Vaishnavi Gowda: ವೈಷ್ಣವಿ ಗೌಡ ಮನೆಯಲ್ಲಿ ಸಂಭ್ರಮ, ಮದುವೆ ಶಾಸ್ತ್ರದ ಫೋಟೋ ಹಂಚಿಕೊಂಡ ನಟಿ
ಕಿರುತೆರೆ ನಟಿ ಹಾಗೂ ಬಿಗ್‌ಬಾಸ್ ಖ್ಯಾತಿಯ ವೈಷ್ಣವಿ ಗೌಡ ಅವರ ನಿಶ್ಚಿತಾರ್ಥ ಇತ್ತೀಚೆಗಷ್ಟೇ ನಡೆದಿತ್ತು. ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ವೈಷ್ಣವಿ ಅವರು ಅಭಿನಯಿಸುತ್ತಿದ್ದ ಸೀತಾರಾಮ ಸೀರಿಯಲ್ ಪೂರ್ಣಗೊಂಡ ಬೆನ್ನಲ್ಲೇ ಅವರ ಮನೆಯಲ್ಲಿ ಮದುವೆ ಶಾಸ್ತ್ರಗಳು ಶುರುವಾಗಿವೆ. ಈ ಖುಷಿ ವಿಚಾರವನ್ನು ವೈಷ್ಣವಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮನೆಯಲ್ಲಿ ನಡೆಯುತ್ತಿರುವ ಮದುವೆ ಶಾಸ್ತ್ರಗಳ ಫೋಟೋಗಳನ್ನು ಕೂಡ ಶೇರ್ ಮಾಡಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ. ಇದರೊಂದಿಗೆ ಅವರು ಮತ್ತೊಂದು ಸಿಹಿವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಜನಪ್ರಿಯತೆ ಗಳಿಸಿದ್ದ ಗುಳಿಕೆನ್ನೆ ಚೆಲುವೆ ವೈಷ್ಣವಿ ಗೌಡ ಬಳಿಕ ಬಿಗ್‌ಬಾಸ್‌ನಲ್ಲಿ ಮುಂಚಿದ್ದರು. ಇದಾದ ಬಳಿಕ ಸೀತಾರಾಮ ಸೀರಿಯಲ್ ಮೂಲಕ ಮತ್ತೆ ಕನ್ನಡ ಪ್ರೇಕ್ಷಕರಿಗೆ ಹತ್ತಿರವಾಗಿದ್ದರು. ಆದರೆ, ಈ ಧಾರಾವಾಹಿ ಮುಗಿಯುತ್ತಿದ್ದು, ಕೊನೆಯ ಸಂಚಿಕೆಯ ಶೂಟಿಂಗ್ ಕೂಡ ಮುಗಿದಿದೆ. ಇಡೀ ಟೀಂ ಇತ್ತೀಚೆಗಷ್ಟೇ ಭಾವುಕವಾಗಿ ಈ ಸೀರಿಯಲ್‌ಗೆ ವಿದಾಯ ಹೇಳಿದ್ದು, ವೈಷ್ಣವಿ ಕೂಡ ಭಾಗಿಯಾಗಿದ್ದರು. ಅತ್ತ ಸೀರಿಯಲ್ ಮುಗಿದ ಬೆನ್ನಲ್ಲೇ ಇತ್ತ ಮದುವೆ ಕಾರ್ಯಗಳು ಶುರುವಾಗಿವೆ.

