ನನ್ನ trigger ಮಾಡಿದ ಪರಿಣಾಮ ನಿಮ್ಮ ದೊಡ್ಡ ನಟರಿಗೆ ತಟ್ಟಲಿದೆ: ಕುತೂಹಲ ಮೂಡಿಸಿದ ನಟ ಪ್ರಥಮ್ ಟ್ವೀಟ್!
ಬೆಂಗಳೂರು, ಜುಲೈ 29: ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರದಲ್ಲಿ ನಟಿ ರಮ್ಯಾ ಮಾಡಿದ ಒಂದು ಪೋಸ್ಟ್ ನಿಂದಾಗಿ ದರ್ಶನ್ ಫ್ಯಾನ್ಸ್ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕೆ ಈಗಾಗಲೇ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಕಮಿಷನರ್ ಗೆ ದೂರು ನೀಡಿದ್ದಾರೆ. ಇತ್ತ ನಟ ಪ್ರಥಮ್ ಗೆ ರೌಡಿಶೀಟರ್ ಬೇಕರಿ ರಘು ಕೊಲೆ ಬೆದರಿಕೆ ಹಾಕಿದ್ದು ವಿಚಾರವಾಗಿ ದರ್ಶನ್ ಫ್ಯಾನ್ಸ್ ಗಳನ್ನು ನಟ ಪ್ರಥಮ್ ತರಾಟೆಗೆ ತೆಗೆದುಕೊಂಡಿದ್ದಾರೆ. ಇದೀಗ ನಟ ಪ್ರಧಮ್ ಅವರು ಸರಣಿ ಟ್ವೀಟ್ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಎಲ್ಲರೂ ನೆನ್ನೆ ನೆಮ್ಮದಿಯಾಗಿ ಮಲಗಿದ್ದು ಎದ್ರಾ?ಸಂತೋಷ!ಇನ್ಮೇಲೆ ಸ್ವಲ್ಪ ನಿದ್ರೆ ಕಷ್ಟ ಆಗ್ಬೋದು! ಸ್ವಲ್ಪ ಹೊತ್ತಲ್ಲೇ ಗೊತ್ತಾಗುತ್ತೆ ಈ ಸಲ ತಗೊಳೋ step complaintಥರ ಇರಲ್ಲ! ನನ್ನ triggerಮಾಡಿದ ಪರಿಣಾಮ ನಿಮ್ಮ ದೊಡ್ಡ ನಟರಿಗೆ ತಟ್ಟಲಿದೆಎಂದು ಪೋಸ್ಟ್ ಹಾಕಿದ್ದು ತೀವ್ರ ಕುತೂಹಲ ಕೆರಳಿಸಿದೆ. ಸ್ವಲ್ಪ ಸಮಯ ಕೊಡಿ,ನಾವು ಬಾಡಿಗೆ ಕಟ್ಟುತೀವಾ ಇಲ್ಲಾ ಕಟ್ಟುಸ್ತೀವಾ ಎಲ್ಲಾ ಗೊತ್ತಾಗುತ್ತೆ ಎಂದು ಹೇಳಿದ್ದಾರೆ.

ನಾಳೆ ದೊಡ್ಡದಾಗಿ ಅಗುತ್ತೆ! ತುಂಬಾ ದೊಡ್ಡ ನಿರ್ಧಾರ! ನೀವೆಲ್ಲರೂ ನೀವು ಇಷ್ಟ ಪಡೋ ನಟರನ್ನ ಬೀದಿಗೆ ನಿಲ್ಲಿಸ್ತಾ ಇದೀರಾ! ನಾಳೆ ನೋಡ್ತೀರಿ ಏನಾಗುತ್ತೆ ಅಂತ! D company,fans pages ನಿಮ್ಗೇನೂ ಪ್ರಾಬ್ಲಮ್ ಇರಲ್ಲ ಆರಾಮಾಗಿರಿ! ನಾಳೆಏನೋ ಆಗುತ್ತೆ ಕಾಯ್ತಿರಿ(paid fansಗಳ) ನಿಮ್ಮ ಹೀರೋನ ನೀವೇ ಬೀದಿಗೆ ತರ್ತಾ ಇದೀರಾ!wait till tomorrow🙏 ಎಂದು ಬರೆದುಕೊಂಡಿದ್ದರು. Morning ತನಕ time ಇದೆ! ಸುಳ್ಳು ಸುದ್ಧಿ ನಿಲ್ಲಿಸಿದ್ರೆ ಸರಿ!ನಾಳೆ ಅಧಿಕೃತವಾಗಿ SP ತಪ್ಪು ಮಾಡಿದವರ ಮೇಲೆactionತಗೊಳೋ ತನಕ ಸುಮ್ಮನಿದ್ರೆ ಸರಿ! ನಾನು ಸುಮ್ಮನಿದ್ರೂsocial mediaಲಿ ಏನೇನೋ ಹಾಕ್ತಿದೀರಾ! ಹೀಗೇ ಸುಳ್ಳು ಸುದ್ಧಿ ಹಬ್ಬಿಸ್ತಾ ಇದ್ರೆ ಯಾವ ನಟರcompany ಆ ನಟರ ಮೇಲೆ FIR ಮಾಡ್ತೀನಿ, ನನ್ನ ಪಾಡಿಗೆ ಸುಮ್ನೆ ಬಿಟ್ಟುಬಿಡಿ ಎಂದು ಹೇಳಿದ್ದಾರೆ.
ಎಲ್ಲರೂ ನಟಿ ರಮ್ಯ ಪರ ನಿಲ್ಲೋಣ! ಈಗಲೂ ನಾವು ರಮ್ಯರವರ ಆತ್ಮಗೌರವದ ಪರ ನಿಲ್ಲದೇ ಹೋದರೆ ನಾವು ಕಲಾವಿದರಾಗೋಕೆ ನಾಚಿಕೆಯಾಗಬೇಕು!ಕನ್ನಡ ಚಿತ್ರರಂಗವನ್ನ ಭಯದಿಂದ ಮುಕ್ತಗೊಳಿಸೋಣ!
ಇಷ್ಟೆಲ್ಲಾ ಆದ್ರೂ ಜಾಣಕಿವುಡರಾಗಿರೋ ಪುಣ್ಯಾತ್ಮ ಕಲಾವಿದರಿಗೆ ದೇವರು ನೂರ್ಕಾಲ ಆಯಸ್ಸು ನೀಡಲೆಂದು ಪ್ರಾರ್ಥನೆ ಎಂದು ನಟ ಒಳ್ಳೆಯ ಹುಡುಗ ಪ್ರಥಮ್ ಹೇಳಿದ್ದಾರೆ.












Click it and Unblock the Notifications