ಹೀರೋಯಿನ್ ಸ್ವಲ್ಪ ಹೈಟಾಗಿದ್ದರೆ ಚೆನ್ನಾಗಿರ್ತಿತ್ತು- ಮುದ್ದು ಸೊಸೆ ಬಗ್ಗೆ ತ್ರಿವಿಕ್ರಮ್ ಹೀಗೇಳೋದಾ?
ಬಿಗ್‌ಬಾಸ್ ಮನೆಯಿಂದ ಹೊರ ಬಂದ ಬಳಿಕ ತ್ರಿವಿಕ್ರಮ್ ಎಲ್ಲದರಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಆದರೀಗ ತ್ರಿವಿಕ್ರಮ್ ಅವರು ನಟಿಸುತ್ತಿರುವ ಹೊಸ ಧಾರಾವಾಹಿ ಪ್ರಸಾರ ಆಗುತ್ತಿದೆ. ಧಾರಾವಾಹಿಯಲ್ಲಿ ತ್ರಿವಿಕ್ರಮ್ ಅವರು ಊರು ಗೌಡನ ಮಗನ ಪಾತ್ರ ಮಾಡುತ್ತಿದ್ದಾರೆ. ಈ ಸೀರಿಯಲ್ ಹೆಸರು 'ಮುದ್ದು ಸೊಸೆ'. ಈ ಸೀರಿಯಲ್ ಮೂಲಕ ತ್ರಿವಿಕ್ರಮ್ ಸಾಕಷ್ಟು ಸದ್ದು ಮಾಡುತ್ತಿದ್ದು ನಟಿ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
'ಮುದ್ದು ಸೊಸೆ' ಸೀರಿಯಲ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು ಜನ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಇದರ ಬಗ್ಗೆ ವಿಜಯ ಕರ್ನಾಟಕ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಮಾತನಾಡಿದ ತ್ರಿವಿಕ್ರಮ್, 'ಈ ಪಾತ್ರ ಮಾಡುತ್ತಿರುವುದು ನನಗೆ ಖುಷಿ ಇದೆ. ಅಪ್ಪ ಅಮ್ಮ ಕಾಸು ಕೊಟ್ಟು ತ್ರಿವಿಕ್ರಮ್ ಅಂತ ಹೆಸರು ಇಟ್ಟಿದ್ದರು. ಈಗ ಚಾನಲ್ ಅವರು ಕಾಸು ಕೊಟ್ಟು ಭದ್ರಗೌಡ ಅಂತ ಹೆಸರು ಇಟ್ಟಿದ್ದಾರೆ' ಎಂದು ಕಾಮಿಡಿ ಮಾಡಿದ್ದಾರೆ. ಅಲ್ಲದೆ ಧಾರಾವಾಹಿಯಲ್ಲಿ ನಟಿಸುತ್ತಿರುವ ನಟಿಯ ಹೈಟ್ ಬಗ್ಗೆ ತ್ರಿವಿಕ್ರಮ್ ಕಾಮೆಂಟ್ ಮಾಡಿದ್ದಾರೆ.

ಹೌದು ಎಲ್ಲರಿಗೂ ಗೊತ್ತಿರುವಂತೆ 'ಮುದ್ದು ಸೊಸೆ' ಧಾರಾವಾಹಿಯಲ್ಲಿ ಪ್ರತಿಮಾ ಠಾಕೂರ್ ಅವರು ನಟಿಯಾಗಿ ಪಾತ್ರ ಮಾಡುತ್ತಿದ್ದಾರೆ. ಪ್ರತಿಮಾ ಎತ್ತರದಲ್ಲಿ ಸ್ವಲ್ಪ ಕಡಿಮೆ ಇದ್ದಾರೆ. ತ್ರಿಮಿಕ್ರಮ್‌ಗೆ ಹೋಲಿಸಿದರೆ ಪ್ರತಿಮಾ ಎತ್ತರ ತೀರಾ ಕಡಿಮೆ ಇದೆ. ಹೀಗಾಗಿ ತ್ರಿವಿಕ್ರಮ್ ಹೀರೋಯಿನ್ ಸ್ವಲ್ಪ ಹೈಟಾಗಿದ್ದರೆ ಚೆನ್ನಾಗಿರ್ತಿತ್ತು ಎಂದಿದ್ದಾರೆ.
'ಮುದ್ದು ಸೊಸೆ' ಧಾರಾವಾಹಿಯಲ್ಲಿ ಹೀರೋಯಿನ್ ಸ್ವಲ್ಪ ಹೈಟಾಗಿದ್ದರೆ ಚೆನ್ನಾಗಿರ್ತಿತ್ತು, ನಮ್ಮ ವಯಸ್ಸಿನವರು ಆಗಿದ್ದರೆ ಇನ್ನೂ ಚೆನ್ನಾಗಿ ಇರ್ತಿತ್ತು. ಆದರೆ ಹೈಟಾಗಿರೋರು ಆದರೆ ಶಾಲೆಗೆ ಹೋಗುವ ಪಾತ್ರದಲ್ಲಿ ಚೆನ್ನಾಗಿ ಕಾಣಲ್ಲ. ಹೀಗಾಗಿ ಪಾತ್ರಕ್ಕೆ ಪ್ರತಿಮಾ ಆಯ್ಕೆ ಆಗಿದ್ದಾರೆ ಎಂದಿದ್ದಾರೆ ತ್ರಿವಿಕ್ರಮ್. ಇದೀಗ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ತ್ರಿವಿಕ್ರಮ್ ಅವರ ಈ ಮಾತಿನಿಂದ ಧಾರಾವಾಹಿಯ ನಟಿಯ ಎತ್ತರದ ಬಗ್ಗೆ ಅವರಿಗೆ ಬೇಸರ ಇರುವುದು ಸ್ಪಷ್ಟವಾಗಿದೆ.

