ದರ್ಶನ್ ಅಂದು ಅಮ್ಮನ ಮೇಲೆ ಕೈಮಾಡಿ, ಇಂದು ಜೈಲಿನಲ್ಲಿ ಅಮ್ಮನ ಎದುರು ಕಣ್ಣೀರು ಹಾಕಿದರಾ?
ದರ್ಶನ್ ಕೆಟ್ಟ ಮೇಲೆ ಬುದ್ಧಿ ಕಲಿತಂತೆ ಕಾಣುತ್ತಿದೆ. ಅದರಲ್ಲೂ ತಮ್ಮ ಅಮ್ಮನ ವಿರುದ್ಧ ಕೂಡ ಕೈಮಾಡಿದ್ದರು ಎಂಬ ಆರೋಪ ಇಷ್ಟು ದಿನ ದರ್ಶನ್ ವಿರುದ್ಧ ಕೇಳಿಬಂದಿತ್ತು. ಆದ್ರೆ ಇಂದು ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲ್‌ನಲ್ಲಿ ದರ್ಶನ್ ತಮ್ಮ ತಾಯಿ ಮುಖ ನೋಡಿ ಕಣ್ಣೀರು ಹಾಕಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ. ಹಾಗಾದ್ರೆ ಈ ಹಿಂದೆ ದರ್ಶನ್ ತಮ್ಮ ತಾಯಿ & ತಮ್ಮನ ಮೇಲೆ ಕೈಮಾಡಿ, ಹಲ್ಲೆ ಮಾಡಿದ್ದು ನಿಜನಾ? ಬನ್ನಿ ತಿಳಿಯೋಣ.
ನಟ ದರ್ಶನ್ ತಮ್ಮ ಪ್ರೇಯಸಿ & ಆತ್ಮೀಯ ಗೆಳತಿ ಪವಿತ್ರಾ ಗೌಡಾಗೆ ಕೆಟ್ಟ ಮೆಸೇಜ್ ಕಳಿಸಿ ಹಿಂಸೆ ನೀಡಿದ್ದ ಅಂತಾ, ರೇಣುಕಾಸ್ವಾಮಿ ಎಂಬ ಯುವಕನ ಹತ್ಯೆ ಮಾಡಿಸಿರುವ ಆರೋಪದ ಮೇಲೆ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಹೀಗಿದ್ದಾಗ ದರ್ಶನ್ ಎಣ್ಣೆ & ಸಿಗರೇಟ್ ಬಿಟ್ಟು, ಉತ್ತಮ ಜೀವನದ ಕಡೆಗೆ ಹೆಜ್ಜೆ ಹಾಕಿದಂತೆ ಕಾಣುತ್ತಿದೆ. ಈ ವೇಳೆ, ದರ್ಶನ್ ಜೊತೆ ಕೋಪ ಮಾಡಿಕೊಂಡು ದೂರವಾಗಿದ್ದ ಅಮ್ಮ, ತಮ್ಮ, ಹೆಂಡತಿ, ಮಗ ಎಲ್ಲರೂ ಮತ್ತೆ ಹತ್ತಿರಕ್ಕೆ ಬರುತ್ತಿದ್ದಾರೆ. ಅದ್ರಲ್ಲೂ ಇಂದು ಪರಪ್ಪನ ಅಗ್ರಹಾರ ಜೈಲಿಗೆ ದರ್ಶನ್‌ರ ತಾಯಿ & ತಮ್ಮ ಭೇಟಿ ನೀಡಿದ್ದಾಗ ನಡೆದಿದ್ದು ಏನು ಗೊತ್ತೆ? ದರ್ಶನ್ ಅತ್ತು ಕಣ್ಣೀರು ಹಾಕಿದ್ದೇಕೆ? ಬನ್ನಿ ತಿಳಿಯೋಣ.

ಅಮ್ಮನ ಎದುರು ದರ್ಶನ್ ಕಣ್ಣೀರು?
ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಮುರಿದು ನುಂಗುತ್ತಾ, ಜೈಲಿನ ಕಂಬಿಗಳ ಎಣಿಸುತ್ತಾ ಜೀವನ ಕಳೆಯುತ್ತಿದ್ದಾರೆ. ಹೀಗಿದ್ದಾಗ ಇಂದು ದರ್ಶನ್ ಅವರನ್ನ ನೋಡೋಕೆ ಅಂತಾನೆ ಅವರ ಅಮ್ಮ & ತಮ್ಮ ಇಬ್ಬರೂ ಹೋಗಿದ್ದಾರೆ. ದರ್ಶನ್ ತಮ್ಮ ದಿನಕರ್ ಕೂಡ ಸಿನಿಮಾ ರಂಗದಲ್ಲಿ ದೊಡ್ಡ ಹೆಸರು ಮಾಡಿದ್ದರು. ಆದರೆ ಒಂದು ಹಂತದಲ್ಲಿ ನಟ ದರ್ಶನ್ ಸ್ವಂತ ತಮ್ಮ ದಿನಕರ್ ತೂಗುದೀಪ್ ಜೊತೆಯಲ್ಲೂ ಜಗಳ ಮಾಡಿ, ಹಲ್ಲೆ ಮಾಡಿದ್ದರೆಂಬ ಆರೋಪ ಇದೆ. ಹೀಗಿದ್ದರೂ ಕೊಲೆ ಆರೋಪದ ಮೇಲೆ ಜೈಲು ಸೇರಿದ ಅಣ್ಣನ ನೋಡಲು ತಮ್ಮ ದಿನಕರ್ ಬಂದಿದ್ದು, ಈ ವೇಳೆ ಇಬ್ಬರೂ ಭಾವುಕರಾಗಿದ್ದಾರೆ ಎನ್ನಲಾಗಿದೆ.
