ಟಿಆರ್‌ಪಿಗಾಗಿ ನನ್ನ ಕೆಟ್ಟದಾಗಿ ತೋರಿಸಿದ್ರು: 'ಹಳ್ಳಿ ಪವರ್' ಶೋನಿಂದ ಹೊರಬಂದು ಆಶ್ ಹೇಳಿದ್ದೇನು?
ರೀಲ್ಸ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದ ಆಶ್ ಮೆಲೋ ಸ್ಕೈಲರ್ (Ash Melo Skyler), ನಟ ದುನಿಯಾ ವಿಜಯ್ ಅವರ 'ಭೀಮ' ಸಿನಿಮಾದಲ್ಲಿ ನಟಿಸಿ ಗಮನ ಸೆಳೆದಿದ್ದರು. ಜಂಗ್ಲಿ ಆಶ್ ಬಳಿಕ ಜೀ ಪವರ್‌ನಲ್ಲಿ ಇತ್ತೀಚೆಗೆ ಶುರುವಾಗಿರುವ "ಹಳ್ಳಿ ಪವರ್" ರಿಯಾಲಿಟಿ ಶೋ ಸ್ಪರ್ಧಿಯಾಗಿ ಆಶ್ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. ಈ ಸ್ಪರ್ಧಿಗಳ ಪೈಕಿ ಆಶ್ ತುಂಬಾ ಟಫ್ ಕಂಟೆಸ್ಟೆಂಟ್ ಎಂದೇ ಹೇಳಲಾಗಿತ್ತು. ಆದರೆ ಇದ್ದಕ್ಕಿದ್ದಂತೆ ಆಶ್ ಹಳ್ಳಿ ಪವರ್ ರಿಯಾಲಿಟಿ ಶೋನಿಂದ ಆಶ್ ಹೊರಬಂದಿದ್ದಾರೆ. ಇದಕ್ಕೆ ಕಾರಣವೇನು ಎಂದು ತಮ್ಮ ಸೋಷಿಯಲ್ ಮೀಡಿಯಾದ ಪೋಸ್ಟ್ ಮೂಲಕ ತಿಳಿಸಿದ್ದಾರೆ.
ಹಳ್ಳಿ ಪವರ್ ಕಾರ್ಯಕ್ರಮದಲ್ಲಿ ಆಶ್ ಆರಂಭದಿಂದಲೂ ಅಬ್ಬರಿಸುತ್ತಿದ್ದರು. ಆದರೆ ಕಾರ್ಯಕ್ರಮದಿಂದ ಹೊರಗೆ ಹೋಗುವುದಾಗಿ ದಿಢೀರ್ ನಿರ್ಧಾರ ತೆಗೆದುಕೊಂಡಿದ್ದಾರೆ. ಆಶ್ ಹಂಚಿಕೊಂಡಿರುವ ವಿಡಿಯೋದಲ್ಲಿ ನಿರೂಪಕ ಅಕುಲ್ ಬಾಲಾಜಿ ಅವರು 'ಈ ಶೋನಿಂದ ಇನ್ನೂ ಯಾರಾದ್ರೂ ಹೊರಗೆ ಹೋಗ್ತೀರಾ?' ಎಂದಿದ್ದಕ್ಕೆ ಆಶ್ ಕೈ ಎತ್ತಿದ್ದಾರೆ. ಯಾಕೆ ಎಂದಿದ್ದಕ್ಕೆ, 'ಯಾವುದೇ ಆರೋಗ್ಯ ಸಮಸ್ಯೆ ಅಂತೇನಲ್ಲ, ಈ ಫ್ಲಾಟ್‌ಫಾರ್ಮ್ ನನಗಲ್ಲ, ನನಗೆ ಆಗ್ತಿಲ್ಲ' ಎಂದು ನೇರವಾಗಿ ಹೇಳಿದ್ದಾರೆ.

