ದರ್ಶನ್ ಹೆಂಡತಿ & ಮಗನ ಮುಖ ನೋಡಿ ಬಿಕ್ಕಿ ಬಿಕ್ಕಿ ಅತ್ತಿದ್ದು ಯಾಕೆ?

ದರ್ಶನ್ ದೌಲತ್, ಅಹಂಕಾರ, ಕೋಪ, ಸಿಡುಕು ಬುದ್ಧಿ ಎಲ್ಲವೂ ತಣ್ಣಗಾಗಿ ಹೋಗಿದೆ. ಇಷ್ಟು ದಿನ ಮಾತು ಎತ್ತಿದರೆ ಸಾಕು ಹೊಡೆಯಲು ಬರ್ತಾರೆ ಅನ್ನೋ ಆರೋಪ ದರ್ಶನ್ ವಿರುದ್ಧ ಇತ್ತು. ಆದರೆ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಎಂದು ರೇಣುಕಾ ಸ್ವಾಮಿ ಕೊಲೆ ಮಾಡಿದ ಆರೋಪ ದರ್ಶನ್ & ಗ್ಯಾಂಗ್ ವಿರುದ್ಧ ಇದೆ. ಹೀಗಿದ್ದಾಗಲೇ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ನುಂಗುತ್ತಿರುವ ನಟ ದರ್ಶನ್ ತಮ್ಮ ಹೆಂಡತಿ & ಮಗನ ಮುಂದೆ ಕಣ್ಣೀರು ಹಾಕಿದ್ದಾರಂತೆ.

ದರ್ಶನ್ ಹೆಂಡತಿ ವಿಜಯಲಕ್ಷ್ಮೀ ಅವರಿಂದು ಬೆಂಗಳೂರು ಹೊರವಲಯದ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದರು. ಈ ವೇಳೆ ದರ್ಶನ್ ಭೇಟಿ ಮಾಡಿರುವ ವಿಜಯಲಕ್ಷ್ಮೀ ಗಂಡನಿಗೆ ಸಮಾಧಾನ ಮಾಡಿದ್ದಾರೆ. ಆದರೆ ಈ ವೇಳೆ ತನ್ನ ಮಗನ & ಹೆಂಡತಿ ಮುಖ ನೋಡಿದ ದರ್ಶನ್, ಬಿಕ್ಕಿಬಿಕ್ಕಿ ಅತ್ತುಬಿಟ್ಟರು. ಆಗ ದರ್ಶನ್ ಹೆಂಡತಿ ವಿಜಯಲಕ್ಷ್ಮೀ ಸಮಾಧಾನ ಮಾಡಿದ್ದಾರೆ ಎನ್ನಲಾಗಿದೆ. ಜೊತೆಗೆ ಕೊಲೆ ಆರೋಪದಡಿ ಅರೆಸ್ಟ್ ಆಗಿರುವ ಗಂಡ ದರ್ಶನ್ ರಕ್ಷಣೆಗೆ ಈಗ ವಿಜಯಲಕ್ಷ್ಮೀ ಅವರು ಕಾನೂನು ಹೋರಾಟ ಕೂಡ ಶುರು ಮಾಡಿದ್ದಾರೆ.

This Is Why Actor Darshan Thoogudeepa Become Emotional After Seeing His Wife

ಜೈಲಿನ ಊಟಕ್ಕೆ ದರ್ಶನ್ ಸುಸ್ತು!

