Troll Song: UI ಟ್ರೋಲ್ ಸಾಂಗ್‌ನಲ್ಲಿ ಮಿಸ್ ಆದ ಟ್ರೋಲ್‌ಗಳಿವು, ಉಳಿದವುಗಳನ್ನು ಕಮೆಂಟ್ ಮಾಡಿ
ಸೂಪರ್ ಸ್ಟಾರ್, ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶಿಸಿರುವ UI ಚಿತ್ರದ ಟ್ರೋಲ್ ಸಾಂಗ್ ರಿಲೀಸ್ ಆಗಿದ್ದು, ಬಿಡುಗಡೆಯಾದ ಗಂಟೆಯೊಳಗೆ ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ವಿವಿಧ ಭಾಷೆಯಲ್ಲಿ ಟ್ರೋಲ್ ಸಾಂಗ್ ರಿಲೀಸ್ ಆಗಿದ್ದು, ಕನ್ನಡ ಹಾಡಿಗೆ ಉಪ್ಪಿ ಅಭಿಮಾನಿಗಳು ಮಾತ್ರವಲ್ಲದೇ ಕೇಳಿದ ಪ್ರತಿಯೊಬ್ಬರು ಕೂಡ ಫಿದಾ ಆಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದ ಟ್ರೋಲ್‌ಗಳನ್ನು ಬಳಸಿಕೊಂಡು ಈ ಹಾಡಿನ ಸಾಹಿತ್ಯ ಬರೆಯಲಾಗಿದೆ. ಇತ್ತೀಚೆಗೆ ಭಾರೀ ಟ್ರೋಲ್ ಆದ ಬೆಳ್ಳುಳ್ಳಿ ಕಬಾಬ್, ಕರಿಮಣಿ ಮಾಲೀಕ, ನಮ್ ಮನಸು, ಏನಂತೀರಾ, ತಗಡು ಸೇರಿದಂತೆ ವಿವಿಧ ಪದಗಳನ್ನು ಬಳಸಿಕೊಂಡು ಹಾಡು ಮಾಡಲಾಗಿದ್ದು, ಕೇಳುಗರು ಒನ್ ಮೋರ್ ಒನ್ ಮೋರ್ ಎನ್ನುವಂತಾಗಿದೆ.

ಆಯಾ ಭಾಷೆಗೆ ತಕ್ಕಂತೆ ಹಾಡಿನ ಸಾಹಿತ್ಯ ಬದಲಿಸಲಾಗಿದೆ. ಕನ್ನಡ ಹಾಡಿಗೆ ಅಜನೀಶ್ ಲೋಕನಾಥ್ ಸಂಗೀತದ ಟ್ಯೂನ್‌ಗೆ ನರೇಶ್ ಕುಮಾರ್ ಸಾಹಿತ್ಯ ಬರೆದಿದ್ದಾರೆ. ಕನ್ನಡದಲ್ಲಿ ಐಶ್ವರ್ಯ ರಂಗರಾಜನ್, ಹರ್ಷಿಕಾ ದೇವನಾಥ್ ಹಾಡಿಗೆ ಧ್ವನಿಯಾಗಿದ್ದು, ಈ ಟ್ರೋಲ್ ಸಾಂಗ್‌ನಲ್ಲಿ ಚಿತ್ರದ ನಟಿ ರೀಷ್ಮಾ ನಾಣಯ್ಯ ಸಖತ್ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ.
ಸದ್ಯ U&I ಚಿತ್ರದ ಟ್ರೋಲ್ ಸಾಂಗ್ ಸಖತ್ ವೈರಲ್ ಆಗುತ್ತಿದ್ದು, ಬಹುತೇಕ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದ ಎಲ್ಲಾ ಟ್ರೋಲ್‌ಗಳನ್ನು ಬಳಸಿಕೊಳ್ಳಲಾಗಿದೆ. ಆದರೆ ಈ ಹಾಡಿನಲ್ಲಿ ಬಿಟ್ಟು ಹೋದ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆದ ಕೆಲವು ಟ್ರೋಲ್ ಡೈಲಾಗ್‌ಗಳ ಪಟ್ಟಿ ಇಲ್ಲಿದೆ

*ಹೌದು ಹುಲಿಯಾ
* ಈ ತರ ಹಿಂಸೆ ಕೊಟ್ಟರೆ ಯಾರು ಬದುಕುತ್ತಾರೆ ಸರ್
* ಬರೀ ಇಂತದೆಯಾ
* ಹಾಯ್ ಫ್ರೆಂಡ್ಸ್
*ಸೂರ್ಯ ನಿಂಗೆ ಒಳ್ಳೆದಾಯ್ತದಾ
*ಹೇಳ್ರಪ್ಪಾ
* ನನ್ ಮೇಲೆ ಆಣೆ ಇಟ್ಟು ಹೇಳು
*ಎಲ್ಲೋ ಗೋಜಪ್ಪ ನಿನ್ನ ಅರಮನೆ
* ಮಹಾ ಪ್ರಭುಗಳೇ ನೀವೆನಿಲ್ಲಿ
*ಇದು..ಇದು..ಆಚ್ಚುಲಿ ಚೆನ್ನಾಗಿರೋದು
*ಯಾವೋ ಇವೆಲ್ಲಾ
*ನಾನು ನಿಮ್ಮ ಅಭಿಮಾನಿ ಅಣ್ಣಾ
*ಅಕ್ಕೋ ನಾಗರಬಾವಿ ಇದೇನಾ ಅಕ್ಕೋ
*ನನ್ ಕೈಯಲ್ಲಿ ಆಗ್ತಾ ಇಲ್ಲ ಅಣ್ಣಾ
* ಆ ಜಿಂಗಾ ಲಕಾ ಲಕಾ ಲಕಾ
*ಯಾಕಣ್ಣಾ
* ಮೋದಿ-ಮೋದಿ, ಪ್ರಜಾಕೀಯ-ಪ್ರಜಾಕೀಯ, ಉಪೇಂದ್ರ-ಉಪೇಂದ್ರ, ಥ್ಯಾಂಕ್ಯೂ ಉಪೇಂದ್ರ
* ಇಷ್ಟು ಹೇಳೋಕೆ ಇಷ್ಟ ಪಡ್ತೀನಿ ಓಕೆ ಫ್ರೆಂಡ್ಸ್ ಬಾಯ್












Click it and Unblock the Notifications