'ಈ ವೇದಿಕೆ ನಿಮಗೆ ಚಿಕ್ಕದು ಅಂತಾನಾ?' ಎಂದು ಆಗ ಅಕುಲ್ ಬಾಲಾಜಿ ಕೇಳಿದ್ದು, 'ಇಲ್ಲ ಹಾಗೇನಿಲ್ಲ, ಇದರಿಂದ ನಮಗೆ ಫೇಮ್ ಸಿಕ್ಕಿರೋದು ನಿಜ' ಎಂದಿದ್ದಾರೆ. 'ರೀಲ್ಸ್ ಸ್ಟಾರ್‌ನಿಂದ ರಿಯಲ್ ಸ್ಟಾರ್ ಆಶ್ ಅಂತಾ ನಿಮ್ಮ ಬಗ್ಗೆ ಆರ್ಟಿಕಲ್ ಕೂಡ ಬಂದಿದೆ. ನೀವು ರಿಯಲ್ ಅಲ್ಲ, ರೀಲ್ ಆಶ್ ಅಂತ ಹೇಳಿಬಿಡಿ' ಎಂದು ಅಕುಲ್ ಹೇಳಿದ್ದಾರೆ. ಅದಕ್ಕೂ ನೇರವಾಗಿ ಉತ್ತರ ಕೊಟ್ಟಿರುವ ಆಶ್ 'ನಾನು ರೀಲ್ ಆಶ್ ಆದ್ರೂ ಪರವಾಗಿಲ್ಲ, ಈ ಶೋ ನನಗಲ್ಲ' ಎಂದು ಗುಡ್‌ಬೈ ಹೇಳಿದ್ದಾರೆ. ಬಳಿಕ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಅಸಲಿ ಕಾರಣ ಏನೆಂದು ಆಶ್ ವಿವರಿಸಿದ್ದಾರೆ.
'ಪ್ರೇಕ್ಷಕರಿಗೆ ಕೆಟ್ಟದಾಗಿ ತೋರಿಸಿದ್ರು!'
'ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ನನ್ನ ಎಲ್ಲ ಪ್ರೇಕ್ಷಕರನ್ನು ಹಾಗೂ ಕಾರ್ಯಕ್ರಮದ ವೀಕ್ಷಕರನ್ನು ನಿಜವಾಗಿಯೂ ಗೌರವಿಸುತ್ತೇನೆ. ನಾನು ಪ್ರೇಕ್ಷಕರಿಗೆ ಕೆಟ್ಟ ರೀತಿಯಲ್ಲಿ ಚಿತ್ರೀಕರಿಸಲ್ಪಿಟ್ಟದ್ದರಿಂದ ಮಾತ್ರ ನಾನು ಕಾರ್ಯಕ್ರಮವನ್ನು ತೊರೆದಿದ್ದೇನೆ. ನೀವು ಹುಡುಗರೇ? ನಾನು ಮಾತನಾಡಿದ ಎಲ್ಲ ಮಾತುಗಳನ್ನು ನೀವು ನೋಡಿರಬೇಕು. ನಾನು ನನ್ನ ಎಲ್ಲ ಪ್ರೇಕ್ಷಕರನ್ನು ಹಾಗೂ ಹಳ್ಳಿ ಪವರ್ ಶೋ ಅನ್ನು ಗೌರವಿಸಿದೆ. ಆದರೆ, ನನ್ನ ಮಾತುಗಳು ನನ್ನನ್ನು ಕೆಳಗಿಳಿಸುವಂತಹ ತಪ್ಪು ರೀತಿಯಲ್ಲಿ ತೋರಿಸಲಾಗಿದೆ' ಎಂದು ಆಶ್ ಇನ್ಸ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
'ನಾನು ಕಾರ್ಯಕ್ರಮದಿಂದ ಹೊರಬರಲು ಒಂದೇ ಕಾರಣ, ನನ್ನನ್ನು ತುಂಬಾ ಕೆಟ್ಟ ರೀತಿಯಲ್ಲಿ ಚಿತ್ರಿಸಲಾಗುತ್ತಿತ್ತು ಅಷ್ಟೇ. ಟಿಆರ್‌ಪಿಗಾಗಿ ನನ್ನನ್ನು ಕೆಟ್ಟ ರೀತಿಯಲ್ಲಿ ತೋರಿಸಬೇಡಿ ಎಂದು ನಾನು ಹಲವು ಬಾರಿ ಹೇಳಿದ್ದೆ. ಆದರೆ ಅವರು ಅದರ ಬಗ್ಗೆ ಎಂದಿಗೂ ಕಾಳಜಿ ವಹಿಸಲಿಲ್ಲ. ಕೊನೆಗೆ ನಾನು ನನ್ನ ನಿರ್ಧಾರ ತೆಗೆದುಕೊಂಡೆ' ಎಂದು ಆಶ್ ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications