Toxic Movie: ಬಾಲನಟ ಕಬೀರ್-ಯಶ್ ಬಾಂದವ್ಯದ ಕಥೆ, ನೀರೊಳಗಿನ ಸೀನ್‌ನ ಸಿಂಗಲ್‌ ಟೇಕ್‌ನಲ್ಲಿ ಮುಗಿಸಿದ ಪೋರ

'ಎ' ಸರ್ಟಿಫಿಕೇಟ್ ಪಡೆದ ರಕ್ತಸಿಕ್ತ ಹಾಗೂ ಗಂಭೀರ ಕಥಾಹಂದರದ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರಕ್ಕೆ ಪ್ರೇಕ್ಷಕರಿಂದ ಂಇಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ, ಈ ಹಿಂಸೆ, ಕ್ರೌರ್ಯಗಳ ಕಥಾನಕದ ಹಿಂದೆ ಮನಸ್ಸು ತಟ್ಟುವಂಥಾ ಒಂದು ಸುಂದರ ಹಾಗೂ ಭಾವನಾತ್ಮಕ ಮನುಷ್ಯ ಸಂಬಂಧದ ಕಥೆಯಿದೆ. ಚಿತ್ರದಲ್ಲಿ ಯಶ್ ಮತ್ತು ಕಿಯಾರಾ ಅಡ್ವಾಣಿ ಅವರ ಮಗ 'ಟಿಕೆಟ್' ಪಾತ್ರದ ಬಾಲ್ಯದ ಪಾತ್ರವನ್ನು ಬಾಲನಟ ಕಬೀರ್ ಪಹ್ವಾ ನಿರ್ವಹಿಸಿದ್ದಾನೆ. ಸಿನಿಮಾ ವಯಸ್ಕರಿಗಾಗಿ ಮಾತ್ರ ಆಗಿರುವುದರಿಂದ ಕಬೀರ್ ತನ್ನದೇ ಅಭಿನಯದ ಈ ಸಿನಿಮಾವನ್ನು ಇನ್ನೂ ವೀಕ್ಷಿಸಿಲ್ಲ. ಆದರೂ, ಚಿತ್ರದಲ್ಲೇ ಅತ್ಯಂತ ಅಡ್ವೆಂಚರಸ್‌ ಹಾಗೂ ಅಪಾಯಕಾರಿ ಎನಿಸಿದ 'ಕಾರು ನೀರಿನಲ್ಲಿ ಮುಳುಗುವ ದೃಶ್ಯ'ವೇ ತನ್ನ ನೆಚ್ಚಿನ ದೃಶ್ಯವೆಂದು ಆತ ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾನೆ.

ವಿಎಫ್‌ಎಕ್ಸ್‌ ಬೇಡ ಅಂತ ನೇರ ಸಾಹಸಕ್ಕಿಳಿದ ಬಾಲನಟ

ಟಾಕ್ಸಿಕ್‌ನಲ್ಲಿ ಬರುವ ನೀರಲ್ಲಿ ಕಾರು ಮುಳುಗುವ ದೃಶ್ಯ ಇಡೀ ಸಿನಿಮಾದ ಕೋರ್‌ ಕಥೆ ಹೊಂದಿರುವಂಥಾದ್ದು. ಕಥೆಯಲ್ಲಿ ಬಹಳ ಮಹತ್ವ ಪಡೆದಿರುವ ಈ ಸನ್ನಿವೇಶವನ್ನು ಮೊದಲು ವಿಎಫ್‌ಎಕ್ಸ್‌ನಲ್ಲಿ ಚಿತ್ರಿಸಬೇಕು ಅಂತ ಚಿತ್ರತಂಡ ನಿರ್ಧರಿಸಿತ್ತು. ಏಕೆಂದರೆ ರಿಯಲ್‌ ಆಗಿ ಚಿಕ್ಕ ಮಕ್ಕಳಿಗೆ ಇಂಥಾ ಸನ್ನಿವೇಶವನ್ನು ನಿರ್ವಹಿಸೋದು ಕಷ್ಟ ಅಂತ. ಆದರೆ ಕಬೀರ್‌ ಪಹ್ವಾ ಅವಕಾಶ ಕೊಟ್ಟರೆ ರಿಯಲ್‌ ಆಗಿಯೇ ಈ ಸಾಹಸದಲ್ಲಿ ಭಾಗಿ ಆಗೋದಾಗಿ ಹೇಳಿದ. ಹಾಗಾಗಿ ಇದನ್ನು ರಿಯಲ್‌ ಆಗಿಯೇ ಶೂಟ್‌ ಮಾಡಲಾಯಿತು. ಈ ಕಠಿಣ ದೃಶ್ಯಕ್ಕಾಗಿ ಕಬೀರ್ ಈಜು ಕಲಿಯಲು ಬರೋಬ್ಬರಿ ನಾಲ್ಕು ತಿಂಗಳುಗಳ ಕಾಲ ನಿರಂತರವಾಗಿ ತರಬೇತಿ ಪಡೆದಿದ್ದನಂತೆ.