ತಮ್ಮನ ಕಂಡು ದರ್ಶನ್ ಮಾಡಿದ್ದೇನು?
ಜೈಲಿನ ಮೂಲಗಳ ಪ್ರಕಾರ ದರ್ಶನ್ ಅವರ ತಾಯಿ ಮೊದಲಿಗೆ ದರ್ಶನ್ ಮುಖ ನೋಡಿ, ಕಣ್ಣೀರು ಹಾಕಲು ಶುರು ಮಾಡಿದರಂತೆ. ಆಗ ದರ್ಶನ್ ಕೂಡ ಅಮ್ಮ & ತಮ್ಮನ ಮುಖ ನೋಡಿ, ಬಿಕ್ಕಿ ಬಿಕ್ಕಿ ಅತ್ತಿದ್ದಾರೆ ಎನ್ನಲಾಗಿದೆ. ಈ ಮೂಲಕ ತಮ್ಮ ತಪ್ಪಿನ ಕುರಿತು ದರ್ಶನ್ ಅವರಿಗೆ ಈಗ ಪ್ರಾಯಶ್ಚಿತ ಆಗಿದೆ ಎಂಬ ಮಾತುಗಳು ಕೇಳಿಬಂದಿವೆ.
ದರ್ಶನ್ ಅತ್ತಿರುವ ಸುದ್ದಿ ಈಗ ಸ್ಯಾಂಡಲ್‌ವುಡ್ ಅಂಗಳದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಹಾಗೇ ನಟ ದರ್ಶನ್ ಅವರ ಫ್ಯಾನ್ಸ್ ಪಾಲಿಗೆ ಇದು ಬೇಸರದ ಸುದ್ದಿಯೂ ಆಗಿದೆ. ಜೈಲಿನಲ್ಲಿ ದರ್ಶನ್ ಒಬ್ಬರೇ ಕೂತು ಚಿಂತೆ & ನೋವಿನಲ್ಲಿ ಇದ್ದಾರೆ ಎಂಬ ಸುದ್ದಿ ತಿಳಿದು, ದರ್ಶನ್ ಭೇಟಿಗೆ ಅಂತಾ ಅವರ ಅಮ್ಮ & ತಮ್ಮ ಬಂದು ಯೋಗಕ್ಷೇಮ ವಿಚಾರಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ನಟ ದರ್ಶನ್ ಭಾವುಕರಾಗಿದ್ದಾರೆ.
ಅಭಿಮಾನಿಗಳಿಗೆ ಶುರುವಾಗಿದೆ ಟೆನ್ಷನ್?
ದರ್ಶನ್ ಕೊಲೆ ಆರೋಪದಲ್ಲಿ ಇದೀಗ ಜೈಲು ಸೇರಿದ್ದಾರೆ. ಹೀಗಿದ್ದಾಗ ರೇಣುಕಾಸ್ವಾಮಿಯ ಕೊಲೆಯಲ್ಲಿ ದರ್ಶನ್ & ಅವರ ಗೆಳೆಯರ ವಿರುದ್ಧ ಪೊಲೀಸರು ಕೂಡ ಸಾಕಷ್ಟು ಸಾಕ್ಷ್ಯಗಳ ಸಂಗ್ರಹ ಮಾಡಿದ್ದಾರೆ. ನಟ ದರ್ಶನ್ ಈ ಕೊಲೆ ಕೇಸ್‌ನಲ್ಲಿ, ಅಪರಾಧಿ ಎಂಬುವ ವಿಚಾರ ಪ್ರೂವ್ ಆಗಿ ಶಿಕ್ಷೆ ಕೂಡ ಘೋಷಣೆ ಮಾಡಿದರೆ ಯಾವ ಶಿಕ್ಷೆ ನೀಡಬಹುದು? ಹೊಸ ಕಾನೂನಿನ ಪ್ರಕಾರ ನಟ ದರ್ಶನ್ ಅವರಿಗೆ 'ಮರಣದಂಡನೆ' ಶಿಕ್ಷೆ ನೀಡುತ್ತಾರಾ? ಎಂಬ ಭಯ ಇದೀಗ ಅವರ ಅಭಿಮಾನಿಗಳಲ್ಲಿ ಕಾಡುತ್ತಿದೆ.
ದರ್ಶನ್‌ಗೆ ವಿಗ್ ಪ್ರಾಬ್ಲಂ?
ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ನಟ ದರ್ಶನ್ ಈಗ ಸಾಮಾನ್ಯ ಖೈದಿ ರೀತಿ ಜೀವನ ನಡೆಸುತ್ತಿದ್ದಾರೆ. ಜೈಲಿನ ಖೈದಿಗಳಿಗೆ ನೀಡುವ ಮುದ್ದೆ, ಸಾರು ತಿಂದು ಜೀವನ ನಡೆಸುತ್ತಿದ್ದಾರೆ. ಹೀಗಿದ್ದಾಗ ಜೈಲಿನಲ್ಲಿ ದರ್ಶನ್‌ಗೆ ತಲೆ ಕೂದಲು & ವಿಗ್ ಮೇಂಟೇನ್ ಮಾಡುವುದು ಕಷ್ಟ ಆಗುತ್ತಿದೆಯಂತೆ. ಹೀಗಾಗಿ ನಟ ದರ್ಶನ್ ಈ ಕೂದಲು ಸಮಸ್ಯೆ ಸರಿ ಮಾಡಿಕೊಳ್ಳಲು ತಲೆ ಕೂದಲನ್ನೇ ಸಂಪೂರ್ಣ ತೆಗಿಸಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.












Click it and Unblock the Notifications