ದರ್ಶನ್ ಕೋಟಿ ಕೋಟಿ ಸಂಭಾವನೆ ಪಡೆಯುವ ನಟ. ಹೀಗಾಗಿ ದರ್ಶನ್‌ ಜೀವನ ಶೈಲಿ ಕೂಡ ಭರ್ಜರಿ ಐಷಾರಾಮಿ ಆಗಿತ್ತು. ಅದರಲ್ಲೂ ದರ್ಶನ್ ಪ್ರತಿ ದಿನ ತಮ್ಮ ದೇಹದ ಪೌಷ್ಠಿಕಾಂಶ ಕಾಪಾಡಿಕೊಳ್ಳಲು ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡುತ್ತಿದ್ದರಂತೆ. ಈಗ ದರ್ಶನ್‌ಗೆ ಅದು ಯಾವುದೂ ಇಲ್ಲ, ಪರಪ್ಪನ ಅಗ್ರಹಾರ ಜೈಲಲ್ಲಿ ರಾಗಿ ಮುದ್ದೆ ಮುರಿದು ನುಂಗಬೇಕು ಅಷ್ಟೇ. ಆದರೆ ಜೈಲಿನ ಊಟದಲ್ಲಿ ಉಪ್ಪು & ಖಾರ ಹೆಚ್ಚಾಗಿ ಹಾಕುವುದಿಲ್ಲ. ಹೀಗಾಗಿ ಸಪ್ಪೆ ಊಟ ತಿಂದು ದರ್ಶನ್ ನರಳಾಡುತ್ತಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕೇ ಮನೆ ಊಟ ಬೇಕು ಎಂದು ದರ್ಶನ್ ಕೋರ್ಟ್‌ಗೆ ಮನವಿ ಸಲ್ಲಿಸುವ ಸಾಧ್ಯತೆ ದಟ್ಟವಾಗಿದೆ.

ದರ್ಶನ್ ಪ್ರಿಯತಮೆಗೆ 2 ಕೊಟಿ?

ಹೌದು, ನಟ ದರ್ಶನ್ ಆಪ್ತೆ ಎಂದೇ ಗುರುತಿಸಿಕೊಂಡು ಭರ್ಜರಿ ಹೆಸರು & ಆಸ್ತಿಯನ್ನ ಕೂಡ ಗಳಿಸಿದ ಪವಿತ್ರಾ ಗೌಡಗೆ ಇನ್ನೂ ಅಧಿಕೃತವಾಗಿ ದರ್ಶನ್ ಹೆಂಡತಿಯ ಸ್ಥಾನವು ಸಿಕ್ಕಿಲ್ಲ. ಹೀಗಿದ್ದಾಗ ಪವಿತ್ರಾ ಗೌಡ ಸಣ್ಣ ವಿಚಾರವನ್ನ ದೊಡ್ಡದು ಮಾಡಿ, ದರ್ಶನ್‌ಗೆ ಕೆಣಕುವ ರೀತಿ ಮಾತನಾಡಿ ರೇಣುಕಾಸ್ವಾಮಿ ಕೊಲೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂಬ ಗಂಭೀರ ಆರೋಪ ಇದೆ. ಹೀಗಿದ್ದಾಗಲೇ ದರ್ಶನ್ ಪ್ರಿಯತಮೆ ಪವಿತ್ರಾ ಗೌಡಗೆ 2 ಕೋಟಿ ರೂಪಾಯಿ ಹಣವನ್ನು ಕನ್ನಡ ನಿರ್ಮಾಪಕ ಸೌಂದರ್ಯ ಜಗದೀಶ್ ನೀಡಿದ್ರು ಎಂಬ ಆರೋಪ ಕೇಳಿಬಂದಿದೆ.

ಸೌಂದರ್ಯ ಜಗದೀಶ್ ಆತ್ಮಹತ್ಯೆ

ಪವಿತ್ರಾ ಗೌಡಗೆ ನಿರ್ಮಾಪಕ ಸೌಂದರ್ಯ ಜಗದೀಶ್ 2 ಕೋಟಿ ರೂಪಾಯಿ ಹಣ ಕಳಿಸಿದ ಬ್ಯಾಂಕ್ ದಾಖಲೆ ತೋರಿಸಿ ಕನ್ನಡದ ಮಾಧ್ಯಮಗಳು ವರದಿ ಮಾಡಿವೆ. ಹೀಗಾಗಿ ಮತ್ತೆ ಪವಿತ್ರಾ ಗೌಡ ಹೊಸ ಸಂಕಷ್ಟಕ್ಕೆ ಸಿಲುಕಿದ್ದಾರಾ? ಎಂಬ ಪ್ರಶ್ನೆ ಮೂಡಿದೆ. ಈ ಕುರಿತು ಐಟಿ ಅಂದ್ರೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಾರಾ? ಎಂಬ ಪ್ರಶ್ನೆ ಈಗ ಮೂಡಿದೆ ಮತ್ತೊಂದ್ಕಡೆ ನಿರ್ಮಾಪಕ ಸೌಂದರ್ಯ ಜಗದೀಶ್ ತಮಗೆ ವ್ಯಾಪಾರದಲ್ಲಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+