ದರ್ಶನ್ ಅಭಿಮಾನಿಗಳು ಬಾವಿ ಕಪ್ಪೆ ಅಲ್ಲ, ಮೋರಿ ಕಪ್ಪೆಗಳು: ನಿರ್ಮಾಪಕ ಉಮಾಪತಿ!
ದರ್ಶನ್ ತೂಗುದೀಪ್ ಕೊಲೆ ಆರೋಪ ಹೊತ್ತು ಜೈಲಿಗೆ ಸೇರಿದ ಬಳಿಕ ಕನ್ನಡದ ನಿರ್ಮಾಪಕ ಉಮಾಪತಿ ಮತ್ತೆ ಆಕ್ಟಿವ್ ಆಗಿದ್ದಾರೆ. ಕೆಲವು ತಿಂಗಳ ಹಿಂದಷ್ಟೇ ಇದೇ ದರ್ಶನ್ ತೂಗುದೀಪ್, ಉಮಾಪತಿಗೆ ತಗಡು ಎಂಬ ಪದ ಪ್ರಯೋಗ ಮಾಡಿದ್ದರು. ಆಗ ಸರಿಯಾಗಿ ಉತ್ತರ ನೀಡಿದ್ದ ಈ ಉಮಾಪತಿ, ಇದೀಗ ದರ್ಶನ್ ಅಭಿಮಾನಿಗಳಿಗೆ ಕೂಡ ಖಡಕ್ ಉತ್ತರ ನೀಡಿದ್ದಾರೆ. ಅದರಲ್ಲೂ ದರ್ಶನ್ ಫ್ಯಾನ್ಸ್ ಬಗ್ಗೆ ನಿರ್ಮಾಪಕ ಉಮಾಪತಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ದರ್ಶನ್ & ಉಮಾಪತಿ ಚನ್ನಾಗಿಯೇ ಇದ್ದರು, ಆದರೆ ಅಕ್ಕಪಕ್ಕದ ಸಹಚರರು ಕಿವಿ ಊದಿದರು ಅಂತಾ ನಿರ್ಮಾಪಕ ಉಮಾಪತಿ ವಿರುದ್ಧ ದರ್ಶನ್ ರೊಚ್ಚಿಗೆದ್ದರು ಎಂಬ ಆರೋಪ ಇದೆ. ಈ ನಡುವೆ ನಿರ್ಮಾಪಕ ಉಮಾಪತಿಗೆ ಕೂಡ ದರ್ಶನ್ ಹಲ್ಲೆ ಮಾಡಲು ಹೋಗಿದ್ದು, ಗನ್ ಇಟ್ಟು ಬೆದರಿಕೆ ಹಾಕಿದ್ದು, ಆಸ್ತಿ ಮೇಲೆ ಕಣ್ಣು ಹಾಕಿದ್ದರು ಎಂಬ ಆರೋಪಗಳ ನಡುವೆ ಈಗ ಕೊಲೆ ಆರೋಪಿ ದರ್ಶನ್ ಅಭಿಮಾನಿಗಳಿಗೂ ನಿರ್ಮಾಪಕ ಉಮಾಪತಿ ಸರಿಯಾಗಿ ಉತ್ತರ ನೀಡಿದ್ದಾರೆ. ಅಲ್ಲದೆ ದರ್ಶನ್ ವಿರುದ್ಧ ಕೇಳಿಬಂದಿರುವ ಕೊಲೆ ಕೃತ್ಯವನ್ನು ಕೂಡ ಸಮರ್ಥನೆ ಮಾಡಿಕೊಳ್ತಾ ಇರುವ ದರ್ಶನ್ ಫ್ಯಾನ್ಸ್‌ಗೆ, 'ಬಾವಿ ಕಪ್ಪೆ ಅಲ್ಲ, ಮೋರಿ ಕಪ್ಪೆಗಳು' ಎಂದಿದ್ದಾರೆ ಉಮಾಪತಿ.

ಉಮಾಪತಿ VS ದರ್ಶನ್ ಫ್ಯಾನ್ಸ್!
ದರ್ಶನ್ ಕೊಲೆ ಆರೋಪ ಹೊತ್ತು ಪೊಲೀಸರ ಬಲೆಗೆ ಬಿದ್ದ ನಂತರ ಆತನ ಅಭಿಮಾನಿಗಳು ಈಗ ರೊಚ್ಚಿಗೆದ್ದು, ಬಾಯಿಗೆ ಬಂದ ರೀತಿ ಹೇಳಿಕೆ ನೀಡುತ್ತಿದ್ದು ಅಲ್ಲದೆ ಮನಸ್ಸಿಗೆ ಬಂದಂತೆ ಆಡ್ತಿದ್ದಾರೆ. ದರ್ಶನ್ ಫ್ಯಾನ್ಸ್ ಅಂತಾ ಹೇಳಿಕೊಳ್ಳುವ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ನಿರ್ಮಾಪಕ ಉಮಾಪತಿ ಸೇರಿದಂತೆ ಮಾಧ್ಯಮಗಳ ವಿರುದ್ಧ ಕೂಡ ರೊಚ್ಚಿಗೆದ್ದಿದ್ದಾರೆ. ಅಲ್ಲದೆ ಬೆದರಿಕೆ ಕೂಡ ಹಾಕುತ್ತಿದ್ದಾರೆ, ಹೀಗಾಗಿ ದರ್ಶನ್ ಅಭಿಮಾನಿಗಳ ವಿರುದ್ಧ ಪ್ರಕರಣಗಳು ಕೂಡ ದಾಖಲಾಗುತ್ತಿವೆ.
ಈ ಹಿನ್ನೆಲೆಯಲ್ಲಿ ದರ್ಶನ್ ಅವರ ಮಿದುಳು ಇಲ್ಲದ ಕೆಲವು ಕ್ರೂರ ಫ್ಯಾನ್ಸ್‌ಗೆ ಕನ್ನಡ ನಿರ್ಮಾಪಕ ಉಮಾಪತಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಅದರಲ್ಲೂ, ದರ್ಶನ್ ಹತ್ತಿರ ಬಿಟ್ಟಿ ಕೆಲಸ ಮಾಡಿಸಿಲ್ಲ ಕೋಟಿ ಕೋಟಿ ದುಡ್ಡು ಕೊಟ್ಟಿದ್ದೀನಿ ಎಂದಿದ್ದಾರೆ. ಜೊತೆಗೆ ನನ್ನ ಮನೆ 1.5 ಎಕರೆ ಜಾಗದಲ್ಲಿದೆ ಎನ್ನುವ ಮೂಲಕ, ನಾನು ಚಿಕ್ಕ ವಯಸ್ಸಿಂದಲೇ ದುಡ್ಡನ್ನು ನೋಡಿದ್ದೀನಿ. ಆದರೆ ಅವರಷ್ಟು ನನಗೆ ಅಹಂಕಾರ ಇಲ್ಲ ಎಂದು ಸರಿಯಾಗಿ ಕುಟುಕಿದ್ದಾರೆ. ನಿರ್ಮಾಪಕ ಉಮಾಪತಿ ನೀಡಿರುವ ಹೇಳಿಕೆ ವಿಡಿಯೋ ಫುಲ್ ವೈರಲ್ ಆಗುತ್ತಿದೆ.
@umap30071 Ummi banging hero & his fans everywhere with facts🔥
— ರಣರಂಗ (@gundrugovi) June 21, 2024
Mic idhe antha - social media li fake accounts idhe antha side artists ge hedrusdhange ankondbitavre 🫡
ದುಡ್ ಕೊಟ್ಟಿದಿನಿ ಕುಣ್ಸಿದಿನಿ 😂
ಮೊರಿ ಕಪ್ಪೆ 🐸 #DarshanThoogudeepa #Darshan pic.twitter.com/M24YA3Wbtl
ದರ್ಶನ್ ಅಲಿಯಾಸ್ ರೌಡಿ ದರ್ಶನ್?
2011ರ ಸಮಯದಲ್ಲಿ ತನ್ನ ಹೆಂಡತಿ ಮೇಲೆಯೇ ದರ್ಶನ್ ರಾಕ್ಷಸನ ರೀತಿ ಹಲ್ಲೆ ಮಾಡಿರುವುದು ಸೇರಿದಂತೆ, ಪದೇ ಪದೇ ದರ್ಶನ್ & ಗ್ಯಾಂಗ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿವೆ. ಹೀಗೆ ಕನ್ನಡ ನಾಡಿನಲ್ಲಿ ತನ್ನ ಪಟಾಲಂ ಕಟ್ಟಿಕೊಂಡು ದರ್ಶನ್ & ಗ್ಯಾಂಗ್ ಜನರಿಗೆ ಹಾಗೂ ಹಲವು ನಿರ್ಮಾಪಕ, ನಿರ್ದೇಶಕರಿಗೆ ಟಾರ್ಚರ್ ಮಾಡಿದೆ ಎಂಬ ಆರೋಪ ಇದೆ. ಹೀಗಾಗಿಯೇ ಇದೀಗ, ದರ್ಶನ್ ಮತ್ತು ಆತನ ಸಹಚರರ ವಿರುದ್ಧ ರೌಡಿಶೀಟ್ ತೆರೆಯಲು ಕನ್ನಡ ನಾಡಿನ ಪೊಲೀಸರು ಅಂತಿಮ ಹಂತದ ಸಿದ್ಧತೆ ನಡೆಸಿದ್ದಾರೆ. ಈ ಹಿನ್ನೆಲೆ ಎಲ್ಲಾ ದಾಖಲೆಗಳನ್ನ ಸಂಗ್ರಹಿಸುವ ಮೂಲಕ, ದರ್ಶನ್ & ಗ್ಯಾಂಗ್‌ಗೆ ಶಾಕ್ ನೀಡಲು ಸಜ್ಜಾಗಿದ್ದಾರೆ ಎನ್ನಲಾಗಿದೆ.
118 ಸಾಕ್ಷ್ಯ ಸಂಗ್ರಹಿಸಿದ ಪೊಲೀಸರು?
ದರ್ಶನ್ ತೂಗುದೀಪ್ & ಗ್ಯಾಂಗ್ ವಿರುದ್ಧ ಕೇಳಿಬಂದಿರುವ ಕೊಲೆ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಪೊಲೀಸರು ಖಡಕ್ ತನಿಖೆ ನಡೆಸುತ್ತಿದ್ದಾರೆ. ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಈ ವಿಚಾರದಲ್ಲಿ ಕರ್ನಾಟಕದ ಪೊಲೀಸರಿಗೆ ಫುಲ್ ಪವರ್ ಕೊಟ್ಟಿದ್ದು, ಯಾವುದೇ ರೀತಿಯ ಒತ್ತಡಗಳಿಗೆ ಮಣಿಯಬೇಡಿ ಎಂದಿದ್ದಾರೆ. ಹೀಗಾಗಿ ಕೇಸ್ ಕೂಡ ತುಂಬಾ ಸ್ಟ್ರಾಂಗ್ ಆಗುತ್ತಿದೆ. ಅದರಲ್ಲೂ ದರ್ಶನ್ & ಗ್ಯಾಂಗ್ ವಿರುದ್ಧ ಈವರೆಗೂ ಸುಮಾರು 118 ಸಾಕ್ಷ್ಯ ಸಂಗ್ರಹವಾಗಿದೆ ಎಂಬ ಸುದ್ದಿ ತಿಳಿದುಬಂದಿದೆ. ಹೀಗಾಗಿ ಕೇಸ್ ಕೂಡ ತುಂಬಾ ಸ್ಟ್ರಾಂಗ್ ಆಗುತ್ತಿದೆ.
ದರ್ಶನ್ ಮುಂದಿನ ಸಿನಿಮಾ 'ಪರಪ್ಪನ ಅಗ್ರಹಾರ'?
ಕಲಾಸಿಪಾಳ್ಯ, ಮೆಜೆಸ್ಟಿಕ್ ಅಂತಾ ಬೆಂಗಳೂರಿನ ಏರಿಯಾಗಳ ಹೆಸರನ್ನು ಇಟ್ಟುಕೊಂಡೇ ಭಾರಿ ಭರ್ಜರಿ ಸಿನಿಮಾ ನೀಡಿದ್ದ ದರ್ಶನ್, ಈಗ 'ಪರಪ್ಪನ ಅಗ್ರಹಾರ' ಸೇರಿದ್ದಾರೆ. ದರ್ಶನ್ ತಾನೇ ಮಾಡಿಕೊಂಡ ಎಡವಟ್ಟಿಗೆ & ದುರಹಂಕಾರಕ್ಕೆ ಇಂದು ವಿಲವಿಲ ಒದ್ದಾಡುವ ಪರಿಸ್ಥಿತಿ ಬಂದಿದೆ ಅಂತಾರೆ ಅವರ ಸ್ನೇಹಿತರು. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಭಾರಿ ದೊಡ್ಡ ಚರ್ಚೆ ನಡೆಯುತ್ತಿದೆ. ಹೀಗೆ ದರ್ಶನ್ ಕೊಲೆ ಆರೋಪದಲ್ಲಿ ಸೆಂಟ್ರಲ್ ಜೈಲ್ 'ಪರಪ್ಪನ ಅಗ್ರಹಾರ'ಕ್ಕೆ ಹೋಗಿದ್ದು, ಕೊಲೆ ಆರೋಪಿ ದರ್ಶನ್ ಮುಂದಿನ ಸಿನಿಮಾ 'ಪರಪ್ಪನ ಅಗ್ರಹಾರ' ಆಗಿರಲಿದೆ ಅಂತಿದ್ದಾರೆ ದರ್ಶನ್ ವಿರೋಧಿಗಳು. ಹೀಗಾಗಿ ದರ್ಶನ್ & ಅವರ ವಿರೋಧಿಗಳ ಫೈಟಿಂಗ್‌ಗೆ ಭರ್ಜರಿ ತಿರುವು ಸಿಕ್ಕಿದೆ.
ದರ್ಶನ್ ಬೆನ್ನಿಗೆ ನಾಗ & ಸೈಕಲ್ ರವಿ?
ನಟ ದರ್ಶನ್ ಇದೀಗ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ A2 ಆರೋಪಿ ಆಗಿದ್ದಾರೆ ಅಲ್ಲದೆ ಕಂಬಿ ಎಣಿಸುತ್ತಿದ್ದಾರೆ. ಹೀಗಿದ್ದಾಗಲೇ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ನಟ ದರ್ಶನ್‌ಗೆ ಸೇವೆ ಮಾಡಲು ಅಂದ್ರೆ ಆತಿಥ್ಯ ನೀಡಲು ಬೆಂಗಳೂರಿನ ರೌಡಿ ಶೀಟರ್ ನಾಗ & ಸೈಕಲ್ ರವಿ ನಡುವೆ ಇದೀಗ ಭರ್ಜರಿಯಾಗಿ ಪೈಪೋಟಿ ನಡೆಯುತ್ತಿದೆ ಎನ್ನಲಾಗಿದೆ.
ಈ ಬಗ್ಗೆ ಸ್ಫೋಟಕ ಹಾಗೂ ಭಯಾನಕ ಮಾಹಿತಿಯನ್ನ ಕನ್ನಡದ ಟಿವಿ ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೆ ಇದೇ ಸಮಯದಲ್ಲಿ ರೌಡಿ ಶೀಟರ್ ನಾಗ ಜೈಲಿನಲ್ಲೇ ಇದ್ದು, ಜೈಲಿನಿಂದ ಹೊರಗೆ ಇರುವ ಸೈಕಲ್ ರವಿ ತನ್ನ ಹುಡುಗರ ಮೂಲಕ ದರ್ಶನ್‌ಗೆ ಆತಿಥ್ಯ ನೀಡಲು ಮುಂದಾಗಿರುವ ಆರೋಪ ಕೇಳಿಬಂದಿದೆ. ಈ ಸುದ್ದಿ ಇದೀಗ ಸಂಚಲನವನ್ನೇ ಸೃಷ್ಟಿ ಮಾಡಿದೆ.












Click it and Unblock the Notifications