Darshan Thoogudeepa: ಪವಿತ್ರಾ ಗೌಡ ಅಲ್ಲ ರಚಿತಾ ರಾಮ್ ಬಂದು ಹೋದ ನಂತರ ದರ್ಶನ್ ತೂಗುದೀಪ್‌ಗೆ ಭಾರಿ ಸಂಕಷ್ಟ?

ದರ್ಶನ್ ತೂಗುದೀಪ್ ಇದೀಗ ಭಾರಿ ಸಂಕಷ್ಟಕ್ಕೆ ಸಿಲುಕಿದ್ದು, ಶೀಘ್ರದಲ್ಲೇ ಪರಪ್ಪನ ಅಗ್ರಹಾರ ಜೈಲಿನಿಂದಲೇ ಬೇರೆ ಜೈಲಿಗೆ ಶಿಫ್ಟ್ ಆಗುವ ಎಲ್ಲಾ ಸೂಚನೆ ಸಿಗುತ್ತಿದೆ. ಅದರಲ್ಲೂ ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಕಳುಹಿಸಿದ್ದ ಎಂಬ ಕಾರಣಕ್ಕೆ, ರೇಣುಕಾ ಸ್ವಾಮಿ ಎಂಬ ವ್ಯಕ್ತಿ ಕೊಲೆ ಮಾಡಿದ ಆರೋಪ ದರ್ಶನ್ ತೂಗುದೀಪ್ ಅವರ ವಿರುದ್ಧ ಇದೆ. ಹೀಗೆ, ದರ್ಶನ್‌ರ ಬಾಳಲ್ಲಿ ಪವಿತ್ರಾ ಗೌಡ ವಿಲನ್ ಆಗಿದ್ದಾರಾ? ಅಂತಾ ಚರ್ಚೆ ನಡೆಯುವಾಗಲೇ, ಡಿಂಪಲ್ ಕ್ವೀನ್ ಅಂತಾ ಕರೆಸಿಕೊಳ್ಳುವ ರಚಿತಾ ರಾಮ್ ವಿರುದ್ಧ ದರ್ಶನ್ ಫ್ಯಾನ್ಸ್ ಈಗ ರೊಚ್ಚಿಗೆದ್ದಿದ್ದಾರೆ ಎಂಬ ಆರೋಪ ಕೇಳಿಬಂದಿದೆ!

ನಟ ದರ್ಶನ್ ತೂಗುದೀಪ್ ಅವರ ಹಣೆ ಬರಹ ಸರಿ ಇಲ್ಲವೇನೋ ಅಂತಾ ಫ್ಯಾನ್ಸ್ ಇದೀಗ ಗೊಣಗುತ್ತಾ, ಚಿಂತೆ ಮಾಡುವ ಪರಿಸ್ಥಿತಿ ಬಂದಿದೆ. ಯಾಕೆ ಅಂದ್ರೆ ಈಗಿರುವ ಪರಿಸ್ಥಿತಿಯಲ್ಲಿ, ಪರಪ್ಪನ ಅಗ್ರಹಾರದಲ್ಲಿ ಕೊಲೆ ಆರೋಪಿಗಳಿಗೂ ರಾಜ ಮರ್ಯಾದಿ ಸಿಗುತ್ತಿದೆಯಾ? ದುಡ್ಡು ಇದ್ದರೆ ಕೊಲೆ ಆರೋಪಿಗು ಜೈಲು ಸ್ವರ್ಗ ಆಗುತ್ತಾ? ಅಂತಾ ಜನರು ರೊಚ್ಚಿಗೆದ್ದಿದ್ದು, ಈ ಘಟನೆ ಬಗ್ಗೆ ತನಿಖೆಗೆ ಆಗ್ರಹಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ದರ್ಶನ್ ಅವರ ಫೋಟೋ ಬಿರುಗಾಳಿ ಎಬ್ಬಿಸಿದ್ದು, ಈ ಕುರಿತು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೂಡ ಕೇಳಿಬಂದಿದೆ. ಇಷ್ಟೆಲ್ಲದರ ನಡುವೆ ದರ್ಶನ್ ತೂಗುದೀಪ್ ಇದೀಗ ಸಂಕಷ್ಟಕ್ಕೆ ಸಿಲುಕಲು ಕಾರಣ ರಚಿತಾ ರಾಮ್ ಎಂಬ ಆರೋಪ ಕೂಡ ಮಾಡಲಾಗುತ್ತಿದೆ! ಯಾಕೆ ಗೊತ್ತಾ? ಮುಂದೆ ಓದಿ.

This Is What Happened With Darshan Thoogudeepa After Rachita Ram Meets Him

ದರ್ಶನ್‌ಗೆ ರಚಿತಾ ರಾಮ್ ಕಂಟಕ?

ಭಾನುವಾರದ ತನಕ ಎಲ್ಲವೂ ಚೆನ್ನಾಗಿಯೇ ಇತ್ತು, ಆದರೆ ಯಾವಾಗ ದರ್ಶನ್ ತೂಗುದೀಪ್ & ನಟೋರಿಯಸ್ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಜೋಡಿಯ ಫೋಟೋ ವೈರಲ್ ಆಗಿತ್ತೋ ಆಗಲೇ ಸಂಚಲನ ಶುರು ಆಗಿತ್ತು. ಯಾಕಂದ್ರೆ ರೌಡಿ ಶೀಟರ್ ಜೊತೆಗೆ ಕೂತಿದ್ದ ಕನ್ನಡ ಸಿನಿಮಾ ರಂಗದ ದೊಡ್ಡ ನಟ, ಸಿಗರೇಟು ಸೇದುತ್ತಾ ಕೈಯಲ್ಲಿ ಟೀ ಗ್ಲಾಸ್ ಹಿಡಿದು ನಗುತ್ತಿದ್ದ ದೃಶ್ಯ ದೇಶದ ಮೂಲೆ ಮೂಲೆಯಲ್ಲೂ ಫುಲ್ ವೈರಲ್ ಆಗುತ್ತಿದೆ. ಹೀಗಿದ್ದಾಗಲೇ ನಟ ದರ್ಶನ್ ಅವರ ಬಾಳಲ್ಲಿ ಮತ್ತೊಮ್ಮೆ ಬಿರುಗಾಳಿ ಏಳಲು ಪವಿತ್ರಾ ಗೌಡ ಅಲ್ಲ ಆದ್ರೆ ನಟಿ ರಚಿತಾ ರಾಮ್ ಕಾರಣ ಎಂಬ ಆಕ್ರೋಶ ಮೊಳಗಿದೆ. ಹಾಗಾದ್ರೆ ನಟಿ ರಚಿತಾ ರಾಮ್ ಏನು ಮಾಡಿದ್ರು?

ದರ್ಶನ್ ಅಭಿಮಾನಿಗಳ ಆಕ್ರೋಶ!

