ್ಕೆ ನಷ್ಟ': ಏನಿದು ಹೊಸ ಲಾಜಿಕ್?
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಎರಡನೇ ಆರೋಪಿಯಾಗಿದ್ದಾರೆ. ಮೊದಲ ಆರೋಪಿಯಾಗಿರುವ ಪವಿತ್ರಾ ಗೌಡ ಅವರನ್ನು ಮತ್ತೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರು ತಿಂಗಳ ಕಾಲ ಜೈಲಿನಲ್ಲಿದ್ದ ದರ್ಶನ್ ಆಂಡ್ ಗ್ಯಾಂಗ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಅನಾರೋಗ್ಯದ ನಿಮಿತ್ತ ದರ್ಶನ್ ಅವರಿಗೆ ಹೈಕೋರ್ಟ್ ಕಡೆಯಿಂದ ಜಾಮೀನು ನೀಡಲಾಗಿತ್ತು. ಇದನ್ನು ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಿತ್ತು. ಅಷ್ಟೇ ಅಲ್ಲದೆ ಬೆಂಗಳೂರಿನಲ್ಲಿ ಅವರಿಗೆ ರಾಜಾತಿಥ್ಯ ನೀಡಿದ್ದಕ್ಕೂ ಕೂಡ ಪ್ರಶ್ನೆ ಎದ್ದಿತ್ತು. ಇದೀಗ ಸುಪ್ರೀಂ ಕೋರ್ಟ್ ಶಾಕ್ ನೀಡುವ ಮೂಲಕ ಜಾಮೀನು ರದ್ದಾಗಿ, ಮತ್ತೆ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಇತರೆ ಆರೋಪಿಗಳು ಜೈಲು ಸೇರಿದ್ದಾರೆ.
ಮತ್ತೆ ನಟ ದರ್ಶನ್ ಮತ್ತೆ ಜೈಲು ಪಾಲಾಗಿರುವ ಬಗ್ಗೆ ಚಿತ್ರರಂಗದಲ್ಲಿ ಒಬ್ಬೊಬ್ಬರು ಒಂದೊಂದು ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಅವರು ಮಾತನಾಡಿ, ಟ ದರ್ಶನ್ ಆದಷ್ಟು ಬೇಗ ಜೈಲಿನಿಂದ ಬಿಡುಗಡೆ ಆಗಲಿಲ್ಲವೆಂದರೆ ಅದರಿಂದ ಸರ್ಕಾರಕ್ಕೆ ನಷ್ಟ ಉಂಟಾಗಲಿದೆಯಂತೆ. ಕನ್ನಡ ಚಿತ್ರರಂಗದ ಸಂಕಷ್ಟದಲ್ಲಿದೆ, ಅಳಿವಿನಂಚಿನಲ್ಲಿದೆ ಹೀಗಿರುವಾಗ ಸ್ಟಾರ್ ನಟರು ಹೆಚ್ಚು ಸಿನಿಮಾಗಳನ್ನು ಮಾಡಬೇಕು, ಅದರಿಂದ ಕಾರ್ಮಿಕರಿಗೆ ಕೆಲಸ ಸಿಗುತ್ತದೆ. ಈಗ ದರ್ಶನ್ ಜೈಲು ಸೇರಿರುವದರಿಂದ ಹಲವು ಕಾರ್ಮಿಕರಿಗೆ ಸಮಸ್ಯೆ ಮಾತ್ರವಲ್ಲ, ಇದರಿಂದ ಸರ್ಕಾರಕ್ಕೂ ನಷ್ಟ ಉಂಟಾಗಲಿದೆ ಎಂದುತಮ್ಮದೇ ಆದ ಹೊಸ ಲಾಜಿಕ್ ನಲ್ಲಿ ಮಾತನಾಡಿದ್ದಾರೆ.