Toxic Movie Young Star Kabir Pahwa Overcomes Water Fear Fits Hard Underwater Scene in Single Take

ಮೊದಲು ನೀರು ಕಂಡರೆ ಬೆಚ್ಚಿಬೀಳುತ್ತಿದ್ದ ಹುಡುಗ

ಟಾಕ್ಸಿಕ್‌ ಮೊದಲ ಭಾಗದಲ್ಲಿ ಬರುವ ಈ ನೀರೊಳಗಿನ ಸಾಹಸ ಸನ್ನಿವೇಶದ ಚಿತ್ರೀಕರಣ ನಡೆದಿದ್ದು ಹದಿನೇಳು ಅಡಿ ಆಳದ, ಕಾರ್ಗತ್ತಲ ಈಜುಕೊಳದಲ್ಲಿ. ಈ ಸಿನಿಮಾಗೂ ಮೊದಲು ಕಬೀರ್‌ಗೆ ನೀರಿಗಿಳಿಯಲು ಭಯವಿತ್ತಂತೆ. ಹೀಗಾಗಿ ಈಜಲು ಬರುತ್ತಿರಲಿಲ್ಲವಂತೆ. ಈತನ ಸಣ್ಣ ವಯಸ್ಸು ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ನಟ ಯಶ್ ಹಾಗೂ ಹಾಲಿವುಡ್ ಸಾಹಸ ನಿರ್ದೇಶಕ ಜೆ.ಜೆ. ಪೆರ್ರಿ ಮೊದಲು ಈ ದೃಶ್ಯಕ್ಕೆ ವಿಎಫ್‌ಎಕ್ಸ್ ಅಥವಾ ಗ್ರಾಫಿಕ್ಸ್ ಬಳಸಲು ನಿರ್ಧರಿಸಿದ್ದರು. ಆದರೆ, ಕಬೀರ್‌ಗೆ ಕೊಳದ ಒಳಗಡೆ ಜಿಗಿದು ಒಮ್ಮೆ ಪ್ರಯತ್ನಿಸಲು ತಿಳಿಸಿದಾಗ, ಆ ಮಗು ತೋರಿಸಿದ ಧೈರ್ಯ ಮತ್ತು ಛಲವನ್ನು ನೋಡಿ ಇಡೀ ತಂಡವೇ ಬೆರಗಾಯಿತು. ತಕ್ಷಣವೇ ವಿಎಫ್‌ಎಕ್ಸ್ ಆಲೋಚನೆಯನ್ನು ಕೈಬಿಟ್ಟು ನೈಜವಾಗಿಯೇ ದೃಶ್ಯವನ್ನು ಚಿತ್ರೀಕರಿಸಲು ನಿರ್ಧರಿಸಲಾಯಿತು.

ಬಾ ಮಾಡೋಣ ಅಂದ ಯಶ್‌

ಯಶ್‌ ಅವರದು ಸಾಹಸ ಪ್ರವೃತ್ತಿ. ಇತರರಿಗೂ ಮೋಟಿವೇಶನ್‌ ನೀಡೋದ್ರಲ್ಲಿ ಸಿದ್ಧಹಸ್ತರು. ಈ ಹುಡುಗ ಶುರುವಲ್ಲಿ ಅಧೈರ್ಯದಲ್ಲಿ ಇದ್ದಾಗ ಅವನಲ್ಲಿ ಕಾನ್ಫಿಡೆನ್ಸ್‌ ತುಂಬಿದ್ದು ಯಶ ಅವರೇ. ʼಏನೂ ಭಯಪಡಬೇಡ, ನಿನ್ನಿಂದ ಆಗುತ್ತೆ, ನಾನಿದ್ದೀನಿ ನಿನ್ನ ಜೊತೆಗೆ. ಬಾ ಮಾಡೋಣʼ ಅಂತ ಯಶ ಧೈರ್ಯ ತುಂಬಿದ್ದು ಈ ಹುಡುಗನ ಭಯವನ್ನು ಕೊಂಚ ಕಡಿಮೆ ಮಾಡಿತಂತೆ. ಅಚ್ಚರಿ ಎಂಬಂತೆ ಕಬೀರ್ ಈ ಕಷ್ಟದ ದೃಶ್ಯವನ್ನು ಒಂದೇ ಶಾಟ್‌ನಲ್ಲಿ ಪೂರ್ಣಗೊಳಿಸಿದ್ದಾ. ನಿರ್ದೇಶಕಿ ಗೀತು ಮೋಹನ್‌ದಾಸ್ ಮತ್ತು ಸಾಹಸ ನಿರ್ದೇಶಕ ಪೆರ್ರಿ ಬಾಲಕನ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ರಂತೆ

ಅಪ್ಪನಂತೆ ಸಪೋರ್ಟ್‌ ಮಾಡಿದ ಯಶ್‌

ತನ್ನ ಅಭಿನಯದ ಅನುಭವವನ್ನು ಹಂಚಿಕೊಂಡ ಕಬೀರ್, ʼನನಗೆ ಕಾರು ಮುಳುಗುವ ದೃಶ್ಯವೇ ಬಹಳ ಇಷ್ಟವಾಯಿತು. ಯಶ್ ಸರ್ ನಾನು ಸುರಕ್ಷಿತವಾಗಿ ನೀರಿಗಿಳಿಯುವಂತೆ ಮತ್ತು ನನಗೇನೂ ಆಗದಂತೆ ಪ್ರತಿ ಕ್ಷಣದಲ್ಲೂ ನನ್ನ ಜೊತೆಗಿದ್ದು ಕಾಳಜಿ ವಹಿಸಿದರುʼ ಎಂದು ಖುಷಿಯಿಂದ ಹೇಳುತ್ತಾನೆ.
ಕಬೀರ್ ತಾಯಿ ಈ ಬಗ್ಗೆ ಮಾತನಾಡುತ್ತಾ, ʼಚಿತ್ರದಲ್ಲಿರುವ ಕಾರು ಮುಳುಗುವ ಮತ್ತು ನೀರಿನ ಆಳಕ್ಕೆ ಹೋಗುವ ಪ್ರತಿಯೊಂದು ಕ್ಲೋಸ್-ಅಪ್ ಷಾಟ್‌ಗಳನ್ನು ಕಬೀರ್ ಯಾವುದೇ ಗ್ರಾಫಿಕ್ಸ್ ಸಹಾಯವಿಲ್ಲದೆ ಸ್ವತಃ ತಾನೇ ಮಾಡಿದ್ದಾನೆ. ಯಶ್ ಮತ್ತು ಆತನ ನಡುವಿದ್ದ ಪ್ರೀತಿಯ ಬಂಧವೇ ಈ ದೃಶ್ಯ ಇಷ್ಟು ಸರಾಗವಾಗಿ ಮೂಡಿಬರಲು ಕಾರಣʼ ಎಂದು ನಟ ಯಶ್ ಅವರ ಕಾಳಜಿಯನ್ನು ಸ್ಮರಿಸುತ್ತಾರೆ.

ಅಮೆಜಾನ್ ಪ್ರೈಮ್‌ನ 'ರಾಖ್' ಸರಣಿಯಲ್ಲಿ ಜಯಪ್ರಕಾಶ್ ಅವರ ಬಾಲ್ಯದ ಪಾತ್ರ ಮಾಡಿ ಗಮನಸೆಳೆದಿದ್ದ ಕಬೀರ್‌ಗೆ, 'ಟಾಕ್ಸಿಕ್' ನ ಅಭಿನಯದ ಪ್ರಯಾಣವು ಯಶ್ ಅವರ ಪ್ರೀತಿ ಮತ್ತು ಮಾರ್ಗದರ್ಶನದಿಂದಾಗಿ ಎಂದೂ ಮರೆಯಲಾಗದ ಸುಂದರ ಅನುಭವವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+