ಇಂದಿನಿಂದಲೇ ವೈಷ್ಣವಿ ಅವರ ಮದುವೆ ಶಾಸ್ತ್ರಗಳು ಶುರುವಾಗಿದ್ದು, ಚಪ್ಪರ ಪೂಜೆ ನಡೆದಿದೆ. ಪೋಷಕರೊಂದಿಗೆ ನಿಂತು ಚಪ್ಪರಕ್ಕೆ ಪೂಜೆ ಮಾಡುತ್ತಿರುವುದು, ಕೊರಳಿಗೆ ಹೂವಿನ ಹಾರ ಹಾಗೂ ಮುಖಕ್ಕೆ ಹಳದಿ ಹಚ್ಚಿಕೊಂಡಿರುವ ಫೋಟೋಗಳನ್ನು ವೈಷ್ಣವಿ ಶೇರ್ ಮಾಡಿಕೊಂಡಿದ್ದಾರೆ. ಇಂದಿನಿಂದ ಶುರು ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ವೈಷ್ಣವಿ ಗೌಡ ಬಿಗ್‌ಬಾಸ್ ಮನೆಯಿಂದ ಹೊರಬಂದಾಗ ಹಲವು ಮದುವೆ ಪ್ರಪೋಸಲ್‌ಗಳು ಬಂದಿದ್ದವು. ಆದರೆ ಯಾವುದಕ್ಕೂ ಓಕೆ ಮಾಡದ ಅವರು ಇದೀಗ ಅನುಕೂಲ್ ಅವರನ್ನು ಮದುವೆಯಾಗಲು ಒಪ್ಪಿದ್ದಾರೆ. ಇಂದು ತಮ್ಮ ಸಂಬಂಧಿಕರ ಸಮ್ಮುಖದಲ್ಲಿ ನಟಿ ವೈಷ್ಣವಿ ಗೌಡ ಅವರ ಅರಿಶಿಣ ಶಾಸ್ತ್ರ ಹಾಗೂ ಚಪ್ಪರ ಶಾಸ್ತ್ರ ಮುಗಿದಿದೆ. ವೈಷ್ಣವಿ ಅವರು ಆಗಲೇ ಮಧುಮಗಳ ಗೆಟಪ್‌ನಲ್ಲಿರುವ ಫೋಟೋಗಳು ವೈರಲ್ ಆಗಿವೆ.
ವೈಷ್ಣವಿ ಗೌಡ ಹುಡುಗ ಯಾರು?
ವೈಷ್ಣವಿ ಗೌಡ ಅವರ ನಿಶ್ಚಿತಾರ್ಥ ಇತ್ತೀಚೆಗೆ ನಡೆದಿತ್ತು. ಇಂಡಿಯನ್ ಏರ್‌ಫೋರ್ಸ್ ಅಲ್ಲಿ ಕೆಲಸ ಮಾಡುತ್ತಿರುವ ಛತ್ತಿಸ್‌ಗಢದ ಅನುಕೂಲ್ ಮಿಶ್ರಾ ಅವರೊಂದಿಗೆ ವೈಷ್ಣವಿ ಹಸೆಮಣೆ ಏರಲಿದ್ದಾರೆ. ಅಂದಹಾಗೆ ಭಾವಿ ಪತಿಗೆ ಕನ್ನಡ ಅಷ್ಟಾಗಿ ಮಾತನಾಡಲು ಬರುವುದಿಲ್ಲ. ಇದು ಕೂಡ ಇತ್ತೀಚೆಗೆ ವಿವಾದಕ್ಕೆ ಕಾರಣವಾಗಿತ್ತು. ಏಪ್ರಿಲ್ 14ರಂದು ವೈಷ್ಣವಿ ಗೌಡ ಹಾಗೂ ಅನುಕೂಲ್ ಮಿಶ್ರಾ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆ ಮೂಲಕ ತಮ್ಮ ಭಾವಿ ಪತಿಯನ್ನು ವೈಷ್ಣವಿ ಪರಿಚಯಿಸಿದ್ದರು.

ಅನುಕೂಲ್ ಮಿಶ್ರಾ ಇಂಡಿಯನ್ ಏರ್‌ಫೋರ್ಸ್‌ನಲ್ಲಿ ಫ್ಲೈಟ್ ಲೆಫ್ಟಿನೆಂಟ್ ಆಗಿ ಕೆಲಸ ಮಾಡುತ್ತಿದ್ದು, ಇದು ಪಕ್ಕಾ ಅರೇಂಜ್ ಮ್ಯಾರೇಜ್ ಎಂದಿದ್ದಾರೆ. ಮ್ಯಾಟ್ರಿಮೋನಿಯಲ್ಲಿ ಕೂಡಿ ಬಂದ ಸಂಬಂಧ, ಮೊದಲಿಗೆ ಇಬ್ಬರು ಫ್ಯಾಮಿಲಿ ಮೀಟ್ ಆಗಿದ್ದೆವು. ಬಳಿಕ ದೇವಸ್ಥಾನದಲ್ಲಿ ಇಬ್ಬರೂ ಭೇಟಿ ಮಾಡಿದ್ದಾಗಿ ಹೇಳಿಕೊಂಡಿದ್ದರು. ನಾನು ಮದುವೆ ಆದ ಬಳಿಕವೂ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸುತ್ತೇನೆ. ಈ ವಿಚಾರದಲ್ಲಿ ನನಗಿಂತ ಅನುಕೂಲ್ ಅವರು ಹೆಚ್ಚು ಕಾಳಜಿ ವಹಿಸುತ್ತಾರೆ ಎಂದಿದ್ದರು.












Click it and Unblock the Notifications