ಈಗಾಗಲೇ ಕನ್ನಡ ಚಿತ್ರರಂಗ ಕಷ್ಟದಲ್ಲಿದೆ. ಇದು ದುರಂತ. ಚಿತ್ರರಂಗಕ್ಕೆ ನೂರಕ್ಕೆ ನೂರು ಭಾಗ ನಷ್ಟ. ಡೆವಿಲ್ ಸಿನಿಮಾಗೆ ಇದರಿಂದ ತೊಂದರೆ ಆಗಿದೆ. ಡೆವಿಲ್ ಸಿನಿಮಾ ಹಾಡು ಬಿಡುಗಡೆ ಆಗಬೇಕಿತ್ತು. ಯಾವ ನಟರು ಇಂತಹ ಸಮಸ್ಯೆಗಳನ್ನು ತಂದುಕೊಳ್ಳಬಾರದು. ಇದ್ರೆ ನೆಮ್ಮದಿಯಾಗಿ ಇರ್ಬೇಕು ಅನ್ನೋ ಡೆವಿಲ್ ಸಿನಿಮಾ ಹಾಡು ಬಿಡುಗಡೆ ಆಗಬೇಕಿತು. ಆದರೆ, ನಟ ದರ್ಶನ್ ಅವರಿಗೆ ನೆಮ್ಮದಿ ಇಲ್ಲದ ಹಾಗಾಗಿದೆ. ಯಾವ ಸಮಯದಲ್ಲಿ ಏನಾಗುತ್ತೆ ಅಂತ ಹೇಳೋಕೆ ಆಗಲ್ಲ ಎಂದು ನಟ ದರ್ಶನ್ ಅವರೇ ಸಿನಿಮಾ ತಂಡದ ಜೊತೆ ಹೇಳಿಕೊಂಡಿದ್ರು. ಹಾಗಾಗಿ ಡೆವಿಲ್ ಸಿನಿಮಾ ಕೆಲಸವನ್ನ ಬೇಗ ಬೇಗ ಮುಗಿಸಿದ್ರು. ದರ್ಶನ್ ಅವರಿಗೆ ಜೈಲಿನಿಂದ ಬಿಡುಗಡೆ ಆಗೋಕೆ ಇನ್ನೂ ಅವಕಾಶ ಇದೆ ಎಂದು ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಹೇಳಿದ್ದಾರೆ.
ಇನ್ನೂ ನಟಿ ಹಾಗೂ ನಿರ್ಮಾಪಕಿ ಪ್ರಿಯಾ ಹಾಸನ್ ಅವರು ಮಾತನಾಡಿ, ತಪ್ಪು ಮಾಡಿದ್ರೆ ಶಿಕ್ಷೆ ಅನುಭವಿಸಲೇಬೇಕು, ಉಪ್ಪು ತಿಂದ ಮೇಲೆ ನೀರು ಕುಡಿಲೇ ಬೇಕು. ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ ಅನ್ನೋ ಹಾಗೆ ನಟ ದರ್ಶನ್ ಆಗಿದ್ದಾರೆ. ದರ್ಶನ್ ಒಬ್ಬ ಒಳ್ಳೆಯ ವ್ಯಕ್ತಿ ಆಗಿ ಹೊರಗೆ ಬರಲಿ. ದರ್ಶನ್ ಅಭಿಮಾನಿಗಳಿಗೂ ಇದು ಅರ್ಥ ಆಗಬೇಕು. ದರ್ಶನ್ ಅವರನ್ನು ಪ್ರೀತಿ ಮಾಡಿ ಆದರೆ ಅವರ ತಪ್ಪಿಗೂ ಪ್ರೋತ್ಸಾಹ ಕೊಡಬೇಡಿ. ಹೆಣ್ಣು ಮಕ್ಕಳಿಗೆ ಗೌರವ ಕೊಡೋದನ್ನು ಕಲಿಯಿರಿ. ದರ್ಶನ್ ಅಭಿಮಾನಿಗಳೇ ಹೆಣ್ಣು ಮಕ್ಕಳಿಗೆ ಕೆಟ್ಟ ಮೆಸೇಜ್ ಮಾಡುತ್ತಾರೆ ಎಂದು ಅಸಮಾಧಾನ ಹೊರ ಹಾಕಿದರು.












Click it and Unblock the Notifications