Darshan Thoogudeepa: ‘ಏನ್ರೀ ಮೀಡಿಯಾ..’ ಅಂತ ಡೈಲಾಗ್ ಹೊಡೆದ ದರ್ಶನ್ ತೂಗುದೀಪ್ ಅಭಿಮಾನಿಗಳಿಗೆ ಏನಾಯ್ತು?
'ಏನ್ರೀ ಮೀಡಿಯಾ.. ಏನ್ರೀ ಮೀಡಿಯಾ..' ಅಂತಾ ಮಾಧ್ಯಮಗಳ ವಿರುದ್ಧ ನಟ ದರ್ಶನ್ ತೂಗುದೀಪ್ ಅವರು ಕೆಲವು ವರ್ಷಗಳ ಹಿಂದೆ ಕೆಟ್ಟ ಕೆಟ್ಟ ಪದ ಬಳಕೆ ಮಾಡಿ ಬೈದಿದ್ದರೆಂಬ ಗಂಭೀರ ಆರೋಪ ಕೇಳಿಬಂದಿತ್ತು. ಹೀಗೆ ದರ್ಶನ್ ತೂಗುದೀಪ್ ಅವರ ಆಡಿಯೋ ವೈರಲ್ ಆದ ನಂತರ ಮಾಧ್ಯಮಗಳು ದರ್ಶನ್ ಅವರ ಕಾರ್ಯಕ್ರಮಗಳಿಗೆ ಹೋಗುತ್ತಿರಲಿಲ್ಲ. ಹಾಗೇ ದರ್ಶನ್ ಅವರ ಸುದ್ದಿಗಳನ್ನ ಪ್ರಕಟ ಮಾಡುತ್ತಿರಲಿಲ್ಲ. ಹೀಗಿದ್ದಾಗ 'ಕಾಟೇರ' ಸಿನಿಮಾದ ಬಿಡುಗಡೆಗೆ ಮೊದಲು ಸ್ವತಃ ದರ್ಶನ್ ತೂಗುದೀಪ್ ಅವರೇ ಬಂದು ರಾಜಿ & ಪಂಚಾಯಿತಿ ಮಾಡಿದ್ದರು.
ಹೀಗೆ ದರ್ಶನ್ ಅವರು ಬಂದು ಮೀಡಿಯಾಗಳ ಜೊತೆಗೆ ಮತ್ತೆ ಕೈಜೋಡಿಸಿದ್ದರೂ, ಅವರ ಅಭಿಮಾನಿಗಳು ಮಾತ್ರ ಮೀಡಿಯಾಗಳ ಬಗ್ಗೆ ಕೆಟ್ಟದಾಗಿ ಮಾತನಾಡುವ ಶೈಲಿ ಸರಿಯಾಗಲೇ ಇಲ್ಲ. ದರ್ಶನ್ ಅವರ ಕೆಲವು ಅಭಿಮಾನಿಗಳಿಂದ ಇಂತಹ ಪರಿಸ್ಥಿತಿ ಬಂತು ಎಂಬ ಗಂಭೀರ ಆರೋಪ ಕೂಡ ಕೇಳಿಬಂತು. ಪರಿಸ್ಥಿತಿ ಹೀಗಿದ್ದಾಗ ನಟ ದರ್ಶನ್ ತೂಗುದೀಪ್ & ಗ್ಯಾಂಗ್ ಸೇರಿಕೊಂಡು ರೇಣುಕಾ ಸ್ವಾಮಿ ಎಂಬ ವ್ಯಕ್ತಿಯ ಕೊಲೆ ಮಾಡಿದೆ ಎಂದು ಪೊಲೀಸ್ ಪಡೆ ಅರೆಸ್ಟ್ ಮಾಡಿತ್ತು. ಹೀಗಿದ್ದಾಗ ದರ್ಶನ್ ತೂಗುದೀಪ್ ಅವರ ಕೆಲವು ಅಭಿಮಾನಿಗಳು, ನಟ ದರ್ಶನ್ ಅರೆಸ್ಟ್ ಆಗಲು ಮಾಧ್ಯಮಗಳೇ ಕಾರಣ ಎಂಬ ತಲೆ & ಬುಡ ಇಲ್ಲದ ಆರೋಪವನ್ನ ಮಾಡಿದ್ದರು. ಈಗ ನೋಡಿದರೆ ಮಾಧ್ಯಮಗಳ ಬಗ್ಗೆ ಮತ್ತೆ ಕೆಟ್ಟದಾಗಿ ಮಾತನಾಡ್ತಿದ್ದಾರೆ.

