Yash 19 Toxic: ನಟ ಯಶ್ ಹೊಸ ಸಿನಿಮಾ ಹೆಸರು 'ಟಾಕ್ಸಿಕ್': ರಿಲೀಸ್ ಡೇಟ್ ಅನೌನ್ಸ್
ಬೆಂಗಳೂರು ಡಿಸೆಂಬರ್ 08: ಕೆಜಿಎಫ್ ಎರಡು ಸಿನಿಮಾಗಳ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷೆಯ (Yash 19 Title) ಹೊಸ ಸಿನಿಮಾದ ಹೆಸರು ಇಂದು ಶುಕ್ರವಾರ ಬಿಡುಗಡೆಗೊಂಡಿದೆ.
ಕೆವಿಎನ್ ಪ್ರೋಡಕ್ಸನ್ ನಿರ್ಮಾಣದಲ್ಲಿ ಯಶ್ 'ಟಾಕ್ಸಿಕ್' (Toxic) ಶಿರ್ಷಿಕೆಯ ಹೊಸ ಸಿನಿಮಾ ಮಾಡುವುದಾಗಿ ಇಂದು ಘೋಷಣೆ ಆಗಿದೆ. ಈ ಮೂಲಕ ಕನ್ನಡ, ತೆಲುಗು, ಹಿಂದಿ ಸೇರಿದಂತೆ ಪ್ಯಾನ್ ಇಂಡಿಯಾ ಅಭಿಮಾನಿಗಳಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ್ದಾರೆ. ಯಶ್ ಅಭಿಮಾನಿಗಳಂತು ಶಿರ್ಷಿಕೆ ಬಿಡುಗಡೆಯನ್ನು ಹಬ್ಬದ ರೀತಿಯಲ್ಲಿ ಸಂಭ್ರಮಿಸುತ್ತಿದ್ದಾರೆ.

ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ 19ನೇ ಸಿನಿಮಾ ತಯಾರಾಗುತ್ತಿದೆ. ಈಗಾಗಲೇ ಯಶ್ 19 ತಂಡ ಹಗಲು ರಾತ್ರಿ ಕೂತು ಟೈಟಲ್ ಲಾಂಚ್ ವಿಡಿಯೋ ಸಿದ್ಧಪಡಿಸಿದ್ದಾರೆ.

ಟೈಟಲ್ ಲಾಂಚ್ ವಿಡಿಯೋದಲ್ಲಿ ಒಂದೊಳ್ಳೆ ಬ್ಯಾಗ್ರೌಂಡ್ ಸಂಗೀತ ಕೇಳಿ ಬರುತ್ತದೆ. 2022 ಏಪ್ರೀಲ್ 14ರಂದು ಯಶ್ KGF-2 ಬಿಡುಗಡೆಯಾಗಿತ್ತು. ಇದೀಗ ಅವರ ಮುಂದಿನ ಸಿನಿಮಾದ ಶಿರ್ಷಿಕೆ 'ಟಾಕ್ಸಿಕ್' (Toxic) ಬಿಡುಗಡೆ ಆಗಿದೆ. ಈ ಸಿನಿಮಾ 2025ರ ಏಪ್ರಿಲ್ 10ರಂದು ಬಿಡುಗಡೆ ಆಗಲಿದೆ ಎಂದು ಕೆವಿಎನ್ ನಿರ್ಮಾಣ ಸಂಸ್ಥೆ ತಿಳಿಸಿದೆ.
ಯಶ್ ಅಭಿಮಾನಿಗಳು ಖುಷ್
ಸದ್ಯ ಟಾಕ್ಸಿಕ್ ಟೈಟಲ್ ನೋಡಿ ಯಶ್ ಅಭಿಮಾನಿಗಳು ಸಖತ್ ಖಷಿ ಪಟ್ಟಿದ್ದಾರೆ. ಯಶ್ 19 ಮತ್ತು #Toxic ಟ್ರೆಂಡಿಂಗ್ ನಲ್ಲಿದೆ. ಕೆಜಿಎಫ್ ಆದ ಬಳಿಕ ಅನೇಕ ವದಂತಿಗಳು ಯಶ್ ಅವರ ಸಿನಿಮಾ ಕುರಿತು ಹಬ್ಬಿದ್ದವು. ನಿರ್ದೇಶಕ ನರ್ತನ್ ಅವರ ಜೊತೆಗೆ ಯಶ್ ಅವರು ತಮ್ಮ ಮುಂದಿನ ಸಿನಿಮಾ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬಂದವು. ಆದರೆ ಅದು ಯಾವವು ನಡೆಯಲಿಲ್ಲ.

ಯಶ್ ಸಿನಿಮಾ ಮೇಲೆ ಕೋಟ್ಯಂತರ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಾಗುತ್ತಾ ಹೋಯಿತು. ಸಿನಿಮಾ, ಟೈಟಲ್ ಕುರಿತು ಸಾಕಷ್ಟು ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು. ಇತ್ತೀಚೆಗಷ್ಟೇ ಖುದ್ದು ಯಶ್ ಅವರೇ ತಮ್ಮ ಮುಂದಿನ yash 19 ಸಿನಿಮಾ ಅಪ್ಡೇಟ್ ಕೊಟ್ಟರು. ಅದರಂತೆ ಇಂದು ಡಿ.8ರಂದು ಹೊಸ ಸಿನಿಮಾದ ಶಿರ್ಷಿಕೆ Toxic ಬಿಡುಗಡೆಗೊಂಡಿದೆ.












Click it and Unblock the Notifications