ರಚಿತಾ ರಾಮ್ ಅವರು ದರ್ಶನ್ ತೂಗುದೀಪ್ ಭೇಟಿ ಮಾಡುವೂದಕ್ಕೂ ಮೊದಲು ಎಲ್ಲಾ ಸರಿಯಾಗೇ ಇತ್ತು. ಆದರೆ ಯಾವಾಗ ರಚಿತಾ ರಾಮ್ ಬಂದು ಪರಪ್ಪನ ಅಗ್ರಹಾರ ಜೈಲಿನ ಒಳಗೆ ನಟ ದರ್ಶನ್ ತೂಗುದೀಪ್ ಭೇಟಿ ಮಾಡಿದರೋ, ಆ ನಂತರ ಸಂಚಲನ ಸೃಷ್ಟಿಯಾಗಿ ಹೋಗಿದೆ. ಯಾಕಂದ್ರೆ ರಚಿತಾ ರಾಮ್ ಬಂದು ದರ್ಶನ್ ತೂಗುದೀಪ್‌ರ ಜೊತೆಗೆ ಮಾತನಾಡಿ ಹೋದ ನಂತರ, ತಮ್ಮ ಬ್ಯಾರಕ್ ಬಿಟ್ಟು ಹೊರಗೆ ಬಂದಿದ್ದ ದರ್ಶನ್ ತೂಗುದೀಪ್ ನಂತರ ಅಲ್ಲೇ ಹತ್ತಿರದಲ್ಲೇ ಇದ್ದ ವಿಲ್ಸನ್ ಗಾರ್ಡನ್ ನಾಗ ಜೊತೆಗೆ ಭೇಟಿ ಮಾಡಿ ಮಾತನಾಡಬೇಕು ಅಂತಾ ದರ್ಶನ್ ತೂಗುದೀಪ್ ತೆರಳಿದ್ದಾರಂತೆ.

ಅದೇ ಸಮಯದಲ್ಲಿ ಯಾರೋ ಮೇಲಿಂದ ಫೋಟೋ ತೆಗೆದು, ದರ್ಶನ್ ತೂಗುದೀಪ್ ಮತ್ತು ವಿಲ್ಸನ್ ಗಾರ್ಡನ್ ನಾಗ ಸಿಗರೇಟ್ & ಟೀ ಕುಡಿಯುತ್ತಿರುವ ದೃಶ್ಯದ ಫೋಟೋ ತೆಗೆದಿದ್ದಾರೆ. ಇದೇ ಫೋಟೋ ಈಗ ಎಲ್ಲೆಲ್ಲೂ ಹರಿದಾಡುತ್ತಿದೆ ಎನ್ನಲಾಗಿದೆ. ಇಷ್ಟೆಲ್ಲದರ ಮಧ್ಯೆ ರಚಿತಾ ರಾಮ್ ಬರದೇ ಇದ್ದಿದ್ದರೆ ನಮ್ ಬಾಸ್ ನೆಮ್ಮದಿಯಾಗಿ ಇರುತ್ತಿದ್ದರು ಅಂತಾ ಇದೀಗ ನಟ ದರ್ಶನ್ ತೂಗುದೀಪ್ ಅಭಿಮಾನಿಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ, ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಫ್ಯಾನ್ಸ್ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ!

ಕನ್ನಡ ನಾಡಿನಲ್ಲಿ ಏನಿದು?

ಈಗಾಗಲೇ ದರ್ಶನ್ ತೂಗುದೀಪ್ ತಮ್ಮ ಗ್ಯಾಂಗ್ ಜೊತೆಗೆ & ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಜೊತೆ ಕೂತು ಸಿಗರೇಟು ಸೇದಿರುವ & ವಿಡಿಯೋ ಕಾಲ್‌ನ ಮೂಲಕ ಮಾತನಾಡಿರುವ ಫೋಟೋ & ವಿಡಿಯೋ ವೈರಲ್ ಆಗಿದೆ. ಇದೇ ಸಮಯದಲ್ಲಿ, ಪವಿತ್ರಾ ಗೌಡ & ದರ್ಶನ್ ಅವರಿಗೆ ಸಂಬಂಧಿಸಿದ ಫೋಟೋ ಕೂಡ ಲೀಕ್ ಆಗಲಿದೆ ಎಂಬ ಮಾತು ಹಲ್‌ಚಲ್ ಎಬ್ಬಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಇಂತಹ ಮಾಹಿತಿಗಳು ಹರಿದಾಡುತ್ತಿರುವುದು ದುರದೃಷ್ಟದ ಸಂಗತಿ ಅಂತಿದ್ದಾರೆ ಕನ್ನಡಿಗರು. ಅಲ್ಲದೆ ಈ ವಿಚಾರವಾಗಿ ಸರ್ಕಾರ & ಪೊಲೀಸರು ಕೂಡ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+