ಮುಂದುವರೆದು ಮಾತನಾಡಿದ ತ್ರಿವಿಕ್ರಮ್, ಬಿಗ್‌ಬಾಸ್ ಮನೆಯಿಂದ ಹೊರ ಬಂದ ಬಳಿಕ ಸುಮಾರು ಜನ ಕರೆ ಮಾಡಿ 'ಸರ್ ನೀವು ಹೀರೋ ಆಗ್ಬೇಕು. ನೀವು ಧಾರಾವಾಹಿ ಮಾಡ್ಬೇಕು' ಎಂದು ಹೇಳುತ್ತಿದ್ದರು. ಆದರೆ ಅದಕ್ಕೆ ಅವಕಾಶಗಳು ಬರುತ್ತಿರಲಿಲ್ಲ. ಸಿನಿಮಾ ಮಾಡುವ ಆಸೆ ನನಗೆ ಇತ್ತು ಆದರೆ ಆಫರ್ ಬರಲಿಲ್ಲ. ಬಿಗ್‌ಬಾಸ್ ಮುಗಿದ ಬಳಿಕ ನನಗೆ ನನ್ನ ಜೀವನ ನಡೆಸಬೇಕಾಗಿತ್ತು. ಧಾರಾವಾಹಿ ಆಫರ್ ಬಂತು. ಹೀಗಾಗಿ ನಾನು ಧಾರವಾಹಿಯಲ್ಲಿ ಪಾತ್ರ ನಿರ್ವಹಿಸಲು ಒಪ್ಪಿಕೊಂಡೆ. ಮುದ್ದು ಸೊಸೆ ಧಾರಾವಾಹಿಯ ಕಥೆ ಕೂಡ ಅದ್ಭುತವಾಗಿದೆ. ನನಗೆ ಕನೆಕ್ಟ್ ಆಯ್ತು. ಧಾರವಾಹಿಯಲ್ಲಿ ನಾನು ತಂದೆಯನ್ನು ತುಂಬಾ ಪ್ರೀತಿಸುತ್ತೇನೆ. ಭದ್ರಗೌಡ ಪಾತ್ರದಲ್ಲಿ ನಾನು ಪ್ರತಿಮಾ ಅವರನ್ನು ಇಷ್ಟಪಡುತ್ತಿರುತ್ತೇನೆ. ಪಾತ್ರಕ್ಕೆ ತಕ್ಕಂತೆ ಕತೆ ಚೆನ್ನಾಗಿದೆ ಎಂದಿದ್ದಾರೆ.
ಬಿಗ್‌ಬಾಸ್ ಮನೆಯಿಂದ ಹೊರ ಬರುವಾಗ ಖಾಲಿ ಹಾಳೆಯಾಗಿ ಬಂದಿದ್ದೆ. ಅಂದರೆ ನಾನು ಫಸ್ಟ್ ಬರುತ್ತೇನೆ ಸೆಕೆಂಡ್ ಬರುತ್ತೇನೆ ಅಂದುಕೊಂಡಿರಲಿಲ್ಲ. ಸೆಕೆಂಡ್ ಬಂದೆ. ಸಾಕಷ್ಟು ಅಮ್ಮಂದಿರ ಪ್ರೀತಿ ಸಿಕ್ತು. ಬಂದ್ಮೇಲೆ ಸಿನಿಮಾ ಮಾಡಬೇಕಾ? ಧಾರಾವಾಹಿ ಮಾಡಬೇಕಾ ಅನ್ನೋ ಪ್ರಶ್ನೆಗಳು ಇದ್ದವು. ಧಾರಾವಾಹಿ ಮಾಡುವಾಗ ಕೆಲವು ಎಪಿಸೋಡ್ ಹೋದ ಬಳಿಕ ಕೆಲವರು ಫೋನ್ ಮಾಡಿ ನೀವು ಸಿನಿಮಾ ಮಾಡಿ ಅಂತ ಜಾಕ್ ಏರಿಸಿದರು. ನಾನು ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಲಿಲ್ಲ ಎಂದಿದ್ದಾರೆ ತ್ರಿವಿಕ್ರಮ್.

ಇನ್ನು ಮುಂದೆ ದೊಡ್ಡ ಹೆಸರು ಮಾಡಬೇಕು ಅಂದರೆ ಒಳ್ಳೆಯ ಸಿನಿಮಾ ಮಾಡಬೇಕು. ನಿರ್ದೇಶಕರು ಒಳ್ಳೆಯ ಸಿನಿಮಾ ಕಥೆಯಿಂದ ಬಂದರೆ ಖಂಡಿತಾ ಪಾತ್ರ ಮಾಡುತ್ತೇನೆ ಎಂದಿದ್ದಾರೆ. ಒಟ್ಟಿನಲ್ಲಿ ಧಾರಾವಾಹಿಯ ನಟಿಯ ಹೈಟ್ ಬಗ್ಗೆ ತ್ರಿವಿಕ್ರಮ್ ಕಾಮೆಂಟ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.












Click it and Unblock the Notifications