ದಳಪತಿ ವಿಜಯ್ ಫ್ಯಾನ್ಸ್‌ಗೆ ನಿರಾಸೆ: ಕೊನೇ ಕ್ಷಣದಲ್ಲಿ 'ಜನ ನಾಯಗನ್' ಸಿನಿಮಾ ರಿಲೀಸ್ ಮುಂದೂಡಿಕೆ
ರಾಜಕಾರಣಕ್ಕೆ ಕಾಲಿಟ್ಟಿರುವ ತಮಿಳು ನಟ ದಳಪತಿ ವಿಜಯ್ ಅವರ ಕೊನೆಯ ಸಿನಿಮಾ "ಜನ ನಾಯಗನ್" ರಿಲೀಸ್ ದಿನಾಂಕವನ್ನು ಕೊನೆ ಕ್ಷಣದಲ್ಲಿ ಮುಂದೂಡಲಾಗಿದೆ. ನಟ ವಿಜಯ್ ಅಭಿನಯದ ಬಹುನಿರೀಕ್ಷಿತ ಸಿನಿಮಾಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯ ಸುದ್ದಿ ಎದುರಾಗಿದೆ. ಅನಿವಾರ್ಯ ಕಾರಣಗಳಿಂದಾಗಿ ಈ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಬಗ್ಗೆ ಕೆವಿಎಲ್ ಪ್ರೊಡಕ್ಷನ್ಸ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.
ಇತ್ತೀಚೆಗೆ ಬಿಡುಗಡೆಯಾಗಿದ್ದ ಪೋಸ್ಟರ್‌ಗಳು ಹಾಗೂ ಟೀಸರ್ ಮೂಲಕ 'ಜನ ನಾಯಗನ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಿಸಿತ್ತು. ವಿಜಯ್ ಅವರ ವಿಭಿನ್ನ ಲುಕ್, ರಾಜಕೀಯ ಹಿನ್ನಲೆಯಲ್ಲಿ ಸಾಗುವ ಕಥೆ ಮತ್ತು ಪವರ್‌ಫುಲ್ ಡೈಲಾಗ್‌ಗಳು ಪ್ರೇಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದವು. ಈ ಹಿನ್ನೆಲೆಯಲ್ಲಿ ರಿಲೀಸ್ ದಿನಾಂಕ ಘೋಷಣೆಯಾದ ಕ್ಷಣದಿಂದಲೇ ಫ್ಯಾನ್ಸ್ ಥಿಯೇಟರ್‌ಗಳಲ್ಲಿ ಸಂಭ್ರಮಕ್ಕೆ ಸಿದ್ಧರಾಗಿದ್ದರು.

ಆದರೆ ಇದೀಗ ನಿರ್ಮಾಪಕ ತಂಡದಿಂದ ಬಂದಿರುವ ಮಾಹಿತಿಯಂತೆ, ಕೆಲವು ಅನಿವಾರ್ಯ ತಾಂತ್ರಿಕ ಮತ್ತು ನಿರ್ಮಾಣ ಸಂಬಂಧಿತ ಕಾರಣಗಳಿಂದ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಚಿತ್ರದ ಗುಣಮಟ್ಟದಲ್ಲಿ ಯಾವುದೇ ಸಮರ್ಪಕತೆ ಕಡಿಮೆಯಾಗಬಾರದು ಎಂಬ ಕಾರಣದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ರಿಲೀಸ್ ಮುಂದೂಡಿಕೆಯ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ವಿಜಯ್ ಅಭಿಮಾನಿಗಳು ತಮ್ಮ ನಿರಾಸೆಯನ್ನು ವ್ಯಕ್ತಪಡಿಸಿದ್ದಾರೆ. ಆದರೂ ಬಹುತೇಕ ಫ್ಯಾನ್ಸ್ "ಒಳ್ಳೆಯ ಸಿನಿಮಾ ನೋಡಲು ಸ್ವಲ್ಪ ಕಾಯುವುದೇ ಉತ್ತಮ" ಎಂದು ಹೇಳಿ ತಂಡದ ನಿರ್ಧಾರಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ.
'ಜನ ನಾಯಗನ್' ಸಿನಿಮಾ ಯಾವ ಹೊಸ ದಿನಾಂಕಕ್ಕೆ ಬಿಡುಗಡೆಯಾಗಲಿದೆ ಎಂಬುದನ್ನು ಶೀಘ್ರದಲ್ಲೇ ಅಧಿಕೃತವಾಗಿ ಘೋಷಿಸಲಾಗುತ್ತದೆ ಎಂದು ನಿರೀಕ್ಷಿಸಲಾಗಿದ್ದು, ವಿಜಯ್ ಅಭಿಮಾನಿಗಳು ಆ ಘೋಷಣೆಗೆ ಕಾತರದಿಂದ ಕಾಯುತ್ತಿದ್ದಾರೆ. ಅನಿವಾರ್ಯ ಕಾರಣಗಳಿಂದ ಜನ ನಾಯಗನ್ ಬಿಡುಗಡೆ ಮುಂದೂಡಲಾಗಿದೆ. ಹೊಸ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಿದೆ ಚಿತ್ರತಂಡ.
ಚಿತ್ರತಂಡ ಹೇಳಿದ್ದೇನು?
'ನಮ್ಮ ಗೌರವಾನ್ವಿತ ಹಿತೈಷಿಗಳು ಮತ್ತು ಪ್ರೇಕ್ಷಕರಿಗೆ ಮನಸ್ಸಿಗೆ ನೋವಾಗುತ್ತಾ ಈ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ. ಜನವರಿ 9ರಂದು ಬಿಡುಗಡೆಯಾಗಬೇಕಿದ್ದ, ಬಹು ನಿರೀಕ್ಷಿತ 'ಜನ ನಾಯಗನ್' ಸಿನಿಮಾವನ್ನು ಅನಿವಾರ್ಯ ಹಾಗೂ ನಮ್ಮ ನಿಯಂತ್ರಣಕ್ಕೆ ಹೊರಗಿನ ಕಾರಣಗಳಿಂದ ಮುಂದೂಡಲಾಗಿದೆ. ಈ ಚಿತ್ರದ ಕುರಿತು ನಿಮಗೆ ಇರುವ ನಿರೀಕ್ಷೆ, ಉತ್ಸಾಹ ಮತ್ತು ಭಾವನೆಗಳನ್ನು ನಾವು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇವೆ. ಈ ತೀರ್ಮಾನವನ್ನು ತೆಗೆದುಕೊಳ್ಳುವುದು ನಮಗೆಲ್ಲರಿಗೂ ತುಂಬಾ ಕಷ್ಟಕರವಾಗಿತ್ತು. ಹೊಸ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುವುದು. ಅಲ್ಲಿ ವರೆಗೆ ನಿಮ್ಮ ಸಹನೆ ಮತ್ತು ನಿರಂತರ ಪ್ರೀತಿಯನ್ನು ವಿನಮ್ರವಾಗಿ ಕೋರುತ್ತೇವೆ. ನಿಮ್ಮ ಅಚಲ ಬೆಂಬಲವೇ ನಮ್ಮ ದೊಡ್ಡ ಶಕ್ತಿ. ಅದು 'ಜನ ನಾಯಗನ್' ತಂಡದ ಪ್ರತಿಯೊಬ್ಬರಿಗೂ ಅತ್ಯಂತ ಅಮೂಲ್ಯ' ಎಂದು ಹೇಳಿಕೆಯಲ್ಲಿ ತಿಳಿಸಿದೆ.
ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ ಆಗಿರುವ ಕಾರಣ 'ಜನನಾಯಗನ್' ಬಿಡುಗಡೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಇದೇ ಜನವರಿ 9ರಂದು ಸಿನಿಮಾ ಅದ್ಧೂರಿಯಾಗಿ ವಿಶ್ವದಾದ್ಯಂತ ರಿಲೀಸ್ ಮಾಡಲು ಮುಂದಾಗಿತ್ತು. ಥಿಯೇಟರ್‌ಗಳ ಮುಂದೆ ವಿಜಯ್ ಅವರ ಕಟೌಟ್‌ಗಳು ರಾರಾಜಿಸಿ, ಇನ್ನೇನು ಸಿನಿಮಾ ರಿಲೀಸ್ ಆಗುತ್ತಿದೆಯಲ್ಲ ಎಂದು ಸಂಭ್ರಮಪಡುವಷ್ಟರಲ್ಲಿ ಈ ಕಹಿಸುದ್ದಿ ಹೊರಬಿದ್ದಿದೆ. ಕಳೆದ ಕೆಲವು ದಿನಗಳಿಂದ ಸೆನ್ಸಾರ್ ಮಂಡಳಿ ಹಾಗೂ ಈ ಸಿನಿಮಾದ ನಡುವಿನ ಗೊಂದಲಗಳು ಮುಂದುವರಿದಿತ್ತು. ಇದೇ ಕಾರಣಕ್ಕೆ ಸಿನಿಮಾ ಬಿಡುಗಡೆ ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications