Sudeep: ದರ್ಶನ್‌ ಅಭಿಮಾನಿಗಳ ಬಗ್ಗೆ ನೇರವಾಗಿ ಮಾತನಾಡಿದ ಸುದೀಪ್‌

ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ವರ್ಷ ಸೊರಗಿದ್ದ ಸ್ಯಾಂಡಲ್‌ವುಡ್‌ಗೆ ಯುಐ ಮತ್ತು ಮ್ಯಾಕ್ಸ್ ಗೆಲುವಿನ ಟಾನಿಕ್ ನೀಡಿವೆ. ಮ್ಯಾಕ್ಸ್ ಸಿನಿಮಾ ಸಕ್ಸಸ್ ಮೀಟ್‌ನಲ್ಲಿ ನಟ ಸುದೀಪ್ ಹಲವು ವಿಚಾರಗಳನ್ನು ಮಾತನಾಡಿದ್ದಾರೆ. ಬಾಸಿಸಂ ಕಾಲ ಮುಗಿತು, ಮ್ಯಾಕ್ಸಿಮಮ್ ಕಾಲ ಶುರುವಾಯ್ತು ಎನ್ನುವ ಕೇಕ್ ಮಾಡಿದ್ದು ದರ್ಶನ್ ಅಭಿಮಾನಿಗಳು ಮತ್ತು ಸುದೀಪ್ ಅಭಿಮಾನಿಗಳ ನಡುವೆ ಜಗಳಕ್ಕೆ ಕಾರಣವಾಗಿತ್ತು ಈ ಬಗ್ಗೆ ಕೂಡ ಸುದೀಪ್ ಸ್ಪಷ್ಟನೆ ನೀಡಿದ್ದಾರೆ.

ಮಾಧ್ಯಮದ ಜೊತೆ ಮಾತನಾಡಿದ ಸುದೀಪ್, ನನ್ನ ಮತ್ತು ದರ್ಶನ್ ನಡುವೆ ಏನಿಲ್ಲ. ದರ್ಶನ್‌ ಅಭಿಮಾನಿಗಳ ಜೊತೆ ಜಗಳವಾಡಬೇಡಿ ಅವರು ನೋವಿನಲ್ಲಿದ್ದಾರೆ ಎಂದು ನನ್ನ ಅಭಿಮಾನಿಗಳಿಗೆ ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಎಲ್ಲರೂ ಕಷ್ಟಪಟ್ಟು ಈ ಹಂತಕ್ಕೆ ಬಂದಿದ್ದಾರೆ, ಎಲ್ಲರೂ ಸೇರಿದರೆ ಮಾತ್ರವೇ ಕನ್ನಡ ಚಿತ್ರರಂಗ ಎಂದು ಹೇಳಿದರು.

this is what sudeep said about darshan fans about boss controversy

ನಾನು, ದರ್ಶನ್, ಯಶ್, ಉಪೇಂದ್ರ, ಶಿವರಾಜ್‌ಕುಮಾರ್, ಧ್ರುವಸರ್ಜಾ ಎಲ್ಲರೂ ಸೇರಿದರೆ ಕನ್ನಡ ಚಿತ್ರರಂಗಾವಗುತ್ತದೆ. ಕನ್ನಡ ಚಿತ್ರರಂಗ ಮೊದಲೇ ಕಷ್ಟದಲ್ಲಿ ನಾವು ಉತ್ತಮ ಸಿನಿಮಾ ಮಾಡಿ ಚಿತ್ರರಂಗವನ್ನು ಉಳಿಸಲು ಗಮನ ಕೊಡಬೇಕೆ ಹೊರತು ಈ ರೀತಿ ವಿವಾದಗಳಿಗೆ ಸ್ಪಷ್ಟನೆ ಕೊಡುತ್ತಾ ಕೂರಬಾರದು ಎಂದರು.

ಪ್ರದೀಪ್ ಸಿನಿಮಾ ನೋಡಿಕೊಂಡು ಬಂದು ಬಾಸಿಸಂ ಕಾಲ ಮುಗಿತು ಇನ್ನು ಮ್ಯಾಕ್ಸಿಮಮ್ ಕಾಲ ಎಂದು ಬರೆಸಿದ್ದಾರೆ. ಯಾರೊಗೋ ಟಾಂಟ್ ನೀಡುವ ಉದ್ದೇಶ ಅವನಿಗೆ ಇರಲಿಲ್ಲ. ಅದನ್ನು ಇಟ್ಟುಕೊಂಡು ಯಾವುದೋ ಒಂದು ವಾಹಿನಿ ವಿವಾದ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅಭಿಮಾನಿಗಳು ಅವರ ಇಷ್ಟದ ನಟರನ್ನು ಬಾಸ್ ಎಂದು ಕರೆಯುವುದು ಸಹಜ. ಯಶ್‌ರನ್ನು ಅವರ ಅಭಿಮಾನಿಗಳು ಬಾಸ್ ಎನ್ನುತ್ತಾರೆ, ಧ್ರುವ ಸರ್ಜಾನನ್ನು ಬಾಸ್ ಎನ್ನುತ್ತಾರೆ, ಶಿವಣ್ಣರನ್ನು ಕೂಡ ಬಾಸ್ ಎಂದು ಕರೆಯುತ್ತಾರೆ. ಅದು ಅಭಿಮಾನಿಗಳ ಅಭಿಮಾನ ಅದನ್ನು ವಿವಾದ ಮಾಡುತ್ತಿರುವುದು ಏಕೆ ಎಂದು ಕೇಳಿದರು.

ಒಂದು ವಾಹಿನಿ ಜೊತೆ ಮಾತನಾಡುವಾಗ ನಾನೇ ದರ್ಶನ್ ಬಗ್ಗೆ ಮಾತನಾಡಿದ್ದೆ. ಅವರು ಕಷ್ಟದಲ್ಲಿದ್ದಾರೆ ಇಂತಹ ಸಮಯದಲ್ಲಿ ನಾವು ಅವರ ಬಗ್ಗೆ ಮಾತನಾಡಬಾರದು. ಅವರು ಕಷ್ಟಪಟ್ಟು ಈ ಹಂತಕ್ಕೆ ಬಂದವರು, ಯಾರಿಗೋ ಇಂಡೈರೆಕ್ಟ್ ಆಗಿ ಟಾಂಟ್ ಕೊಡುವವನು ನಾನಲ್ಲ ಎಂದು ಸ್ಪಷ್ಟನೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+