ಮಾಧ್ಯಮಗಳ ವಿರುದ್ಧ ಫ್ಯಾನ್ಸ್ ಗರಂ?
ದರ್ಶನ್ ತೂಗುದೀಪ್ ಅಭಿನಯದ 'ಕರಿಯ' ಸಿನಿಮಾ ಇಂದು ಅದ್ಧೂರಿಯಾಗಿ ರೀ ರಿಲೀಸ್ ಆಗಿದ್ದು, ಕರ್ನಾಟಕದ ಹತ್ತಾರು ಥಿಯೇಟರ್ ಸ್ಕ್ರೀನ್ ಮೇಲೆ ಅಬ್ಬರಿಸುತ್ತಿದೆ. ಹೀಗಿದ್ದಾಗಲೇ ದರ್ಶನ್ ತೂಗುದೀಪ್ ಅವರ ಕೆಲವು ಕಿರಿಕ್ ಫ್ಯಾನ್ಸ್ ನೆಮ್ಮದಿ ಹಾಳು ಮಾಡುತ್ತಾರೆ ಅಂತಾ ಪೊಲೀಸರು ಆರೋಪ ಮಾಡಿದ್ದು, ಥಿಯೇಟರ್ ಎದುರಲ್ಲೇ ವಾರ್ನಿಂಗ್ ಕೊಟ್ಟಿದ್ದಾರೆ. ಈ ಸಮಯದಲ್ಲಿ ಥಿಯೇಟರ್ ಎದುರಿಗೆ ಹಾಕಿದ್ದ ವಿವಾದ ಎಬ್ಬಿಸುವ ದರ್ಶನ್ ಅವರ ಬ್ಯಾನರ್ ಮೇಲೆ, ದರ್ಶನ್ ಅವರು ಜೈಲಿನಲ್ಲಿ ಕೂತು ಟೀ ಕುಡಿಯುವ ರೀತಿ ಫೋಟೋ ಇತ್ತು. ಈ ವಿವಾದದ ಜತೆ 'ಏನ್ರೀ ಮೀಡಿಯಾ.. ಏನ್ರೀ ಮೀಡಿಯಾ..' ಅಂತಾ ಮಾಧ್ಯಮಗಳ ವಿರುದ್ಧ, ಬಾಯಿಗೆ ಬಂದ ರೀತಿ ಮೆಸೇಜ್ ಕೂಡ ಈ ಬ್ಯಾನರ್ ಒಳಗೆ ಬರೆಯಲಾಗಿತ್ತು ಎಂಬ ಆರೋಪ ಕೇಳಿಬಂದಿದೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್
ಒಟ್ನಲ್ಲಿ, ಎಲ್ಲವೂ ಮುಗಿದು ಹೋಗಿದ್ದರೂ ಕೆಲವರು ಕಿರಿಕ್ ಮಾಡುತ್ತಿರುವ ಕಾರಣಕ್ಕಾಗಿ, ದರ್ಶನ್ ತೂಗುದೀಪ್ ಅವರ ಹೆಸರು ಹಾಳಾಗುವಂತೆ ಆಗಿದೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ ದರ್ಶನ್ ಅವರ ಅಭಿಮಾನಿಗಳು ಅಂತಾ ಹೇಳಿಕೊಳ್ಳುವ ಕೆಲವರು, ದರ್ಶನ್ ಅವರ ಜೈಲಿನ ಫೋಟೋ & ವಿಡಿಯೋ ವೈರಲ್ ಮಾಡುತ್ತಾ ಮಾಧ್ಯಮಗಳ ಬಗ್ಗೆ ಕೆಟ್ಟದಾಗಿ ಈಗ ಮಾತನಾಡುತ್ತಿರುವ ಆರೋಪ ಕೂಡ ಕೇಳಿಬಂದಿದೆ. ಹೀಗಾಗಿ ಇದೆಲ್ಲ ಎಲ್ಲಿಗೆ ಬಂದು ನಿಲ್ಲುತ್ತೆ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications