Darshan Thoogudeepa: ದರ್ಶನ್ ತೂಗುದೀಪ್ ಸ್ನೇಹಿತ ವಿಲ್ಸನ್ ಗಾರ್ಡನ್ ನಾಗ & ಗ್ಯಾಂಗ್ ಅಟ್ಟಹಾಸ, ಜೈಲಲ್ಲಿ ರಕ್ತಪಾತ!
ದರ್ಶನ್ ತೂಗುದೀಪ್ & ಗ್ಯಾಂಗ್ ಇದೀಗ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಿಂದ, ಬೇರೆ ಬೇರೆ ಜೈಲುಗಳಿಗೆ ದಿಕ್ಕಾಪಾಲಾಗಿ ಹೋದ ನಂತರವು ಕೂಡ ಪರಪ್ಪನ ಅಗ್ರಹಾರ ಜೈಲಿನಲ್ಲಿ ತಿಕ್ಕಾಟ ಜೋರಾಗಿದೆ. ದರ್ಶನ್ ತೂಗುದೀಪ್ ಮತ್ತು ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಸೇರಿಕೊಂಡು ಟೀ ಕುಡಿದು, ಸಿಗರೇಟ್ ಸೇದುತ್ತಾ ಕೂತಿದ್ದ ಫೋಟೋ ತೆಗೆದಿದ್ದ ಖೈದಿಯನ್ನ ಈಗ ಏನು ಮಾಡಲಾಗಿದೆ ಗೊತ್ತಾ? ಪರಪ್ಪನ ಅಗ್ರಹಾರದ ಒಳಗೆ ನಡೆದ ರಕ್ತಪಾತದ ಕಥೆ ಸಂಪೂರ್ಣವಾಗಿ ತಿಳಿಯೋಣ ಬನ್ನಿ.
ದರ್ಶನ್ ತೂಗುದೀಪ್ ಜೊತೆಗೆ ಸ್ನೇಹ ಮಾಡಲು ಪರಪ್ಪನ ಅಗ್ರಹಾರದ ಒಳಗೆ ಯುದ್ಧವೇ ಶುರುವಾಗಿತ್ತು ಎಂಬ ಆರೋಪ ಈ ಮೊದಲೇ ಕೇಳಿಬಂದಿತ್ತು. ಒಂದು ಕಡೆ ಸೈಕಲ್ ರವಿ & ಗ್ಯಾಂಗ್, ಹಾಗೇ ಇನ್ನೊಂದು ಕಡೆ ವಿಲ್ಸನ್ ಗಾರ್ಡನ್ ನಾಗಾ & ಗ್ಯಾಂಗ್ ಈ ವಿಚಾರಕ್ಕೆ ಸಖತ್ ಫೈಟಿಂಗ್ ನಡೆಸುತ್ತಿದ್ದರು. ಯಾಕಂದ್ರೆ ದರ್ಶನ್ ತೂಗುದೀಪ್ ಅವರ ಸ್ನೇಹ ಗಳಿಸಿ ಜೈಲಿನಲ್ಲಿ ಮತ್ತಷ್ಟು ಹವಾ ಎಬ್ಬಿಸಬೇಕು ಎಂಬುದು ಅವರ ಸ್ಕೆಚ್ ಆಗಿತ್ತು. ಹೀಗಿದ್ದಾಗಲೇ ನಟ ದರ್ಶನ್ ನೇರವಾಗಿ ವಿಲ್ಸನ್ ಗಾರ್ಡನ್ ನಾಗಾ & ಗ್ಯಾಂಗ್ ಜೊತೆಗೆ ಸ್ನೇಹ ಬೆಳೆಸಿದ್ದರು ಎಂದು ಆರೋಪ ಮಾಡಲಾಗಿದೆ. ಇದೇ ಈಗ ಪರಪ್ಪನ ಅಗ್ರಹಾರದ ಒಳಗೆ ರಕ್ತ ಹರಿಯುವ ಪರಿಸ್ಥಿತಿ ನಿರ್ಮಾಣ ಮಾಡಿದೆಯಂತೆ.

ರೌಡಿಗಳ ಗ್ಯಾಂಗ್ ವಾರ್ ಶುರು?
ದರ್ಶನ್ ತೂಗುದೀಪ್ ಪರಪ್ಪನ ಅಗ್ರಹಾರ ಜೈಲಿನ ಒಳಗೆ ವಿಲ್ಸನ್ ಗಾರ್ಡನ್ ನಾಗಾ & ಗ್ಯಾಂಗ್ ಜೊತೆಗೆ ಸೇರಿಕೊಂಡ ನಂತರ, ಪರಪ್ಪನ ಅಗ್ರಹಾರ ಜೈಲಿನಲ್ಲಿ ತಿಕ್ಕಾಟ ಜೋರಾಗಿ ಹೋಗಿತ್ತು. ಅದರಲ್ಲೂ ಸೈಕಲ್ ರವಿ ಕಡೆ ಹುಡುಗರು & ರೌಡಿ ಶೀಟರ್ ಬೇಕರಿ ರಘು ಕಡೆ ಹುಡುಗರ ಗ್ಯಾಂಗ್ ಕೋಪಗೊಂಡಿತ್ತು ಎನ್ನಲಾಗಿದೆ. ಯಾಕಂದ್ರೆ ವಿಲ್ಸನ್ ಗಾರ್ಡನ್ ನಾಗನ ಗ್ಯಾಂಗ್‌ಗೆ ಮತ್ತು ಈ ಗ್ಯಾಂಗ್‌ಗೆ ಆಗಲ್ಲ. ಹೀಗೆ, ಎರಡೂ ಗ್ಯಾಂಗ್‌ಗಳ ನಡುವೆ ವಾರ್ ನಡೆಯುವಾಗಲೇ ನಟ ದರ್ಶನ್ ಅವರು, ವಿಲ್ಸನ್ ಗಾರ್ಡನ್ ನಾಗನ ಜೊತೆಗೆ ಜೈಲಿನಲ್ಲಿ ಕೈಜೋಡಿಸಿದ್ದಾರೆ. ಅದಕ್ಕೂ ಮೊದಲು ಸೈಕಲ್ ರವಿ ಕಡೆ ಹುಡುಗರು & ರೌಡಿ ಶೀಟರ್ ಬೇಕರಿ ರಘು ಸಹಾಯ ಪಡೆದಿದ್ದರಂತೆ ನಟ ದರ್ಶನ್ ತೂಗುದೀಪ್ ಎಂದು ಆರೋಪ ಮಾಡಲಾಗಿದೆ.
ಪರಪ್ಪನ ಅಗ್ರಹಾರದಲ್ಲಿ ರಕ್ತಪಾತ?
ಆದರೆ ಯಾವಾಗ ದರ್ಶನ್ ತೂಗುದೀಪ್ ಅವರು ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗನ ಜೊತೆಗೆ ಹತ್ತಿರವಾದರೋ, ಅದೇ ಸಮಯದಲ್ಲಿ ಮೊದಲಿಗೆ ದರ್ಶನ್‌ಗೆ ಸಹಾಯ ಮಾಡಿದ್ದ ಬೇಕರಿ ರಘು & ಗ್ಯಾಂಗ್ ರೊಚ್ಚಿಗೆದ್ದಿದೆ. ಕೊನೆಗೆ ದರ್ಶನ್ ತೂಗುದೀಪ್ ಅವರು ಜೈಲಿನಲ್ಲಿ ರೌಡಿ ಶೀಟರ್ ನಾಗನ ಗ್ಯಾಂಗ್ ಜೊತೆಗೆ ಸಿಗರೇಟು ಸೇದುವ, ಟೀ ಕುಡಿಯುವ, ವಿಡಿಯೋ ಕಾಲ್ ಮಾಡುವ ಫೋಟೋ & ವಿಡಿಯೋ ತೆಗೆದು ಜೈಲಿನಿಂದ ಹೊರಗೆ ಕಳುಹಿಸಿದೆ.
ಇದೇ ಘಟನೆ ಇದೀಗ ದರ್ಶನ್ ತೂಗುದೀಪ್ ಬದುಕಿಗೆ ಕಿಚ್ಚು ಹೊತ್ತಿಸುವ ಪರಿಸ್ಥಿತಿ ತಂದಿದೆ. ಇದು ಸಾಲದು ಎಂಬಂತೆ ಪರಪ್ಪನ ಅಗ್ರಹಾರ ಜೈಲಿನ ಒಳಗೆ ದರ್ಶನ್ ತೂಗುದೀಪ್ ಫೋಟೋ & ವಿಡಿಯೋ ತೆಗೆದು ಲೀಕ್ ಮಾಡಿರುವ ಆರೋಪಿ ವೇಲು ಮೇಲೆ, ಈಗ ವಿಲ್ಸನ್ ಗಾರ್ಡನ್ ನಾಗಾ & ಗ್ಯಾಂಗ್ ಭೀರಕವಾಗಿ ರಕ್ತ ಬರುವಂತೆ ಹಲ್ಲೆ ಮಾಡಿದೆ ಎಂದು ಗಂಭೀರ ಆರೋಪ ಮಾಡಲಾಗಿದೆ. ಈ ಕುರಿತು ತನಿಖೆಗೆ ಸೋಷಿಯಲ್ ಮೀಡಿಯಾದಲ್ಲಿ ಜನರು ಆಗ್ರಹಿಸಿದ್ದಾರೆ.
ಸಾಲು ಸಾಲು ಸಿನಿಮಾ ರಿಲೀಸ್!
ಒಟ್ನಲ್ಲಿ, ದರ್ಶನ್ ಅವರು ಇದೀಗ ಜೈಲಿನಿಂದ ಹೊರಗೆ ಬರಲಿ ಅಂತಾ ಅವರ ಅಭಿಮಾನಿ ಬಳಗ ಕಾಯುತ್ತಿದೆ. ಮತ್ತೊಂದು ಕಡೆ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ತೂಗುದೀಪ ಅವರ ಪರ ಅಭಿಮಾನಿಗಳ ಬೆಂಬಲ ಕೂಡ ಹೆಚ್ಚಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ದರ್ಶನ್ ಅವರಿಗೆ ಸಪೋರ್ಟ್ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಕೂಡ ಇದೆ. ಹಾಗೇ ಸಾಲು & ಸಾಲು ಸಿನಿಮಾ ತೆರೆಗೆ ತರುವ ಪ್ಲಾನ್ ಕೂಡ ಹಾಕಿಕೊಂಡಿದ್ದಾರೆ ದರ್ಶನ್ ಪರ ನಿಂತಿರುವ ನಿರ್ದೇಶಕ ಮತ್ತು ನಿರ್ಮಾಪಕರು ಹಾಗೂ ಕಲಾವಿದರು.












Click it and Unblock the Notifications